India Languages, asked by prajwal876N, 22 days ago

ನನ್ನ ನೆಚ್ಚಿನ ಪ್ರವಾಸ About 5 Pages in Kannada ​

Answers

Answered by sveljaishika
2

Answer:

ಕನ್ನಡ ಪ್ರವಾಸ ಸಾಹಿತ್ಯ 19ನೆಯ ಶತಮಾನದಲ್ಲಿಯೇ ಆರಂಭವಾಯಿತು.

ಜವಹರಲಾಲ್ ನೆಹರೂರವರು ಕೆ.ಪಿ.ಎಸ್.ಮೆನೆನ್ ರವರ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ ಹೀಗೆ ಹೇಳಿದ್ದಾರೆ: ‘ಪ್ರವಾಸ ಮಾಡುವುದು ಒಳ್ಳೆಯದು; ಹಾಗೆ ಪ್ರವಾಸ ಮಾಡಲಾರದೇ ಹೋದಾಗ ಪ್ರವಾಸದ ಬಗೆಗೆ ಬಂದಿರುವ ಸಾಹಿತ್ಯವನ್ನಾದರೂ ಓದುವುದು ಉತ್ತಮ ಹವ್ಯಾಸ’. ಕನ್ನಡಿಗರು ಈ ಹವ್ಯಾಸ ಬೆಳೆಸಿಕೊಳ್ಳಲು ಸಾಕಷ್ಟು ಸರಕಿದೆ.

ಪ್ರವಾಸ ಸಾಹಿತ್ಯದ ಬೆಳೆ 80 ಮತ್ತು 90ರ ದಶಕದಲ್ಲಿ ಅಪೂರ್ವವೂ ಸಾಹಿತ್ಯ ಶ್ರೀಮಂತವೂ ಆಗಿದೆಯೆಂದು ಅಭಿಮಾನದಿಂದಲೇ ಹೇಳಬಹುದಾದಷ್ಟು ವಿಪುಲ ಸಂಖ್ಯೆ, ಭಿನ್ನ ವಿಭಿನ್ನ ದೃಷ್ಟಿಕೋನ ಹಾಗೂ ಅನುಭವದ ಪ್ರವಾಸ ಕೃತಿಗಳು ಪ್ರಕಟವಾಗಿರುವುದನ್ನು ನೋಡಬಹುದಾಗಿದೆ. ಪ್ರತಿಯೊಬ್ಬ ಲೇಖಕನೂ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಹೊಸ ನಾಡಿನ ಹೊಸ ಕತೆಯೊಂದನ್ನು ಕೊಟ್ಟಿದ್ದಾನೆ. ಕೆಲವೊಂದು ಕಥನಗಳಂತೂ ಜಾಗತಿಕ ಪ್ರವಾಸ ಸಾಹಿತ್ಯ ಕೃತಿಗಳ ಮಟ್ಟಕ್ಕೆ ನಿಲ್ಲುವಷ್ಟು ಚೆನ್ನಾಗಿವೆ. ಶೈಕ್ಷಣಿಕ ಮಹತ್ವ ಹಾಗೂ ವಿಭಿನ್ನ ಅನುಭವದ ನೆಲೆಗಳು ಇಂದು ಪ್ರವಾಸ ಸಾಹಿತ್ಯದ ಒಳಸೂತ್ರವಾಗಿ ನಿಂತಿವೆ. ಪ್ರವಾಸಾನುಭವ ಕಥನ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ - ಹೀಗೆ ಭಿನ್ನ ಕೋನಗಳಿಂದ ಅನ್ಯ ಸಂಸ್ಕೃತಿಯನ್ನು ಸಾಂದ್ರವಾಗಿ ತಾಗುವ ದಿಕ್ಕಿನಲ್ಲಿ ಸಾಗಿದೆ.

ಈ ಪ್ರಯತ್ನದ ಹಾದಿಯಲ್ಲಿ ಪ್ರವಾಸ ಸಾಹಿತ್ಯದ ಸಂಖ್ಯೆಯೂ ಮಹಿಳಾ ಬರೆಹಗಾರ್ತಿಯರ ಸಂಖ್ಯೆಯೂ ವೃದ್ಧಿಸಿದೆ. ಸ್ವಾತಂತ್ರ್ಯೋತ್ತರ ಕಾಲದಿಂದ ಇಲ್ಲಿಯವರೆಗೆ 50ಕ್ಕೂ ಹೆಚ್ಚು ಮಹಿಳಾ ಪ್ರವಾಸ ಕಥನಗಳು ದೊರಕುತ್ತವೆ.

ಪ್ರವಾಸಕ್ಕಾಗಿ ಒದಗುತ್ತಿರುವ ಕಾರಣಗಳೂ ಗಮನಾರ್ಹವಾಗಿ ಹೆಚ್ಚಾಗಿವೆ. ಯುನೆಸ್ಕೋ ಸೇವೆಗಾಗಿಯೋ ವಿವಿಧ ಸಾಹಿತ್ಯ ಸಂಘಗಳ ಮೂಲಕವೋ ಸಾಂಸ್ಕೃತಿಕ ತಂಡಗಳ ಪರವಾಗಿಯೋ ಅಕಾಡೆಮಿಗಳ ನೆರವಿನಿಂದಲೋ ಕೆಲಮೊಮ್ಮೆ ಸ್ವಂತ ಖರ್ಚಿನಿಂದಲೋ ದೇಶೀಯ ಹಾಗೂ ವಿದೇಶೀಯ ಸ್ಥಳಗಳ ಪ್ರವಾಸ ಸಮೃದ್ಧವಾಗಿದೆ.

ಪ್ರವಾಸ ಗ್ರಂಥಗಳು ಸಂಪಾದಿಸಿ

ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿಯವರು 1890ರಲ್ಲಿ ದಕ್ಷಿಣ ಭಾರತ ಯಾತ್ರೆ ಎಂಬ ಪ್ರವಾಸ ಗ್ರಂಥವನ್ನು ಪ್ರಕಟಿಸಿದರು. ಇದು ಕನ್ನಡದ ಮೊದಲ ಪ್ರವಾಸ ಕಥನವಾಗಿದೆ.ನಂತರ 35 ವರ್ಷಗಳ ಕಾಲ ಯಾವ ಪ್ರವಾಸ ಗ್ರಂಥವೂ ಬರಲಿಲ್ಲ.

1920ರಲ್ಲಿ ವಿ.ಸೀ.ಯವರ ಪಂಪಾಯಾತ್ರೆ ಪ್ರಕಟವಾಯಿತು. ಈ ವಿಭಾಗದಲ್ಲಿ ಇದು ಆದ್ಯ ಹಾಗೂ ಮೇರುಕೃತಿ. ಲೇಖಕರು ತಮ್ಮ ಮಿತ್ರರೊಂದಿಗೆ ಹಂಪೆಗೆ ಹೋಗಿ, ಅಲ್ಲಿನ ಪಾಳು ಹಂಪೆಯನ್ನು ಕಂಡು ತಮಗಾದ ಅನುಭವವನ್ನು ಈ ಗ್ರಂಥದಲ್ಲಿ ಪಡಿಮೂಡಿಸಿದ್ದಾರೆ. ಇದೊಂದು ರಸಭರಿತ ಪ್ರಬಂಧ. ಇಲ್ಲಿ ಲೇಖಕರ ಅಗಾಧವಾದ ಲೋಕಾನುಭವ, ತತ್ತ್ವಚಿಂತನ ಮತ್ತು ಜೀವನ ದೃಷ್ಟಿಗಳ ತ್ರಿವೇಣಿ ಸಂಗಮವನ್ನು ಕಾಣಬಹುದು. ಎರಡು ದಿನಗಳ ಅಲ್ಪಾವದಿಯಲ್ಲಿ ಇನ್ನೂರ ಐವತ್ತು ವರ್ಷಗಳ ಚರಿತ್ರೆಯನ್ನು ಸ್ವತಃ ಲೇಖಕರು ಇಲ್ಲಿ ಅನುಭವ ಮಾಡಿಸಿಕೊಡುತ್ತಾರೆ. ಸುಖ ದುಃಖಗಳೆರಡನ್ನೂ ಓದುಗರಿಗೆ ಉಣಬಡಿಸುತ್ತಾರೆ. ಕೊನೆಯಲ್ಲಿ ಬರುವ ಸ್ವಪ್ನ ಮಾಲಿಕೆಗಳಲ್ಲಿ ಗತಕಾಲದ ವೈಭವ, ವಿನಾಶಗಳು ಹೃದಯವಿದ್ರಾವಕವಾಗಿ ನಿರೂಪಿತವಾಗಿವೆ. ಕವಿಯ ಅನುಭವಕ್ಕೆ ಐತಿಹಾಸಿಕ ದೃಷ್ಟಿಯೂ ಉಜ್ವಲ ಅಭಿsಮಾನವೂ ಬೆಸೆದುಕೊಂಡಿವೆ.

ಬಿ.ಪುಟ್ಟಯ್ಯನವರ ಅಭಿವೃದ್ಧಿ ಸಂದೇಶ ಪಶ್ಚಿಮ ದೇಶದಲ್ಲಿಯ ಪ್ರವಾಸದ ಪ್ರಥಮ ಗ್ರಂಥ.

ವಿ.ಕೃ.ಗೋಕಾಕರ 'ಸಮುದ್ರದಾಚೆ'ಯಿಂದ, ಇಂದಲ್ಲ ನಾಳೆ ಮತ್ತು ಸಮುದ್ರದೀಚೆಯಿಂದ ಗ್ರಂಥಗಳು ಕನ್ನಡ ಪ್ರವಾಸ ಸಾಹಿತ್ಯದ ಗಮನಾರ್ಹ ಕೃತಿಗಳು.

1936-37ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದ ತಮ್ಮ ಅನುಭವಗಳನ್ನು ಪತ್ನಿ ಹಾಗೂ ಸ್ನೇಹಿತರನ್ನು ಸಂಬೋದಿಸಿ ಬರೆದ ಪತ್ರಗಳ ಸಂಕಲನವೇ ಸಮುದ್ರದಾಚೆಯಿಂದ ಎಂಬ ಗ್ರಂಥ. ಇಂದಲ್ಲ ನಾಳೆ ಎಂಬ ಗ್ರಂಥದಲ್ಲಿ ಅಮೆರಿಕದ ಗಡಿಬಿಡಿಯ ಬದುಕು, ನಿರಾಸಕ್ತಿ, ನಾಗರಿಕತೆಗಳ ಚಿತ್ರಣ ಕಾವ್ಯಮಯವಾಗಿ ಮೂಡಿಬಂದಿದೆ. ಇಲ್ಲಿನ ನವೀನ ಚಂಪು ಶೈಲಿ ವಸ್ತು ನಿರೂಪಣೆಯ ಹೊಸತೊಂದು ಮಾರ್ಗವನ್ನು ತೆರೆದಿದೆ. 1967ರಲ್ಲಿ ಪಿ.ಇ.ಎನ್. ಸಮ್ಮೇಳನಕ್ಕಾಗಿ ಜಪಾನಿಗೆ ಹೋದಾಗಿನ ಅನುಭವ ಸಮುದ್ರದೀಚೆಯಿಂದ ಎಂಬ ಗ್ರಂಥದಲ್ಲಿ ಮೂಡಿವೆ.

ಒಟ್ಟಿನಲ್ಲಿ ಗೋಕಾಕರಿಗೆ ಕಾವ್ಯದ ಮುಖ್ಯ ಪ್ರೇರಣೆಯೇ ಪ್ರವಾಸ ಎನ್ನುವ ಜಿ.ಎಸ್.ಶಿವರುದ್ರಪ್ಪನವರ ಮಾತು ಒಪ್ಪತಕ್ಕುದಾಗಿದೆ.

ಶಿವರಾಮ ಕಾರಂತರ ಅಪೂರ್ವ ಪಶ್ಚಿಮ (1953) ಪ್ರವಾಸ ಸಾಹಿತ್ಯದ ಬಹುಮುಖ್ಯ ಕೃತಿ. ಇದೊಂದು ಕಲೆಗಾರನ ಅನುಭವದ ಕಥೆ. ಇಲ್ಲಿ ಭಾವದ ಕಾವೂ ಆಲೋಚನೆಯ ತೀಕ್ಷ್ಣತೆಯೂ ಮಿಳಿತವಾಗಿವೆ. ಪಾಶ್ಚಾತ್ಯ ಪ್ರವಾಸದ ಅನುಭವಗಳು ಇಲ್ಲಿ ವಿಸ್ತಾರವಾಗಿ ಸವಿವರವಾಗಿ ಬಂದಿವೆ. ಕಾರಂತರ ಆತ್ಮಕಥನವಾದ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಗ್ರಂಥದಲ್ಲೂ ಆಳನಿರಾಳದಂಥ ಅವರ ಬಹುಪಾಲು ಕಾದಂಬರಿಗಳಲ್ಲೂ ಪ್ರವಾಸಾನುಭವ ಕಥೆಯೊಂದಿಗೆ ಮಿಳಿತವಾಗಿ ಬಂದಿದೆ.

ದಿನಕರ ದೇಸಾಯಿಯವರ ನಾ ಕಂಡ ಪಡುವಣ, ಮನೋಹರ ಗ್ರಂಥಮಾಲೆಯವರ ನಡೆದು ಬಂದ ದಾರಿಯ ಮೂರನೆಯ ಸಂಪುಟದಲ್ಲಿ ಅಚ್ಚಾಗಿದೆ. ದೇಸಾಯಿಯವರು ಭಾರತದ ಪ್ರತಿನಿದಿಯಾಗಿ ಅಂತಾರಾಷ್ಟ್ರೀಯ ಕೂಲಿಕಾರ ಪರಿಷತ್ತಿನಲ್ಲಿ ಭಾಗವಹಿಸಲು ಪ್ರವಾಸಮಾಡಿದಾಗಿನ ಅನುಭವಮಾಲಿಕೆಯೇ ಈ ಕೃತಿ. ಈ ಗ್ರಂಥದಲ್ಲಿ ದೇಸಾಯಿಯವರು ಕೂಲಿಕಾರರ ಸಂಘಟನೆ, ಸಾರಿಗೆ ವ್ಯವಸ್ಥೆ, ಶಿಸ್ತು, ಪಾಕಶಾಸ್ತ್ರ ಮುಂತಾದವುಗಳ ಬಗ್ಗೆ ಕಥೆಯ ರೀತಿಯಲ್ಲಿ ತಮ್ಮ ಅನುಭವಗಳನ್ನು ನೀಡಿದ್ದಾರೆ.

ಅಮೆರಿಕವನ್ನು ಕುರಿತು ಬಂದ ಗ್ರಂಥಗಳಲ್ಲಿ ಬಿ.ಜಿ.ಎಲ್. ಸ್ವಾಮಿಯವರ ಅಮೆರಿಕದಲ್ಲಿ ನಾನು ಎಂಬುದು ಅತ್ಯುತ್ತಮ ಗ್ರಂಥ. ಸ್ವಾಮಿಯವರು ಸಸ್ಯವಿಜ್ಞಾನದಲ್ಲಿ ಸಂಶೋಧನೆ ನಡೆಸಲು ಅಮೆರಿಕಕ್ಕೆ ಹೋಗಿ ಆರು ವರ್ಷಗಳ ಕಾಲ ಅಲ್ಲಿದ್ದು, ಅಲ್ಲಿನ ಜನಜೀವನ ಸಂಸ್ಕೃತಿ ವ್ಯವಹಾರ ಸ್ವಭಾವ ಧರ್ಮ ಹಾಗೂ ಭಾರತೀಯ ಮತ್ತು ಅಮೆರಿಕದ ಜೀವನದಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಕುರಿತು ಬರೆದಿದ್ದಾರೆ. ‘ನಮ್ಮಂತೆಯೇ ಅಮೆರಿಕನ್ನರು ಅಮೆರಿಕನ್ನರಂತೆಯೇ ನಾವು’ ಎಂಬುದು. ಅವರ ಅನುಭವ: ಕೃಷ್ಣಾನಂದ ಕಾಮತರ ನಾನೂ ಅಮೆರಿಕೆಗೆ ಹೋಗಿದ್ದೆ ಎಂಬುದು ಅಮೆರಿಕ ಪ್ರವಾಸವನ್ನು ವಿವರಿಸುವ ಮತ್ತೊಂದು ಉತ್ತಮ ಕೃತಿ. ಹೋಗುವ ಮುಂಚೆ ಹಲವು ಕಲ್ಪನೆಗಳನ್ನು ಕಟ್ಟಿಕೊಂಡು ಹೋಗಿ ಅಲ್ಲಿ ಹೋದ ಬಳಿಕ ತಾವು ಎದುರಿಸಿದ ಸಮಸ್ಯೆಗಳನ್ನು ಲೇಖಕರು ಹೊಸಬಗೆಯಲ್ಲಿ ವಿವರಿಸಿದ್ದಾರೆ.

ಶ್ರೀರಂಗರ ಶ್ರೀರಂಗಯಾತ್ರೆ ಮತ್ತೊಂದು ಉತ್ತಮ ವಿದೇಶಿ ಪ್ರವಾಸ ಗ್ರಂಥ. ಯುರೋಪಿನ ಈ ಪ್ರವಾಸಕಥನ ಕುತೂಹಲ ಭರಿತವಾಗಿದೆ.

ಶ್ರೀರಂಗ, ನೆಗಳೂರು ರಂಗನಾಥ, ಎಚ್.ಎಲ್.ಪಾಟೀಲ -ಈ ಮೂವರೂ ಕೂಡಿ ಹಳೇಬೀಡು, ಬೇಲೂರು, ಶ್ರವಣಬೆಳಗೊಳ ಮುಂತಾದ ದಕ್ಷಿಣ ಮೈಸೂರಿನ ಪ್ರದೇಶಗಳಲ್ಲಿ ಮಾಡಿದ ಪ್ರವಾಸಕಥನ ಮುಕ್ಕಣ್ಣಯಾತ್ರೆ ಎಂಬ ಪುಸ್ತಕದಲ್ಲಿ ರಮ್ಯವಾಗಿ ಚಿತ್ರಿತವಾಗಿದೆ (1946).

ನವರತ್ನರಾಮ್ ಬರೆದ ಪ್ಯಾರಿಸ್ಸಿನಿಂದ ಪ್ರೇಯಸಿಗೆ ಎಂಬ ಪುಸ್ತಕ ಆಕರ್ಷಕ ಶೈಲಿ ಹಾಗೂ ಸುಂದರ ಸನ್ನಿವೇಶಗಳಿಂದ ಕೂಡಿದೆ. ಪ್ಯಾರಿಸ್ಸಿನ ಸ್ವಚ್ಫಂದ ಪ್ರೇಮ ವಾತಾವರಣವನ್ನು ಚಿತ್ರಿಸುವುದರಲ್ಲಿ ರಾಮ್ ಯಶಸ್ವಿಯಾಗಿದ್ದಾರೆ.

ವಕೀಲರಾದ ಕೆ.ಆರ್.ಕಾರಂತರು ಯುರೋಪಿನಲ್ಲಿ ಪ್ರವಾಸಮಾಡಿ ಪ್ರವಾಸಿಯ ಪತ್ರಗಳು (1951) ಎಂಬ ಗ್ರಂಥವನ್ನು ರಚಿಸಿದ್ದಾರೆ. ಇದರಲ್ಲಿ ರಾಜಕೀಯದ ಮತ್ತು ಪ್ರಜಾಪ್ರಭುತ್ವದ ವಿಶ್ಲೇಷಣೆ ವಿಶೇಷವಾಗಿ ಬಂದಿದೆ.

ಸಾಗರದಾಚೆ ಮತ್ತು ನಮ್ಮ ಕಾಗದಗಳು ಎಂಬೆರಡು ಹೊತ್ತಗೆಗಳಲ್ಲಿ ನಾಡಿಗ ಕೃಷ್ಣಮೂರ್ತಿಯವರು ಪತ್ರಿಕೋದ್ಯಮದ ವಿಷಯ ಸಂಗ್ರಹಣೆಗಾಗಿ ಅಮೆರಿಕದಲ್ಲಿ ಪ್ರವಾಸ ಮಾಡಿದಾಗಿನ ತಮ್ಮ ಅನುಭವಗಳನ್ನು ವ್ಯಕ್ತಪಡಿಸಿದ್ದಾರೆ.

ಎಂ.ವೀರಪ್ಪನವರ ಸಯೋನರ ಜಪಾನ್, ಜಪಾನ್ ಪ್ರವಾಸದ ಅನುಭವಗಳನ್ನು ತಿಳಿಸುವ ಪತ್ರರೂಪದ ಕಥನ.

Explanation:

Similar questions