World Languages, asked by Annushajaymdy, 1 month ago

1) 'ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ ' ಅಲಂಕಾರ ಗುರುತಿಸಿ ಸಮನ್ವಯಗೊಳಿಸಿ.​

Answers

Answered by nsvaggar
6

Explanation:

) ಉಪಮಾಲಂಕಾರ

ಈ ಕೆಳಗಿನ ಮಾತುಗಳನ್ನು ಗಮನಿಸಿರಿ.

(i) ಆ ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ.

(ii) ನೀಚರಿಗೆ ಮಾಡಿದ ಉಪಕಾರವು ಹಾವಿಗೆ ಹಾಲೆರೆದಂತೆ.

ಮೊದಲನೆಯ ವಾಕ್ಯದಲ್ಲಿ ಮಗುವಿನ ಮುಖದಲ್ಲಿನ ಅಹ್ಲಾದಕತ್ವವೂ, ಚಂದ್ರನಲ್ಲಿರುವ ಅಹ್ಲಾದಕತ್ವವೂ ಸಮಾನವಾಗಿರುವುದರಿಂದ ಮಗುವಿನ ಮುಖವನ್ನು ಚಂದ್ರನಿಗೆ ಹೋಲಿಸಿದೆ. ಚಂದ್ರನನ್ನು ನೋಡಿದಾಗ ಉಂಟಾಗುವ ಮನೋಹರತ್ವವು ಮಗುವಿನ ಮುಖ ನೋಡಿದಾಗಲೂ ಆಗುತ್ತದೆ. ಈ ಅರ್ಥ ಚಮತ್ಕಾರ ಆ ವಾಕ್ಯದಲ್ಲಿ ಅಡಗಿದೆ.

ಎರಡನೆಯ ವಾಕ್ಯದಲ್ಲಿ ಹಾವಿಗೆ ಹಾಲೆರೆದರೆ ವಿಷವೇ ವೃದ್ಧಿಯಾಗುವುದಲ್ಲದೆ ಬೇರಿಲ್ಲ. ಇದರ ಹಾಗೆಯೇ ನೀಚರಿಗೆ ಉಪಕಾರ ಮಾಡಿದರೆ ಅವರು ಅಪಕಾರವನ್ನೇ ಮಾಡುವರಲ್ಲದೆ ಪ್ರತಿಯಾಗಿ ಉಪಕಾರ ಮಾಡುವುದಿಲ್ಲ. ಇಲ್ಲಿ ನೀಚರಿಗೆ ಮಾಡಿದ ಉಪಕಾರವನ್ನು ಹಾವಿಗೆ ಹಾಲೆರೆಯುವ ಕ್ರಿಯೆಗೆ ಹೋಲಿಸಲಾಗಿದೆ. ಹೀಗೆ ಬರುವ ಹೋಲಿಕೆಗಳಿಗೆ ‘ಉಪಮಾನ’ ವೆನ್ನುತ್ತಾರೆ. ಯಾವುದಕ್ಕೆ ಈ ಹೋಲಿಕೆಯನ್ನು ಕೊಡುವೆವೋ ಅದು ‘ಉಪಮೇಯ’. ಅಂತೆ ಹಾಗೆ-ಎಂದು ಹೋಲಿಕೆಗೆ ಸಂಬಂಧ ಕಲ್ಪಿಸುವ ಶಬ್ದಗಳು ಉಪಮಾವಾಚಕಗಳೆನಿಸುವುವು. ಈ ಹೋಲಿಕೆಗಳಲ್ಲಿ ಬರುವ ಸಮಾನತೆಯೇ ಸಮಾನಧರ್ಮವೆನಿಸುವುದು.

Answered by Anonymous
36

Answer:

ನೀಚನಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ

ಉಪಮೇಯ:ನೀಚನಿಗೆ ಮಾಡಿದ ಉಪಕಾರ

ಉಪಮಾನ: ಹಾವಿಗೆ ಎರೆದ ಹಾಲು

ವಾಚಕ ಪದ:ಅಂತೆ

ಅಲಂಕಾರ: ಉಪಮಾಲಂಕಾರ

ಸಮನ್ವಯ: ಉಪಮೇಯವಾದ ನೀಚನಿಗೆ ಮಾಡಿದ ಉಪಕಾರವನ್ನು ಉಪಮಾನ ಹಾವಿಗೆ ಎರೆದ ಹಾಲು ಗೆ ವಾಚಕ ಪದ ಅಂತೆ ಸೇರಿಸಿ ಹೊಲಿಸಿ ವರ್ಣಿಸಲಾಗಿದೆ.

ಲಕ್ಷ್ಮಣ: ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಉಪಮಾಲಂಕರ ಎನ್ನುವರು.

 \huge\boxed{ಧನ್ಯವಾದಗಳು}

Similar questions