5 kannada gadegalu with explaination
pls u know answer this question
answer... who know kannada
Answers
Answered by
25
Explanation:
it may help you in this question
Attachments:
Answered by
11
- Answer:
- 1 , ಚಿಂತೆಯೇ ಮುಪ್ಪು - ಸಂತೋಷವೇ ಯವ್ವನ
- ಗಾದೆ ವೇದಕ್ಕೆ ಸಮಾನ , ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ . ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು , ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ , ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ . * ಚಿಂತೆಯು ಆಯುಷ್ಯವನ್ನು ತಿನ್ನುತ್ತದೆ ' ಎನ್ನುವ ಮಾತಿನಂತೆ , ಮಾನಸಿಕ ಚಿಂತೆ ಮನುಷ್ಯರಿಗೆ ಅಕಾಲದ ಮುಪ್ಪನ್ನು ತರುತ್ತದೆ . ಚಿಂತೆಗೂ ಚಿತೆಗೂ ವ್ಯತ್ಯಾಸ ಸೊನ್ನೆ . ಆದರೆ ಚಿಂತೆ ಬದುಕಿದವರನ್ನು ಸುಟ್ಟರೆ , ಚಿತೆ ನಿರ್ಜೀವ ವಸ್ತುವನ್ನು ಸುಡುತ್ತದೆ . ಚಿಂತೆಯು ನಮ್ಮ ಮನಸ್ಸಿನ ಸಂತೋಷವನ್ನು ಹಾಳುಮಾಡುತ್ತದೆ . ಮನುಷ್ಯನನ್ನು ನಿರುತ್ಸಾಹಿಯಾಗಿ ಮಾಡಿ , ದುಡಿಯುವ ಶಕ್ತಿ , ಚೈತನ್ಯವನ್ನು ಕುಗ್ಗಿಸುತ್ತದೆ . ಚಿಂತಿಸುತ್ತಾ ಹೋದರೆ ಅದು ನಮ್ಮ ಆಯುಷ್ಯವನ್ನು ತಿಂದು ಅಕಾಲ ವೃದ್ದಾಪ್ಯವನ್ನುಂಟುಮಾಡಿ ಬದುಕನ್ನು ನಶ್ವರಗೊಳಿಸುತ್ತದೆ . ಆದ್ದರಿಂದ ಚಿಂತಿಸುವುದನ್ನು ಬಿಟ್ಟು ಬದುಕಿರುವಷ್ಟು ಕಾಲ ಸುಖ ಸಂತೋಷದಿಂದ ಜೀವನವನ್ನು ಕಳೆಯಬೇಕು , ಮನಸ್ಸಿನ ಸಂತೋಷ ವೃದ್ದನಲ್ಲೂ ಯೌವನವನ್ನು ಮೂಡಿಸುತ್ತದೆ . ಶಕ್ತಿಯನ್ನು ತುಂಬುತ್ತದೆ . ಯಾರ ಬದುಕಿನಲ್ಲಿ ಸಂತೋಷ ಇರುವುದೋ ಅವರು ಆರೋಗ್ಯದಿಂದ ಬಾಳುತ್ತಾರೆ . ಬದುಕಬೇಕು , ಸಾಧಿಸಬೇಕು , ಗೆಲ್ಲಬೇಕು ಎಂಬ ಛಲವನ್ನು ಹೊಂದಿರುತ್ತಾರೆ . ಆದ್ದರಿಂದ ನಾವು ನಗುನಗುತ್ತಾ ಸಂತೋಷದಿಂದ ಬಾಳಬೇಕು . ಚಿಂತೆಯಿಂದ ದೂರ ಇರಬೇಕು . ಸಂತೋಷವು ಯೌವನೌವಸ್ಥೆಯ ಸಾಮರ್ಥ್ಯವನ್ನು ತಂದು ಕೊಡುತ್ತದೆ .
- 2 . ಕಟ್ಟುವುದು ಕಠಿಣ - ಕೆಡಹುವುದು ಸುಲಭ ಗಾದೆ ವೇದಕ್ಕೆ ಸಮಾನ , ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ . ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು , ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ . ಈ ಮೇಲಿನ ಗಾದೆಯು ಪ್ರಸಿದ್ದವಾಗಿದೆ . ಯಾವುದೇ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಕಷ್ಟಪಡಬೇಕು . ಆದರೆ ಹಾಳು ಮಾಡಲು ಕಷ್ಟ ಪಡಬೇಕಾಗಿಯೂ ಇಲ್ಲ , ' ಕುಂಬಾರನಿಗೆ ವರುಷ , ದೊಣ್ಣೆಗೆ ನಿಮಿಷ " ಎಂಬ ಗಾದೆಯು ಇದೆ ಅರ್ಥವನ್ನು ಹೋಲುತ್ತದೆ . ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಮಣ್ಣು ತಂದು ಅರಳನ್ನು ಬೇರ್ಪಡಿಸಿ ಮಣ್ಣನ್ನು ಹದಮಾಡಿ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ . ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪಟ್ಟು ಸಾಕು . ಯಾವುದೇ ಒಂದು ಉತ್ತಮ ಕೆಲಸ ಮಾಡುವುದು ತುಂಬಾ ಕಠಿಣ . ಆದರೆ ಅದೇ ಕೆಲಸವನ್ನು ಹಾಳು ಮಾಡುವುದು ಸುಲಭ ಪ್ರಾಚೀನ ಭಾರತೀಯರು ಕಠಿಣ ಶ್ರಮವಹಿಸಿ ಭಾರತದ ಪ್ರಾಚೀನ ವಾಸ್ತುಶಿಲ್ಪಗಳನ್ನು ನಿರ್ಮಿಸಿದರು . ಆದರೆ ವಿದೇಶಿಯರು ಒಂದು ಕ್ಷಣಮಾತ್ರದಲ್ಲಿ ವಾಸ್ತುಶಿಲ್ಪಗಳನ್ನು ಕೆಡವಿ ಹಾಕಿದರು . ಹಾಗಯೇ ಮನುಷ್ಯ ತನ್ನ ಉತ್ತಮವಾದ ಜೀವನದ ಭವಿಷ್ಯವನ್ನು ನಿರ್ಮಿಸಲು ಜೀವನವೆಲ್ಲ ಕಷ್ಟಪಡಬೇಕು . ಆದರೆ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವುದಕ್ಕೆ ಒಂದರಗಳಿಗೆ ಸಾಕು .
Similar questions