ಗೆಳೆತನ ಸ್ನೇಹ] ಒಂದು ಪವಿತ್ರ ಬಂಥ ಹೇಗೆ ವಿವರಿಸಿ
Answers
Answered by
6
ಗೆಳೆತನ :
ಗೆಳೆತನ ಎಂಬುದು ಗಟ್ಟಿ ಬಂಧನ. ನಮ್ಮನ್ನ ಜೀವನದಲ್ಲಿ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರೋದು ನನ್ನ ಗೆಳೆಯರು. ನಮ್ಮ ಸ್ನೇಹ ಆಕಸ್ಮಿಕ ಆದರೆ ಅಪರೂಪವಾದ ಬಂಧ. ನಮ್ಮ ಸ್ನೇಹ ಶುರುವಾಗಿದ್ದು ನಂಬಿಕೆಯಿಂದ ಈಗ ನಿಂತಿರೋದು ನಂಬಿಕೆ ಮೇಲೆ. ನಮ್ಮ ನಗುವಿಗೆ, ಕಣ್ಣೀರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೊಂದು ಮನಸ್ಸಿನ ರೂಪವೇ ಸ್ನೇಹ. ಆ ಮನಸ್ಸಿನಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷವೆ ಗೆಳೆತನದ ಅಹ್ಲಾದಕ್ಕೆ ಸಾಕ್ಷಿ.. ಪರಿಶುದ್ಧ, ನಿಸ್ವಾರ್ಥ, ತ್ಯಾಗದಿಂದ ಕೂಡಿದ ನಿಷ್ಕಲ್ಮಶವಾದ ಸ್ನೇಹ ಸಮಾಜಕ್ಕೂ ಒಳಿತನ್ನು ಮಾಡುತ್ತದೆ. ಸ್ನೇಹದಲ್ಲಿ ಅಹಂ ಆಗಲಿ ದ್ವೇಷವಾಗಲಿ ಸುಳಿಯಲೇ ಬಾರದು. ನಮ್ಮ ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಬೇಕು.ನನ್ನ ಗೆಳೆಯರು ಯಾವಗಲೂ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆ ನನಗೆ ಇದೆ. ನಾನು ಎಂದೂ ಅವರನ್ನು ಬಿಟ್ಟು ಹೋಗಲ್ಲ❤❤❤❤
(ಎನ್ ಎಸ್ ಎಸ್ ಪಿ)
Similar questions