ಆ) ಈ ಕೆಳಗಿನವುಗಳಲ್ಲಿ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ.
50. ಸಾಂಕ್ರಾಮಿಕ ರೋಗಗಳ ಬಗ್ಗೆ ನಾವು ವಹಿಸಬೇಕಾದ ಮುನ್ನೆಚ್ಚರಿಕೆಗಳು
51 ಬದುಕುವ ಕಲೆ
Answers
ಪ್ರತಿಯೊಬ್ಬರ ಬದುಕಿನ ಪರಿಯ ಬಗ್ಗೆ ಮಾತನಾಡುವುದೇ ಅವೈಜ್ಞಾನಿಕ ಎಂಬ ನೆಲೆಗಟ್ಟಿನಲ್ಲಿ ಬದುಕುತ್ತಿರುವ ಈ ಕಾಲದಲ್ಲಿ ಯಾವ ಮಾತು ತನ್ನ ಅರ್ಥವನ್ನ ಎಷ್ಟು ಉಳಿಸಿಕೊಂಡಿದೆ ಎಂಬ ನಂಬಿಕೆ ಸ್ವತಃ ನನಗೇ ಇಲ್ಲವಾದರೂ, ಕೆಲವೊಂದು ವಿಷಯಗಳು ಮೇಲುನೋಟಕ್ಕೆ ತಮಾಷೆ ಅನ್ನಿಸಿದರೂ ಕಳೆದುಹೋಗುತ್ತಿರುವ ಬದುಕಿನ ಪ್ರಾಮುಖ್ಯತೆಗೆ ಹೇಗೆ ನಾವೇ ಪರೋಕ್ಷವಾಗಿ ಕಾರಣವಾಗುತ್ತಿರುತ್ತೇವೆಂದು ಅನುಭವದಿಂದ ಕಂಡ ನಂತರ ಕೆಲವೊಂದಿಷ್ಟನ್ನಾದರೂ ಹೇಳಬೇಕೆಂದು ಅನ್ನಿಸಿದ್ದರಿಂದ ಇದನ್ನೆಲ್ಲ ಬರೆಯುತ್ತಿದ್ದೇನೆ.
Answer:
ಪ್ರಶ್ನೆ ಯ ಪ್ರಕಾರ ಕೆಳಗಿನವುಗಳಲ್ಲಿ ಒಂದನ್ನು ಕುರಿತು ಪ್ರಬಂಧವನ್ನು ಬರೆಯಿರಿ.
ಬದುಕುವ ಕಲೆ:
ಮನುಷ್ಯನು ಸಂಗೀತ, ಸಾಹಿತ್ಯ, ನೃತ್ಯ ಶಿಲ್ಪ, ಚಿತ್ರವೇ ಮೊದಲಾದ ಯಾವುದೇ ಒಂದು ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುವ/ಪರಿಣತನಾಗುವ ಕಾರ ಮಾಡಲಿ ಬಿಡಲಿ ಪ್ರತಿಯೊಬ್ಬನೂ ಬದುಕುವ ಕಲೆಯನ್ನು ಕಲಿಯಬೇಕು. ಇದು ಸ್ತ್ರೀಪುರುಷರಿಬ್ಬರಿಗೂ ಅನ್ವಯವಾಗುತ್ತದೆ. 'ಕಲೆ' ಎಂದರೆ 'ಆರ್ಟ್' ಎಂಬರ್ಥದೊಡನೆ 'ಜಾಣೆ-ಚಾತುರ-ತಂತ್ರ' ಎಂಬ ಅರ್ಥಗಳುಂಟು. ಆದ್ದರಿಂದ ಇಲ್ಲಿ ಬದುಕುವ ಕಲೆ' ಎಂದರೆ ಬದುಕುವ ಜಾಣ್ಮ ಅರ್ಥೈಸಬಹುದು.
ಮಾನವರೆಲ್ಲರಿಗ ಒಂದೇ ಸಮನಾದ ಮಟ್ಟದ ಬುದ್ಧಿ, ಶಕ್ತಿ, ಐಶ್ವರ, ವಿದ್ಯೆ, ಸ್ನಾನ-ಮಾನಗಳಿರುವುದಿಲ್ಲ. 'ಆಸೆ' ಎಂಬುದು ಎಲ್ಲರಲ್ಲಿಯೂ ಅಪಾರ ವಾಗಿರುವುದರಿಂದ ಇತರರನ್ನು ನೋಡಿ ಅವರಂತಾಗುವ ಹೆಬ್ಬಯಕೆ, ಪುಯತ್ನಗಳನ್ನು ಮಾಡಿ ಹತಾಶನಾಗಿ ಮಾನಸಿಕವಾಗಿ ಅಸ್ವಸ್ಥನಾಗುವುದುಂಟು. ಕಂಡವರ ಸ್ಥಿತಿಗತಿಗಳನ್ನು ನೋಡಿ ಕರುಬಿ ತನ್ನ ಜೀವನವನ್ನು ಹಾಳುಮಾಡಿಕೊಳ್ಳುವುದು 'ಬದುಕುವ ಕಲೆ'ಯಾಗಲಾರದು.
ಪ್ರತಿಯೊಬ್ಬ ಮನುಷ್ಯನು ತನ್ನ ಸ್ಥಿತಿಗತಿಗಳನ್ನು ಅರಿತು ತಾನು ಎಷ್ಟು ಎತ್ತರಕ್ಕೆ ಏರಲು ಸಾಧ್ಯವೆಂಬುದನ್ನು ಗುರುತಿಸಿಕೊಂಡು ಪ್ರಯತ್ನಿಸಬೇಕೇ ವಿನಾ 'ಅಟ್ಟಕ್ಕೆ ಹಾರದ್ದು ಬೆಟ್ಟಕ್ಕೆ ಹಾರೀತ' ಎಂಬ ಸ್ಥಿತಿಗೊಳಗಾಗಬಾರದು. ಮನುಷ್ಯ ತನ್ನ ಸಂಪತ್ತಿನ ಹಾಗೂ ಇತರ ಅನುಕೂಲಗಳ ಶಕ್ತಿ ಎಷ್ಟೊಂಬುದನ್ನು ಅಳತೆ ಮಾಡಿ ಆ ಚೌಕಟ್ಟಿನಲ್ಲಿ ಸಾಧನೆಗೈಯುತ್ತಾ ಸಫಲ ಜೀವನವನ್ನು ಮಾಡುವುದೇ 'ಬದುಕುವ ಕಲೆ' ಏನಿಸುತ್ತದೆ.
ಶಾಂತ ಜೀವನ ನಡೆಸಲು ತಾಳ್ಮೆ ತುಂಬ ಅತ್ಯಗತ್ಯ. 'ತಾಳುವಿಕೆಗಿಂತ ತಪವಿಲ್ಲ' ಎಂಬ ದಾಸರ ನುಡಿಯ ಮಹತ್ವ ಹೇಳಿ ಮುಗಿಸಲಾಗದು. ಇತರರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಕೇಳಿ, ಅವರ ಅಭಿಪ್ರಾಯಗಳು ಸರಿ ಎನಿಸದಿದ್ದರೆ ಯುಕ್ತಾಯುಕ್ತ ವಾಗಿ ಮಾತನಾಡಿ ತಮ್ಮದಾರಿಗೆ ಬರುವ ಹಾಗೆ ಮಾಡುವ ಜಾಣೆಯಿಂದ ಬದುಕಿನಲ್ಲಿ ಯಶಸ್ಸು ದೊರಕುತ್ತದೆ. ನಾವು ಎಂದಿಗೂ ಏಕಾಂಗಿಯಾಗಿ ಬದುಕಲಾರವು. ಇತರರೊಡನೆ ಬದುಕಲು ಅವರ ಸ್ನೇಹ ಅಗತ್ಯ. ಸ್ನೇಹ ಉಳಿಯಬೇಕಾದರೆ ಇತರರಲ್ಲಿ ಗೌರವ, ಇತರರ ಅಭಿಪ್ರಾಯಗಳಿಗೆ ಗೌರವ ನೀಡಬೇಕಾಗುತ್ತದೆ. ಗೌರವಿಸುವ ಸಂಸ್ಕೃತಿಯನ್ನು ರೂಢಿಸಿಕೊಂಡಾಗಲೇ ಬದುಕು ಸಹನೀಯವಾಗುತ್ತದೆ-ಸುಖಮಯವಾಗುತ್ತದೆ.
ಬದುಕು ಸುಖವೆನಿಸಲು 'ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಳ್ಳುತ್ತಾ' ಉನ್ನತ ಧೈಯಗಳ ಸಾಧನೆಗೆ ಉತ್ಸಾಹದಿಂದ ತೊಡಗಬೇಕು. ಇರುವ ಸ್ಥಿತಿಯಿಂದ ಸಂಪೂರ್ಣ ತೃಪ್ತಿಯನ್ನನುಭವಿಸಿದರೆ ಪ್ರಗತಿಯನ್ನು ಸಾಧಿಸಲಾಗುವುದಿಲ್ಲ. ಪ್ರಗತಿಯನ್ನು ಸಾಧಿಸಲು ಯತ್ನಿಸಿ ನಮ್ಮ, ಅವಮಾನ, ಹತಾಶೆಗಳಾದರೆ ಅದನ್ನು ತಾಳಿಕೊಳ್ಳುವ ಶಕ್ತಿ ಅತ್ಯಗತ್ಯ. ಆದ್ದರಿಂದ ಇವೆರಡರಲ್ಲಿ ಅಪೂರ್ವವಾದ ಹೊಂದಾಣಿಕೆಯನ್ನು ರೂಢಿಸುವುದೇ 'ಬದುಕುವ ಕಲೆ'ಯಾಗುತ್ತದೆ. ಸಾಧನೆ, ಇತರ ಆದರ್ಶ ವ್ಯಕ್ತಿಗಳ ಬದುಕಿನ ಪರಿಚಯ, ಸ್ವಾನುಭವ ಇತ್ಯಾದಿಗಳಿಂದ ಈ ಕಲೆ ಕರಗತವಾಗುತ್ತದೆ. ಇಂದಿನ ಸೋಲು ಮುಂದಿನ ಜಯದ ಮೊದಲ ಮೆಟ್ಟಿಲು ಎಂಬ ಧೈರವೇ ಬದುಕಿನ ಕಲೆಯಾಗುತ್ತದೆ.