ಜಿಲ್ಲಾ ಗ್ರಾಹಕ ಸಂರಕ್ಷಣಾ ಮಂಡಳಿಗೆ ಯಾರು ಅಧ್ಯಕ್ಷರಾಗಿರುತ್ತಾರೆ (A) ಜಿಲ್ಲಾಧಿಕಾರಿಗಳು (B) ಜಿಲ್ಲಾ ಪಂಚಾಯತ್ ಅಧ್ಯಕ್ಷರು (C) ಜಿಲ್ಲಾ ನ್ಯಾಯಾಧೀಶರು (D) ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಕಾರಿಗಳು
Answers
Answer:
Explanation:
Kannada NewsNewsShivamoggaWorld War For Water If Forget Water Conservation
ಜಲ ಸಂರಕ್ಷಣೆ ಮರೆತರೆ ನೀರಿಗಾಗಿ ಮಹಾಯುದ್ಧ
No-Author | Vijaya KarnatakaUpdated: 12 Jun 2019, 05:00:00 AM
Subscribe
ಅಣೆಕಟ್ಟೆಗಳು ಬಂದ ಮೇಲೆ ಕರೆ, ಕಟ್ಟೆಗಳ ಸಂರಕ್ಷಣೆ ಮರೆತಿದ್ದರಿಂದ ಇಂದು ಹನಿ ನೀರಿಗೂ ಆಹಾಕಾರ ಸೃಷ್ಟಿಯಾಗಿದೆ. ಇದು ಹೀಗೇ ಮುಂದುವರಿದರೆ ಮುಂದೆ ನೀರಿಗಾಗಿಯೇ ಮಹಾಯುದ್ಧ ನಡೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಶಿವಮೊಗ್ಗ: ಅಣೆಕಟ್ಟೆಗಳು ಬಂದ ಮೇಲೆ ಕರೆ, ಕಟ್ಟೆಗಳ ಸಂರಕ್ಷಣೆ ಮರೆತಿದ್ದರಿಂದ ಇಂದು ಹನಿ ನೀರಿಗೂ ಆಹಾಕಾರ ಸೃಷ್ಟಿಯಾಗಿದೆ. ಇದು ಹೀಗೇ ಮುಂದುವರಿದರೆ ಮುಂದೆ ನೀರಿಗಾಗಿಯೇ ಮಹಾಯುದ್ಧ ನಡೆಯುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಆಯನೂರು ಮತ್ತು ಕೋಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಂಗಳವಾರ ಆಯನೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಸ್ವಚ್ಛ ಮೇವ ಜಯತೇ ಮತ್ತು ಜಲಾಮೃತ ಮಾಸಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆಲ್ಲ ಹಳ್ಳಿಗಳ ವಾತಾರಣವೇ ಬೇರೆಯಾಗಿತ್ತು. ಕಾಲಕಾಲಕ್ಕೆ ಮಳೆ, ಬೆಳೆ ಎಲ್ಲವೂ ಆಗುತ್ತಿತ್ತು. ಊರಲ್ಲಿ ನೀರಿಲ್ಲ ಎಂದರೆ ಹಳ್ಳ, ಕೊಳ್ಳದಲ್ಲಿ ನೀರಿಗೆ ಬರ ಇರಲಿಲ್ಲ. ಈಗ ಆ ವಾತಾವರಣ ಇಲ್ಲ. ಅಭಿವೃದ್ಧಿ ಹೆಸರಿನಲ್ಲಿ ಕಾಡು ಕಡಿದಿದ್ದೇವೆ, ನದಿ ನೀರಿಗೆ ಅಣೆಕಟ್ಟು ಕಟ್ಟಿ, ಜನರ ಜೀವನಾಡಿಯಾಗಿದ್ದ ಕೆರೆ, ಕಟ್ಟೆಗಳನ್ನು ಮುಚ್ಚುತ್ತಿದ್ದೇವೆ. ಹೀಗಾಗಿ ಇಂದು ಜಲ ಮೂಲಗಳು ಬತ್ತಿ ಬರಿದಾಗಿವೆ. ಸಾವಿರ ಅಡಿ ಕೊರೆದು ಒಂದಿಂಚೂ ನೀರು ಸಿಗದ ಪರಿಸ್ಥಿತಿಯನ್ನು ನಾವೇ ತಂದೊಡ್ಡಿಕೊಂಡಿದ್ದೇವೆ ಎಂದರು.
ಕೆರೆ ಕಟ್ಟೆಗಳು ಜನರ ಜೀವನಾಡಿಯಾಗಿದ್ದು, ಗ್ರಾಮೀಣ ಭಾಗದ ಜನತೆ ಅವುಗಳನ್ನು ವ್ಯವಸ್ಥಿತವಾಗಿ ರಕ್ಷಿಸಿಕೊಂಡಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ. ಅಲ್ಲದೇ ಎಲ್ಲ ಕಾಲದಲ್ಲೂ ನೀರು ಬಳಕೆಗೆ ದೊರೆಯಲಿದೆ. ಸ್ವಚ್ಛ ಮೇವ ಜಯತೆ ಕಾರ್ಯಕ್ರಮ ಆರೋಗ್ಯ ರಕ್ಷ ಣೆ, ಜಲ ಸಂರಕ್ಷ ಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಾಯಕವಾಗಿದೆ ಎಂದರು.
ಮರಗಳ ಮರಣ ಹೋಮಕ್ಕೆ ಮಳೆ ಮುನಿಸಿಕೊಂಡಿದ್ದು, ಭೂಮಿ ಕಾದು ಕಬ್ಬಿಣದಂತಾಗಿದೆ. ನೂರಾರು ಅಡಿ ಕೊಳವೆಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನರು ನೀರಿನ ಮಹತ್ವದ ಬಗ್ಗೆ ಅರಿತುಕೊಂಡು ಕರೆ, ಕಟ್ಟೆಗಳನ್ನು ಸಂರಕ್ಷಿಸಿಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದೆ ನೀರಿಗಾಗಿಯೇ ಮಹಾಯುದ್ಧ ನಡೆದರೂ ಆಶ್ಚರ್ಯಪಡಬೇಕಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಿಂದೆಲ್ಲ ಊರಿನ ಜನರೆಲ್ಲ ಸೇರಿ, ಬಾವಿ, ಕೆರೆಗಳನ್ನು ಸ್ವಚ್ಛ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಮನೆ ಮುಂದೆ ಇರುವ ಕಸವನ್ನು ತೆಗೆದು ಹಾಕುವುದಕ್ಕೆ ಸರಕಾರ ಇದೆ, ಅಧಿಕಾರಿಗಳು ಇದ್ದಾರೆ. ನಾವೇಕೆ ತೆಗೆದುಹಾಕಬೇಕು ಎಂಬ ಮನೋಭಾವ ಜನರಲ್ಲಿ ಮೂಡಿದೆ. ಹೀಗಾಗಿ ಸ್ವಚ್ಛತೆಯ ಪರಿಕಲ್ಪನೆ ಬರೀ ಕಲ್ಪನೆಯಾಗಿಯೇ ಉಳಿದು ಬಿಟ್ಟಿದೆ ಎಂದರು.
Answer:
ಜಿಲ್ಲಾಧಿಕಾರಿಗಳು