Science, asked by neeshmaacharya97, 4 hours ago

1. ಕೋಶಕೇಂದ್ರವಿರದ ಜೀವಕೋಶದಲ್ಲಿ ಇದು ಇರುವುದಿಲ್ಲ ಎ. ಪ್ಲಾಸ್ಮಾ ಪೊರೆ ಬಿ. ಮೈಟೋಕಾಂಡ್ರಿಯ ಸಿ. ವರ್ಣತಂತು ಡಿ, ರಸದಾನಿ​

Answers

Answered by gyaneshwarsingh882
1

Explanation:

ಜೀವಕೋಶ [ಟಿಪ್ಪಣಿ ೧][ಟಿಪ್ಪಣಿ ೨] ಇಂದು ತಿಳಿದ ಎಲ್ಲಾ ಜೀವಿಗಳಿಗೂ ಮೂಲಭೂತ ರಾಚನಿಕ, ಕಾರ್ಯಭಾರದ ಮತ್ತು ಜೈವಿಕ ಘಟಕ. ಜೀವಕೋಶವು ತನ್ನನ್ನು ತಾನೇ ನಕಲು ಮಾಡಿಕೊಳ್ಳಬಲ್ಲ ಜೀವದ ಕನಿಷ್ಠ ಘಟಕ ಮತ್ತು ಅದನ್ನು ಜೀವಿಗಳ “ಕಟ್ಟಡದ ಸೈಜುಗಲ್ಲು” ಎಂದು ಕರೆಯಲಾಗಿದೆ. ಜೀವಕೋಶಗಳ ಅಧ್ಯಯನವನ್ನು ಕೋಶ ಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಜೀವಕೋಶ ಪದಕ್ಕೆ ಇಂಗ್ಲೀಶ್‌ನ ಸಂವಾದಿ ಪದ ಸೆಲ್ ,ಲ್ಯಾಟಿನ್‌ನ ಸೆಲ್ಲಾ ಪದದಿಂದ ಬಂದಿದ್ದು ಅದರ ಅರ್ಥ “ಚಿಕ್ಕ ಕೋಣೆ”[೧] ಎಂದು.

ಜೀವಕೋಶದಲ್ಲಿ ಪೊರೆಯೊಳಗೆ ಸುತ್ತುವರಿದ ಜೀವರಸ (ಸೈಟೊಪ್ಲಾಸಂ) ಇರುತ್ತದೆ ಮತ್ತು ಈ ಜೀವರಸದಲ್ಲಿ ಪ್ರೋಟೀನ್ ಮತ್ತು ನ್ಯೂಕ್ಲಿಯಿಕ್ ಆಮ್ಲಗಳಂತಹ ಜೈವಿಕ ಅಣುಗಳು ಇರುತ್ತವೆ.[೨] ಜೀವಿಗಳನ್ನು ಏಕಕೋಶಿಗಳು (ಬ್ಯಾಕ್ಟೀರಿಯವನ್ನೂ ಒಳಗೊಂಡು ಏಕಕೋಶ ಜೀವಿಗಳು) ಮತ್ತು ಬಹುಕೋಶಿಗಳು (ಸಸ್ಯಗಳು ಮತ್ತು ಪ್ರಾಣಿಗಳನ್ನು ಒಳಗೊಂಡ ಒಂದಕ್ಕಿಂತ ಹೆಚ್ಚು ಜೀವಕೋಶವಿರುವ ಜೀವಿಗಳು) ಎಂದು ವರ್ಗೀಕರಿಸಬಹುದು. ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳು ಜೀವಸಂಕುಲದಿಂದ ಜೀವಸಂಕುಲಕ್ಕೆ ಬೇರೆ ಬೇರೆಯಾಗುತ್ತವೆ. ಮಾನವನಲ್ಲಿ ನೂರು ಲಕ್ಷ ಕೋಟಿಗೂ ಹೆಚ್ಚು ಜೀವಕೋಶಗಳಿವೆ.[೩] ಬಹಳಷ್ಟು ಸಸ್ಯ ಮತ್ತು ಪ್ರಾಣಿಗಳ ಜೀವಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ಮಾತ್ರ ನೋಡಲು ಸಾಧ್ಯ, ಅವುಗಳ ಅಳತೆ ೧ ರಿಂದ ೧೦೦ ಮೈಕ್ರೋಮೀಟರ್ ಅಥವಾ ಮೈಕ್ರಾನ್[೪][ಟಿಪ್ಪಣಿ ೩] ಇರುತ್ತದೆ.

ಜೀವಕೋಶವನ್ನು ೧೬೬೫ ರಲ್ಲಿ ರಾಬರ್ಟ್ ಹುಕ್ ಕಂಡುಹಿಡಿದ ಮತ್ತು ಈ ಜೈವಿಕ ಘಟಕಗಳು ಕ್ರೈಸ್ತ ಸನ್ಯಾಸಿಗಳ ನಿವಾಸವನ್ನು ಹೋಲುತ್ತಿದ್ದ ಕಾರಣಕ್ಕೆ ಆ ಹೆಸರು ಕೊಟ್ಟ.[೫][೬] ಜೀವಕೋಶ ಸಿದ್ಧಾಂತವನ್ನು ಮೊದಲು ೧೮೩೯ರಲ್ಲಿ ಮ್ಯಾಥಿಯಾಸ್‌ ಜಾಕೋಬ್ ಸ್ಕಲೆಡೆನ್ ಮತ್ತು ಥಿಯೊಡರ್ ಸ್ಕವಾನ್ನ್ ಮಂಡಿಸಿದರು. ಈ ಸಿದ್ಧಾಂತದ ಪ್ರಕಾರ ಎಲ್ಲಾ ಜೀವಿಗಳು ಒಂದು ಅಥವಾ ಹೆಚ್ಚು ಜೀವಕೋಶಗಳಿಂದ ರಚಿಸಲ್ಪಟ್ಟಿವೆ, ಎಲ್ಲಾ ಜೀವಿಗಳಲ್ಲಿ ಜೀವಕೋಶಗಳು ರಚನೆ ಮತ್ತು ಕಾರ್ಯನಿರ್ವಹಣೆಯ ಪ್ರಾಥಮಿಕ ಘಟಕಗಳು, ಎಲ್ಲಾ ಜೀವಕೋಶಗಳೂ ಇತರ ಈಗಾಗಲೇ ಇರುವ ಜೀವಕೋಶಗಳಿಂದ ಬಂದಿವೆ ಮತ್ತು ಎಲ್ಲಾ ಜೀವಕೋಶಗಳಲ್ಲಿಯೂ ಅದರ ಕಾರ್ಯಗಳನ್ನು ನಿಯಂತ್ರಿಸಲು ಹಾಗೂ ನಂತರದ ಪೀಳಿಗೆಯ ಜೀವಕೋಶಗಳಿಗೆ ಮಾಹಿತಿ ರವಾನಿಸಲು ಅಗತ್ಯವಾದ ಅನುವಂಶಿಕ ಮಾಹಿತಿ ಅಡಕವಾಗಿದೆ.[೭] ಜೀವಕೋಶಗಳು ಕನಿಷ್ಠ 350 ಕೋಟಿ ವರುಷಗಳ ಹಿಂದೆ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡವು.[೮][೯][೧೦]

Similar questions