English, asked by prakashsrinivas011, 4 months ago

ಮನಸೆದರೆ ಮಾರ್ಗ ಗಾದೆ ಮಾತು​

Answers

Answered by khushisathish100
6

Answer:

ಸಾಧಿಸುವ ಛಲವೊಂದಿದ್ದರೆ ಯಾವುದೇ ಸಾಧನೆ ಅಸಾಧ್ಯ ಅಲ್ಲ ಎನ್ನುವುದು ಈ ಗಾದೆಯ ಗುಟ್ಟು.  

ಒಂದು ಕೆಲಸದಲ್ಲಿ ಮುಂದುವರಿಯಬೇಕಾದರೆ, ಮೊದಲು ಅದರ ಬಗ್ಗೆ ನಾವು ಸರಿಯಾಗಿ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಪೂರ್ಣ ಮನಸ್ಸಿನಿಂದ, ಪೂರ್ಣ ಒಲವಿನಿಂದ ನಿರ್ಧರಿಸಿದ ಮೇಲೆ, ಅಡಚಣೆಗಳು ಬಂದರೆ ಅದನ್ನು ದಾಟಿ ಮಾಡುವ ಹುಮ್ಮಸ್ಸು ಇರುತ್ತದೆ. ನಮಗೆ  ಕೆಲಸದಲ್ಲಿ ಒಲವೇ ಇಲ್ಲದಿದ್ದರೆ ಅದನ್ನು ಮಾಡುವುದು ತುಂಬಾ ಕಷ್ಟಕರ. ನಮಗೆ ನಮ್ಮ ಸಾಧನೆಯ ದಾರಿಯಲ್ಲಿ ಬರುವ ಅಡಚಣೆಗಳು ಎಷ್ಟು ಕಷ್ಟಕರ ಅಥವಾ ಎಷ್ಟು ಸುಲಭ ಎನ್ನುವುದು ನಮ್ಮ ಸಾಧನೆಯ ಬಗೆಗಿನ ನಿರ್ಧಾರದ ಮೇಲೆ ಅವಲಂಬಿಸಿದೆ. ಸಾಧಿಸಲೇ ಬೇಕು ಎಂದಿದ್ದರೆ ಏನು ಕಷ್ಟ ಬಂದರೂ ಅದರಿಂದ ಹೊರಬರುವ ದಾರಿ ನಮಗೆ ಖಂಡಿತಾ ದೊರಕುತ್ತದೆ.  

ವಸ್ತುವನ್ನು ಪಡೆದುಕೊಳ್ಳಲು ನಮ್ಮಲ್ಲಿ ಅಡಚಣೆಗಳಿದ್ದರೂ, ಅದು ನಮಗೆ ಬೇಕೆ ಬೇಕೆಂದಾದರೆ ಅದನ್ನು ದೊರಕಿಸಿಕೊಳ್ಳುವ ವಿಧಾನ ನಮಗೆ ಖಂಡಿತಾ ಹೊಳೆಯುತ್ತದೆ.

 

ಅದೇ ಮನಸಿಲ್ಲದ ಕಾರ್ಯ ಎಷ್ಟು ಸುಲಭವಾದರೂ ನಮಗೆ ಕಷ್ಟಎಂದೆನಿಸುತ್ತದೆ.

Explanation:

Similar questions