ಕೆಳಗಿನ ವಾಕ್ಯದಲ್ಲಿರುವ ಅಲಂಕಾರವನ್ನು ಹೆಸರಿಸಿ, ಲಕ್ಷಣ ಬರೆದು ಸಮನ್ವಯಗೊಳ 2.
1. ಮನೆಯೇ ಧರ್ಮಾಶ್ರಮ
Answers
Answered by
5
Answer:
ಅಭೇದರೂಪಕಾಲಂಕಾರ:- ವರ್ಣಿಸುವ ವಸ್ತುವು ಇನ್ನೊಂದರಂತೆ (ಉಪಮಾನದಂತೆ) ಇದೆ ಎಂದು ಹೇಳದೆ, ಎರಡೂ ವಸ್ತುಗಳು ಎಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದಂತೆ ಹೇಳುವುದೇ ಅಭೇದರೂಪಕಾಲಂಕಾರವೆನಿಸುವುದು
Explanation:
ಮನೆಯೇ ಧರ್ಮಾಶ್ರಮ, ಮನೆವಾಳ್ತೆಯೇ ಧರ್ಮ|
ವಿನಿಯನೂಳಿಗ ದೇವಪೂಜೆ||
ಮನನವಿವನ ನೆನೆವುದೆ ಸಾಧ್ವಿಯರಿಗೆ|
ಮುನಿಸತಿಯರ ಮೋಡಿಯೇನು?
(-ಹದಿಬದೆಯ ಧರ್ಮ)
ಇಲ್ಲಿ ಸಾಧ್ವಿಯಾದ ಹೆಣ್ಣುಮಗಳು ತನ್ನ ಗೃಹಿಣೀ ಧರ್ಮದಲ್ಲಿ ನಡೆದುಕೊಳ್ಳುವ ನಡೆವಳಿಕೆಯು ವರ್ಣಿತವಾಗಿದೆ.
ಅರ್ಥ:- ಸಾಧ್ವಿಯರಿಗೆ ಮನೆಯು ಧರ್ಮಾಶ್ರಮ, ಮನೆಯ ಬಾಳುವೆ ಧರ್ಮ, ಗಂಡನಸೇವೆ ದೇವರ ಪೂಜೆ, ಪತಿಯನ್ನು ನೆನೆವುದು ದೇವರಧ್ಯಾನ.
ಇಲ್ಲಿ ಮನೆ ಮತ್ತು ಧರ್ಮಾಶ್ರಮ ಎರಡೂ ಒಂದೇ. ಬಾಳುವೆ ಮತ್ತು ಧರ್ಮ ಎರಡೂ ಒಂದೇ, ಪತಿಯ ಸೇವೆ-ದೇವರ ಪೂಜೆ ಇವೆರಡೂ ಒಂದೇ-ಇತ್ಯಾದಿಯಾಗಿ ಉಪಮೇಯ-ಉಪಮಾನಗಳಲ್ಲಿ ಅಭೇದವು ಹೇಳಲ್ಪಟ್ಟ ಕಾರಣ ಅಭೇದರೂಪಕಾಲಂಕಾರವೆನಿಸಿತು.
hopes it helps you
Similar questions