ಈ ಕೆಳಗಿನ ಅಲಂಕಾರವನ್ನು ಹೆಸರಿಸಿ ಸಮನ್ವಯಿಸಿ : ವಿದ್ಯಾರ್ಥಿ ರತ್ನ
Answers
Answer:ಈ ಕೆಳಗಿನ ಮಾತುಗಳನ್ನು ಗಮನಿಸಿರಿ.
(i) ಆ ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.
(ii) ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ.
ಮೊದಲನೆಯ ವಾಕ್ಯದಲ್ಲಿ ಮಗುವಿನ ಮುಖದಲ್ಲಿನ ಅಹ್ಲಾದಕತ್ವವೂ, ಚಂದ್ರನಲ್ಲಿರುವ ಅಹ್ಲಾದಕತ್ವವೂ ಸಮಾನವಾಗಿರುವುದರಿಂದ ಮಗುವಿನ ಮುಖವನ್ನು ಚಂದ್ರನಿಗೆ ಹೋಲಿಸಿದೆ. ಚಂದ್ರನನ್ನು ನೋಡಿದಾಗ ಉಂಟಾಗುವ ಮನೋಹರತ್ವವು ಮಗುವಿನ ಮುಖ ನೋಡಿದಾಗಲೂ ಆಗುತ್ತದೆ. ಈ ಅರ್ಥ ಚಮತ್ಕಾರ ಆ ವಾಕ್ಯದಲ್ಲಿ ಅಡಗಿದೆ.
ಎರಡನೆಯ ವಾಕ್ಯದಲ್ಲಿ ಹಾವಿಗೆ ಹಾಲೆರೆದರೆ ವಿಷವೇ ವೃದ್ಧಿಯಾಗುವುದಲ್ಲದೆ ಬೇರಿಲ್ಲ. ಇದರ ಹಾಗೆಯೇ ನೀಚರಿಗೆ ಉಪಕಾರ ಮಾಡಿದರೆ ಅವರು ಅಪಕಾರವನ್ನೇ ಮಾಡುವರಲ್ಲದೆ ಪ್ರತಿಯಾಗಿ ಉಪಕಾರ ಮಾಡುವುದಿಲ್ಲ. ಇಲ್ಲಿ ನೀಚರಿಗೆ ಮಾಡಿದ ಉಪಕಾರವನ್ನು ಹಾವಿಗೆ ಹಾಲೆರೆಯುವ ಕ್ರಿಯೆಗೆ ಹೋಲಿಸಲಾಗಿದೆ. ಹೀಗೆ ಬರುವ ಹೋಲಿಕೆಗಳಿಗೆ ‘ಉಪಮಾನ’ ವೆನ್ನುತ್ತಾರೆ. ಯಾವುದಕ್ಕೆ ಈ ಹೋಲಿಕೆಯನ್ನು ಕೊಡುವೆವೋ ಅದು ‘ಉಪಮೇಯ’. ಅಂತೆ ಹಾಗೆ-ಎಂದು ಹೋಲಿಕೆಗೆ ಸಂಬಂಧ ಕಲ್ಪಿಸುವ ಶಬ್ದಗಳು ಉಪಮಾವಾಚಕಗಳೆನಿಸುವುವು. ಈ ಹೋಲಿಕೆಗಳಲ್ಲಿ ಬರುವ ಸಮಾನತೆಯೇ ಸಮಾನಧರ್ಮವೆನಿಸುವುದು.
ಉದಾಹರಣೆಗೆ
Explanation:(೧) ಮಗುವಿನ ಮುಖ ಉಪಮೇಯ
(೨) ಚಂದ್ರ ಉಪಮಾನ
(೩) ಮಗುವಿನ ಮುಖ ಮತ್ತು ಚಂದ್ರನಲ್ಲಿರುವ ಆಹ್ಲಾದಕತ್ವ ಸಮಾನಧರ್ಮ, (ಸಾಧಾರಣಧರ್ಮ)
(೪) ಚಂದ್ರನ ಮುಖದಂತೆ ಎಂಬಲ್ಲಿರುವ ಅಂತೆ ಎಂಬ ಶಬ್ದವೇ ಉಪಮಾವಾಚಕ
ಎರಡನೆಯ ವಾಕ್ಯದಲ್ಲಿ
(೧) ನೀಚರಿಗೆ ಮಾಡಿದ ಉಪಕಾರ ಉಪಮೇಯ
(೨) ಹಾವಿಗೆ ಹಾಲೆರೆಯುವಿಕೆ ಉಪಮಾನ
(೩) ಹಾವಿನಲ್ಲಿ ವಿಷಹೆಚ್ಚುವಿಕೆ ನೀಚರಿಂದ ಅಪಕಾರವಾಗುವಿಕೆ- ಎಂಬ ಎರಡರಿಂದಲೂ ಪರಿಣಾಮದಲ್ಲಿ ಅಪಕಾರವಾಗುವಿಕೆ ಸಮಾನಧರ್ಮ (ಸಾಧಾರಣಧರ್ಮ)
(೪) ಹಾಲೆರದಂತೆ ಎಂಬಲ್ಲಿ ಬಂದಿರುವ ಅಂತೆ ಎಂಬುದು ಉಪಮಾವಾಚಕ ಶಬ್ದ
ಹೀಗೆ ಈ ಉಪಮಾಲಂಕಾರದಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಉಪಮಾವಾಚಕ – ಈ ನಾಲ್ಕೂ ಬಂದಿದ್ದರೆ ಅದು ಪೂರ್ಣೋಪಮಾಲಂಕಾರವೆನಿಸುವುದು[1]. ಇದರ ಸೂತ್ರವನ್ನು ಈ ಕೆಳಗಿನಂತೆ ಹೇಳಬಹುದು.
ಉಪಮಾಲಂಕಾರ:- "ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಹೇಳುವುದೇ ಉಪಮಾಲಂಕಾರವೆನಿಸುವುದು"[2]. (ಹೋಲಿಕೆಯೆಂದರೆ ಆಕರ್ಷಕವಾದ ಹೋಲಿಕೆ)
ಉದಾಹರಣೆ :- (i)
ಬಿರುಗಾಳಿಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ| ಮುರಿದಿಳೆಗೊರಗುವಂತೆ ಲಕ್ಷ್ಮಣನ ಮಾತು ಕಿವಿದೆರೆಗೆ ಬೀಳದಮುನ್ನ ಹಮ್ಮೈಸಿಬಿದ್ದಳಂಗನೆ ಧರೆಗೆ ನಡುನಡುಗುತ||
(-ಜೈಮಿನಿ ಭಾರತ)
(ಶ್ರೀರಾಮಚಂದ್ರನ ಮಾತಿನಂತೆ ಸೀತಾದೇವಿಯನ್ನು ಕಾಡಿಗೆ ಬಿಟ್ಟುಬರಲು ಹೋದ ಲಕ್ಷ್ಮಣನು ಶ್ರೀರಾಮನ ಅಪ್ಪಣೆಯನ್ನು ಸೀತಾದೇವಿಗೆ ತಿಳಿಸಿದ ಸಂದರ್ಭದಲ್ಲಿ ನಡೆದ ಘಟನೆಯಿದು.)
ಅರ್ಥ:-ಬಿರುಗಾಳಿ ಬೀಸಲಾಗಿ, ಗೊನೆಬಿಟ್ಟ ಬಾಳೆ ಮರವು ಅಲ್ಲಾಡಿ ಮುರಿದು ಭೂಮಿಗೆ ಬೀಳುವಂತೆ ತುಂಬು ಗರ್ಭಿಣಿಯಾದ ಸೀತಾದೇವಿಯು ಲಕ್ಷ್ಮಣನ ಮಾತು ಕರ್ಣಪಟಲ (ಕಿವಿದೆರೆ) ಕ್ಕೆ ಬೀಳದ ಮುನ್ನ ಹಮ್ಮೈಸಿ ನಡುನಡುಗಿ ಭೂಮಿಗೆ ಬಿದ್ದಳು.
ಇಲ್ಲಿ ಭೂಮಿಗೆ ಬಿದ್ದ ಸೀತಾದೇವಿ ‘ಉಪಮೇಯ’ ಫಲಿತ ಬಾಳೆಯ ಮರ ‘ಉಪಮಾನ’ ಧರೆಗೆ ಬೀಳುವಿಕೆಯೇ ‘ಸಾಧಾರಣಧರ್ಮ’ (ಸಮಾನಧರ್ಮ). ‘ಅಂತೆ’ ಎಂಬುದೇ ಉಪಮಾವಾಚಕ. ಆದುದರಿಂದ ಇದು ಪೂರ್ಣೋಪಮಾಲಂಕಾರವಾಯಿತು.
ಉದಾಹರಣೆ:- (ii)
ಬಾಲಕರಿಲ್ಲದ ಬಾಲಿದ್ಯಾತರ ಜನ್ಮ|
ಬಾಡಿಗೆಯೆತ್ತು ದುಡಿದಂಗ| ಬಾಳೆಲೆಯ|
ಹಾಸ್ಯುಂಡು ಬೀಸಿ ಒಗೆದಂಗ||
(-ಜಾನಪದ ಸಾಹಿತ್ಯದಿಂದ)
ಅರ್ಥ:- ಬಾಲಕರಿಲ್ಲದ ಬಾಲೆಯ ಜನ್ಮವೇತರದು? ಬಾಡಿಗೆ ಎತ್ತು ದುಡಿದ ಹಾಗೆ. ಮತ್ತು ಬಾಳೆಯೆಲೆಯನ್ನು ಹಾಸಿ ಊಟಮಾಡಿ ಬೀಸಿ ಒಗೆದ ಹಾಗೆ. ಇಲ್ಲಿ ಮಕ್ಕಳಿಲ್ಲದ ಹೆಣ್ಣುಮಗಳಿಗೆ ಬಾಡಿಗೆ ಎತ್ತಿನ ದುಡಿಮೆಗೂ, ಬಾಳೆಯ ಎಲೆಯನ್ನು ಹಾಸಿ ಊಟಮಾಡಿ ಬಿಸಾಡುವಿಕೆಗೂ ಎರಡು ಹೋಲಿಕೆಗಳನ್ನು ಕೊಡಲಾಗಿದೆ. ಇದೂ ಉಪಮಾಲಂಕಾರ.
(೨) ರೂಪಕಾಲಂಕಾರ[3]
ಮಾತನಾಡುವಾಗ ಒಮ್ಮೊಮ್ಮೆ ಹೀಗೆ ಹೇಳುವುದುಂಟು.
(i) ವಿದ್ವಾಂಸನಾದ ಆತನು ಸಾಕ್ಷಾತ್ ಸರಸ್ವತಿ.
(ii) ಆ ಮನುಷ್ಯ ನಿಜವಾಗಿ ದೇವರು.
(iii) ಈ ಶಾಲೆಗೆ ಆ ವಿದ್ಯಾರ್ಥಿಯೊಂದು ರತ್ನ.
(೧) ಇಲ್ಲಿ ಮೊದಲ ವಾಕ್ಯದಲ್ಲಿ-ವಿದ್ವಾಂಸನೂ ಸಾಕ್ಷಾತ್ ಸರಸ್ವತಿಯೂ ಒಂದೇ ಎಂದು ಭೇದವಿಲ್ಲದೆ ಹೇಳಲಾಗಿದೆ.
(೨) ಎರಡನೆಯ ವಾಕ್ಯದಲ್ಲಿ-ಮನುಷ್ಯನೂ, ದೇವರೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಿದೆ.
(೩) ಮೂರನೆಯ ವಾಕ್ಯದಲ್ಲಿ-ವಿದ್ಯಾರ್ಥಿಯೂ ರತ್ನವೂ ಒಂದೇ ಎಂದು ಭೇದವಿಲ್ಲದೆ (ಅಭೇದವಾಗಿ) ಹೇಳಲಾಗಿದೆ.
ಇಲ್ಲಿ ಮೂರೂ ವಾಕ್ಯಗಳಲ್ಲಿ ಒಂದರಂತೆ ಇನ್ನೊಂದಿದೆ ಎಂದು ಹೇಳಿಲ್ಲ. ಉಪಮಾನ ಉಪಮೇಯಗಳು ಎರಡೂ ಒಂದೇ ಎಂದು ಹೀಗೆ ಭೇದವಿಲ್ಲದೆ ಹೇಳುವುದೇ ರೂಪಕಾಲಂಕಾರ. ಇಲ್ಲಿ ಅಭೇದದಿಂದ ಹೇಳಿರುವುದರಿಂದ ಇದು ‘ಅಭೇದ ರೂಪಕ’ ವೆಂದು ಹೇಳಲ್ಪಡುವುದು. ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.
ಅಭೇದರೂಪಕಾಲಂಕಾರ:- ವರ್ಣಿಸುವ ವಸ್ತುವು ಇನ್ನೊಂದರಂತೆ (ಉಪಮಾನದಂತೆ) ಇದೆ ಎಂದು ಹೇಳದೆ, ಎರಡೂ ವಸ್ತುಗಳು ಎಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ ಅಭೇದರೂಪಕಾಲಂಕಾರವೆನಿಸುವುದು.
ಉದಾಹರಣೆ:-
(i) ಪುರದಪುಣ್ಯಂ ಪುರುಷರೂಪಿಂದ ಪೋಗುತಿದೆ|ಪರಿಜನದ ಭಾಗ್ಯವಡವಿಗೆ ನಡೆಯುತಿದೆ||
(-ಹರಿಶ್ಚಂದ್ರ ಕಾವ್ಯ)
ಈ ಪದ್ಯಭಾಗವು-ಹರಿಶ್ಚಂದ್ರನು ವಿಶ್ವಾಮಿತ್ರನಿಗೆ ತನ್ನ ರಾಜ್ಯಾದಿಗಳನ್ನು ಕೊಟ್ಟು, ಪಟ್ಟಣ ಬಿಟ್ಟು ಹೋಗುವಾಗ ಅಯೋಧ್ಯಾನಗರದ ಜನರು ಗೋಳಿಡುವ ಸನ್ನಿವೇಶದ್ದು.
ಅರ್ಥ:- ಪುರದ ಪುಣ್ಯವು ಪುರುಷಾಕಾರದಿಂದ ಹೋಗುತ್ತಿದೆ.
ಸೇವಕ ಜನದ ಭಾಗ್ಯವು ಅಡವಿಗೆ ಹೋಗುತ್ತಿದೆ.
ಇಲ್ಲಿ ಹರಿಶ್ಚಂದ್ರನೆಂಬ ಉಪಮೇಯವೂ ಪುರದ ಪುಣ್ಯವೆಂಬ ಉಪಮಾನವೂ ಒಂದೇ ಎಂದೂ, ಎರಡನೆಯ ವಾಕ್ಯದಲ್ಲಿ ಹರಿಶ್ಚಂದ್ರನೆಂಬ ಉಪಮಾನವೂ ಪರಿಜನರ ಭಾಗ್ಯವೆಂಬ ಉಪಮಾನವೂ ಒಂದೇ ಎಂದೂ ಉಪಮಾನೋಪಮೇಯಗಳಲ್ಲಿ ಭೇದವಿಲ್ಲದೆ ಅಂದರೆ ಅಭೇದವಾಗಿ ವರ್ಣಿಸಿರುವುದರಿಂದ ಇದು ಅಭೇದರೂಪಕಾಲಂಕಾರವೆನಿಸಿತು. ಇದರಂತೆ-
ಉದಾಹರಣೆ:-
(ii) ಮನೆಯೇ ಧರ್ಮಾಶ್ರಮ, ಮನೆವಾಳ್ತೆಯೇ ಧರ್ಮ|
ವಿನಿಯನೂಳಿಗ ದೇವಪೂಜೆ||
ಮನನವಿವನ ನೆನೆವುದೆ ಸಾಧ್ವಿಯರಿಗೆ|
ಮುನಿಸತಿಯರ ಮೋಡಿಯೇನು?
(-ಹದಿಬದೆಯ ಧರ್ಮ)
ಇಲ್ಲಿ ಸಾಧ್ವಿಯಾದ ಹೆಣ್ಣುಮಗಳು ತನ್ನ ಗೃಹಿಣೀ ಧರ್ಮದಲ್ಲಿ ನಡೆದುಕೊಳ್ಳುವ ನಡೆವಳಿಕೆಯು ವರ್ಣಿತವಾಗಿದೆ.
ಅರ್ಥ:- ಸಾಧ್ವಿಯರಿಗೆ ಮನೆಯು ಧರ್ಮಾಶ್ರಮ, ಮನೆಯ ಬಾಳುವೆ ಧರ್ಮ, ಗಂಡನಸೇವೆ ದೇವರ ಪೂಜೆ, ಪತಿಯನ್ನು ನೆನೆವುದು ದೇವರಧ್ಯಾನ.
ಇಲ್ಲಿ ಮನೆ ಮತ್ತು ಧರ್ಮಾಶ್ರಮ ಎರಡೂ ಒಂದೇ. ಬಾಳುವೆ ಮತ್ತು ಧರ್ಮ ಎರಡೂ ಒಂದೇ, ಪತಿಯ ಸೇವೆ-ದೇವರ ಪೂಜೆ ಇವೆರಡೂ ಒಂದೇ-ಇತ್ಯಾದಿಯಾಗಿ ಉಪಮೇಯ-ಉಪಮಾನಗಳಲ್ಲಿ ಅಭೇದವು ಹೇಳಲ್ಪಟ್ಟ ಕಾರಣ ಅಭೇದರೂಪಕಾಲಂಕಾರವೆನಿಸಿತು.
(೩) ಉತ್ಪ್ರೇಕ್ಷಾಲಂಕಾರ[4]
ಲವಕುಶರು ಶ್ರೀರಾಮಲಕ್ಷ್ಮಣರೊಡನೆ ಯದ್ಧಕ್ಕೆ ತೊಡಗಿದಾಗಿನ ರಾಮಾಶ್ವಮೇಧದಲ್ಲಿನ ಪ್ರಸಂಗದ ವರ್ಣನೆಯನ್ನು ಈ ಕೆಳಗೆ ನೋಡಿರಿ.
“ರಕ್ತದ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ಈ ರೀತಿ ಚಿಕ್ಕ ಚಿಕ್ಕ ಬೆಟ್ಟಗಳನ್ನು ಹೊಸದಾಗಿ ಹರಡಿರುವರೋ ಎನ್ನುವಂತೆ ಸತ್ತು ಬಿದ್ದ ಆನೆಗಳ ಹಿಂಡು ಕಾಣುತ್ತಿತ್ತು.”