ಜೀವ ವಿಮಾ ಒಪ್ಪಂದವು ......
Answers
Answer:ಜೀವ ವಿಮೆ ಅಂದರೆ ವಿಮೆ ಮಾಡಿದ ವ್ಯಕ್ತಿಯ ಸಾವಿನಿಂದ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧದ ಸಂರಕ್ಷಣಾ ಅಥವಾ ಆರ್ಥಿಕ ಭದ್ರತೆ ನೀಡುತ್ತದೆ ಮತ್ತು ಯಾವುದೇ ಆಕಸ್ಮಿಕ ಘಟನೆಗಳ ಪರಿಣಾಮದೊಂದಿಗೆ ನಿಖರವಾಗಿ ವ್ಯವಹರಿಸುವಂತೆ ಮಾಡುತ್ತದೆ. ಜೀವ ವಿಮೆಯು ವ್ಯಕ್ತಿಯ ಕುಟುಂಬಕ್ಕೆ ಅಥವಾ ನಿಯುಕ್ತರಾದ ಇತರೆ ಫಲಾನುಭವಿಗಳಿಗೆ ಆರ್ಥಿಕ ಅನುಕೂಲಗಳನ್ನೂ ಅಥವಾ ವಿಮೆದಾರರಿಗೆ ವಿಶಿಷ್ಟ ವರಮಾನದ ನೆರವನ್ನೂ ನೀಡುವುದು. ವ್ಯಕ್ತಿಯ ಕುಟುಂಬಕ್ಕೆ ಸಂಸ್ಕಾರ, ಅಂತ್ಯಕ್ರಿಯೆ ಹಾಗೂ ಇತರ ಅಂತಿಮ ಖರ್ಚುಗಳಿಗೆ ಆದಾಯ ಒದಗಿಸಬಹುದು. ಜೀವವಿಮೆ ವಿಮೆ ಮಾಡಿದ ವ್ಯಕ್ತಿಯ ಹಾಗೂ ಅವರ ಕುಟುಂಬಕ್ಕೆ ಒಳಗೊಂಡಿರುವ ಎಲ್ಲಾ ಅಪಾಯಗಳ ವಿರುದ್ಧ ರಕ್ಷಣೆಯನ್ನು ನೀಡುವುದರ ಜೊತೆಗೆ, ಅದಕ್ಕಿಂತಲೂ ಹೆಚ್ಚಾಗಿ ಹೂಡಿಕೆಯನ್ನು ಅಭಿವೃದ್ಧಿ ಪಡಿಸುವ ಮೂಲಕ ಅವಕಾಶವನ್ನು ನೀಡುತ್ತದೆ.ಪರಿಗಣಿಸಲ್ಪಟ್ಟಿರುವ ದೀರ್ಘ ಅವಧಿಯ ಹೂಡಿಕೆಯಾಗಿರುವ ಹಣ ವಿಮೆದಾರನ ಭವಿಷ್ಯದ ಖರ್ಚಿಗೆ ಅಥವ ನಿವೃತ್ತಿಯ ನಂತರದ ದಿನಗಳಿಗೆ ದೊರೆಯಲಿದೆ.
ಜೀವ ವಿಮೆ ಪರಿಹಾರ ಬೇಡಿಕೆಗಳು ಜೀವ ವಿಮೆ ಪರಿಹಾರ ಬೇಡಿಕೆಗಳು ಮತ್ತು ನಷ್ಟ ನಿರ್ವಹಣೆಯು ವಿಮೆಯ ವಾಸ್ತವ ಉಪಯುಕ್ತತೆಯಾಗಿದೆ. ವಿಮೆ ಪರಿಹಾರ ಬೇಡಿಕೆಗಳನ್ನು ವಿಮೆದಾರರು ನೇರವಾಗಿ ವಿಮೆಗಾರರೊಂದಿಗೆ ಅಥವಾ ದಲಾಲರ/ಮಧ್ಯವರ್ತಿಗಳ ಮೂಲಕವಾದರೂ ಸಲ್ಲಿಸಬಹುದು. ವಿಮೆಗಾರ ಈ ಬೇಡಿಕೆಯನ್ನು ತನ್ನದೇ ಆದ ನಿಗದಿತ ಅರ್ಜಿಯಲ್ಲಿ ಸಲ್ಲಿಸಲೆಂದು ನಿರೀಕ್ಷಿಸಬಹುದು ಅಥವಾ ACORD ರಚಿಸಿರುವ ಪ್ರಮಾಣಿತ ಉದ್ದಿಮೆಯ ನಮೂನೆಯ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಸಹ ಸ್ವೀಕರಿಸಬಹುದು. ಜೀವ ವಿಮೆ ಉದ್ದಿಮೆಗಳ ಪರಿಹಾರ ಬೇಡಿಕೆಯ ಇಲಾಖೆಗಳು, ದಾಖಲಾ ನಿರ್ವಹಣಾ ಸಿಬ್ಬಂದಿ ಮತ್ತು ದತ್ತಾಂಶ ಸಂಗ್ರಹಣಕಾರರನ್ನು ಜೀವ ವಿಮೆ ಪರಿಹಾರ ಬೇಡಿಕೆಗಳ ಇತ್ಯರ್ಥಕ್ಕಾಗಿ ನೇಮಿಸಿರುತ್ತವೆ. ತೀವ್ರತೆಯ ಪ್ರಕಾರ ಒಳಬರುವ ಪರಿಹಾರ ಬೇಡಿಕೆಗಳನ್ನು ವಿಂಗಿಡಸಲಾಗಿ, ಅವುಗಳನ್ನು ಸಂಸ್ಕರಿಸಲು ಹೊಂದಿಕೆದಾರರಿಗೆ ವಹಿಸಲಾಗುತ್ತದೆ. ಇವರ ಚುಕಾವಣಾ ಅಧಿಕಾರವು ಅವರ ಜ್ಞಾನ ಮತ್ತು ಅನುಭವಗಳನ್ನು ಅವಲಂಬಿಸಿದೆ.
ಜಾಗತಿಕ ಜೀವ ವಿಮಾ ಉದ್ಯಮ
ಜಾಗತಿಕ ವಿಮೆಕಂತುಗಳು ೨೦೦೭ರಲ್ಲಿ 11%ರಷ್ಟು ಅಭಿವೃದ್ಧಿ ಹೊಂದಿ (ಅಥವಾ ನೈಜ ಮಟ್ಟದಲ್ಲಿ ೩.೩%) $೪.೧ ಲಕ್ಷಕೋಟಿಯಷ್ಟು ಅಭಿವೃದ್ಧಿ ಹೊಂದಿತು. ಭಾರೀ-ಆರ್ಥಿಕ ವಾತಾವರಣವು ೨೦೦೭ರಲ್ಲಿ ನಿಧಾನಗತಿಯ ಬೆಳವಣಿಗೆ ಮತ್ತು ಏರುತ್ತಿರುವ ಹಣದುಬ್ಬರದಿಂದ ಚಿತ್ರಿತವಾಗಿತ್ತು. ಆ ವರ್ಷ ಜೀವವಿಮೆಯಲ್ಲಿ ಲಾಭದಾಯಕತೆಯು ಸುಧಾರಿಸಿತಾದೆ. ಜೀವವಿಮೆಕಂತುಗಳು ೧೨.೬% ಅಭಿವೃದ್ಧಿ ಕಂಡು, ಜಪಾನ್ ಮತ್ತು ಯುರೋಪ್ ಹೊರತುಪಡಿಸಿಅದರೆ ಬೇರೆ ದೇಶಗಳಲ್ಲಿ ಆರ್ಥಿಕತೆಗಳಲ್ಲಿ ತ್ವರಿತ ಅಭಿವೃದ್ಧಿಯನ್ನು ಕಂಡಿತು. ವಿಮೆ ಕಂತು ಆದಾಯಕ್ಕೆ ಸಂಬಂಧಿಸಿದ ೨೦೦೮ರ ಅಂಕಿ-ಅಂಶಗಳು ಇನ್ನೂ ಲಭ್ಯವಿಲ್ಲ, ಆದರೆ ಜೀವ ವಿಮಾ ಕ್ಷೇತ್ರವು ಹೊಸ ಉದ್ಯಮದಲ್ಲಿ ನಿಧಾನಪ್ರಗತಿ ಮತ್ತು ಹೂಡಿಕೆಯ ಆದಾಯದಲ್ಲಿ ಇಳಿತವನ್ನು ಅನುಭವಿಸುವ ಸಾಧ್ಯತೆಯಿದೆ.
ಪೋಸ್ಟ್ ಆಫೀಸ್ನಲ್ಲಿ ವಿಮೆ ಪಾಲಿಸಿ
Explanation: