Social Sciences, asked by bvm937040, 4 months ago

ಸಹಕಾರಿ ಬೇಸಾಯ ಪದ್ಧತಿ ಎಂದರೇನು?​

Answers

Answered by rishithavm
5

Explanation:

ಆರ್ಥಿಕವಾಗಿ ದುರ್ಬಲರಾದವರು ಸಮಾನತೆಯ ತಳಹದಿಯ ಮೇಲೆ ಸಂಘಟಿತರಾಗಿ, ಪರಸ್ಪರ ಸಹಾಯದಿಂದ ತಮ್ಮ ಮೇಲ್ಮೆಯನ್ನು ಸಾಧಿಸಿಕೊಳ್ಳಬೇಕೆಂಬ ಉದ್ದೇಶದಿಂದ ಆರಂಭಿಸಲಾದ ಸಹಕಾರ ಚಳುವಳಿ ಕೃಷಿಕ್ಷೇತ್ರವನ್ನೂ ವ್ಯಾಪಿಸಿದೆ. ಕೃಷಿ ಉತ್ಪಾದನೆಯ ಘಟಕಗಳು ಸಾಮಾನ್ಯವಾಗಿ ಚಿಕ್ಕವು. ಕೃಷಿ ಕಾರ್ಯನಿರತರಾಗಿರುವವರು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಅಷ್ಟೇನೂ ಮುಂದುವರಿದವರಲ್ಲ. ದೇಶದಲ್ಲಿ ವ್ಯಾಪಕವಾಗಿ ಹರಡಿರುವ ಈ ಮಂದಿ ಕೈಗಾರಿಕಾ ನಿರತರಂತೆ ಸಂಘಟಿತರಾಗಿಲ್ಲ. ವ್ಯಕ್ತಿಶಃ ಇವರು ಸಬಲರಲ್ಲ. ಉತ್ಪಾದನೆಗೆ ಅಗತ್ಯವಾದ ಅಂಗಗಳನ್ನು ಹೊಂದಿಸುವುದರಲ್ಲೂ ಉತ್ಪಾದನೆಯಾದ ಪದಾರ್ಥವನ್ನು ಮಾರಾಟ ಮಾಡುವುದರಲ್ಲೂ ಇವರು ಅನೇಕರನ್ನು. ಲಾಭಾಕಾಂಕ್ಷೆಯಿಂದ ಕೂಡಿದವರು ಕೃಷಿಕರನ್ನು ಸುಲಭವಾಗಿ ವಂಚಿಸಬಹುದು. ಅವರ ದೌರ್ಬಲ್ಯದ ದುರುಪಯೋಗ ಪಡೆದುಕೊಂಡು ಅವರನ್ನು ಶೋಷಿಸಬಹುದು. ಇವನ್ನೆಲ್ಲ ತಪ್ಪಿಸಲು ಇರುವ ಉಪಾಯವೊಂದೇ: ಅವರ ಸಂಘಟನೆ, ಕೈಗಾರಿಕೆ, ವ್ಯಾಪಾರ ಮುಂತಾದ ಕ್ಷೇತ್ರಗಳಿಗೆ ಅನ್ವಯಿಸಲಾಗಿರುವ ಸಹಕಾರ ತತ್ತ್ವವನ್ನು ಕೃಷಿಕ್ಷೇತ್ರಕ್ಕೂ ಸುಲಭವಾಗಿ ಅನ್ವಯಿಸಬಹುದಾಗಿದೆ. ವಾಸ್ತವವಾಗಿ ಕೃಷಿಕ್ಷೇತ್ರದಲ್ಲೇ ಇದು ಹೆಚ್ಚಿನ ಯಶಸ್ಸು ಗಳಿಸಿದೆ. ಕೃಷಿಕನಿಗೆ ಉತ್ಪಾದನೆಯ ಸಾಲ ನೀಡಿಕೆ, ಬೀಜ, ಗೊಬ್ಬರ ಉಪಕರಣ ಮೊದಲಾದವುಗಳ ಸರಬರಾಯಿ, ಕೃಷಿ ಉತ್ಪನ್ನದ ಸಂಗ್ರಹ, ಪರಿಷ್ಕರಣ ಮತ್ತು ಮಾರಾಟ, ಕೃಷಿಕನ ಋಣಪರಿಹಾರ ಮತ್ತು ಜಮೀನು ಅಭಿವೃದ್ಧಿಗಾಗಿ ನೆರವು, ಸಹಕಾರಿ ವ್ಯವಸಾಯ-ಈ ರೀತಿಯಾಗಿ ಸಹಕಾರವನ್ನು ಕೃಷಿಯ ಎಲ್ಲ ವಿಭಾಗಗಳಿಗೂ ಅನ್ವಯಿಸಬಹುದು. ಸಹಕಾರದಿಂದ ರೈತ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳದೆ ಇತರರೊಂದಿಗೆ ಸರಿಸಮಾನವಾಗಿ ತನ್ನ ಹಿತಗಳನ್ನು ರಕ್ಷಿಸಿಕೊಳ್ಳಬಹುದು. ಆ ವ್ಯವಸ್ಥೆಯ ಆಡಳಿತದಲ್ಲಿ ಪಾಲ್ಗೊಳ್ಳಬಹುದು ಮತ್ತು ಫಲಗಳನ್ನು ಅನುಭವಿಸಬಹುದು. ಸಹಕಾರ ಸಂಘಗಳ ಬಂಡವಾಳ ಮುಖ್ಯವಾಗಿ ಅವುಗಳ ಸದಸ್ಯರಿಂದಲೇ ಬರುತ್ತದೆ.[೧]

Similar questions