World Languages, asked by tshantha86, 1 year ago

ಕನ್ನಡ ಹಾಡು ನೀನೆ ಮೊದಲು ನೀನೇ ಕೊನೆ by ಕಿಸ್ ಸಿನಿಮ ಯಾರಿಗೆ ಈ ಹಾಡು ಗೊತ್ತು​

Answers

Answered by Anonymous
11

Answer:

ನೀನೆ ಮೊದಲು, ನೀನೆ ಕೊನೆ

ಬೇರೆಯಾರು.. ಬೇಡ ನನಗೆ

ಉಸಿರು ಇರುವ ಕೊನೆಯವರೆಗೂ

ಇರಲೇ ಬೇಕು ನನ್ನ ಜೊತೆಗೆ

ನನ್ನನ್ನು ಪ್ರೀತಿಸೋ, ಒಂದು ಬಾರಿ..

ನಿನ್ನೆಲ್ಲ ಪ್ರೀತಿಯ ನನಗೆ ತೋರಿ

ಆ ಏಳು ಜನ್ಮದ ಪ್ರೀತಿಗೆ ಇದು

ಮೊದಲ ದಿವಸ!

ನೀನೆ ಮೊದಲು, ನೀನೆ ಕೊನೆ

ಬೇರೆಯಾರು.. ಬೇಡ ನನಗೆ!

ನೀನಿರುವುದು ನನಗೆ, ನಾನು ಇರುವುದು ನಿನಗೆ

ನಮ್ಮಿಂದ ಇನ್ನು ಪ್ರೀತಿ ಬೆಳೆಯಲಿ,

ಆಕಾಶದ ಕೊನೆಗೆ!

ಕಡಲು ಇರುವುದು ಅಲೆಗೆ, ಮಳೆಯೂ ಇರುವುದು ಎಲೆಗೆ

ಎದೆಯಲ್ಲಿ ಇಂದು ಜೀವ ಉಳಿದಿದೆ

ನಿನ್ನ ಒಲವಿನ ಕರೆಗೆ!

ಆಮಂತ್ರಿಸು ನನ್ನ, ನಿನ ಪ್ರೀತಿ ಅರಮನೆಗೆ

ಕಾದಿರಲಿ ನನಗೊಂದು, ಅಂಬಾರಿ ಮೆರವಣಿಗೆ!

ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ..

ಎಲ್ಲಾ ನಿನ್ನಿಂದಲೇ..!

ಆ ಏಳು ಜನ್ಮದ ಪ್ರೀತಿಗೆ ಇದು

ಮೊದಲ ದಿವಸ!

ಜೀವ ಹೋದರೂನು, ಈ ಜೀವಕೆ ಜೀವ ನೀನು

ಸಾಕಿನ್ನುವಂತೆ ಪ್ರೀತಿಸಬೇಕು,

ಸಾಯುವವರೆಗೂ ನಾನು!

ಪ್ರತಿಯೊಂದು ಹೆಜ್ಜೆಯೂ ನನ್ನ, ನಿನ್ನ ಹತ್ತಿರ ತಂದು ಬಿಡಲಿ

ನೀ ಎಲ್ಲೇ ಹೋದರು ನನ್ನ ಜೊತೆಗೆ

ನಿನ್ನ ನೆರಳೆ ಬರಲಿ!

ಮನಸಾರೆ ನಿನ್ನನ್ನು, ನಾ ಒಪ್ಪಿಕೊಂಡಿರುವೆ..

ನಿನ್ನನ್ನು ನೋಡುತ್ತಾ, ನಾ ಮೌನಿ ಆಗಿರುವೆ!

ನಿನ್ನಿಂದಲೇ.. ನಿನ್ನಿಂದಲೇ.. ನಿನ್ನಿಂದಲೇ..

ಎಲ್ಲಾ ನಿನ್ನಿಂದಲೇ..!

ಆ ಏಳು ಜನ್ಮದ ಪ್ರೀತಿಗೆ ಇದು

ಮೊದಲ ದಿವಸ!❤❤❤

Attachments:
Similar questions