Science, asked by tejut9870, 1 month ago

ಇರುವೆ ಕಡಿತದಿಂದ ಉಪಶಮನ ಮಾಡುವಿರಿ? ಇದು ಹೇಗೆ​

Answers

Answered by archananaidu1987
1

Answer:

pls mark me as brainlest

Explanation:

ಸಂಘಟನೆಗೆ ಇರುವೆಗಿಂತ ಇನ್ನುಂದು ಉತ್ತಮ ಉದಾಹರಣೆ ಸಿಗಲಾರದು. ಎಲ್ಲಿಯವರೆಗೆ ಇವು ಮನೆಯ ಹೊರಗಿರುತ್ತವೆಯೋ ನಮಗೆ ಯಾರಿಗೂ ಇದರ ಬಗ್ಗೆ ಚಿಂತೆ ಇರುವುದಿಲ್ಲ. ಆದರೆ ಯಾವಾಗ ಇವು ತಮ್ಮ ಮಾರ್ಗವನ್ನು ನಮ್ಮ ಮನೆಯ ಒಳಗಿನಿಂದ ಬಳಸುಮಾರ್ಗವಾಗಿ ಬಳಸತೊಡಗುತ್ತವೆಯೋ ಅಥವಾ ನಮ್ಮ ಮನೆಯ ಬಿರುಕುಗಳು, ರಂಧ್ರಗಳಲ್ಲೆಲ್ಲಾ ತಮ್ಮ ಮನೆ ಮಾಡುತ್ತವೆಯೋ ಆಗ ನಮಗೆ ಈ ಇರುವೆಗಳಿಂದ ತೊಂದರೆ ಎಂಬ ಭಾಸವಾಗುತ್ತದೆ. ಅಷ್ಟೇ ಅಲ್ಲ, ಮನೆಗೆ ಸಂಪರ್ಕ ನೀಡುವ ಡಿಶ್ ಕೇಬಲ್, ಅಥವಾ ಬಟ್ಟೆ ಒಣಗಿಸಲು ಕಟ್ಟಿದ್ದ ಇರುವೆಗಳನ್ನು ಹೊರದೋಡಿಸಲು ನಾವು ಮಾಡುವ ಸುಲಭ ಕಾರ್ಯ ಎಂದರೆ ಇವನ್ನು ಅಪ್ಪಚ್ಚಿ ಮಾಡಿ ಕೊಂದು ಬಿಡುವುದು. ಆದರೆ ಏನಾಶ್ಚರ್ಯ! ಎಲ್ಲಿ ನೀವು ಇರುವೆಗಳನ್ನು ಕೊಂದಿದ್ದೀರೋ ಆಲ್ಲೆಲ್ಲಾ ಲಕ್ಷಗಟ್ಟಲೇ ಇರುವೆಗಳು ಮುತ್ತಿಕೊಳ್ಳುತ್ತವೆ. ಇವಕ್ಕೆ ಹೇಗೆ ಗೊತ್ತಾಯಿತು? ಈ ಬಗ್ಗೆ ನಡೆಸಿದ ಸಂಶೋಧನೆಗಳಲ್ಲಿ ಇರುವೆಗಳು ರಾಸಾಯನಿಕ ವಾಸನೆಗಳ ಮೂಲಕ ಸಂವಹನ ನಡೆಸುತ್ತವೆ ಎಂದು ತಿಳಿದುಬಂದಿದೆ.

ಇರುವೆಗ ನಿರಪಾಯಕಾರಿಯಾದರೂ, ಕೆಲವೊಮ್ಮೆ ಅಪಾಯಕಾರಿಯೂ ಹೌದು!

ಇರುವೆಗಳು ಸಾಮಾನ್ಯವಾಗಿ ನಿರಪಾಯಕಾರಿಯಾದರೂ ಕೆಲವು ಪ್ರಬೇಧಗಳು ಮಾತ್ರ ಕಚ್ಚಿದರೆ ತೀರಾ ಹೆಚ್ಚಿನ ನೋವು ತರಿಸುವಂತಹದ್ದಾಗಿರುತ್ತವೆ. ಅಮೆಜಾನ್ ಅರಣ್ಯಗಳಲ್ಲಿ ಬುಲೆಟ್ ಆಂಟ್ಸ್ ಎಂಬ ಇರುವೆ ಅತಿ ಘೋರ ಕಡಿತಕ್ಕೆ ಹೆಸರುವಾಸಿಯಾಗಿದೆ. ಆದರೆ ನಮ್ಮ ಭಾರತದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಎರಡು ಬಗೆಯ ಇರುವೆಗಳು ಮಾತ್ರ ಅತೀ ಉರಿ ತರಿಸುವಷ್ಟು ಕಚ್ಚುತ್ತವೆ. ಇವೆಂದರೆ ಕೆಂಜಿರುವೆ ಅಥವಾ ಚಗಳಿ ಎಂದು ಗ್ರಾಮಭಾಷೆಯಲ್ಲಿ ಕರೆಯಲಾಗುವ ಕೆಂಪುಮಿಶ್ರಿತ ಕಂದು ಬಣ್ಣದ ಇರುವೆ ಮತ್ತು ಕಟ್ಟಿರುವೆ ಎಂಬ ಕಡುಗಪ್ಪು ಬಣ್ಣದ ಇರುವೆಗಳು. ಇವುಗಳು ಕಚ್ಚಿದಾಗ ಇವುಗಳ ಹಲ್ಲಿನಿಂದ ಚರ್ಮದ ಮೂಲಕ ರಕ್ತ ಸೇರುವ ಕೆಲವು ರಾಸಾಯನಿಕಗಳು ಭಾರೀ ಉರಿ ಮತ್ತು ಕಡಿತದ ಭಾಗದಲ್ಲಿ ಊದಿಕೊಳ್ಳುವಂತೆ ಮಾಡುತ್ತದೆ. ವಿಶೇಷವಾಗಿ ಇವುಗಳನ್ನು ತುಳಿದು ಕೊಂದಾಗ ಕೊಲ್ಲಲ್ಪಟ್ಟ ಇರುವೆಗಳ ದೇಹದಿಂದ ಒಸರುವ ರಾಸಾಯನಿಕದ ಪರಿಮಳ ತಕ್ಷಣ ಸಂಕೇತವನ್ನು ಕಳಿಸುವುದರಿಂದ ಒಂದೆರಡು ನಿಮಿಷಗಳಲ್ಲಿಯೇ ಅದೆಲ್ಲಿಂದಲೋ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿ ತುಳಿದವರನ್ನು ಕಚ್ಚತೊಡಗುತ್ತವೆ. ಹಾಗಾಗಿ ಇರುವೆಗಳನ್ನು ತುಳಿದು ಅಥವಾ ಜಜ್ಜಿ ಸಾಯಿಸುವ ಮೂಲಕ ಇವುಗಳನ್ನು ನಿವಾರಿಸುವ ಕ್ರಮವನ್ನು ಖಂಡಿತಾ ಮಾಡಬಾರದು.

ಹಾಗಾದರೆ ಇವುಗಳನ್ನು ಓಡಿಸುವುದು ಹೇಗೆ?

ಹಾಗಾದರೆ ಇರುವೆಗಳು ಮನೆಯೊಳಗೆ ಸಾಲಾಗಿ ಹೋಗುತ್ತಿದ್ದರೆ ಏನು ಮಾಡಬೇಕು? ಸುಮ್ಮನೇ ನಿಂತು ಮೆರವಣಿಗೆಯನ್ನು ಆಸ್ವಾದಿಸುವುದೇ? ಇಲ್ಲ, ಈ ಇರುವೆಗಳನ್ನು ಹೊಡೆದೋಡಿಸುತ್ತೇವೆ ಎಂದು ಭಾರೀ ಜಾಹೀರಾತು ನೀಡುವ ಸಂಸ್ಥೆಗಳಿಗೆ ಹಣ ಸುರಿದು ಅಪಾಯಕಾರಿ ರಾಸಾಯನಿಕಗಳನ್ನು ಮನೆ ತುಂಬಾ ಸಿಂಪಡಿಸಿಕೊಳ್ಳುವುದೇ? ಇವು ಆ ಕ್ಷಣಕ್ಕೆ ಇರುವೆಗಳನ್ನು ಹೊಡೆದೋಡಿಸಿದರೂ ಇದನ್ನು ಓಡಿಸಲು ಬಳಸಲಾದ ರಾಸಾಯನಿಕಗಳು ಮನುಷ್ಯರಿಗೂ ಅಪಾಯಕಾರಿ ಅಲ್ಲ ಎನ್ನಲು ಸಾಧ್ಯವೇ ಇಲ್ಲ. ಅದರಲ್ಲೂ ವಿಶೇಷವಾಗಿ ಚಿಕ್ಕ ಮಕ್ಕಳು ಮನೆಯಲ್ಲಿದ್ದರೆ ಈ ರಾಸಾಯನಿಕಗಳು ಮತ್ತು ವಿಷಕಾರಿ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವ ಅಪಾಯವಿರುತ್ತದೆ. ಅಲ್ಲದೇ ಇವು ವಾತಾವರಣವನ್ನೂ ಕಲುಶಿತಗೊಳಿಸುತ್ತವೆ. ಹಾಗಾಗಿ, ಇರುವೆಗಳನ್ನು ಓಡಿಸಲು ಅವುಗಳದ್ದೇ ಆದ ಭಾಷೆಯಲ್ಲಿ ಮಾತನಾಡಿ ಒಳ್ಳೆಯ ಮಾತಿನಿಂದ ಇಲ್ಲಿ ಬರಬೇಡಿ ಎನ್ನುವುದೇ ಜಾಣತನದ ಕ್ರಮ. ಆದರೆ ಇವುಗಳೊಂದಿಗೆ ಮಾತನಾಡುವುದು ಹೇಗೆ? ಮೊದಲೇ ತಿಳಿಸಿದಂತೆ ಇವು ಮಾತನಾಡುವ ಭಾಷೆ ರಾಸಾಯನಿಕಗಳ ಭಾಷೆಯಾಗಿರುವುದರಿಂದ ನಾವೂ ರಾಸಾಯನಿಕ ಭಾಷೆಯನ್ನೇ ಬಳಸೋಣ. ಹೇಗೆ? ಮುಂದೆ ಓದಿ:

ದಾಲ್ಚಿನ್ನಿ

ದಾಲ್ಚಿನ್ನಿ ಪುಡಿ ಖಾರವಾಗಿರುವ ಜೊತೆಗೇ ಗಾಳಿಯಲ್ಲಿ ಘಾಟು ಪರಿಮಳವನ್ನೂ ಬೀರುತ್ತದೆ. ಈ ಘಾಟನ್ನು ಇರುವೆಗಳು ಸಹಿಸುವುದಿಲ್ಲ. ಹಾಗಾಗಿ, ಈ ಘಾಟು ಇಲ್ಲವಾಗುವವರೆಗೂ ಇರುವೆಗಳು ಇತ್ತ ಸುಳಿಯಲಾರವು. ನಿಮ್ಮ ಮನೆಯ ಬಟ್ಟೆಯ ಕಪಾಟುಗಳ ಒಳ ಮೂಲೆಗಳು, ಒಳ ಅಂಚುಗಳು, ಬಾಗಿಲ ಹೊಸ್ತಿಲು, ಕಿಟಕಿ, ಮನೆಯ ಒಳಗೆ ಕೇಬಲ್ ಅಥವಾ ಬಟ್ಟೆ ಒಣಗಿಸಲು ಕಟ್ಟಿರುವ ಹಗ್ಗ ಮೊದಲಾದ ಕಡೆಗಳಲ್ಲೆಲ್ಲಾ ದಾಲ್ಚಿನ್ಕ್ ಪುಡಿಯನ್ನು ತೆಳುವಾಗಿ ಚಿಮುಕಿಸುತ್ತಾ ಹೋಗಿ. ಮೊದಲ ದಿನ ಮನೆಯ ಹೊರಗೆ ಹೋಗುವಾಗ ಕಿಟಕಿ ಬಾಗಿಲುಗಳನ್ನು ಮುಚ್ಚಿಯೇ ಹೋಗಿ. ಈ ಘಾಟು ಇರುವವರೆಗೂ ಇರುವೆಗಳು ಬರಲಾರವು. ಆದರೆ ಘಾಟು ಹೆಚ್ಚು ದಿನ ಇರದ ಕಾರಣ ಆಗಾಗ ಮನೆಯನ್ನು ಸ್ವಚ್ಛಗೊಳಿಸಿದ ಬಳಿಕ ಈ ಪುಡಿಯನ್ನು ಸಿಂಪಡಿಸುತ್ತಲೇ ಇರಬೇಕು. ಇದು ಕೊಂಚ ತ್ರಾಸದಾಯಕವಾಗಿರುವ ಕಾರಣ ಪುಡಿಯನ್ನು ಸಿಂಪಡಿಸುವ ಬದಲು ದಾಲ್ಚಿನ್ನಿ ಎಣ್ಣೆಯ ಅವಶ್ಯಕ ತೈಲದಲ್ಲಿ ಹತ್ತಿಯುಂಡೆಯನ್ನು ಮುಳುಗಿಸಿ ಹಿಂಡಿ ಈ ಉಂಡೆಗಳನ್ನು ಇರುವೆಗಳು ಬರುವ ಸ್ಥಳದಲ್ಲಿರಿಸಬೇಕು ಈ ವಿಧಾನ ಸರಳ ಮತ್ತು ಹೆಚ್ಚು ಶ್ರಮ ನೀಡದಂತಹದ್ದಾಗಿದೆ.

ಲಿಂಬೆ ರಸ

ಇರುವೆಗಳಿಗೆ ಯಾವುದೇ ಆಮ್ಲದ ವಾಸನೆ ಹಿಡಿಸುವುದಿಲ್ಲ. ಲಿಂಬೆಯ ಆಮ್ಲೀಯ ಗುಣ ಮತ್ತು ಆಮ್ಲೀಯ ಪರಿಮಳವನ್ನು ಇರುವೆಗಳು ಸಹಿಸಲಾರವು. ಇದಕ್ಕಾಗಿ ನೀರು ಸಿಂಪಡಿಸುವ ಉಪಕರಣದಲ್ಲಿ ಒಂದು ಲಿಂಬೆಯ ರಸವನ್ನು ಕೊಂಚ ನೀರಿನೊಂದಿಗೆ ಮಿಶ್ರಣ ಮಾಡಿ ಇರುವೆಗಳು ಸಾಗುವ ಸಂಭವ ಇರುವ ಸ್ಥಳದಲ್ಲೆಲ್ಲಾ ಸಿಂಪಡಿಸುತ್ತಾ ಸಾಗಬೇಕು. ಈ ವಿಧಾನ ಕೊಂಚ ತ್ರಾಸದಾಯಕವಾಗಿರುವ ಕಾರಣ ಹತ್ತಿಯುಂಡೆಯನ್ನು ಲಿಂಬೆರಸದಲ್ಲಿ ಅದ್ದಿ ಇರುವೆಗಳು ಬರುವ ಸ್ಥಳದಲ್ಲಿ ಇರಿಸಬೇಕು. ವಾರಕ್ಕೊಮ್ಮೆ ಈ ಉಂಡೆಗಳನ್ನು ನಿವಾರಿಸಿ ಹೊಸ ಉಂಡೆಗಳನ್ನು ಇರಿಸಬೇಕು. ಆದರೆ ಚಿಕ್ಕ ಮಕ್ಕಳು ಇರುವ ಮನೆಯಲ್ಲಿ ಲಿಂಬೆರಸ ಸಿಂಪಡಿಸುವುದೇ ಕ್ಷೇಮ. ಮಕ್ಕಳು ಅರಿಯದೇ ಈ ಉಂಡೆಗಳನ್ನು ಮಿಠಾಯಿ ಎಂದು ಬಾಯಿಗೆ ಹಾಕಿಕೊಳ್ಳಬಹುದು.

ಕರಿಮೆಣಸು ಮೆಣಸು

ಈ ಮೆಣಸು ಎಷ್ಟು ಖಾರವೋ ಅದಕ್ಕಿಂತ ಹೆಚ್ಚು ಘಾಟು ಪರಿಮಳವನ್ನು ಹೊಂದಿದೆ. ಇರುವೆಗಳು ಸಾಲಾಗಿ ಸಾಗಲು ಈ ದಾರಿಯುದ್ದಕ್ಕೂ ಚೆಲ್ಲಿರುವ ರಾಸಾಯನಿಕಗಳೇ ಕಾರಣವಾಗಿವೆ. ಆದರೆ ಈ ಮೆಣಸಿನ ಘಾಟು ಈ ರಾಸಾಯನಿಕಗಳೆಲ್ಲಾ ಕರಗಿ ಹೋಗುವಷ್ಟು ಪ್ರಬಲವಾಗಿದ್ದು ಇರುವೆಗಳು ದಿಕ್ಕಾಪಾಲಾಗುತ್ತವೆ. ದಾರಿಯೇ ಇಲ್ಲದ ಮೇಲೆ ಇರುವೆಗಳು ಬರುವುದಾದರೂ ಎಲ್ಲಿಂದ? ಇರುವೆಗಳು ಬರುವ ಸ್ಥಳಗಳಲ್ಲಿ ಮತ್ತು ಸಾಗುವ ದಾರಿಗಳಲ್ಲೆಲ್ಲಾ ಈ ಮೆಣಸಿನ ಪುಡಿಯನ್ನು ಚಿಮುಕಿಸುತ್ತಾ ಹೋಗಿ. ವಿಶೇಷವಾಗಿ ಅಡುಗೆ ಮನೆಯಲ್ಲಿ ಇರುವೆಗಳ ಕಾಟವಿದ್ದರೆ ಸಾಮಾನು ಇರಿಸುವ ಸ್ಥಳದ ಮೂಲೆಗಳಲ್ಲೆಲ್ಲಾ ಈ ಮೆಣಸಿನ ಪುಡಿಯನ್ನು ಸಿಂಪಡಿಸಿ. ಒಮ್ಮೆ ಸಿಂಪಡಿಸಿದರೆ ಮುಂದಿನ ಆರು

Similar questions