ಸಾಮಾಜಿಕ ಪೀಡಿಕೆಗಳು ವಿಷಯದ ಮೇಲೆ ಒಂದು ಪ್ರಭಂದ ಬರೆಯಿರಿ
Answers
ಸಾಮಾಜಿಕ ಪೀಡಿಕೆಗಳು
ಪ್ರಸ್ತಾವನೆ :
ಮನುಷ್ಯ ಸಂಘಜೀವಿ. ಒಬ್ಬ ಸಾಮಾಜಿಕ ವ್ಯಕ್ತಿ. ಪ್ರತಿಯೊಬ್ಬ ಮನುಷ್ಯನು ತನ್ನದೇ ಆದ ಕುಟುಂಬ (ಪರಿವಾರ)ಗಳನ್ನು ಹೊಂದಿದ್ದರು. ಆತ ಸಾಮಾಜಿಕ ರೀತಿ-ನೀತಿಗಳಿಗೆ ಅನುಸಾರವಾಗಿಯೇ ಹೊಂದಿಕೊಂಡು ಬಾಳಬೇಕಾದುದು ಅನಿವಾರ್ಯವೂ ಹೌದು, ಅವಶ್ಯಕವೂ ಹೌದು.
ಆದರೆ ಮನುಷ್ಯನು ಬಾಳುವ ಈ ಸಮಾಜದಲ್ಲಿ ಇಂದು ಹಲವಾರು ರೀತಿಯ ಪಿಡುಗುಗಳು ಸಮಸ್ಯೆಗಳು ಉದ್ಭವಿಸಿರುವುದು ನಿಜಕ್ಕೂ ಶೋಚನೀಯ. ಇಂಥಹ ಸಾಮಾಜಿಕ ಪಿಡುಗುಗಳೆಂದರೆ
ವಿವರಣೆ :
ಶಿಕ್ಷಣ, ಹಬ್ಬಗಳ ಆಚರಣೆ, ಮದುವೆ-ಮುಂಜಿ, ಮರಣ ಸಂಭವಿಸಿದಾಗ ನಡೆಯುವ ಧಾರ್ಮಿಕ ವಿಧಿ ವಿಧಾನಗಳು, ಧಾರ್ಮಿಕ ಆಚರಣೆ, ಆಟ - ಸಾಂಸ್ಕೃತಿಕ ಮನರಂಜನೆ ಮುಂತಾದವುಗಳು ಸಾಮಾಜಿಕ ಆಚರಣೆಗಳಾಗಿದ್ದು ಪ್ರತಿಯೊಬ್ಬ ಮನುಷ್ಯನು ಇದನ್ನು ಸಾಮಾಜಿಕ ಪದ್ಧತಿಯಂತೆ ಆಚರಿಸುತ್ತಾ ಬಂದಿರುವುದು ಪ್ರಶಂಸನೀಯವೇ ಆದರೂ ಇಂದು ಇವು ಹಲವಾರು ಸಮಸ್ಯೆಗಳಿಗೆ ಕಾರಣವಾಗಿ ಇದೊಂದು ದೊಡ್ಡ ಪಿಡುಗಾಗಿ ಮಾರ್ಪಟ್ಟಿದೆ.
ಅವುಗಳಲ್ಲಿ ಕೆಲವು ಪ್ರಮುಖ ಸಾಮಾಜಿಕ ಪಿಡುಗುಗಳು
- ವರದಕ್ಷಿಣೆ ಸಮಸ್ಯೆ
- ನಿರುದ್ಯೋಗ ಸಮಸ್ಯೆ
- ಜನಸಂಖ್ಯೆ ಹೆಚ್ಚಳ
- ಹಣದುಬ್ಬರ
- ಕುಡಿಯುವ ನೀರಿನ ಸಮಸ್ಯೆ
- ಸ್ವಚ್ಛತೆಯ ಸಮಸ್ಯೆ (ಪರಿಸರ ಮಾಲಿನ್ಯ)
- ಅತ್ಯಾಚಾರ
- ಭ್ರಷ್ಟಾಚಾರ.... ಮುಂತಾದವು
ಈ ಮೇಲ್ಕಂಡ ಸಾಮಾಜಿಕ ಪಿಡುಗುಗಳು ಮನುಷ್ಯನನ್ನು ಬಲಿ ತೆಗೆದುಕೊಳ್ಳುತ್ತಿದೆ. ಮಾನವೀಯ ಗುಣಗಳು ಮರೆಯಾಗಿ ಇಂದು ಮನುಷ್ಯ ರಾಕ್ಷಸನಾಗುತ್ತಿದ್ದಾನೆ. ಕ್ರೂರ
ಮೃಗಗಳಂತೆ ವರ್ತಿಸುತ್ತಿದ್ದಾನೆ. ಇದನ್ನು ಸರಿಪಡಿಸುವುದು ಒಬ್ಬ ವ್ಯಕ್ತಿಯಿಂದ ಸಾಧ್ಯವಾಗದ ಕೆಲಸ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯು ಇದನ್ನು ಸರಿಪಡಿಸಬೇಕು. ಇದಕ್ಕೆ ಸರ್ಕಾರ ಕಾನೂನುಗಳ ಮೂಲಕ ಸರಿಪಡಿಸುವ ಪ್ರಯತ್ನ ಮಾಡಬೇಕಾಗಿದೆ.
ಉಪಸಂಹಾರ :
ಒಂದು ವೇಳೆ ನಾವು ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಭಯಂಕರ ಪರಿಣಾಮಗಳನ್ನು ಎದುರಿಸಬೇಕಾಗುವುದು
ವರದಕ್ಷಿಣೆ ಪಿಡುಗನ್ನು ಹೊಡೆದೋಡಿಸಲು ವರ ಹಾಗೂ ಆತನ ತಂದೆ-ತಾಯಿಗಳು ದುರಾಸೆಯನ್ನು ಬಿಟ್ಟು ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು.
ನಿರುದ್ಯೋಗ ಸಮಸ್ಯೆಯನ್ನು ಹೊಡೆದೋಡಿಸಿ ಇಂದಿನ ವಿದ್ಯಾವಂತ ಯುವ- ಯುವತಿಯರು ಸ್ವಂತ ಉದ್ಯೋಗಗಳನ್ನು ಸೃಷ್ಟಿಸಿ ಕೊಳ್ಳಬೇಕು. ಸರ್ಕಾರ ಇದಕ್ಕೆ ಸಹಾಯ ನೀಡಬೇಕು.