Social Sciences, asked by rajugovindanikkam, 3 months ago

ಅಂಬೇಡ್ಕರ್ ಅವರ ಬಗ್ಗೆ ಪ್ರಬಂಧ​

Answers

Answered by nari8
0

ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ‍ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು.

ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ಪಾಲ್, ಮೀರಾ ಸಕ್ಪಾಲ್. ರಾಮಜಿ ಸಕ್ಪಾಲ್ ಅವರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು.ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ರಾಮಜಿ ಸಕ್ಪಾಲ್ ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು , ಅವರು ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್. ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲಿ ಪ್ರಬುದ್ಧ ಜ್ಞಾನ ಹೊಂದಿದ್ದರು.ಜೊತೆಗೆ ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದರು. ಮಕ್ಕಳಲ್ಲಿ ದೇಶಭಕ್ತಿ, ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುವಲ್ಲಿ ಸಫಲರಾದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳು, ರಾಮಾಯಣ, ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು.ರಾಮಜಿ ಸಕ್ಪಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ಡಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ 'ಸಾತಾರ'ಕ್ಕೆ ಕುಟುಂಬ ವರ್ಗಾಯಿಸಿದರು. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಷದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ.ಈ ಕಾರಣಕ್ಕಾಗಿ ಭೀಮರಾವ್ ರು ತನ್ನ ತಾಯಿಯ ಮಮತೆ ತನ್ನ ಅತ್ತೆಯಾದ ಮೀರಾಳಲ್ಲಿ ಕಂಡುಕೊಳ್ಳುತ್ತಾರೆ. ಮೀರಾ ಕರುಣೆಯ ಮೂರ್ತಿಯಾಗಿದ್ದಳು, ಗೂನುಬೆನ್ನಿನಿಂದಾಗಿ ಮದುವೆ ಯಾಗದೆ ತನ್ನ ಅಣ್ಣನ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು. ಭೀಮರಾವ್ ರವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಸೇರುತ್ತಿರಲ್ಲಿಲ್ಲ.

ಅದಕ್ಕಾಗಿ ತರಗತಿಯ ಹೊರಗಡೆ ಕುಳಿತುಕೊಂಡು ಕಲಿಯಬೇಕಾಯಿತು. ಪ್ರಾಥಮಿಕ ಶಾಲೆಯಲ್ಲಿ ಎಲ್ಲರ ಅಸಹ್ಯದಿಂದಾಗಿ ಶಿಕ್ಷಣದಲ್ಲಿ ಅವರಿಗೆ ಹೆಚ್ಚು ಒಲವೇ ಇರಲಿಲ್ಲ. ಧ್ಯಾನ ಮಾಡುವುದು, ಮೇಕೆಯೊಡನೆ ಆಟವಾಡುವುದು ಅವರ ಹವ್ಯಾಸಗಳಾಗಿದ್ದವು. ಈ ಮಧ್ಯ ರಾಮಜಿ ಸಕ್ಪಾಲ್ ರವರು ಸಂಸಾರದ ನಿರ್ವಹಣೆಗಾಗಿ ಇನ್ನೊಂದು ಮದುವೆಯಾದರುಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆಮಲತಾಯಿ ತನ್ನ ತಾಯಿಯ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಂಡಾಗ, ಅದಕ್ಕಾಗಿ ತಂದೆ, ಅತ್ತೆಯೊಂದಿಗೆ ಜಗಳವಾಡುತ್ತಿದ್ದರು. ಸೋದರತ್ತೆ ವಾತ್ಸಲ್ಯದಿಂದ ಮಲತಾಯಿಯ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು ಆದ್ರೂ ಸಹ ಸೋದರತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಮನೆಯಲ್ಲಿ ಬದುಕುವುದು ಬೇಡ ಎಂದು ನಿರ್ಧರಿಸಿ ತನ್ನ ರೊಟ್ಟಿಯನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ನಿರ್ಧರಿಸಿದರು.ತನ್ನ ವಯಸ್ಸಿನವರು ಬಾಂಬೆಯ ಬಟ್ಟೆಯ ಮಿಲ್ಲಿನಲ್ಲಿ ಕಾರ್ಮಿಕರಾಗಿ ದುಡಿಯಬೇಕೆಂದು ನಿರ್ಧರಿಸಿ ಬಾಬ್ ಗೆಗೋಗಳು ಬೇಕಾಗುವ ಹಣವನ್ನು ತನ್ನ ಅತ್ತೆಯ ಪರ್ಸ್ ನ್ನು ಮುರು ದಿನ ರಾತ್ರಿ ಎದ್ದು ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ ಆದ್ರೆ ನಾಲ್ಕನೇ ದಿನ ರಾತ್ರಿ ಪರ್ಸ್ ಕದ್ದು ಅದ್ರಲ್ಲಿ ಕೇವಲ ಅರ್ಧ ಆಣೆ ಇದ್ದು, ಬಾಂಬೆಗೆ ರೈಲಿನ ಟಿಕೇಟು ಮೂರು ಆಣೆ ಇರುತ್ತದೆ ಕದ್ದ ಹಣದಿಂದ ಬಾಂಬೆಗೆ ಹೋಗಲು ಸರಿಹೋಗುವುದಿಲ್ಲ.

ಇದರಿಂದ ನೊಂದು ತನ್ನ ನಿರ್ಧಾರ ಬದಲಿಸಿ ಹೆಚ್ಚಿಗೆ ಓದಬೇಕೆಂದು ನಿರ್ಧರಿಸಿ ಓದುವ ಆಸೆ ಹೆಚ್ಚಿಸಿಕೊಳ್ಳುತ್ತಾರೆ. ಸತಾರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗ ಮಹಾರ ಎಂಬ ಅಸ್ಪೃಶ್ಯರದವರೆಂಬ ಕಾರಣಕ್ಕಾಗಿ ಹೆಚ್ಚು ಕಡಿಮೆ ಎಲ್ಲ ಶಿಕ್ಷಕರು ಇವರನ್ನು ಅಸಹ್ಯವಾಗಿ ನೋಡುತ್ತಿದ್ದರು. ಯಾರೂ ಇವರ ಪ್ರತಿಭೆ ಗುರುತಿಸಲಿಲ್ಲಆದರೆ ಅಲ್ಲಿನ ಶಿಕ್ಷಕರಲ್ಲಿ ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ,ಕಲಿಯುವ ಹಂಬಲ,ಸೂಕ್ಷ್ಮಬುದ್ಧಿಶಕ್ತಿಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹಿಸಿದರು. ಜಾತಿಯಲ್ಲಿ ಆ ಶಿಕ್ಷಕರು ಬ್ರಾಹ್ಮಣರಾಗಿದ್ದರೂ ಕೂಡ ತಾವು ಊಟಕ್ಕೆ ತಂದಿದ್ದ ಬುತ್ತಿಯಲ್ಲಿ ಭೀಮರವರಿಗೆ ಒಂದಿಷ್ಟು ಕೊಟ್ಟು ಪ್ರೀತಿಯಿಂದ ಊಟ ಮಾಡಿಸುತ್ತಿದ್ದರು.

ಇದೇ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು.

ಪ್ರಾಥಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆ

Similar questions