India Languages, asked by pk578416, 2 months ago

ಜಡಗನು ಹೆಬಲಕ ಸಾಬನಿಗೆ ಗುಂಡು ಹೊಡೆಯುವ ಮೊದಲ ಹೇಳಿದ ಮಾತನ್ನು ಬರೆಯಿರಿ? ಪಾಠ ಹಲಗಲಿ ಬೇಡರು​

Answers

Answered by Anonymous
17

ಆ ಪಾಠದ ಫೋಟೋ ವನ್ನದರೂ ಹಾಕಿ ನಾವು. ಹೇಗೆ ಉತ್ತರ ಕೊಡೋದು ನಮ್ಮಲ್ಲಿ ಪಾಠ ಪುಸ್ತಕ ಇಲ್ಲಾ!!

Answered by Anonymous
4

Answer:

ಪ್ರಸ್ತುತ ಲಾವಣಿಯಲ್ಲಿ ಹಲಗಲಿಯ ಬೇಡರು ನಡೆಸಿದ ಬಂಡಾಯದ ಪ್ರಸ್ತಾಪವೇ ಪ್ರಮುಖ ಅಂಶವಾಗಿರುವುದು. ಲಾವಣಿಕಾರ ಬೇಡರನ್ನು ಕತ್ತಿ ಹಿಡಿಯುವ ಜನ ಎಂದು ಕರೆಯಲು ಕಾರಣ ಅವರಲ್ಲಿನ ಶೂರತೆ ಮತ್ತು ಕತ್ತಿ ಹಿಡಿಯುವ ಕಾಯಕ ಅವರಿಗೆ ಅನಿವಾರ್ಯ ಎಂಬುದನ್ನು ಪ್ರತಿಬಿಂಬಿಸುತ್ತದೆ. ಕತ್ತಿ ಶೂರರಾದ ಹಲಗಲಿ ಬೇಡರಿಗೆ ಕತ್ತಿ ಹಿಡಿಯುವ ಸಮಯ ಸನ್ನಿಹಿತವಾಯಿತು. ಆದರೆ ಬೇಡರ ಬಂಡಾಯವು ನಿರೀಕ್ಷಿತ ಯಶಸ್ಸು ಪಡೆಯಲು ವಿಫಲವಾಯಿತು (ಮುಟ್ಟಲಿಲ್ಲ ದಡಕ).

ಬ್ರಿಟಿಷ್ ಸರಕಾರವು ೧೮೫೭ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಅಥವಾ ಸಿಪಾಯಿ ದಂಗೆಯ ನಂತರ ನಿಶ್ಶಸ್ತ್ರೀಕರಣ ಕಾಯಿದೆಯನ್ನು ಜಾರಿಗೆ ತಂದಿತು. ಅದರಂತೆ ಎಲ್ಲ ಭಾರತೀಯರನ್ನು ಒಪ್ಪಿಸಿ ಅಥವಾ ಬೆದರಿಸಿಯಾದರೂ ಅವರ ಬಳಿಯಿರುವ ಆಯುಧ (ಹತಾರ)ಗಳನ್ನು ಕಸಿದು ಕೊಳ್ಳಬೇಕೆಂದು ಕಂಪನಿಯ ಸರ್ಕಾರ ಮುಂದಾದಾಗ ಹಲಗಲಿ ಬೇಡರು ಮುಧೋಳದ ಬಳಿ ಸೇರಿದರು. ಪೂಜೇರಿ ಹನುಮ, ಬೇಡರ ಬಾಲ, ಜಡಗ, ರಾಮ ಮೊದಲಾದವರು ಸೇರಿ ನಾವು ನಾಲ್ವರೂ ಜೊತೆಗಿರೋಣ ಯಾವುದೇ ಕಾರಣಕ್ಕೂ ನಮ್ಮ ಬಳಿಯಿರುವ ಆಯುಧಗಳನ್ನು ಕೊಡಬಾರದು ಹತಾರಗಳು (ಆಯುಧಗಳು) ಹೋದರೆ ನಮ್ಮ ಜೀವವೇ ಹೋದಂತೆ ಎಂದು ತೀರ್ಮಾನಿಸಿದರು.

ಬೇಡರೆಲ್ಲರೂ ಕಲೆತು ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ. ನೀವು ಮುಂದಾಗಿ ಯುದ್ಧ ಮಾಡಿರಿ; ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ತಮ್ಮ ಮುಖಂಡರಿಗೆ ವಚನ ನೀಡಿದರು. ಕಾಯಿದೆಯನ್ನು ಜಾರಿಗೊಳಿಸಲು ಅಂದರೆ ಆಯುಧ ಕೇಳಲು ಬ್ರಿಟಿಷ್ ಅಧಿಕಾರಿ (ಸೆಟನ್ ಕರ್) ಪರವಾಗಿ ಬಂದ ಕಾರಭಾರಿಯ ಕೆನ್ನೆಗೆ ಹೊಡೆದರು. ಇದರಿಂದ ದುಃಖಿತನಾದ ಕಾರಬಾರಿ(ಕಾರಕೂನ) ಈ ವಿಷಯವನ್ನು ತನ್ನ ಸಾಹೇಬನಿಗೆ ತಿಳಿಸಿದನು. ಸಾಹೇಬ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ತನ್ನ ಕೆಲವು ಜನರನ್ನು (ಅಶ್ವದಳ) ಹಲಗಲಿಗೆ ಕಳಿಸಿದಾಗ ಮುಂಗಾರಿನ ಸಿಡಿಲು ಸಿಡಿದ ಹಾಗೆ ಊರೊಳಗೆಲ್ಲ ಗುಂಡಿನ ಮಳೆಗರೆಯುತ್ತಾರೆ. (ಬೇಡರು ಆಯುಧ ಕಸಿಯಲು ಬಂದವರ ಮೇಲೆ ಗುಂಡಿನ ಮಳೆ ಸುರಿಸಿದರು) ಬಂದವರು ಬೇಡರ ಧಾಳಿಗೆ ತುತ್ತಾಗಿ ಗಾಯಗೊಂಡು ದಂಗಾಗಿ ಹಿಮ್ಮೆಟ್ಟುತ್ತಾರೆ.

ಸಾಹೇಬ ವಿಧಿಯಿಲ್ಲದೆ ತನ್ನ ಮೇಲಧಿಕಾರಿಗೆ ಕಾಗದ ಬರೆದು ದಂಡನ್ನು ಕಳಿಸುವಂತೆ ಕೋರಿದಾಗ ತರಾತುರಿಯಿಂದ ಹಲಗಲಿಗೆ ದಂಡು ಆಗಮಿಸಿತು. ಬೇಡರನ್ನು ಕಂಡ ಕಂಡಲ್ಲಿ ಹತ್ಯೆಗೈಯ್ಯಲಾಯಿತು. ಸಿಕ್ಕಸಿಕ್ಕಲ್ಲಿ ಗುಂಡು ಹೊಡೆದು ಸಾಯಿಸಲಾಯಿತು ಚಟೆಕಾರ 'ಜಾಯಿತ ಸಾಹೇಬ' (ಜಿ.ಬಿ.ಸೆಟನ್ ಕರ್, ದಕ್ಷಿಣ ಮಹಾರಾಷ್ಟ್ರದ ರಾಜಕೀಯ ಪ್ರತಿನಿಧಿ ಲೆಫ್ಟಿನೆಂಟ್ ಕರ್ನಲ್) ಕಾವಲು ಕಾಯುತ್ತ ಬೇಡರ ಬಿಡಾರಗಳಿಗೆ ನುಗ್ಗಿ ಬೇಡರಿಗೆ ತೊಂದರೆ ನೀಡಿದನು. ಊರಿನ ಮುಖ್ಯ ದ್ವಾರಕ್ಕೆ ಬಂದು ಹೆಬಲಕ್ ಸಾಹೇಬ (ವಿಲಿಯಂ ಹೆನ್ರಿ ಹೆವಲಾಕ್) ಬೇಡರಿಗೆ ಅನ್ಯಥಾ ಸಾಯದೇ ಆಯುಧಗಳನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಬೇಡರ ಹನುಮನಿಗೆ ಹೆಬಲಕ್ ಸಾಹೇಬನ ಮಾತಿನಲ್ಲಿ ನಂಬಿಕೆ ಮೂಡುವುದಿಲ್ಲ. ಬ್ರಿಟಿಷರು ಘಾತಕರು, ವಿಶ್ವಾಸಘಾತ ಮಾಡಿರುವರು ಇವರ ಮೇಲೆ ನಮಗೆ ನಂಬಿಗೆ ಇಲ್ಲ. ಇವರು ಪಿತೂರಿ ಮಾಡಿ ಮೋಸದಿಂದ ನಮ್ಮ ದೇಶ ಗೆಲ್ಲುವವರು, ಮುಂದೆ ನಮಗೆ ಘೋರ ವಿಪತ್ತು ಇವರಿಂದ ಕಾದಿದೆ ಎಂದು ಬಗೆದ ಜಡಗ ಬುದ್ಧಿವಾದ ಹೇಳಲು ಬಂದ ಅಧಿಕಾರಿ(ಹೆಬಲಕ್) ಯ ಮೇಲೆ ಗುಂಡು ಹಾರಿಸಿ ಕಳುಹಿಸಿದನು. ಇದರಿಂದ ಸಿಟ್ಟಾದ ಬ್ರಿಟಿಷರ ಇನ್ನೊಬ್ಬ ಅಧಿಕಾರಿ ಬೇಡರ ಊರನ್ನೇ ಲೂಟಿ ಮಾಡುವಂತೆ ತನ್ನ ಜನರಿಗೆ ಆದೇಶ ನೀಡಿದನು. ಸಿಟ್ಟಿನಿಂದ ಬ್ರಿಟಿಷರು ಒಂದೇ ಸಮನೆ ಗುಂಡಿನ ಮಳೆ ಸುರಿಸಿದರು. ಹನುಮ, ಬಾಲ, ಜಡಗ, ರಾಮರ ಹೋರಾಟ ವ್ಯರ್ಥವಾಯಿತು. ಎಲ್ಲೆಡೆಯೂ ರಕ್ತದ ಕಾಲುವೆ ಹರಿಯಿತು. ಆದರೆ ಬೇಡರ ಹೋರಾಟ ಫಲಕಾರಿಯಾಗದೆ ನಾಲ್ಕು ಮಂದಿ ಬೇಡರ ಮುಖಂಡರು ವೀರ ಮರಣವನ್ನು ಹೊಂದಿದರು.

ಬೇಡರ ಕೃಷಿ ಉಪಕರಣಗಳು ಆಹಾರ ಪದಾರ್ಥಗಳು ಮನೆಯಲ್ಲಿ ದಿನನಿತ್ಯ ಬಳಸುತ್ತಿದ್ದ ವಸ್ತುಗಳು, ಸ್ರೀಯರ ಮಂಗಳಸೂತ್ರ, ಬೀಸುವ ಕಲ್ಲು ಅಂದರೆ ಹಲಗಲಿ ಬೇಡರ ಊರಿನಲ್ಲಿ ಮನೆಗಳಲ್ಲಿ ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಬ್ರಿಟಿಷರು ದೋಚಿದರು. ಕೊನೆಗೆ ಇಡೀ ಊರಿಗೆ ಬೆಂಕಿ ಇಟ್ಟರು. ಹಲಗಲಿ ಊರು ಸುಟ್ಟು ಬೂದಿಯಾಯಿತು. ಗುರುತೇ ಸಿಗದಂತೆ ನಾಶವಾಯಿತು. ಕುರ್ತಕೋಟಿ ಕಲ್ಲೇಶನ ದಯದಿಂದ ಲಾವಣಿಕಾರ ಈ ಎಲ್ಲ ವಿಷಯಗಳನ್ನು ತಾನು ಕಂಡಷ್ಟು ವರ್ಣಿಸಿರುವುದಾಗಿ ಹೇಳಿದ್ದಾನೆ.

Similar questions