ಪುಸ್ತಕಗಳ ಮಹತ್ವ , ಪ್ರಬಂಧ
Answers
Answer:
ಮೌಲ್ಯಗಳನ್ನು ವ್ಯಕ್ತಿಗಳ ಮನಸ್ಸಿನಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮತ್ತು ಓದಿನ ಪಾತ್ರ ಬಹಳ ಮಹತ್ತರವಾದದ್ದು ಎಂದು ವಿವಿ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡ ಅಭಿಪ್ರಾಯಪಟ್ಟರು.
ದೇಶಾದ್ಯಂತ ಪ್ರತಿವರ್ಷ ನ. 14 ರಿಂದ 20ರ ವರೆಗೆ ನಡೆಯುವ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ವಿಶ್ವವಿದ್ಯಾಲಯದ ಗ್ರಂಥಾಲಯ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ಜಂಟಿಯಾಗಿ ಶನಿವಾರ ಆಯೋಜಿಸಿದ್ದ ಗ್ರಂಥಾಲಯ ಮತ್ತು ಓದಿನ ಕುರಿತು ಅರಿವು ಮೂಡಿಸುವ ಜಾಥಾಗೆ ಹಸಿರು ಬಾವುಟ ತೋರಿಸುವುದರೊಂದಿಗೆ ಚಾಲನೆ ನೀಡಿದ ಅವರು ಓದು, ಪುಸ್ತಕ ಮತ್ತು ಗ್ರಂಥಾಲಯಗಳ ಮಹತ್ವದ ಬಗ್ಗೆ ಮಾತನಾಡಿದರು.
ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ಎಂಬ ಮಾತನ್ನು ನೆನಪಿಸಿಕೊಂಡ ಅವರು, ಇಂದಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಯುಗದಲ್ಲಿ ಓದುವ ಪ್ರವೃತ್ತಿ ಕ್ರಮೇಣ ಕ್ಷೀಣಿಸುತ್ತಿದೆ. ಓದುಗರನ್ನು ಗ್ರಂಥಾಲಯಕ್ಕೆ ಮರಳಿ ಕರೆತರುವಲ್ಲಿ ಜಾಥಾದಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವ ದೇಶದಲ್ಲಿ ಪ್ರಜೆಗಳು ಮಾಹಿತಿ ಸಾಕ್ಷರರಾಗಿರುತ್ತಾರೋ ಆ ದೇಶದಲ್ಲಿ ಸಮೃದ್ಧಿ ಮತ್ತು ಸೌಹಾರ್ದ ಸದಾ ಮನೆಮಾಡಿರುತ್ತದೆ ಎಂದರು. ಜಾಥಾದಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆದು ಅವರನ್ನು ಹುರಿದುಂಬಿಸಿದರು.
ಕುಲಸಚಿವ ಪೊ›. ಪಾಟೀಲ್ ಮಲ್ಲಿಕಾರ್ಜುನ, ಹಣಕಾಸು ಅಧಿಕಾರಿಗಳು, ಪ್ರಾಧ್ಯಾಪಕ ಮತ್ತು ಪ್ರಭಾರ ವಿವಿ ಗ್ರಂಥಪಾಲಕ ಡಾ. ಬಿ.ಟಿ. ಸಂಪತ್ ಕುಮಾರ್, ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೇಶವ, ವಿವಿ ಉಪಗ್ರಂಥಪಾಲಕರು, ವಿವಿಧ ವಿಭಾಗಗಳ ಬೋಧಕರು, ಕರ್ನಾಟಕ ಕಾಲೇಜು ಗ್ರಂಥಪಾಲಕರ ಸಂಘದ ಅಧ್ಯಕ್ಷ ಎಂ.ಎನ್.ಎನ್.ಪ್ರಸಾದ್, ವಿವಿ ಕಲಾ ಹಾಗೂ ವಿಜ್ಞಾನ ಕಾಲೇಜುಗಳ ಗ್ರಂಥಪಾಲಕರು, ನಗರದ ವಿವಿಧ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಗ್ರಂಥಪಾಲಕರು, ವಿವಿ ಗ್ರಂಥಾಲಯ ಸಿಬ್ಬಂದಿ ಹಾಗೂ ಸಂಶೋಧನಾರ್ಥಿಗಳು ಹಾಜರಿದ್ದರು.
ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಮಾಜಕಾರ್ಯ, ಇಂಗ್ಲಿಷ್ ವಿಭಾಗ, ಕಲಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕ ವಿದ್ಯಾರ್ಥಿಗಳು, ನಗರದ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿಗಳೂ ಸೇರಿದಂತೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಘೋಷವಾಕ್ಯಗಳುಳ್ಳ ಭಿತ್ತಿಚಿತ್ರಗಳನ್ನು ಹಿಡಿದು ಪಾಲ್ಗೊಂಡಿದ್ದರು.
ಪುಸ್ತಕವು ನಿಮ್ಮಿಂದ ಎಂದಿಗೂ ದೂರ ಹೋಗದ ಅತ್ಯುತ್ತಮ ಸ್ನೇಹಿತನಂತೆ. ಪುಸ್ತಕಗಳು ಜ್ಞಾನ, ಸಂತೋಷದ ಜೀವನದ ಒಳನೋಟಗಳು, ಜೀವನ ಪಾಠಗಳು, ಪ್ರೀತಿ, ಭಯ, ಪ್ರಾರ್ಥನೆ ಮತ್ತು ಸಹಾಯಕವಾದ ಸಲಹೆಗಳಿಂದ ತುಂಬಿರುತ್ತವೆ. ... ವಿಶ್ವ ಪುಸ್ತಕ ದಿನಾಚರಣೆಯ ಮುಖ್ಯ ಗುರಿ ಮಕ್ಕಳನ್ನು ಪುಸ್ತಕಗಳ ಸುಖಕ್ಕೆ ಪ್ರೋತ್ಸಾಹಿಸುವುದು ಮತ್ತು ಕ್ಷಮಿಸಿ ಪಠ್ಯವನ್ನು ಓದುವುದು ಕನ್ನಡದಲ್ಲಿ ಬರುವುದಿಲ್ಲ