ಭಾರತದ ಬಡತನ ಕುರಿತು ಮಾಹಿತಿ
Answers
Answered by
2
ಭಾರತದಲ್ಲಿ ಬಡತನ ಬಹುವ್ಯಾಪಕವಾಗಿದ್ದು, ವಿಶ್ವದ ಒಟ್ಟು ಬಡವರ ಸಂಖ್ಯೆಯಲ್ಲಿ ಮೂರನೇ ಒಂದು ಭಾಗ ರಾಷ್ಟ್ರದಲ್ಲಿದ್ದಾರೆಂದು ಅಂದಾಜು ಮಾಡಲಾಗಿದೆ. ಭಾರತದ ಯೋಜನಾ ಆಯೋಗ ಬಳಸಿದ ಮಾನದಂಡದ ಅನ್ವಯ 2004-2005ರಲ್ಲಿ ಜನಸಂಖ್ಯೆಯ 27.5% ಬಡತನ ರೇಖೆಕೆಳಗೆ(ಕಡುಬಡತನ)ವಾಸಿಸಿದ್ದು, 1977-1978ರಲ್ಲಿ 51.3%ಗಿಂತ ಮತ್ತು 1993-1994ರಲ್ಲಿ 36%ಗಿಂತ ಕೆಳಮುಖದಲ್ಲಿದೆ.[೧] UN ಅಭಿವೃದ್ಧಿ ಕಾರ್ಯಕ್ರಮ, ಮಾನವ ಅಭಿವೃದ್ಧಿ ಸೂಚ್ಯಂಕದ(HDI)ಪ್ರಕಾರ,ಭಾರತದ ಜನಸಂಖ್ಯೆಯಲ್ಲಿ 75.6% ದಿನಕ್ಕೆ $2ಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ. ಪಾಕಿಸ್ತಾನದ 22.6%ಗೆ ಹೋಲಿಸಿದರೆ ಸುಮಾರು 41.6% ದಿನಕ್ಕೆ $1ಗಿಂತ ಕಡಿಮೆ ಆದಾಯದಲ್ಲಿ ಜೀವಿಸುತ್ತಿದ್ದಾರೆ.[೨] ವಿಶ್ವಬ್ಯಾಂಕ್ಅಂದಾಜು 2005ರ ಪ್ರಕಾರ, ಭಾರತದ 42% ಜನರು ಅಂತಾರಾಷ್ಟ್ರೀಯ ಬಡತನ ರೇಖೆಯಾದ ದಿನಕ್ಕೆ $1.25(PPP, ಅಂದಾಜು ನಗರಪ್ರದೇಶಗಳಲ್ಲಿ ದಿನಕ್ಕೆ 21.6 ರೂಪಾಯಿಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 14.3 ರೂಪಾಯಿಗಳು)ಗಿಂತ ಕೆಳಗಿದ್ದಾರೆ; 1980ರಲ್ಲಿ 60% ಅಂಕಿಅಂಶಕ್ಕಿಂತ ಕೆಳಗಿಳಿದಿದೆ.[೩]
ಭಾರತದಲ್ಲಿ ಅಧಿಕ ಮಟ್ಟದ ಬಡತನಕ್ಕೆ ಬ್ರಿಟಿಷ್ ಆಡಳಿತದಡಿಯ ಇತಿಹಾಸ, ಅಪಾರ ಜನಸಂಖ್ಯೆ ಮತ್ತು ಕಡಿಮೆ ಸಾಕ್ಷರತೆ ಕಾರಣಗಳನ್ನು ನೀಡಲಾಗಿದೆ. ಭಾರತದ ಜಾತಿ ಪದ್ಧತಿ ಮತ್ತು ಭಾರತದ ಸಮಾಜದಲ್ಲಿ ಮಹಿಳೆಯರ ಪಾತ್ರ ಸೇರಿದಂತೆ ಭಾರತದ ಸಾಮಾಜಿಕ ಸ್ವರೂಪ ಕೂಡ ಮುಖ್ಯವಾಗಿದೆ. ಕೃಷಿ ಮೇಲೆ ಹೆಚ್ಚು ಅವಲಂಬಿತವಾದ್ದರಿಂದ ಮತ್ತು ಭಾರತದ ಸ್ವಾತಂತ್ರ್ಯದ ನಂತರ ಆರ್ಥಿಕ ನೀತಿಗಳನ್ನು ಅಳವಡಿಸಲಾಗಿದ್ದರಿಂದ ಹಿಂದಿನ ಆರ್ಥಿಕ ಪ್ರಗತಿ ಕುಂಠಿತಗೊಂಡಿತು. ಭಾರತ ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಬಡತನ ನಿವಾರಣೆಗೆ 1950ರ ದಶಕದಿಂದೀಚೆಗೆ ಹಲವಾರು ಕಾರ್ಯಕ್ರಮಗಳನ್ನು ಆರಂಭಿಸಿತು. ಆಹಾರ ಮತ್ತಿತರ ಜೀವನಾವಶ್ಯಕ ವಸ್ತುಗಳಿಗೆ ಸಹಾಯಧನ,ಸಾಲಗಳಿಗೆ ಹೆಚ್ಚು ಅವಕಾಶ ಕಲ್ಪಿಸುವುದು, ಕೃಷಿ ತಂತ್ರಜ್ಞಾನಗಳು ಮತ್ತು ದರ ಬೆಂಬಲಗಳ ಸುಧಾರಣೆ, ಶಿಕ್ಷಣ ಮತ್ತು ಕುಟುಂಬ ಯೋಜನೆಗೆ ಉತ್ತೇಜನ ಇವುಗಳಲ್ಲಿ ಸೇರಿವೆ. ಈ ಕ್ರಮಗಳಿಂದ ಬರಗಾಲಗಳ ನಿವಾರಣೆಗೆ ನೆರವಾಯಿತು,ಪೂರ್ಣ ಬಡತನ ಮಟ್ಟಗಳು ಅರ್ಧಕ್ಕಿಂತಲೂ ಹೆಚ್ಚು ಕಡಿತಗೊಂಡಿತು ಮತ್ತು ಅನಕ್ಷರತೆ ಮತ್ತು ಅಪೌಷ್ಠಿಕತೆ ಇಳಿಮುಖಗೊಂಡಿತು.ಆದಾಗ್ಯೂ,1990ರ ದಶಕದ ಮಧ್ಯಾವಧಿಯಿಂದ 30 ದಶಲಕ್ಷ ಜನರು ಹಸಿವಿನಿಂದ ನರಳುವವರ ಸಾಲಿಗೆ ಸೇರ್ಪಡೆಯಾದರು ಮತ್ತು 46% ಮಕ್ಕಳು ಕಡಿಮೆತೂಕವುಳ್ಳವರಾಗಿದ್ದರು.

Similar questions