India Languages, asked by sanjana8123, 3 months ago

1) ವಚನ ಎಂದರೇನು ? ವಚನಗಳಲ್ಲಿ ಎಷ್ಟು ಪ್ರಕಾರಗಳಿವೆ. ಪ್ರತಿಯೊಂದೂ ಪ್ರಕಾರಗಳಿಗೆ 5 ಉದಾಹರಣೆಗಳನ್ನು ಬರೆಯಿರಿ.

(please do answer me fast I need it now)​

Answers

Answered by vivekpujar359
1

Answer:

  • ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ ವಿಭಕ್ತಿಪ್ರತ್ಯಯಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. ಕನ್ನಡ ಭಾಷೆಯಲ್ಲಿ ವಸ್ತು, ಪ್ರಾಣಿ, ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ

Explanation:

ಏಕವಚನದಲ್ಲಿ :- ಮನೆ-ಮನೆಯು-ಮನೆಗಳು, ಹುಲಿ-ಹುಲಿಯು-ಹುಲಿಗಳು. ಕೆರೆ= ಕೆರೆಯಲ್ಲಿ

ದ್ವಿವಚನದಲ್ಲಿ :- ರಾಮ - ಲಕ್ಷ್ಮಣರ್, ತೋಳ್ಗಳ್, ಕಣ್ಣುಗಳ್.

ಬಹುವಚನದಲ್ಲಿ :- ಕುರುಳ್ಗಳಿವು

ಒಂದೇ ವಸ್ತುವಿದ್ದರೆ ಏಕವಚನವೆಂದೂ, ಎರಡಾದರೆ ದ್ವಿವಚನವೆಂದೂ, ಎರಡಕ್ಕಿಂತ ಹೆಚ್ಚು ವಸ್ತುವಿದ್ದರೆ ಬಹುವಚನವೆಂದು, ಇದು ಸಂಸ್ಕೃತದಲ್ಲಿ ಸಾಮಾನ್ಯ ನಿಯಮ. ಆದರೆ ಕನ್ನಡದಲ್ಲಿ ದ್ವಿವಚನವು ವಿಶೇಷ ಸಂದರ್ಭದಲ್ಲಿ ಬರುತ್ತದೆ. ಹಳೆಗನ್ನಡದಲ್ಲಿ ದ್ವಿವಚನ ಸಾಮಾನ್ಯವಾಗಿದ್ದು ಹೊಸಗನ್ನಡದಲ್ಲಿ ಇದು ಇಲ್ಲ. ಸಂಸ್ಕೃತದ ಅನುಕರಣೆಯಿಂದ ಕನ್ನಡಕ್ಕೆ ದ್ವಿವಚನವನ್ನು ತುಂಬಿರಬಹುದು ಎಂಬ ಅಭಿಪ್ರಾಯ ಇದೆ. ಕನ್ನಡದಲ್ಲಿ ಬಹುವಚನ ಸೂಚಕ ಪ್ರತ್ಯಯಗಳಾದ ಗಳ್, ಅರ್, ದಿರ್, ವಿರ್, ಅರ್ಕಳ್ ಇವು ದ್ವಿವಚನಕ್ಕೆ ಹತ್ತುವುದರಿಂದ ದ್ವಿವಚನಕ್ಕೂ, ಬಹುವಚನಕ್ಕೂ ವ್ಯತ್ಯಾಸ ಬರುವುದಿಲ್ಲ. ಈ ಕಾರಣದಿಂದ ಕನ್ನಡದಲ್ಲಿ ದ್ವಿವಚನದ ಬಳಕೆಯ ಅಗತ್ಯವಿಲ್ಲ. ದ್ವಿವಚನವನ್ನು ಬಹುವಚನವೆಂದೇ ಪರಿಗಣಿಸಲಾಗುತ್ತದೆ. ಪ್ರಯೋಗದಲ್ಲಿ ಕಣ್ಗಳ್, ಕೈಗಳ್, ಕಾಲ್ಗಳ್, ತೋಳ್ಗಳ್, ತೊಡೆಗಳ್. ಈ ಪದಗಳಿಗೆ ‘ಗಳ್’ ಎಂಬ ಪ್ರತ್ಯಯ ಸೇರಿದೆ. ಇವು ಎರಡು ಮಾತ್ರವಿರುವುದರಿಂದ ‘ದ್ವಿಮಾನ’ವೆಂದು ಕರೆಯಲಾಗಿದೆ. ಆದುದರಿಂದ ‘ಗಳ್’ ಪ್ರತ್ಯಯವು ದ್ವಿವಚನ ಪ್ರತ್ಯಯವೆಂದು ಕರೆಯಿಸಿಕೊಂಡಿತು. ಸೂತ್ರದಲ್ಲಿ, ‘ವಿಭಕ್ತಿಗಳ ಮೊದಲೊಳ್ ಗಳಾಗಮಮಕ್ಕುಂ’ ಎಂಬ ಉಲ್ಲೇಖವಿದೆ.

Similar questions