ನೀವು ಇತ್ತೀಚೆಗೆ ಕೈಗೊಂಡ ಶಾಲಾ ಪ್ರವಾಸದ ಅನುಭವಗಳನ್ನು ಕುರಿತು ನಿಮ್ಮ ಸ್ನೇಹಿತನಿಗೊಂದು ಪತ್ರ ಬರೆಯಿರಿ.
Answers
Answer:
I hope it helps you friend please follow me
Step-by-step explanation:
ಡಿಸೆಂಬರ್ ತಿಂಗಳೆಂದರೆ ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪಾಠದ ಒತ್ತಡವಿಲ್ಲದೇ, ಆಟೋಟ ಸಮಾರಂಭಗಳು, ಶಾಲಾ ವಾರ್ಷಿಕೋತ್ಸವ ಇನ್ನಿತರ ಚಟುವಟಿಕೆಗಳು ನಡೆಯುವ ಕಾಲ. ಇದಕ್ಕೆ ಜೊತೆಯೆಂಬಂತೆ ಮಕ್ಕಳಿಗೆ ಇನ್ನೂ ಹುರುಪಿನ ವಿಚಾರವೆಂದರೆ ಸ್ಕೂಲ್ ಟ್ರಿಪ್, ಶೈಕ್ಷಣಿಕ ಪ್ರವಾಸ..!! ವಾರಕ್ಕೂ ಮುಂಚಿನಿಂದಲೇ ಮಕ್ಕಳಲ್ಲಿ ಸಡಗರ, ಉತ್ಸಾಹ, ತಯಾರಿ ಎಲ್ಲಾ ಪ್ರಾರಂಭ!
ಶೈಕ್ಷಣಿಕ ಪ್ರವಾಸದ ಮಹತ್ವ :
ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಒಂದು ಪ್ರಮುಖವಾದ ಭಾಗವೆಂದೇ ಹೇಳಬಹುದು. ತಮ್ಮ ಸ್ವಂತ ಅನುಭವದ ಮೇಲೆ, ವೀಕ್ಷಣೆಯ ಮೇರೆಗೆ ಮಕ್ಕಳಿಗೆ ಕಲಿಯುವ ಒಂದು ಅವಕಾಶ. ಕೇವಲ ಪುಸ್ತಕದ ಬದನೇಕಾಯಿ ಆಗದೆ, ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆಯಲು ಮಾಡಬಹುದಾದಂತಹ ಒಂದು ಉತ್ತಮ ಪ್ರಯತ್ನವೇ ಶೈಕ್ಷಣಿಕ ಪ್ರವಾಸಗಳ ಕೈಗೊಳ್ಳುವಿಕೆ. ಶೈಕ್ಷಣಿಕ ಪ್ರವಾಸದ ಯೋಜನೆಯಿಂದ ಮಕ್ಕಳಲ್ಲಿ ಇತಿಹಾಸ, ವಾಸ್ತುಶಿಲ್ಪ, ಅಭಿವೃದ್ಧಿ, ಉದ್ಯಮ, ಜನ, ಧರ್ಮ, ಸಂಸ್ಕೃತಿ, ಹಾಡು, ನೃತ್ಯ ಹವಾಮಾನ, ನಿಸರ್ಗ, ಪ್ರಾಣಿ ಪಕ್ಷಿ ಸಂಕುಲ ಮತ್ತು ಪರಿಸರದ ಕುರಿತಾಗಿ ಸಾಕಷ್ಟು ವಿಷಯಗಳು ಅರಿವಿಗೆ ಬರುವುದಲ್ಲದೇ, ಕಲ್ಪನೆಗೂ ಮೀರಿ ಅವರ ಜ್ಞಾನಶಕ್ತಿ ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುರಿದುಂಬಿಸಲು ಅನೂಕೂಲವಾಗುತ್ತದೆ.
ಕೇವಲ ಪಾಠದ ವಿಷಯಕ್ಕಾಗಿ ಒಂದೇ ಅಲ್ಲದೇ, ಈ ರೀತಿಯ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಏಕತಾನತೆ, ಪರಸ್ಪರ ಸಹಕಾರ, ಸಂತೋಷ, ಹಂಚುವ ಭಾವನೆ, ತಮ್ಮ ವಯಸ್ಸಿಗೆ ತಕ್ಕ ಜವಾಬ್ಧಾರಿ ನಿರ್ವಹಣೆ, ಇತರ ವ್ಯಕ್ತಿಯೆಡೆಗೆ ಗೌರವ ಹೀಗೆ ಇನ್ನೂ ಹಲವು ಬಗೆಯ ಸೌಜನ್ಯ ನಡವಳಿಕೆಗಳನ್ನು ತುಂಬಲು ಮತ್ತು ಮಕ್ಕಳು ಮುಂದೆ ಸಂಭಾವಿತರಾಗಿ ಬೆಳೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ. ಪಠ್ಯ ಪುಸ್ತಕದಲ್ಲಿ ಕೇಳಿ ಓದಿ ತಿಳಿಯುವುದಕ್ಕಿಂತಲೂ, ವಾಸ್ತವಿಕವಾಗಿ ನೋಡಿ ಅದರ ಅನುಭವ ಪಡೆಯುವುದು, ಆ ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮೌಲ್ಯವನ್ನು ಕೊಡುತ್ತದೆ.
ಇದರ ಜೊತೆಗೆ, ಈ ಹಿಂದೆ ನೋಡಿರದ, ಪರಿಚಯವಿಲ್ಲದ ಊರಿಗಳಿಗೆ ತಿರುಗಾಡಿ ಅಲ್ಲಿಯ ನೆಲ, ಜಲ, ಜನ, ಪರಿಸ್ಥಿತಿ ಪ್ರತಿಯೊಂದನ್ನೂ ಹತ್ತಿರದಿಂದ ನೋಡಲು ಮತ್ತು ಮಿತ್ರರೊಡನೆ, ಕಲಿಸುವ ಗುರುಗಳೊಂದಿಗೆ ಆತ್ಮೀಯತೆಯನ್ನು ಪಡೆಯಲು ಅವಕಾಶವಾಗುತ್ತದೆ.
ಹೇಗಿರಬೇಕು ಶೈಕ್ಷಣಿಕ ಪ್ರವಾಸ :
. ಶೈಕ್ಷಣಿಕ ಪ್ರವಾಸ ಹೆಸರೇ ಹೇಳುವಂತೆ, ಮಕ್ಕಳಿಗೆ ನಿತ್ಯದ ಶಾಲಾ ವಾತಾವರಣದಿಂದ ಹೊರ ಕರೆತಂದು, ಅವರಿಗೆ ಒಂದು ಆಕರ್ಷಣೀಯ ರೀತಿಯಲ್ಲಿ ಪಠ್ಯಕ್ಕೆ ಸಂಬಂಧಿಸಿದಂತೆ ಹಾಗೂ ಇನ್ನಿತರ ಹೆಚ್ಚಿನ ವಿಷಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು. ತಾವು ನೋಡಿರದ ಬೇರೆ ಯಾವದೋ ಸ್ಥಳಕ್ಕೆ ತಮ್ಮ ನೆಚ್ಚಿನ ಸಹಪಾಠಿಗಳೊಂದಿಗೆ ಮೋಜು ಮಸ್ತಿ ಮಾಡುತ್ತಾ ಓಡಾಡಿಕೊಂಡು ಬರುವ ಸಂತೋಷ ಮತ್ತು ಸ್ವಾತಂತ್ರ್ಯವನ್ನು ಮಕ್ಕಳೂ ಕೂಡ ಅಪೇಕ್ಷೆ ಪಡುತ್ತಾರೆ. ಆದರೆ ಇತ್ತೀಚಿಗೆ ನಾವು ನೋಡುವಂತೆ ಸಾಕಷ್ಟು ಶಾಲೆಗಳಲ್ಲಿ ತಮ್ಮ ಇಚ್ಛೆ ಹಾಗೂ ಅನುಕೂಲಕ್ಕೆ ತಕ್ಕಂತೆ ಪ್ರವಾಸದ ಸ್ಥಳವನ್ನು ತಾವೇ ಗೊತ್ತು ಮಾಡಿ, ಮಕ್ಕಳಿಗೆ ಪ್ರವಾಸ ಕಡ್ಡಾಯಗೊಳಿಸುವುದು ಶಾಲಾ ನಿರ್ವಾಹಕರಿಂದ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಶೈಕ್ಷಣಿಕ ಪ್ರವಾಸ ಎಂದರೆ ಕೇವಲ ಯಾವದೋ ದೂರದ ಒಂದು ಪ್ರಸಿದ್ಧ ಸ್ಥಳಕ್ಕೆ ಭೇಟಿ ಕೊಡಬೇಕೆಂದಲ್ಲ, ಆ ಸ್ಥಳವು ಕರೆದುಕೊಂಡು ಹೋಗುತ್ತಿರುವ ಮಕ್ಕಳ ಅರಿವಿನ ಮಟ್ಟಕ್ಕೆ ಇದೆಯೇ ಎಂಬುದರ ಪರಿಶೀಲನೆ ಅಗತ್ಯ. ಹೆಚ್ಚೆಚ್ಚು ಮೋಜು ಮಾಡುವ ಸ್ಥಳಗಳನ್ನು ಆಯ್ದುಕೊಂಡು ಮಕ್ಕಳ ಪೋಷಕರ ಮೇಲೆ ಅತಿಯಾದ ಪ್ರವಾಸದ ವೆಚ್ಚವನ್ನು ಹೇರುವುದೂ ಕೂಡ ಸರಿಯಲ್ಲ.
ಮೊದಲನೆಯದಾಗಿ ಯಾವ್ಯಾವ ವಯಸ್ಸಿನ ಮಕ್ಕಳಿಗೆ ಯಾವ ಬಗೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎಂಬುದನ್ನು ಮನಗಂಡು, ಆ ವಯಸ್ಸಿನ ಮಕ್ಕಳ ಆರಾಮವನ್ನು ಗಮನದಲ್ಲಿರಿಸಿ, ಎಷ್ಟು ದೂರದ ಪ್ರವಾಸ, ಎಷ್ಟು ದಿನಗಳ ಪ್ರವಾಸ ಎಂದು ತೀರ್ಮಾನಿಸಬೇಕು. ಉದಾಹರಣೆಗೆ, ತೀರಾ ಚಿಕ್ಕ ಮಕ್ಕಳಿಗೆ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋದರೆ ಅವರಿಗೆ ಅದು ಕೇವಲ ಒಂದು ಕಟ್ಟಡ/ಸ್ಮಾರಕವಾಗಿ ಕಂಡುಬರುತ್ತದೆಯೇ ಹೊರತು, ಐತಿಹಾಸಿಕ ಮೌಲ್ಯಗಳು ಆ ಮಕ್ಕಳ ಅರಿವಿಗೆ ಬರುವದಿಲ್ಲ. ತೀರಾ ಚಿಕ್ಕ ವಯಸ್ಸಿನ ಮಕ್ಕಳಿಗೆ ಪ್ರಾಯೋಗಿಕವಾಗಿ ಅವರು ತಿಳಿದುಕೊಳ್ಳುವಂತಹ ವಿಷಯಗಳಾದ, ಪರಿಸರ, ಪ್ರಾಣಿ ಪಕ್ಷಿಗಳು, ನಮ್ಮ ಸಮಾಜದಲ್ಲಿ ಕಂಡುಬರುವ, ನಿತ್ಯ ಸಹಾಯಕರ ಬಗೆಗೆ ತಿಳಿಸಿಕೊಟ್ಟರೆ, ಆ ಮಕ್ಕಳ ಸಾಮಾನ್ಯ ಜ್ಞಾನದ ಮಟ್ಟ ಹೆಚ್ಚುತ್ತದೆ. ಉದಾಹರಣೆಯೆಂದರೆ, ತೀರಾ ಚಿಕ್ಕ ಮಕ್ಕಳಿಗೆ ಒಂದು ದಿನದ ಪಿಕ್ನಿಕ್ ಮಾದರಿಯಲ್ಲಿ ಪ್ರಾಣಿ ಸಂಗ್ರಹಾಲಯ, ಮತ್ಸ್ಯಾಗಾರ, ಹಣ್ಣು ತರಕಾರಿ ಮಾರುಕಟ್ಟೆ, ಬಸ್ ಸ್ಟಾಂಡ್, ಹಾಸ್ಪಿಟಲ್, ಪೋಸ್ಟ್ ಆಫೀಸ್, ಪೊಲೀಸ್ ಸ್ಟೇಷನ್, ಸಾರಿಗೆ ವ್ಯವಸ್ಥಾ ವಾಹನಗಳ ಸ್ಥಳ ಇತ್ಯಾದಿ ಸ್ಥಳಗಳಿಗೆ ಕರೆದೊಯ್ದು, ನಾವು ನಿತ್ಯ ಬಳಸುವ ವಸ್ತುಗಳು ಮತ್ತದರ ಲಭ್ಯತೆಯ ಬಗೆಗಿನ ಪರಿಚಯ ಹಾಗೂ ಯಾರು ನಮಗೆ ಸಾಮಾನ್ಯ ಸಹಾಯಕರು ಮತ್ತು ನಮಗವರಿಂದ ಸಿಗುವ ಸಹಾಯದ ಬಗೆಗೆ ಪರಿಚಯಿಸಿದರೆ, ಮಕ್ಕಳಲ್ಲಿ ಸಮಾಜದ ಬಗೆಗೆ ಧನಾತ್ಮಕ ಭಾವನೆ ಮೂಡುತ್ತದೆ ಮತ್ತು ಅವರ ಸಾಮಾನ್ಯ ಜ್ಞಾನ ಹೆಚ್ಚುತ್ತದೆ.
ಎರಡನೆಯದಾಗಿ, ಪ್ರವಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳ ಮಕ್ಕಳ ಪಠ್ಯ ಜ್ಞಾನಕ್ಕೆ ಪೂರಕವಾಗಿದೆಯೇ ಎಂಬುನ್ನು ಗಮನಿಸಿಕೊಳ್ಳುವುದೂ ಕೂಡ ಅತಿ ಮುಖ್ಯ, ಐತಿಹಾಸಿಕ ವಿಷಯಗಳು, ರಾಜರ ಆಳ್ವಿಕೆ, ಸ್ವಾತಂತ್ರ್ಯ ಸಂಗ್ರಾಮ, ಪುರಾತನ ನಾಗರೀಕತೆ, ಆಧುನೀಕರಣ, ಖಗೋಳ ಶಾಸ್ತ್ರ, ಪ್ರಪಂಚದ ವೈಪರೀತ್ಯಗಳು, ವಿವಿಧ ಪ್ರದೇಶದ ಭೌಗೋಳಿಕ ಸಂಗತಿ, ಆರೋಗ್ಯ ವಿಚಾರ, ಇನ್ನೂ ಹತ್ತು ಹಲವು ಪಠ್ಯಕ್ಕೆ ಸಂಬಂಧಿಸಿದ ವಿಷಯಕ್ಕೆ ಅನುಗುಣವಾಗಿ ಪ್ರವಾಸದ ಸ್ಥಳವನ್ನು ನಿಗದಿಪಡಿಸಿದರೆ, ಮಕ್ಕಳಿಗೆ ಓದಿದ ಪಾಠಕ್ಕೂ, ತಾವು ಹೋದಲ್ಲಿ ಕಂಡ ವಿಷಯಕ್ಕೂ ಸಾಮ್ಯತೆಯನ್ನು ಕಾಣಲು ಮತ್ತು ಹೋಲಿಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಉದಾಹರಣೆಗೆ, ವಿಜ್ಞಾನದ ವಿಷಯದ ವಿದ್ಯಾರ್ಥಿಗಳಿಗೆ ಅದಕ್ಕೆ ಸಂಬಂಧಿಸಿದಂತೆ, ಯಾವುದಾದರೂ ನವೀನ ಮಾದರಿಯ ಪ್ರಯೋಗಾಲಯಗಳು, ಉತ್ಪಾಧನಾ ಘಟಕಗಳು ಇತ್ಯಾದಿ ಸ್ಥಳಗಳಿಗೆ ಕರೆದುಕೊಂಡು ಹೋಗಿ ಪ್ರಾಯೋಗಿಕವಾಗಿ ವಿಜ್ಞಾನ ಸಂಗತಿಗಳು, ಮತ್ತದರ ಬಳಕೆಯ ಬಗೆಗೆ ವಿವರಿಸಿದರೆ, ಅವರ ಕಲಿಕೆ ಸರಳ ಮತ್ತು ಯಶಸ್ವಿಯಾಗುತ್ತದೆ.
Answer:
ನೀವು ಇತ್ತೀಚಿಗೆ ಕೈಗೊಂಡ ಪ್ರವಾಸದ ಅನುಭವಗಳು ಕುರಿತು ಪ್ರಬಂಧ ಬರೆಯಿರಿ