India Languages, asked by mamyaram19, 2 months ago

Activity:1. ಈ ಕೆಳಗಿನ ಪದ್ಯಭಾಗಗಳನ್ನು ಓದಿಕೊಂಡು ಅದರ ಸಾರಾಂಶವನ್ನು ಬರೆಯಿರಿ.
ಕೃತಯುಗದಲ್ಲಿ ಶ್ರೀ ಗುರು ಶಿಷ್ಯಂಗೆ ಬಡಿದು ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ದ್ವಾಪರಯುಗದಲ್ಲಿ ಶ್ರೀಗುರುವು ಶಿಷ್ಯಂಗೆ ಝಂಕಿಸಿ ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ
ಕಲಿಸಿದರೆ, ಆಗಲಿ ಮಹಾ ಪ್ರಸಾದವೆಂದೆನಯ್ಯ
ಗುಹೇಶ್ವರ, ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ
ನಾ ಬೆರಗಾದೆನು.
-ಅಲ್ಲಮಪ್ರಭು​

Answers

Answered by sanjana8350
5

Answer:

ಕ್ರುತಯುಗ-ತ್ರೇತಾಯುಗ-ದ್ವಾಪರಯುಗ-ಕಲಿಯುಗ” ಎನ್ನುವ ಪದಗಳು 4 ಬಗೆಯ ಕಾಲಮಾನಗಳನ್ನು ಹೆಸರಿಸುತ್ತವೆ. ಹಿಂದಿನ ಕಾಲದಿಂದ ಇಂದಿನವರೆಗೆ ಮಾನವಕುಲ ಹುಟ್ಟಿ ಬೆಳೆದು ಬಾಳಿಬಂದ ಸಮಯವನ್ನು ಬಾರತೀಯ ಸಂಸ್ಕ್ರುತಿಯ ಜನಸಮುದಾಯವು ಈ ರೀತಿ 4 ಹಂತಗಳಲ್ಲಿ ಗುರುತಿಸಿಕೊಂಡಿದೆ. ಕ್ರುತಯುಗದಲ್ಲಿ ಮಾನವ ಸಮುದಾಯದಲ್ಲಿ ತುಂಬಾ ಒಳ್ಳೆಯತನದ ನಡೆನುಡಿಗಳು ಇದ್ದುವೆಂದು , ಮುಂದಿನ ಯುಗಗಳಲ್ಲಿ ಒಳ್ಳೆಯತನ ಕಡಿಮೆಯಾಗುತ್ತಾ ಬಂದು , ಇದೀಗ ಕಲಿಯುಗದಲ್ಲಿ ಮಾನವರ ನಡೆನುಡಿಗಳಲ್ಲಿ ಕೆಟ್ಟತನವೇ ಹೆಚ್ಚಾಗಿ ಕಂಡುಬರುತ್ತಿದೆಯೆಂಬ ಒಳಮಿಡಿತವು ಜನಮನದಲ್ಲಿ ನೆಲೆಯೂರಿದೆ.

ಆದರೆ ಈ ವಚನದಲ್ಲಿ ಅಲ್ಲಮನು ಒಂದು ಯುಗ ಕಳೆದು ಮತ್ತೊಂದು ಯುಗ ಬಂದಂತೆಲ್ಲಾ ಮಾನವರ ಅರಿವು ಹೆಚ್ಚಾಗುತ್ತಾ , ಅವರ ನಡೆನುಡಿಗಳಲ್ಲಿ ಇನ್ನೂ ಹೆಚ್ಚಿನ ಮಾನವೀಯ ಮಿಡಿತಗಳು ಅಂದರೆ ಸಹಜೀವಿಗಳ ಬಗ್ಗೆ ಒಲವು ಮತ್ತು ಕರುಣೆಯ ಒಳಮಿಡಿತಗಳು ಹಾಗೂ ಜವಾಬ್ದಾರಿಯುತವಾದ ವರ‍್ತನೆಗಳು ಕಂಡು ಬರುತ್ತಿವೆಯೆಂದು ಹೇಳುತ್ತಾ , ಅದನ್ನು 4 ಹಂತಗಳಲ್ಲಿ ಗುರು-ಗುಡ್ಡರ(ಶಿಶ್ಯ) ನಡುವಣ ನಂಟಿನಲ್ಲಿ ಉಂಟಾದ ಒಳಿತಿನ ಬೆಳವಣಿಗೆಯ ಮೂಲಕ ಚಿತ್ರಿಸಿದ್ದಾನೆ.

ತನ್ನ ಬಳಿ ಅರಿವನ್ನು ಪಡೆಯಲು/ವಿದ್ಯೆಯನ್ನು ಕಲಿಯಲು ಬಂದ ಹುಡುಗನ ಮಯ್ ಮೇಲೆ ಗುರು ಮೊದಮೊದಲು ಮನಬಂದಂತೆ ಹಲ್ಲೆ ಮಾಡುತ್ತಿದ್ದ . ಈ ಹಂತದಲ್ಲಿ ಒಂದು ಜಡವಸ್ತುವನ್ನು ಹೊಡೆದು ಬಡಿದು ಕೊರೆದು ಕತ್ತರಿಸಿ ಅದಕ್ಕೆ ಒಂದು ರೂಪವನ್ನು ಕೊಡುವಂತೆ ಗುರು ಗುಡ್ಡನ ಮೇಲೆ ತನ್ನ ಬಲವನ್ನು ತೋರಿಸುತ್ತಿದ್ದ.

ಎರಡನೆಯ ಹಂತದಲ್ಲಿ ಗುರು ಗುಡ್ಡನನ್ನು ” ತನ್ನಂತೆ ಒಂದು ಜೀವಿ ” ಎಂದು ತಿಳಿದು , ಅವನ ಮಯ್ ಮನಗಳ ಮೇಲೆ ಹಿಡಿತವನ್ನು ಪಡೆಯಲೆಂದು ಬಯ್ಯುತ್ತಿದ್ದ. ತಮ್ಮ ಬಳಿ ಇರುವ ವ್ಯಕ್ತಿಗಳನ್ನು ” ತಮ್ಮ ಇಚ್ಚೆಗೆ ತಕ್ಕಂತೆ ತಗ್ಗಿ ಬಗ್ಗಿ ನಡೆಯುವಂತೆ ಮಾಡಲು ” ಬಡಿಯುವಿಕೆ ಮತ್ತು ಬಯ್ಯುವಿಕೆಯನ್ನು ಉಪಕರಣಗಳನ್ನಾಗಿ ಮಾನವರು ಬಳಸುತ್ತಾರೆ. ಅಂತೆಯೇ ಇಲ್ಲಿ ಗುರು ಗುಡ್ಡನನ್ನು ತನ್ನ ಹತೋಟಿಯಲ್ಲೇ ಇರಬೇಕಾದ ಮತ್ತು ಬೆಳೆಯಬೇಕಾದ ವ್ಯಕ್ತಿಯೆಂದು ತಿಳಿದಿದ್ದ.

ಮೂರನೆಯ ಹಂತದಲ್ಲಿ ಗುಡ್ಡನ ಮನದ ಒಳಮಿಡಿತಗಳನ್ನು ಅರಿತುಕೊಂಡು , ಅದಕ್ಕೆ ತಕ್ಕಂತೆ ವಿದ್ಯೆಯನ್ನು ಕಲಿಸುವ ರೀತಿಯನ್ನು ಅಳವಡಿಸಿಕೊಂಡಿದ್ದಾನೆ. ಆದುದರಿಂದಲೇ ಜಂಕಿಸಿ ಅಂದರೆ ಕಣ್ಸನ್ನೆ ಮತ್ತು ಕಯ್‍ಸನ್ನೆಗಳಿಂದಲೇ ಗುಡ್ಡನ ಮನವನ್ನು ವಿದ್ಯೆಯತ್ತ ಹೊರಳುವಂತೆ ಮಾಡಿ ಬುದ್ದಿಯನ್ನು ಕಲಿಸುತ್ತಿದ್ದ.

ನಾಲ್ಕನೆಯ ಹಂತದಲ್ಲಿ ಗುಡ್ಡನನ್ನು ಗುರು ತನ್ನಂತೆ ಒಂದು ಜೀವಿಯೆಂದು ತಿಳಿಯುವುದರ ಜತೆಜತೆಗೆ , ಮುಂದೆ ಬೆಳೆದು ಬಾಳಿ ಬದುಕಬೇಕಾದ ಅವನನ್ನು ಒಲವುನಲಿವುಗಳಿಂದ ಕಾಣುತ್ತಾ , ಅವನಲ್ಲಿ ಜೀವನದ ಬಗ್ಗೆ ಅಪಾರವಾದ ಆತ್ಮವಿಶ್ವಾಸವನ್ನು ಮೂಡಿಸಿ ಮುನ್ನಡೆಯುವಂತೆ ಮಾಡತೊಡಗಿದ್ದಾನೆ. ಕಾಲ ಉರುಳಿದಂತೆಲ್ಲಾ ಮಾನವ ಸಮಾಜದಲ್ಲಿ ಉಂಟಾಗುವ ಬಹುಬಗೆಯ ಬದಲಾವಣೆಗಳು ಗುರುವಿನ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರಿ ಗುರುವಿನಲ್ಲಿ ಒಲವು , ಕರುಣೆ ಮತ್ತು ಸಮಾನತೆಯ ನಡೆನುಡಿಗಳು ಹೊರಹೊಮ್ಮುವಂತೆ ಮಾಡಿವೆ.

Similar questions