ಎಲ್ಲಾ ಏಳು ಚಿನ್ಹೆಗಳನ್ನು ವಿವರಿಸಿ ಮತ್ತು ಉದಾಹರಣೆ ನೀಡಿರಿ
Answers
Answer
1) ಪೂರ್ಣವಿರಾಮ ಚಿಹ್ನೆ :-
ಒಂದು ಕ್ರಿಯೆಯು ಪೂರ್ಣಗೊಂಡ ವಾಕ್ಯದ ಕೊನೆಯಲ್ಲಿ ಈ ಚಿಹ್ನೆಯು ಬರುತ್ತದೆ.
ಉದಾ:- ರವಿಯು ಹಾಡನ್ನು ಹಾಡಿದನು.
2) ಅಲ್ಪವಿರಾಮ ಚಿಹ್ನೆ :-
ಒಂದು ವಾಕ್ಯದ ಪೂರ್ಣ ಅರ್ಥವು ತಿಳಿಯಬೇಕಾದರೆ ವಾಕ್ಯದಲ್ಲಿ ಎಲ್ಲೆಲ್ಲಿ ಅರ್ಥ ನಿಲ್ಲುವುದೋ ಅಲ್ಲಲ್ಲಿ ಈ ಅಲ್ಪವಿರಾಮ ಚಿಹ್ನೆ ಬರುತ್ತದೆ.
ಉದಾ:- ಮಕ್ಕಳೇ ಲಕ್ಷ ಕೊಟ್ಟು ಓದಿರಿ.
3) ಅರ್ಧವಿರಾಮ ಚಿಹ್ನೆ :-
ಒಂದು ಮುಖ್ಯ ವಾಕ್ಯಕ್ಕೆ ಆಧೀನವಾಗಿರುವ ಅನೇಕ ಉಪವಾಕ್ಯಗಳು ಮುಗಿಯುವಲ್ಲಿ
ಈ ಅರ್ಧವಿರಾಮ ಚಿಹ್ನೆ ಬರುತ್ತದೆ.
ಉದಾ:- ಅಂದು ರವಿವಾರ; ಶಾಲೆಗೆ ರಜೆ ಇತ್ತು.
4) ಪ್ರಸ್ನಾರ್ಥಕ ಚಿಹ್ನ :-
ಪ್ರಶ್ನಾರ್ಥಕ ಪದ ಮತ್ತು ಪ್ರಶ್ನಾರ್ಥಕ ವಾಕ್ಯದ ಕೊನೆಗೆ ಈ ಚಿಹ್ನೆ ಬರುತ್ತದೆ.
ಉದಾ:- ನಿನ್ನ ಹೆಸರು ಏನು?
5) ಉದ್ದಾರವಾಚಕ ಚಿಹ್ನೆ :-
ಪ್ರರ್ಶ್ನಾಥಕ ಪದ ಮತ್ತು ಪ್ರಶ್ನಾರ್ಥಕ ಹಾರೈಕೆ ಇತ್ಯಾದಿ ಭಾವಸೂಚಕ ಶಬ್ದಗಳ ಮುಂದೆ ಈ ಚಿಹ್ನೆ ಬರುವದು.
ಉದಾ:- ಆಹಾ! ಎಂಥ ಅಂದವಾದ ಚಿತ್ರ.
6) ಆವತರಣಿಕ ಚಿಹ್ನೆ :-
ಒಬ್ಬರು ಹೀಗೆ ಹೇಳಿದರು ಎಂದು ಅವರ ಮಾತುಗಳನ್ನೆ ಎತ್ತಿ ಬರೆಯುವಾಗ ಈ ಚಿಹ್ನೆಯನ್ನು ಉಪಯೋಗಿಸುವರು. ಈ ಚಿಹ್ನೆಯನ್ನು ಎರಡು ರೀತಿಲಲ್ಲಿ ಉಪಯೋಗಿಸಲಾಗುವದು.
(" ") ಈ ಚಿಹ್ನೆಯನ್ನು ಒಬ್ಬರ ಮಾತನ್ನು ಎತ್ತಿ ಹೇಳುವಾಗ ಉಪಯೋಗಿಸಲಾಗುವುದು.
ಉದಾ:- ಲೋಕಮಾನ್ಯ ತಿಲಕರು ಸ್ವತಂತ್ರವು "ನನ್ನ ಜನ್ಮ ಸಿದ್ಧ ಹಕ್ಕು" ಎಂದು ಹೇಳಿದರು.
(' ') ಈ ಚಿಹ್ನೆಯನ್ನು ಪಾರಿಭಾಷಿಕ ಪದಗಳನ್ನು ಉಪಯೋಗಿಸುವಾಗ
ಬಳಸಲಾಗುವುದು.
ಉದಾ:- ಕನ್ನಡದಲ್ಲಿ ಅಧಿಕವಾಗಿ, 'ಸಂಸ್ಕೃತ' ಪದಗಳು ಸೇರಿಕೊಂಡ.
7) ಆವರಣ ಚಿಹ್ನೆ :-
ಒಂದು ಶಬ್ದವನ್ನು ಆಗಲಿ ಇಲ್ಲವೇ ವಾಕ್ಯವನ್ನು ಹೇಳಿ ಅದಕ್ಕೆ ಸಮಾನಾರ್ಥಕ ಶಬ್ದ ಅಥವಾ ವಾಕ್ಯವನ್ನು ಹೇಳುವಾಗ ಆವರಣ ಚಿಹ್ನೆ ಬರುತ್ತದೆ.
ಉದಾ :- ಲವನು ಯಾಜ್ಞನ ಅಶ್ವವನ್ನು (ಕುದುರೆಯನ್ನು) ಕಟ್ಟಿ ಹಾಕಿದನು.