Environmental Sciences, asked by mahammadsuhail525, 1 month ago

ಸಸ್ಯಗಳಲ್ಲಿ ಅನಿಲ ವಿನಿಮಯಕ್ಕೆ ಕಾರಣವಾದ ಜೀವಕೊಶಗಳು ಯಾವುವು?​

Answers

Answered by abhaytiwarijnv01
3

Answer:

ಸಸ್ಯ ಜೀವಕೋಶಗಳು ಯೂಕ್ಯಾರಿಯೋಟಿಕ್‌ (ಅಂದರೆ, ಒಂದು ಪೊರೆಯಿಂದ ಆವರಿಸಲ್ಪಟ್ಟ ಕೋಶಕೇಂದ್ರವನ್ನು ಒಳಗೊಂಡಿರುವ) ಜೀವಕೋಶಗಳಾಗಿದ್ದು, ತಾವು ಹೊಂದಿರುವ ಹಲವಾರು ಪ್ರಮುಖ ಅಂಶಗಳಿಂದಾಗಿ ಅವು ಇತರ ಯೂಕ್ಯಾರಿಯೋಟಿಕ್‌ ಜೀವಿಗಳ ಜೀವಕೋಶಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತವೆ. ಅವುಗಳ ಭಿನ್ನತಾ ಸೂಚಕ ಲಕ್ಷಣಗಳಲ್ಲಿ ಈ ಕೆಳಗಿನವು ಸೇರಿವೆ:

ಒಂದು ಬೃಹತ್ತಾದ ಮಧ್ಯಭಾಗದ ಕುಹರ: ಇದು ಟೋನೋಪ್ಲಾಸ್ಟ್‌‌ [೧][೨] ಎಂದು ಕರೆಯಲ್ಪಡುವ ಒಂದು ಒಳಪೊರೆಯಿಂದ ಆವರಿಸಲ್ಪಟ್ಟಿರುವ ಒಂದು ನೀರು-ತುಂಬಿದ ಪ್ರದೇಶವಾಗಿದೆ. ಇದು ಜೀವಕೋಶದ ಅಂಗಾಂಶಗಳ ಸೆಡೆತವನ್ನು ಕಾಯ್ದುಕೊಂಡು ಹೋಗುತ್ತದೆ, ಜೀವಕೋಶಗಳ ನಡುವಿನ ಪದಾರ್ಥ ಮತ್ತು ಸಸ್ಯರಸದ ನಡುವಿನ ಸಣ್ಣ ಕಣಗಳ ಚಲನೆಯನ್ನು ನಿಯಂತ್ರಿಸುತ್ತದೆ, ಉಪಯುಕ್ತ ಮೂಲದ್ರವ್ಯವನ್ನು ಶೇಖರಿಸುತ್ತದೆ ಹಾಗೂ ತ್ಯಾಜ್ಯ ಪ್ರೋಟೀನುಗಳು ಮತ್ತು ಅಂಗಕಗಳನ್ನು ಜೀರ್ಣಿಸುತ್ತದೆ.

ಸಸ್ಯ ಜೀವಕೋಶದ ರಚನೆ

ಒಂದು ಕೋಶ ಭಿತ್ತಿ: ಇದು ಸೆಲ್ಯುಲೋಸು ಮತ್ತು ಹೆಮಿಸೆಲ್ಯುಲೋಸು, ಪೆಕ್ಟಿನ್‌‌ ಮೊದಲಾದವುಗಳಿಂದ ಮತ್ತು ಅನೇಕ ನಿದರ್ಶನಗಳಲ್ಲಿ ಲಿಗ್ನಿನ್‌‌‌‌ನಿಂದ ಮಾಡಲ್ಪಟ್ಟಿರುತ್ತದೆ. ಇದು ಜೀವಕೋಶ ಒಳಪೊರೆಯ ಹೊರಭಾಗದ ಮೇಲಿನ ಕೋಶಸತ್ತ್ವದಿಂದ ಸ್ರವಿಸಲ್ಪಡುತ್ತದೆ. ಕೈಟಿನ್‌‌‌ನಿಂದ ಮಾಡಲ್ಪಟ್ಟಿರುವ ಶಿಲೀಂಧ್ರಗಳ ಕೋಶಭಿತ್ತಿಗಳು, ಮತ್ತು ಪೆಪ್ಟಿಡೋಗ್ಲೈಕಾನ್‌‌‌‌ನಿಂದ ಮಾಡಲ್ಪಟ್ಟಿರುವ ಬ್ಯಾಕ್ಟೀರಿಯಾದ ಕೋಶಭಿತ್ತಿಗಳಿಗೆ ಇದು ತದ್ವಿರುದ್ಧವಾಗಿರುತ್ತದೆ.

ಕೋಶದ್ರವದ ಸಪುರ ಎಳೆಗಳು[೩]: ಜೀವಕೋಶ-ಜೀವಕೋಶದ ನಡುವಿನ ವಿಶೇಷೀಕರಿಸಲ್ಪಟ್ಟ ಸಂವಹನದ ಪ್ರತಿಕ್ರಿಯಾ ಸರಣಿಗಳಾಗಿರುವ ಇವು ಪ್ರಾಥಮಿಕ ಕೋಶಭಿತ್ತಿಯಲ್ಲಿನ ರಂಧ್ರಗಳಾಗಿವೆ. ಇವುಗಳ ಮೂಲಕ ಅಕ್ಕಪಕ್ಕದ ಜೀವಕೋಶಗಳ ಪ್ಲ್ಯಾಸ್ಮಲೆಮ್ಮಾ ಮತ್ತು ಎಂಡೋಪ್ಲಾಸ್ಮಿಕ್‌ ರೆಟಿಕ್ಯುಲಂ[೪] ರಚನೆಗಳು ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳುತ್ತವೆ.

ಪ್ಲಾಸ್ಟಿಡ್‌‌‌ಗಳು: ಹರಿದ್ರೇಣುಗಳು ಇವುಗಳಲ್ಲಿ ಗಮನಾರ್ಹವಾಗಿವೆ. ಹರಿತ್ತನ್ನು ಮತ್ತು ಬೆಳಕು ಸಂಗ್ರಹಿಸುವಿಕೆ ಹಾಗೂ ದ್ಯುತಿಸಂಶ್ಲೇಷಣೆಗೆ ಸಂಬಂಧಿಸಿದ ಜೀವರಾಸಾಯನಿಕ ವ್ಯವಸ್ಥೆಗಳನ್ನು ಹರಿದ್ರೇಣುಗಳು ಒಳಗೊಂಡಿರುತ್ತವೆ. ಇಷ್ಟೇ ಅಲ್ಲ, ಪಿಷ್ಟ ಸಂಗ್ರಹಣೆಗಾಗಿ ವಿಶೇಷೀಕರಿಸಲ್ಪಟ್ಟ ಅಮೈಲೋಪ್ಲಾಸ್ಟ್‌‌‌‌ಗಳು, ಕೊಬ್ಬಿನಂಶದ ಸಂಗ್ರಹಣೆಗಾಗಿ ವಿಶೇಷೀಕರಿಸಲ್ಪಟ್ಟ ಎಲಾಯೋಪ್ಲಾಸ್ಟ್‌‌‌ಗಳು ಮತ್ತು ವರ್ಣದ್ರವ್ಯಗಳ ಸಂಶ್ಲೇಷಣೆ ಹಾಗೂ ಸಂಗ್ರಹಣೆಗಾಗಿ ವಿಶೇಷೀಕರಿಸಲ್ಪಟ್ಟ ವರ್ಣಕಣಗಳು ಇವೆಲ್ಲವೂ ಸಹ ಪ್ಲಾಸ್ಟಿಡ್‌ಗಳಲ್ಲಿ ಸೇರಿವೆ. 37 ಜೀನುಗಳನ್ನು[೫] ಸಂಕೇತ ಭಾಷೆಯಲ್ಲಿಟ್ಟಿರುವ ಒಂದು ಜೀನೋಮ್‌ನ್ನು ಹೊಂದಿರುವ ಮೈಟೋಕಾಂಡ್ರಿಯಾದಲ್ಲಿರುವಂತೆ, ಸುಮಾರು 100-120 ಅನನ್ಯ ಜೀನುಗಳನ್ನು[೬] ಒಳಗೊಂಡಿರುವ ತಮ್ಮದೇ ಆದ ಜೀನೋಮ್‌‌‌ಗಳನ್ನು ಪ್ಲಾಸ್ಟಿಡ್‌‌ಗಳು ಹೊಂದಿವೆ; ಭೂಸಸ್ಯಗಳು ಮತ್ತು ಪಾಚಿಗಳ ಒಂದು ಆರಂಭಿಕ ಯೂಕ್ಯಾರಿಯೋಟಿಕ್‌ ಪೂರ್ವವರ್ತಿಯ ಜೀವಕೋಶಗಳಲ್ಲಿ ವಾಸಿಸುವ ಪ್ರೋಕ್ಯಾರಿಯೋಟಿಕ್‌‌ (ಒಂದು ನಿಜವಾದ ಕೋಶಕೇಂದ್ರವನ್ನು ಹೊಂದಿಲ್ಲದ ಜೀವಕೋಶಗಳನ್ನು ಒಳಗೊಂಡ ಜೀವಿ) ಅಂತರ-ಸಹಜೀವಿಗಳಾಗಿ ಪ್ರಾಯಶಃ ಈ ಜೀನೋಮ್‌ಗಳು ಹುಟ್ಟಿಕೊಂಡಿರಬಹುದಾಗಿದೆ.[೭]

ಪ್ರಾಣಿ ಜೀವಕೋಶಗಳಿಗಿಂತ ಭಿನ್ನವಾಗಿ, ಸಸ್ಯ ಜೀವಕೋಶಗಳು ನಿಶ್ಚಲವಾಗಿರುತ್ತವೆ.

ಕೋಶದ್ರವ್ಯ ವಿಭಜನೆಯಲ್ಲಿ ವಿಳಂಬವಾಗಿ ಒಂದು ಜೀವಕೋಶ ಫಲಕವನ್ನು ನಿರ್ಮಿಸುವುದಕ್ಕೆ ಸಂಬಂಧಿಸಿದ, ಒಂದು ಪಡಿಯಚ್ಚಿನ ರೀತಿಯಲ್ಲಿರುವ ಒಂದು ಫ್ರಾಗ್ಮೋಪ್ಲಾಸ್ಟ್‌‌‌ನ ನಿರ್ಮಾಣದಿಂದ ಕೋಶ ವಿಭಜನೆಯಾಗುವುದು, ಭೂಸಸ್ಯಗಳು ಮತ್ತು ಪಾಚಿಗಳ ಕೆಲವೊಂದು ಗುಂಪುಗಳ ವಿಶಿಷ್ಟ ಲಕ್ಷಣವಾಗಿದೆ. ಚಾರೋಫೈಟ್‌ಗಳು[೮] ಮತ್ತು ಟ್ರೆಂಟೆಪೊಹ್ಲಿಯೇಲ್ಸ್‌‌[೯] ಗಣವು ಇಂಥ ಪಾಚಿಗಳ ಪೈಕಿಯ ಗಮನಾರ್ಹ ಉದಾಹರಣೆಗಳಾಗಿವೆ.

ಬ್ರಯೋಫೈಟ್‌‌‌ಗಳ ಬೀಜಾಣುಗಳು ಪ್ರಾಣಿಗಳಲ್ಲಿರುವ ಕಶಾಂಗಗಳನ್ನು ಹೋಲುವ ಕಶಾಂಗಗಳನ್ನು ಹೊಂದಿರುತ್ತವೆಯಾದರೂ,ಕಶಾಂಗಗಳು ಮತ್ತು ಪ್ರಾಣಿ ಜೀವಕೋಶಳಲ್ಲಿ ಕಂಡುಬರುವ ಸೆಂಟ್ರಿಯೋಲ್‌‌‌‌‌ಗಳು[೧೦] ಉನ್ನತ ಸಸ್ಯಗಳಲ್ಲಿ (ಅನಾವೃತ ಬೀಜಿಗಳು ಮತ್ತು

Explanation:

plz make me brainliest yaar

plz yaar

Answered by mariospartan
0

ಸಸ್ಯಗಳಲ್ಲಿ, ಅನಿಲಗಳ ವಿನಿಮಯವು ಸ್ಟೊಮಾಟಾ ಮೂಲಕ ನಡೆಯುತ್ತದೆ.

Explanation:

  • ಪ್ರತಿಯೊಂದು ಸ್ಟೊಮಾಟಾವು ಎರಡು ಕಾವಲು ಕೋಶಗಳಿಂದ ಆವೃತವಾಗಿದೆ ಮತ್ತು ಈ ಜೀವಕೋಶಗಳು ಕ್ಲೋರೊಪ್ಲಾಸ್ಟ್‌ಗಳನ್ನು ಹೊಂದಿರುತ್ತವೆ.
  • ಪ್ರತಿ ಸ್ಟೊಮಾದ ಅಡಿಯಲ್ಲಿ ಉಸಿರಾಟದ ತೆರೆಯುವಿಕೆ ಕಂಡುಬರುತ್ತದೆ, ಮತ್ತು ಸ್ಟೊಮಾಟಾವನ್ನು ತೆರೆಯುವ ಮತ್ತು ಮುಚ್ಚುವ ಪ್ರಕ್ರಿಯೆಯು ಕಾವಲು ಕೋಶಗಳಲ್ಲಿ ಸಕ್ಕರೆ ಮತ್ತು ಪಿಷ್ಟದ ಉಪಸ್ಥಿತಿಯನ್ನು ಅವಲಂಬಿಸಿರುತ್ತದೆ.
  • ಸ್ಟೊಮಾಟಾ ಎಂಬುದು ಮರದ ಎಲೆಗಳು ಮತ್ತು ಸೂಜಿಗಳ ಎಪಿಡರ್ಮಿಸ್‌ನಲ್ಲಿನ ಜೀವಕೋಶದ ರಚನೆಯಾಗಿದ್ದು ಅದು ಸಸ್ಯಗಳು ಮತ್ತು ವಾತಾವರಣದ ನಡುವೆ ಇಂಗಾಲದ ಡೈಆಕ್ಸೈಡ್ ಮತ್ತು ನೀರಿನ ವಿನಿಮಯದಲ್ಲಿ ತೊಡಗಿದೆ.
  • ಸಸ್ಯಶಾಸ್ತ್ರದಲ್ಲಿ, ಸ್ಟೊಮಾ, ಸ್ಟೊಮೇಟ್ ಎಂದೂ ಕರೆಯುತ್ತಾರೆ, ಇದು ಎಲೆಗಳು, ಕಾಂಡಗಳು ಮತ್ತು ಇತರ ಅಂಗಗಳ ಎಪಿಡರ್ಮಿಸ್‌ನಲ್ಲಿ ಕಂಡುಬರುವ ಒಂದು ರಂಧ್ರವಾಗಿದೆ, ಇದು ಅನಿಲ ವಿನಿಮಯದ ದರವನ್ನು ನಿಯಂತ್ರಿಸುತ್ತದೆ.
  • ರಂಧ್ರವು ಸ್ಟೊಮಾಟಲ್ ತೆರೆಯುವಿಕೆಯ ಗಾತ್ರವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿರುವ ಗಾರ್ಡ್ ಕೋಶಗಳೆಂದು ಕರೆಯಲ್ಪಡುವ ಒಂದು ಜೋಡಿ ವಿಶೇಷ ಪ್ಯಾರೆಂಚೈಮಾ ಕೋಶಗಳಿಂದ ಗಡಿಯಾಗಿದೆ.
Similar questions