ಸವರ್ಣದೀರ್ಘ ಸಂಧಿ ಎಂದರೇನು?
Answers
ಸವರ್ಣದೀರ್ಘ ಸಂಧಿಯ ಬಗ್ಗೆ ಹೇಳಬೇಕೆಂದರೆ ಇದೊಂದು ಸಂಸ್ಕೃತ ಸಂಧಿ.
ಸಂಸ್ಕೃತದ ಪದಗಳನ್ನು ಕೂಡಿಸಲು ಇದನ್ನು ಬಳಸುತ್ತಾರೆ.
ಇದು ಸ್ವರಸಂಧಿ.
ಒಂದೇ ಸ್ವರಗಳು ಒಂದರ ಮುಂದೆ ಇನ್ನೊಂದು ಸ್ವರ ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾಹರಣೆಗೆ:
೧. ಭೋಜನ + ಆಲಯ = ಭೋಜನಾಲಯ (ಅ + ಆ = ಆ)
೨. ಗುರು + ಉಪದೇಶ = ಗುರೂಪದೇಶ (ಉ + ಉ = ಊ)
೩. ವೇದ + ಅಧ್ಯಯನ = ವೇದಾಧ್ಯಯನ (ಅ + ಅ = ಆ)
೪. ಗಾಢ + ಅಂಧಕಾರ = ಗಾಢಾಂಧಕಾರ (ಅ + ಅ = ಆ)
೫. ಪಿತೃ + ಋಣ = ಪಿತೄಣ್ (ಋ + ಋ = ೠ)
ನಾವು ಇದನ್ನು ಕನ್ನಡ ಪದಗಳಿಗೆ ಅನ್ವಯ ಮಾಡುವಂತಿಲ್ಲ. ಇಂತಹ ಸಂದರ್ಭದಲ್ಲಿ ಕನ್ನಡದಲ್ಲಿ ಲೋಪ ಸಂಧಿಯ ಪ್ರಕಾರ ಕೂಡಿಸತಕ್ಕದ್ದು.
ಲೋಪ ಸಂಧಿಯ ಪ್ರಕಾರ ಅ + ಅ = ಅ ಹೊರತು ಆ ಅಲ್ಲ.
ಇ + ಇ = ಇ ಹೊರತು ಈ ಅಲ್ಲ
ಉ + ಉ = ಉ ಹೊರತು ಊ ಅಲ್ಲ.
ಉದಾಹರಣೆಗಳನ್ನು ನೋಡೋಣ.
ಮರದ + ಅಡಿ = ಮರದಡಿ (ಮರದಾಡಿ ಅಲ್ಲ)
ಮನೆಯಲ್ಲಿ + ಇದೆ = ಮನೆಯಲ್ಲಿದೆ (ಮನೆಯಲ್ಲೀದೆ ಅಲ್ಲ)
ಕಲ್ಲು + ಉಪ್ಪು = ಕಲ್ಲುಪ್ಪು (ಕಲ್ಲೂಪ್ಪು ಅಲ್ಲ)
ತಿಂದು + ಉಂಡು = ತಿಂದುಂಡು (ತಿಂದೂಂಡು ಅಲ್ಲ)
_____________________________________
best of luck :)
ಚ್ಹಿನವಡಿ ಹೆಚ್
ninana haisroo ಅಭಯ್