India Languages, asked by shwethaek25, 6 months ago

ಆನಲೈನ ಶಿಕ್ಷಣದ ಅನುಕೂಲ ಮತ್ತು ಅನಾನುಕೂಲಗಳು ಪ್ರಬಂಧ​

Answers

Answered by purshothammsa
1

Answer:

ತರಗತಿ ಬೋಧನೆಗೆ ಆನ್‌ಲೈನ್‌ ಶಿಕ್ಷಣ ಪರ್ಯಾಯವಲ್ಲ. ಇದನ್ನು ಪದವಿ ಹಂತದ ಶಿಕ್ಷಣ ಪಡೆದ ಯಾವುದೇ ವ್ಯಕ್ತಿ ಸಮರ್ಥಿಸುತ್ತಾನೆ. ಆದರೆ ಲಾಕ್‌ಡೌನ್‌ ವೇಳೆ ವಿದ್ಯಾರ್ಥಿಗಳನ್ನು ಎಂಗೇಜ್‌ ಮಾಡಲು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಇರುವ ಒಂದೇ ಒಂದು ಆಯ್ಕೆ ಎಂದರೆ ಅದು ಆನ್‌ಲೈನ್‌ ಬೋಧನೆ. ಆನ್‌ಲೈನ್‌ ಎಜುಕೇಷನ್‌ ಕುರಿತು ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನೂ ವಿಶ್ವ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಶಿಕ್ಷಣದ ಕುರಿತು ಒಂದಷ್ಟು ಒಳನೋಟವನ್ನು, ಹಲವರ ಅಭಿಪ್ರಾಯವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ಆನ್‌ಲೈನ್‌ ಶಿಕ್ಷಣ ಮಾರಕವೋ/ಪೂರಕವೋ?

ನೆಟ್ವರ್ಕ್ ಸಮಸ್ಯೆಯಂತಹ ಹಲವು ಅಡೆತಡೆಗಳು ಎದುರಾಗುತ್ತಿದ್ದರೂ ಆನ್‌ಲೈನ್‌ ತರಗತಿಗಳ ಮೂಲಕ ಅಂತರ್ಜಾಲ ಆಧರಿತ ಶಿಕ್ಷಣಕ್ಕೆ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ತೆರೆದುಕೊಳ್ಳುತ್ತಿವೆ. ಇದರಿಂದಾಗಿ ಆನ್‌ಲೈನ್‌ ಶಿಕ್ಷಣ ಭವಿಷ್ಯದ ಶಿಕ್ಷಣ ವಿಧಾನವಾಗುವುದು ಮತ್ತಷ್ಟು ದೃಢವಾಗುತ್ತಿದೆ. ಆದರೆ ಆನ್‌ಲೈನ್‌ ಶಿಕ್ಷಣ, ಸಾಂಪ್ರಧಾಯಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರಬೇಕೇ ಹೊರತು ಪರ್ಯಾಯವಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

please make me as brainliast and follow me

Similar questions