India Languages, asked by harsharm024, 5 months ago

ಆನ್ಲೈನ್ ಶಿಕ್ಷಣ ಪ್ರಬಂಧ ಬರೆಯಿರಿ​

Answers

Answered by krishnas10
92

Explanation:

ತರಗತಿ ಬೋಧನೆಗೆ ಆನ್‌ಲೈನ್‌ ಶಿಕ್ಷಣ ಪರ್ಯಾಯವಲ್ಲ. ಇದನ್ನು ಪದವಿ ಹಂತದ ಶಿಕ್ಷಣ ಪಡೆದ ಯಾವುದೇ ವ್ಯಕ್ತಿ ಸಮರ್ಥಿಸುತ್ತಾನೆ. ಆದರೆ ಲಾಕ್‌ಡೌನ್‌ ವೇಳೆ ವಿದ್ಯಾರ್ಥಿಗಳನ್ನು ಎಂಗೇಜ್‌ ಮಾಡಲು, ಶೈಕ್ಷಣಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು ಇರುವ ಒಂದೇ ಒಂದು ಆಯ್ಕೆ ಎಂದರೆ ಅದು ಆನ್‌ಲೈನ್‌ ಬೋಧನೆ. ಆನ್‌ಲೈನ್‌ ಎಜುಕೇಷನ್‌ ಕುರಿತು ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇನ್ನೂ ವಿಶ್ವ ಸಂಸ್ಥೆ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ ಶಿಕ್ಷಣದ ಕುರಿತು ಒಂದಷ್ಟು ಒಳನೋಟವನ್ನು, ಹಲವರ ಅಭಿಪ್ರಾಯವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ನೆಟ್ವರ್ಕ್ ಸಮಸ್ಯೆಯಂತಹ ಹಲವು ಅಡೆತಡೆಗಳು ಎದುರಾಗುತ್ತಿದ್ದರೂ ಆನ್‌ಲೈನ್‌ ತರಗತಿಗಳ ಮೂಲಕ ಅಂತರ್ಜಾಲ ಆಧರಿತ ಶಿಕ್ಷಣಕ್ಕೆ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ತೆರೆದುಕೊಳ್ಳುತ್ತಿವೆ. ಇದರಿಂದಾಗಿ ಆನ್‌ಲೈನ್‌ ಶಿಕ್ಷಣ ಭವಿಷ್ಯದ ಶಿಕ್ಷಣ ವಿಧಾನವಾಗುವುದು ಮತ್ತಷ್ಟು ದೃಢವಾಗುತ್ತಿದೆ. ಆದರೆ ಆನ್‌ಲೈನ್‌ ಶಿಕ್ಷಣ, ಸಾಂಪ್ರಧಾಯಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರಬೇಕೇ ಹೊರತು ಪರ್ಯಾಯವಾಗಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಲ್ಲದೆ, ಉನ್ನತ ಶಿಕ್ಷಣದಲ್ಲಿ ಆನ್‌ಲೈನ್‌ ಬೋಧನೆ ಭವಿಷ್ಯದಲ್ಲಿ ಕಾರ‍್ಯಸಾಧುವಾದರೂ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಲ್ಲಿ ತರಗತಿ ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆಯಲ್ಲಿ ಯಾವುದೇ ಕೊರತೆ ಉಂಟಾಗದು ಎಂದು ಸರಕಾರ ಸ್ಪಷ್ಟಪಡಿಸಿದೆ.

ದೇಶಾದ್ಯಂತ ಆನ್‌ಲೈನ್‌ ಶಿಕ್ಷಣದಲ್ಲಿ ಮಹತ್ವದ ಬದಲಾವಣೆಗಳಾಗಿದ್ದು ಡಿಜಿಟಲ್‌ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಉನ್ನತ ಶಿಕ್ಷಣ ಇಲಾಖೆ ವತಿಯಿಂದ 'ಜ್ಞಾನ ನಿಧಿ' ಯುಟ್ಯೂಬ್‌ ಪೋರ್ಟಲ್‌ ಆರಂಭಿಸಿ, ಇಲ್ಲಿಯವರೆಗೆ 1000 ವಿಡಿಯೋಗಳನ್ನು ಸಬ್ಜೆಕ್ಟ್ ಆಧರಿಸಿ ಆಯಾ ವಿವಿಗೆ ಅನುಸಾರವಾಗಿ ರೂಪಿಸಿ ಅಪ್‌ಲೋಡ್‌ ಮಾಡಲಾಗಿದೆ. ಆದರೆ, ಇದುವರೆಗೆ ತನ್ನ ವ್ಯಾಪ್ತಿಯ ವಿದ್ಯಾರ್ಥಿಗಳ ದತ್ತಾಂಶವೇ ಇಲಾಖೆಯಲ್ಲಿರಲಿಲ್ಲ. ಇದೇ ಪ್ರಥಮವಾಗಿ ವಿದ್ಯಾರ್ಥಿಗಳ ಡೇಟಾಬೇಸ್‌ ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. 3.44 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯ ಮೊಬೈಲ್‌ ಸಂಖ್ಯೆ ಪಡೆದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಸದ್ಯ 2 ಲಕ್ಷ ವಿದ್ಯಾರ್ಥಿಗಳ ಮೊಬೈಲ್‌ ಸಂಖ್ಯೆ ಸಂಗ್ರಹಿಸಿ ಸಂದೇಶದ ಮೂಲಕ ಯುಟ್ಯೂಬ್‌ ಚಾನಲ್‌ ಹಾಗೂ ವಾಟ್ಸಾಪ್‌ ಗ್ರೂಪ್‌ ಸಂಬಂಧಿಸಿದ ಮಾಹಿತಿಗಳನ್ನು ನೀಡಲಾಗುತ್ತಿದೆ. ವಿದೇಶಗಳಲ್ಲಿರುವಂತೆ ತಂತ್ರಜ್ಞಾನ ಆಧಾರಿತ ಪರಿಣಾಮಕಾರಿ ಶಿಕ್ಷಣ ನೀಡುವ ಪ್ರಯತ್ನವನ್ನು ಇಲಾಖೆ ನಡೆಸುತ್ತಿದೆ. ಇದುವರೆಗೆ ತಂತ್ರಜ್ಞಾನ ಬಳಕೆಗೆ ಹಿಂಜರಿಯುತ್ತಿದ್ದ ಬೋಧಕರೂ ಕೂಡ ಕ್ರಮೇಣವಾಗಿ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ.

ಡಿಜಿಟಲ್‌ ಯುಗದಲ್ಲಿ ಶಿಕ್ಷಣವನ್ನೂ ಡಿಜಿಟಲೀಕರಣಗೊಳಿಸುವುದು ಅನಿವಾರ್ಯ. ಇದರ ಭಾಗವಾಗಿ ಪ್ರತಿಯೊಬ್ಬ ಪ್ರಜೆಗೂ ಮೂಲ ತಂತ್ರಜ್ಞಾನಗಳು ದೊರಕುವಂತಾದಾಗ ಮಾತ್ರ ಇದರ ಪೂರ್ಣ ಪ್ರಮಾಣದ ಅನುಷ್ಠಾಣ ಸಾಧ್ಯ. ದೇಶದ ಪ್ರತಿಯೊಂದು ಹಳ್ಳಿಗೂ ಮೊಬೈಲ್‌ ನೆಟ್ವರ್ಕ್ ಮತ್ತು ಇಂಟರ್ನೆಟ್‌ ಸೌಲಭ್ಯ, ಕಂಫ್ಯೂಟರ್‌/ಲ್ಯಾಪ್‌ಟ್ಯಾಪ್‌ ಹಾಗೂ ಸೂಕ್ತ ಸಾಫ್ಟ್‌ವೇರ್‌ಗಳು ಪ್ರತಿಯೊಬ್ಬ ವಿದ್ಯಾರ್ಥಿಗೂ ಸಿಗುವಂತಾಗಬೇಕು. ಭಾರತದಲ್ಲಿನ ಉನ್ನತ ಶಿಕ್ಷಣದ ಕುರಿತು ಅಧ್ಯಯನ ನಡೆಸಿರುವ ಕ್ವಾಕರೆಲ್ಲಿಸೈಮಂಡ್ಸ್‌ ಸಂಸ್ಥೆ ನಡೆಸಿರುವ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಶೇ.73ರಷ್ಟು ವಿದ್ಯಾರ್ಥಿಗಳು ಇಂಟರ್ನೆಟ್‌ ಮೊಬೈಲ್‌ ಹಾಟ್‌ಸ್ಪಾಟ್‌ ಮೇಲೆ ಅವಲಂಭಿತರಾಗಿದ್ದರೆ, ಶೇ.15 ವಿದ್ಯಾರ್ಥಿಗಳು ಬ್ರಾಡ್‌ಬ್ಯಾಂಡ್‌ ಹಾಗೂ ಶೇ.10ರಷ್ಟು ವಿದ್ಯಾರ್ಥಿಗಳು ವೈಫೈ ಡಾಂಗಲ್‌ ಬಳಸುವುದಾಗಿಯೂ, ಶೇ.2ರಷ್ಟು ವಿದ್ಯಾರ್ಥಿಗಳು ತಾವು ಇಂಟರ್ನೆಟ್‌ ಸೌಲಭ್ಯ ಹೊಂದಿಲ್ಲ ಎಂದು ತಿಳಿಸಿದ್ದಾರೆ. ಇದರಲ್ಲಿ ಶೇ.60ಕ್ಕೂ ಹೆಚ್ಚಿನವರು ನೆಟ್ವರ್ಕ್ ಹಾಗೂ ಇಂಟರ್ನೆಟ್‌ ಸಿಗ್ನಲ್‌ ಕಳಪೆಯಾಗಿದೆ ಎಂದು ತಿಳಿಸಿದ್ದಾರೆ.

ಆನ್‌ಲೈನ್‌ ಶಿಕ್ಷಣದ ಅನುಕೂಲಗಳು

ಆಧುನಿಕ ಟ್ರೆಂಡ್‌: ಪುಸ್ತಕಗಳನ್ನು ಓದಿ ಅಭ್ಯಸಿಸುವುದಕ್ಕಿಂತ ಆನ್‌ಲೈನ್‌ ಮೂಲಕ ಮಾಹಿತಿ ಪಡೆಯುವುದು ಆಧುನಿಕ ಪೀಳಿಗೆಯವರಿಗೆ ಇಷ್ಟವಾಗುತ್ತದೆ, ಕಂಫರ್ಟ್‌ ಎನಿಸುತ್ತದೆ

* ವೆಚ್ಚ ಕಡಿಮೆ:ಸಾಮಾನ್ಯವಾಗಿ ನಾವು ಹೊಂದಿರುವ ಮೊಬೈಲ್‌, ಕಂಪ್ಯೂಟರ್‌ನಂತ ಸಾಧನಗಳಿಗೆ ಇಂಟರ್ನೆಟ್‌ ಕನೆಕ್ಷನ್‌ ಪಡೆದುಕೊಂಡು ಬಳಕೆ

*ಸಮಯ ಉಳಿತಾಯ: ಮನೆಯಲ್ಲೇ ಕಲಿಯಬಹುದಾದ್ದರಿಂದ ಸಂಚಾರದ ಅವಶ್ಯಕತೆ ಇರುವುದಿಲ್ಲ, ಇದರಿಂದ ಸಮಯ ಹಾಗೂ ಹಣದ ಉಳಿತಾಯ ಸಾದ್ಯ.

*ಸ್ವಯಂ ಕಲಿಕೆ: ಸಾಂಪ್ರಧಾಯಿಕ ತರಗತಿಗೆ ಹೋಗುವ ಅಗತ್ಯವಿರುವುದಿಲ್ಲವಾದ್ದರಿಂದ ಸಮಯ ಹೊಂದಾಣಿಕೆಯಾದಾಗ ಅಭ್ಯಾಸ ಮಾಡಬಹುದು.

ನೆಟ್ವರ್ಕ್ ಸಮಸ್ಯೆ: ಭಾರತದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿದ್ದು ನೆಟ್ವರ್ಕ್ ಸಮಸ್ಯೆ ಸಾಮಾನ್ಯ. ಹಳ್ಳಿಗರು ಇಂಟರ್ನೆಟ್‌ ಸೌಲಭ್ಯವಿಲ್ಲದೆ ಆನ್‌ಲೈನ್‌ ಶಿಕ್ಷಣ ವಂಚಿತರಾಗಬಹುದು

*ತಂತ್ರಜ್ಞಾನ ಹಾಗೂ ಸಾಧನಗಳ ಕೊರತೆ: ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಮೊಬೈಲ್‌ನಂತ ಸಾಧನಗಳನ್ನು ಹೊಂದಿಲ್ಲದಿರುವುದು ಹಾಗೂ ಕಲಿಕೆಗೆ ಅಗತ್ಯವಿರುವ ಅಪ್ಲಿಕೇಶನ್‌ ಬಳಕೆ ಸಾಧ್ಯವಾಗದಿರುವುದು.

*ಸ್ವಯಂ ಶಿಸ್ತು: ತರಗತಿಗಳಲ್ಲಾದರೆ ಶಿಸ್ತಿನಿಂದಿರುವುದು ಅನಿವಾರ್ಯ. ಆದರೆ ಮನೆಯಲ್ಲಿಯೇ ಕಲಿಕೆಯಲ್ಲಿ ತೊಡಗಲು ಸ್ವಯಂ ನಿಯಂತ್ರಣ, ಸ್ವಯಂ ಪ್ರೇರಣೆ ಹಾಗೂ ಶಿಸ್ತು ಬಹುಮುಖ್ಯ.

*ನಕಲು: ತಾವೇ ಕಲಿತು ಅಸೈನ್‌ಮೆಂಟ್‌ಗಳನ್ನು ಮಾಡುವ ಬದಲು ಆನ್‌ಲೈನ್‌ ಸೌಲಭ್ಯಗಳನ್ನು ಬಳಸಿ ನಕಲು ಮಾಡಲು ಅವಕಾಶ, ಆನ್‌ಲೈನ್‌ ಪರೀಕ್ಷೆಯಲ್ಲೂ ವಂಚನೆಗೆ ಅವಕಾಶ.

*ಒಂಟಿತನ: ತರಗತಿಗಳಲ್ಲಿ ಸ್ನೇಹತರ ಸಮೂಹದೊಂದಿಗೆ ಸೇರಿ ಕಲಿಯುವದಕ್ಕೂ ಏಕಾಂಗಿಯಾಗಿ ಕಲಿಯುವುದಕ್ಕೂ ವ್ಯತ್ಯಾಸವಿದ್ದು ಮಾನಸಿಕವಾಗಿ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.

Similar questions