ಶಾಂತಲಾ ದೇವಿ ಸಾಮ್ರಾಜ್ಯ ವೀಕ್ಷಣೆಗೆ ಕೈಗೊಂಡ ಉಪಾಯವೇನು ?
Answers
Answer:
ಎಷ್ಟೋ ಬಾರಿ ಶಿವಗಂಗೆ ಬೆಟ್ಟಕ್ಕೆ ಹೋಗಿರುವೆ . ಶಿವನ ದರ್ಶನ ಪಡೆದು, ಹಾಗೆಯೇ ಮುಂದಕ್ಕೆ ಬೆಟ್ಟ ಹತ್ತಿ ಹೋದರೆ ಒಳಕಲ್ಲು ತೀರ್ಥ ಸಿಗುತ್ತದೆ. ಬಹಳ ಅದ್ಭುತ , ಎತ್ತರವಾದ ಬೆಟ್ಟ. ದೇವರಾಯನದುರ್ಗ ಬಳಿ ನಿಂತು ಬೆಟ್ಟ ನೋಡಿದರೆ, ಶಿವಲಿಂಗದಂತೆ ಬೆಟ್ಟ ಕಾಣುತ್ತದೆ. ಇದರ ಜೊತಗೆ ನಾಟ್ಯರಾಣಿ ಶಾಂತಲೆ ನೆನಪಿಗೆ ಬರುತ್ತದೆ. ಹೊಯ್ಸಳ ಸಾಮ್ರಾಜ್ಯದ ಚಕ್ರವರ್ತಿ ವಿಷ್ಣುವರ್ಧನನ ಪತ್ತಮಹಿಷಿ ಶಾಂತಲೆ. ಶಾಂತಲೆ ಚರಿತ್ರೆಯನ್ನು ಕೆ. ವಿ. ಅಯ್ಯರ್ ಅವರು ತಮ್ಮ “ಶಾಂತಲಾ”ಐತಿಹಾಸಿಕ ಕಾದಂಬರಿಯಲ್ಲಿ ಅರ್ಪಿಸಿದ್ದಾರೆ.
ನಮ್ಮ ಕರ್ನಾಟಕ ರಾಜ್ಯದ ಹೊಯ್ಸಳ ಶಿಲ್ಪಕಲೆ ಮತ್ತು ದಕ್ಷ ಆಡಳಿತ ಇಡೀ ಭಾರತದಲ್ಲಿ ಪ್ರಖ್ಯಾತ. ಇದಕ್ಕೆ ವಿಷ್ಣುವರ್ಧನ ಮತ್ತು ಶಾಂತಲೆ ಅವರು ಉನ್ನತ ಮಟ್ಟಕ್ಕೆ ಕಾರಣವಾದವರು. ಕಾದಂಬರಿಯಲ್ಲಿ ಬರುವ ಪ್ರಮುಖ ಪಾತ್ರಗಳು _ ವಿಷ್ಣುವರ್ಧನ , ಶಾಂತಲೆ, ಮಹಾರಾಜ್ಞೀ ಮಹಾದೇವಿ, ಲಕ್ಷ್ಮೀ , ಕುವರವಿಷ್ಣು, ದೇಚ , ಗಂಗರಾಜರು, ಮಾಚಿಕಬ್ಬೆ. ನನಗೆ ಬಹಳ ಇಷ್ಟವಾದ ಪಾತ್ರಗಳು. ಈ ಐತಿಹಾಸಿಕ ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು, ಧಾರ್ಮಿಕ ಆಚರಣೆಗಳು, ಜನರ ನಿಷ್ಠೆ, ರಮ್ಯ ಮನೋಹರ ದೇಗುಲಗಳು, ಕಣ್ಣಿಗೆ ಕಟ್ಟುವ ಹಾಗೆ ಕೆ. ವಿ. ಅಯ್ಯರ್ ಸಮರ್ಪಿಸಿದ್ದಾರೆ. ಹೊಯ್ಸಳ ಸಾಮ್ರಾಜ್ಯದ ವೈಭವ ರಮ್ಯ ಮನೋಹರ. ಹೊಯ್ಸಳೇಶ್ವರ, ವಿಜಯ ನಾರಾಯಣ, ಚೆನ್ನಕೇಶವ – ಇವರ ಕೃಪಯಿಂದ ಹೊಯ್ಸಳ ಸಾಮ್ರಾಜ್ಯ ಬೆಳೆದಿತ್ತು.
ರಾಜಮಾತೆ ಅವರು ಮಾರಸಿಂಗಮಯ್ಯ ಗೆ ಕುವರವಿಷ್ಣು ಉಪನಯನದ ಓಲೆ ಬರೆಸಿದರು. “ನಾಳೆ ನಡೆಯುವ ಕುವರವಿಷ್ಣುವಿನ ಬ್ರಹೋಪದೇಶಮಹೋತ್ಸವಕ್ಕೆ ಸತಿ ಮಾಚಿಕಬ್ಬೆಯನ್ನು ಮಗಳು ಶಾಂತಲೆಯನ್ನೂ ತಪ್ಪದೆ ಕರೆತರಬೇಕೆಂದು ರಾಜಮಾತೆ ಅಪೇಕ್ಷೆ ಪಟ್ಟಿದ್ದಾರೆ . ಇದು ಕರ್ತವ್ಯವೆಂದು ಪರಿಗಣಿಸತಕ್ಕದ್ದು. “ ಇದನ್ನು ನೋಡಿದ ದಂಪತಿಗಳು ಇಬ್ಬರೂ ಖುಷಿ ಪಡುತ್ತಾರೆ. ರಾಜಮಾತೆ ಶಾಂತಲೆಯನ್ನು ಸೊಸೆಯಾಗಿ ತಂದುಕೊಳ್ಳಬೇಕು ಎಂಬ ಇಚ್ಛೆ ಇರುತ್ತದೆ. ರಾಜಮಾತೆ ಒಮ್ಮೆ ಶಾಂತಲೆಯನ್ನು ಕಂಡಿದ್ದರು . ಅವಳ ರೂಪ , ಗುಣಗಳನ್ನು ನೋಡಿ ಮಗನಿಗೆ ತಕ್ಕ ಹೆಂಡತಿ ಎಂದು ನಿಶ್ಚಯಿಸಿದರು