2.
ಅಂಟಾರ್ಕ್‌ಟಿಕ್ ಖಂಡದ ವಿವಿಧ ಸಸ್ಯ ಮತ್ತು ಪ್ರಾಣಿಗಳ ಪಟ್ಟಿ ಮಾಡಿ ಅವುಗಳ
ಚಿತ್ರಗಳನ್ನು ಸಂಗ್ರಹಿಸುವುದು.
Answers
ಮೇಲೆ ಕೊಟ್ಟಿರುವ ಫೋಟೋ ನೋಡಿ
ಒಟ್ಟು 5 ಫೋಟೋ ಇದೆ
ಖಂಡದಲ್ಲಿ ಸಂಪೂರ್ಣವಾಗಿ ಪ್ರತಿಕೂಲ ಹವಾಮಾನವಿದೆ. ಜೂನ್ 22ರಂದು ಭೂಮಿಯ ಉತ್ತರ ಮೇರು ಅತ್ಯಧಿಕವಾಗಿ ಸೂರ್ಯನೆಡೆ ವಾಲುವುದರಿಂದ ಆಗ ಅಂಟಾರ್ಕ್‍ಟಿಕದಲ್ಲಿ ದಿನದ 24 ಗಂಟೆಯೂ ಕತ್ತಲು. ಡಿಸೆಂಬರ್ 22ರಂದು ದಕ್ಷಿಣದ ಮೇರು ಅತ್ಯಧಿಕವಾಗಿ ಸೂರ್ಯನೆಡೆ ವಾಲುವುದರಿಂದ ದಿನದ 24 ಗಂಟೆಗೂ ಬೆಳಕು, ವರ್ಷದಲ್ಲಿ ಆರು ತಿಂಗಳು ಕತ್ತಲು, ಆರು ತಿಂಗಳು ಬೆಳಕು ಇರುವುದರಿಂದ ಈ ಖಂಡ ಜೈವಿಕ ವೈವಿಧ್ಯವನ್ನು ಪೋಷಿಸಿಲ್ಲ. ಅಲ್ಲಿರುವ ಸೀಮಿತ ಜೀವಿಗಳೂ ಈ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಂಡು ಬಾಳುವೆ ಮಾಡುತ್ತವೆ. ಪ್ರಧಾನ ಜೀವಿಗಳೆಂದರೆ ಪೆಂಗ್ವಿನ್. ಇವುಗಳಲ್ಲಿ 15 ಪ್ರಭೇದಗಳಿದ್ದರೂ ಮೂರು ಪ್ರಭೇದಗಳು ಮಾತ್ರ ಈ ಖಂಡಕ್ಕೆ ಸೀಮಿತ. ಉಳಿದವು ದಕ್ಷಿಣ ಅಮೆರಿಕದ ದಕ್ಷಿಣ ತುದಿಯವರೆಗೆ, ಸಮಭಾಜಕ ವೃತ್ತದ ಗ್ಯಾಲಪೊಗೋಸ್ ದ್ವೀಪದವರೆಗೆ ಹಂಚಿಕೆಯಾಗಿದೆ. ಅದಿಲೆ, ಎಂಪರೆರ್ ಮತ್ತು ಚಿನ್ ಸ್ಕ್ರಾಪ್ ಇವು ಇಲ್ಲಿನ ಪೆಂಗ್ವಿನ್ ಪ್ರಭೇದಗಳು. ಬಹುತೇಕ ಪೆಂಗ್ವಿನ್‍ಗಳು ಕಲ್ಲು ಪೊಟರೆಗಳಲ್ಲಿ ಗೂಡುಮಾಡಿ ಸಂತಾನಾಭಿವೃದ್ಧಿ ಮಾಡುತ್ತವೆ. ಇಂಥ ಗೂಡುಗಳನ್ನು ರೂಕರಿ ಎನ್ನಲಾಗುವುದು. ಅದಿಲೆ ಪೆಂಗ್ವಿನ್‍ಗಳು 30 ರಿಂದ 68 ಸೆಂ. ಮೀ. ಎತ್ತರ. ಮೂರರಿಂದ ಆರು ಕಿ.ಗ್ರಾಂ. ತೂಕ. ವಸಂತ ಕಾಲದಲ್ಲಿ 3-4 ದಿನಗಳ ಅಂತರದಲ್ಲಿ ಎರಡು ಮೊಟ್ಟೆಗಳನ್ನಿಡುತ್ತದೆ. ಎಂಪೆರರ್ ಪೆಂಗ್ವಿನ್‍ಗಳು ಒಂದು ಮೀಟರ್ ಎತ್ತರದವರೆಗೂ ಬೆಳೆಯುತ್ತವೆ. ತೂಕ 27 ರಿಂದ 41 ಕಿ.ಗ್ರಾಂ. ಇವು ವರ್ಷಕ್ಕೊಂದು ಮೊಟ್ಟೆ ಇಡುತ್ತವೆ.ಉತ್ತರ ಅಟ್ಲಾಂಟಿಕ್ ದ್ವೀಪವನ್ನು ತೊರೆದು ಸ್ಕುವಾ ಎಂಬ ಹಕ್ಕಿಗಳು ಅಂಟಾರ್ಕ್‍ಟಿಕದವರೆಗೂ ಪ್ರಯಾಣ ಮಾಡುತ್ತವೆ. ಪೆಂಗ್ವಿನ್ ಮೊಟ್ಟೆಗಳನ್ನು ಇವು ಅಪಹರಿಸುತ್ತವೆ. ನೀರುಕೋಳಿ, ಟರ್ನ್ ಇವೂ ಕೂಡ ದೂರದಿಂದ ಈ ಖಂಡಕ್ಕೆ ವಲಸೆ ಬರುತ್ತವೆ. ಖಂಡದ ಸಮೀಪದ ದ್ವೀಪಗಳಲ್ಲಿ ಹಾಗೂ ತೀರ ಪ್ರದೇಶಗಳಲ್ಲಿ ಸೀಲ್ ಸಂತತಿ ಹೆಚ್ಚು. ಅವುಗಳ ತುಪ್ಪಳದಿಂದಾಗಿ ಬೇಟೆಗೆ ಸಿಕ್ಕಿ ವಿನಾಶದಂಚಿಗೆ ತಲಪಿದ್ದವು. ಈಗ ಅವುಗಳ ಸಂತತಿಯನ್ನು ರಕ್ಷಿಸಲಾಗಿದೆ. ಖಂಡದ ಅಂಚಿನಲ್ಲಿ ಆರು ಬಗೆಯ ಸೀಲ್‍ಗಳನ್ನು ಗುರುತಿಸಲಾಗಿದೆ. ವೆಡೆಲ್ ಸಮುದ್ರ ಹಾಗೂ ರಾಸ್ ಸಮುದ್ರಗಳಲ್ಲಿ ಮತ್ತು ಅವುಗಳಿಗೆ ಹೊಂದಿಕೊಂಡಿರುವ ದ್ವೀಪಗಳಲ್ಲಿ ಇವುಗಳ ಸಂತತಿ ಹೆಚ್ಚು. 600 ಮೀಟರ್ ಆಳದವರೆಗೆ ಇವು ಮುಳುಗಬಲ್ಲವು. ದಕ್ಷಿಣ ಸಾಗರದ ಬಹುತೇಕ ಜೀವಿಗಳಿಗೆ ಇಲ್ಲಿ ದೊರೆಯುವ ಕ್ರಿಲ್ ಎಂಬ ಸೀಗಡಿಯೇ ಆಧಾರ. ಈ ಸಾಗರದಲ್ಲಿ ಸುಮಾರು 270 ದಶಲಕ್ಷ ಟನ್ ಕ್ರಿಲ್ ಸಂಪನ್ಮೂಲವಿದೆಯೆಂದು ಅಂದಾಜು. ನೀಲ ತಿಮಿಂಗಿಲಗಳು ಕೂಡ ಅಂಟಾರ್ಕ್‍ಟಿಕ ಖಂಡದ ಆಸುಪಾಸಿನ ದ್ವೀಪಗಳಿವೆ ವಲಸೆ ಬರುತ್ತವೆ. 1994ರಲ್ಲಿ ಅಂತಾರಾಷ್ಟ್ರೀಯ ಕಾನೂನು ರಚಿಸಿ ತಿಮಿಂಗಿಲಗಳ ಬೇಟೆಯನ್ನು ಇಲ್ಲಿ ನಿಷೇಧಿಸಲಾಗಿದೆ. ಅಲ್ಲದೆ ಈ ಖಂಡಕ್ಕೆ ಸಂಶೋಧನೆಗೆಂದು ಬರುವವರು ಯಾವುದೇ ಜೀವಿ ಪ್ರಭೇದವನ್ನು ಇಲ್ಲಿಗೆ ತರುವಂತಿಲ್ಲ.ಅಂಟಾರ್ಕ್‍ಟಿಕ ಖಂಡಕ್ಕೇ ಸೀಮಿತವಾದ ಮೇಲ್ವರ್ಗದ ಸಸ್ಯಗಳಿಲ್ಲ. ಸಸ್ಯದ ಸಾಲು ಈ ಖಂಡದ ಪರ್ಯಾಯ ದ್ವೀಪದ ಕೊನೆಯ ಅಂಚಿನಿಂದ 1200 ಕಿ.ಮೀ. ಉತ್ತರಕ್ಕೆ ನಿಂತುಬಿಡುತ್ತದೆ. ಟೆರಾ ಡೆಲ್ಫಿಯಾಗೋ ದ್ವೀಪದ ಬಳಿ (54 ಡಿಗ್ರಿ ರೇಖಾಂಶ) ವೃಕ್ಷರಾಶಿ ಕೊನೆಗೊಳ್ಳುತ್ತದೆ. ಪರ್ಯಾಯ ದ್ವೀಪದ ಪಶ್ಚಿಮದುದ್ದಕ್ಕೂ ಕೆಲವು ಜಾತಿಯ ಹುಲ್ಲು ಬೆಳೆದಿದೆ. ಸುಮಾರು 300 ಜಾತಿಯ ಪಾಚಿ, 400 ಜಾತಿಯ ಶಿಲಾವಲ್ಕ, ಹಾವಸೆ ಅಂಟಾರ್ಕ್‍ಟಿಕ ಖಂಡದ ತೆರೆದ ಭಾಗದಲ್ಲಿ ಕಲ್ಲಿನ ಮೇಲೆ ಬೆಳೆಯುತ್ತವೆ. ಖಂಡದ ಒಳಭಾಗದಲ್ಲಿ ಸಿಹಿ ನೀರಿನ ಸರೋವರದಲ್ಲಿ ಕೆಲವು ಬಗೆಯ ಬ್ಯಾಕ್ಟೀರಿಯಗಳನ್ನು ಪತ್ತೆಹಚ್ಚಲಾಗಿದೆ.