India Languages, asked by varsha8919791, 5 months ago

ಚಿಂತೆಯೇ ಮುಪ್ಪು ಸಂತೋಷವೇ ಯೌವನ ವಿಸ್ತರಿಸಿ​

Answers

Answered by krishnamurthyR
6

Answer:

ಇದು ಒಂದು ಗಾದೆಯ ರೀತಿಯ ವಾಕ್ಯವಾಗಿದ್ದು,ಇದರ ಅರ್ಥ ಹೀಗಿದೆ.

ಚಿಂತೆಯೇ ಮುಪ್ಪು ಸಂತೋಷವೇ ಯೌವ್ವನ

  • ಚಿಂತೆಯೆಂದರೆ ಯೋಚನೆ ಹಾಗೆಯೇ ಸಹಜವಾಗಿ ಎಲ್ಲರೂ ಚಿಂತಾಜನಕವಾಗಿರುವುದು ಮುಪ್ಪಿನ(ಹಿರಿಯ) ವಯಸ್ಸಿನಲ್ಲಿಯೇ.
  • ಹಾಗೆ ಸಂತೋಷ ಉಂಟಾಗುವುದು ಮಾನಸಿಕ ನೆಮ್ಮದಿ ಮತ್ತು ಉಲ್ಲಾಸವಿದ್ದಾಗ ಮಾತ್ರ.
  • ಈ ವಾಕ್ಯದ ಮತ್ತೊಂದು ಅರ್ಥವೆಂದರೆ,ನಮ್ಮ ಮನಸ್ಸಿನ ಸ್ಥಿತಿಯ ಆಧಾರದ ಮೇಲೆ ನಾವು ನಮ್ಮ ವಯಸ್ಸನ್ನು ಹೇಳಬಹುದು.
  • ನಮ್ಮ ಮನಸ್ಸು ಚಿಂತೆಗೀಡಾಗಿದ್ದರೆ,ನಮ್ಮ ಸ್ಥಿತಿಯನ್ನು ಮುಪ್ಪಿಗೆ ಹೋಲಿಸಬಹುದು.
  • ನಮ್ಮ ಮನಸ್ಸು ಸಂತಸದಿಂದಿದ್ದರೆ,ಅದೇ ನಮ್ಮ ಯೌವ್ವನದ ಕಾಲ ಎಂದೇಳುವುದು ಸಮಂಜಸ.

Explanation:

ಧನ್ಯವಾದಗಳು!!

Answered by Anonymous
18

Answer:

ಚಿಂತೆಯೇ ಮುಪ್ಪು; ಸಂತೋಷವೇ

ಯೌವನ

ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ.

ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ’ಚಿಂತೆ ಮಾಡದೆ, ಸದಾ ಸಂತೋಷದಿಂದ ಜೀವಿಸಬೇಕು ಎಂಬುದನ್ನು ತಿಳಿಸುತ್ತದೆ.

ಸುಖ ಬಂದಾಗ ಸಂತೋಷದಿಂದ ಹಿಗ್ಗುವುದು; ಕಷ್ಟ ಎದುರಾದಾಗ ದುಃಖ ಮತ್ತು ಚಿಂತೆಗೆ ಒಳಗಾಗುವುದು ಮಾನವನ ಸ್ವಾಭಾವಿಕ ಗುಣ. ಸುಖ-ಸಂತೋಷ-ನಗು ನಮ್ಮ ಆರೋಗ್ಯ ವೃದ್ಧಿಗೆ ಕಾರಣವಾದರೆ ಚಿಂತೆಯು ನಮ್ಮನ್ನು ಕುಗ್ಗಿಸಿ ಅನಾರೋಗ್ಯಕ್ಕೆ ದೂಡುತ್ತದೆ. ’ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ’ ಎನ್ನುವ ಮಾತಿನಂತೆ, ಮಾನಸಿಕ ಚಿಂತೆ ಮನುಷ್ಯರಿಗೆ ಅಕಾಲದ ಮುಪ್ಪನ್ನು ತರುತ್ತದೆ. ಮಾನವನ ಬಹುಪಾಲು ರೋಗಗಳಿಗೆ ಮಾನಸಿಕ ವ್ಯಥೆ-ಚಿಂತೆಗಳೇ ಕಾರಣವೆಂದು ಸಂಶೋಧನೆಗಳಿಂದ ತಿಳಿದುಬಂದಿದೆ.

ಚಿಂತೆಗೂ ಚಿತೆಗೂ ಒಂದೇ ಒಂದು ಸೊನ್ನೆಯಷ್ಟೇ ವ್ಯತ್ಯಾಸ. ಚಿತೆ ಸತ್ತ ನಂತರ ಸುಡುತ್ತದೆ ಆದರೆ ಚಿಂತೆ ಬದುಕಿದ್ದಾಗಲೇ ಸುಡುತ್ತದೆ. ಚಿಂತೆಯು ನಮ್ಮ ಮನಸ್ಸಿನ ಸಂತೋಷವನ್ನು ಹಾಳುಮಾಡುತ್ತದೆ. ನಮ್ಮನ್ನು ನಿರುತ್ಸಾಹಿಯಾಗಿ ಮಾಡಿ, ದುಡಿಯುವ ಶಕ್ತಿ, ಚೈತನ್ಯವನ್ನು ಕುಗ್ಗಿಸುತ್ತದೆ. ಚಿಂತೆ ನಿರಂತರವಾಗಿ ಬೆಳೆಯುತ್ತಾ ಹೋದಂತೆ ಅದು ನಮ್ಮ ಆಯುಷ್ಯವನ್ನು ತಿಂದು ಅಕಾಲ ವೃದ್ದಾಪ್ಯವನ್ನುಂಟುಮಾಡಿ ಬದುಕನ್ನು ನಾಶಪಡಿಸುತ್ತದೆ. ಆದ್ದರಿಂದ ಚಿಂತಿಸುವುದನ್ನು ಬಿಟ್ಟು ಬದುಕಿರುವಷ್ಟು ಕಾಲ ಸುಖ-ಸಂತೋಷದಿಂದ ಜೀವನವನ್ನು ಕಳೆಯಬೇಕು. ಮಾನಸಿಕ ಸಂತೋಷ ನಮ್ಮಲ್ಲಿ ನವ ಚೈತನ್ಯವನ್ನು ತುಂಬಿ, ಯೌವನವನ್ನು ವೃದ್ಧಿಸುತ್ತದೆ. ನಮ್ಮಲ್ಲಿ ಅಪಾರ ಶಕ್ತಿಯನ್ನು ತುಂಬುತ್ತದೆ. ಯಾರ ಬದುಕಿನಲ್ಲಿ ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ. ಬದುಕಬೇಕು, ಸಾಧಿಸಬೇಕು, ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ.

ಆದ್ದರಿಂದ ನಾವು ನಗುನಗುತಾ ಸಂತೋಷದಿಂದ ಬಾಳಬೇಕು. ಚಿಂತೆಯಿಂದ ದೂರ ಇರಬೇಕು. ಎಂಬುದು ಈ ಗಾದೆಯ ಆಶಯವಾಗಿದೆ.

Be Brainly!

Similar questions