English, asked by lovelyupadhye8075, 11 months ago

Cat information in kannada

Answers

Answered by aditi78680
10

Answer:

ಬೆಕ್ಕು (ವೈಜ್ಞಾನಿಕ ಹೆಸರು ಫೆಲಿಸ್ ಕ್ಯಾಟಸ್) ಒಂದು ಚಿಕ್ಕ ಪರಭಕ್ಷಕ ಮತ್ತು ಮಾಂಸಾಹಾರಿ ಸಸ್ತನಿ ಕಾರ್ನಿವೊರ ಕುಟುಂಬಕ್ಕೆ ಸೇರಿದ ಸಾಕುಪ್ರಾಣಿ. ಇದು ಕ್ರಿಮಿ ಕೀಟಗಳು, ಹಾವುಗಳು, ಚೇಳು, ಇಲಿ ಮತ್ತು ಇನ್ನಿತರ ಕೀಟಗಳನ್ನು ಬೇಟೆಯಾಡುವುದರಿಂದ ಮನುಷ್ಯನ ಸಂಗಾತಿಯಾಗಿದೆ. ಇದು ಸುಮಾರು ೯೫೦೦ ವರ್ಷಗಳಿಂದ ಮಾನವನೊಂದಿಗೆ ಸಹಕರಿಸುತ್ತಿದೆ.[೨]

Answered by afreensultana5555
6

Answer:  Here is your answer

ಈ ಗುಂಪಿನಲ್ಲಿ ಹಲವಾರು ಜಾತಿಗಳಿದ್ದು ಇವುಗಳ ಪೈಕಿ ಫೆಲಿಸ್ ಎಂಬ ಜಾತಿಗೆ ಸೇರುವ ಎಲ್ಲ ಪ್ರಭೇದಗಳನ್ನೂ ಬೆಕ್ಕುಗಳು ಎನ್ನುತ್ತಾರೆ. ಈ ಜಾತಿಗೆ ಹುಲಿ, ಸಿಂಹ, ಕಾಡುಬೆಕ್ಕು ಮುಂತಾದ ಪ್ರಾಣಿಗಳೂ ಸೇರಿವೆ. ಇವುಗಳಿಗೆ ಮುಂಗಾಲಿನಲ್ಲಿ ಐದು ಹಾಗೂ ಹಿಂಗಾಲಿನಲ್ಲಿ ನಾಲ್ಕು ಬೆರಳುಗಳಿರುವುವು. ಬೆರಳುಗಳ ತುದಿಯಲ್ಲಿ ಹರಿತ ಪಂಜುಗಳಿವೆ. ಬೆಕ್ಕು ಎಂದು ಪರಿಚಿತವಾಗಿರುವ ಮತ್ತು ಮನೆಗಳಲ್ಲಿ ಸಾಕುವ ಪ್ರಾಣಿ ಫೆಲಿಸ್ ಡೊಮೆಸ್ಟಿಕ ಎಂಬ ಪ್ರಭೇದಕ್ಕೆ ಸೇರುತ್ತದೆ.

   ಇದೇ ನಿಜವಾದ ಸಾಕು ಬೆಕ್ಕು.ಸಾಕು ಬೆಕ್ಕುಗಳೆಲ್ಲವೂ ಫೆಲಿಸ್ ಡೊಮೆಸ್ಟಿಕ ಪ್ರಭೇದಕ್ಕೆ ಸೇರುತ್ತವಾದರೂ ಇವುಗಳಲ್ಲಿ ಹಲವಾರು ತಳಿಗಳಿವೆ. ಸಾಮಾನ್ಯವಾಗಿ ಇವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು: ನೀಳ (ಉದ್ದ) ಕೂದಲಿನವು, ಚಿಕ್ಕ ಕೂದಲಿನವು, ವಿದೇಶಿ ಚಿಕ್ಕ ಕೂದಲಿನವು. ಇವುಗಳ ಪೈಕಿ ನೀಳಕೂದಲಿನ ಬೆಕ್ಕುಗಳನ್ನು ಶ್ರೀಮಂತ ಬೆಕ್ಕುಗಳೆಂದು ಪರಿಗಣಿಸುವುದುಂಟು.

   ಇಂದಿನ ಬೆಕ್ಕು ಫೆಲಿಸ್ ಮ್ಯಾನ್ಯುಲ್ ಎಂಬ ಪ್ರಭೇದಕ್ಕೆ ಸೇರಿರುವ ಪಲ್ಲ ಎಂಬ ಬೆಕ್ಕಿನಿಂದ ಉದಯವಾಗಿ ಮಾರ್ಪಾಡಾಯಿತು ಎಂಬ ನಂಬಿಕೆಯಿತ್ತು. ಆದರೆ ಪಲ್ಲ ಬೆಕ್ಕಿಗೆ ಅತ್ಯಂತ ದಟ್ಟ ಕೂದಲಿನ ಬಾಲವಿದ್ದು ಅದರ ಶರೀರ ಮತ್ತು ಮುಖದ ಮೇಲೆ ಬೆಕ್ಕಿನಲ್ಲಿರದ ಗುರುತುಗಳಿರುವುವು. ಈ ಕಾರಣದಿಂದ ಸಾಕು ಬೆಕ್ಕು ಪಲ್ಲ ಬೆಕ್ಕಿನಿಂದ ವಿಕಸಿಸಿದವು ಎಂಬ ನಂಬಿಕೆಯನ್ನು ಕೈಬಿಡಲಾಯಿತು.

ಬೆಕ್ಕು ಮಾಂಸಾಹಾರಿ ಪ್ರಾಣಿ

   ಸಾಮಾನ್ಯವಾಗಿ ಬೆಕ್ಕು ಮಾಂಸಾಹಾರಿ ಪ್ರಾಣಿ. ಬ್ರೆಡ್ಡು ಅಥವಾ ಅನ್ನ ತಿನ್ನಬಲ್ಲುದಾದರೂ ವಾಸ್ತವವಾಗಿ ಇದರ ದವಡೆ ಹಾಗೂ ಹಲ್ಲು ಮಾಂಸಭಕ್ಷಣೆಗೆ ಅನುಕೂಲವಾಗುವಂತೆ ಮಾರ್ಪಾಡಾಗಿವೆ. ಇಲಿ, ಅಳಿಲು, ಕೀಟ, ಮೀನು, ಪಕ್ಷಿ ಮುಂತಾದವು ಬೆಕ್ಕಿನ ಸಾಮಾನ್ಯ ಆಹಾರ. ಹೊಟ್ಟೆ ತುಂಬಿದ ಬೆಕ್ಕು ಇಲಿ ಹಿಡಿಯುವುದಿಲ್ಲ ಎಂಬುದು ತಪ್ಪು ಕಲ್ಪನೆ.

   ಇಲಿ ಹಿಡಿಯುವುದು ಬೆಕ್ಕಿಗೆ ಆನುವಂಶಿಕವಾಗಿ ಬಂದ ಗುಣ. ಬೆಕ್ಕು ಬೇರೆ ಬೇರೆ ಪ್ರಾಣಿಗಳನ್ನು ತಿನ್ನುವುದಾದರೂ ಇಲಿ ಅಳಿಲು ಅಥವಾ ಮೊಲಗಳನ್ನು ತಿನ್ನುವುದೇ ಹೆಚ್ಚು. ಏಕೆಂದರೆ ಮೀನು ಅಥವಾ ಪಕ್ಷಿಗಳನ್ನು ಇದು ಸುಲಭವಾಗಿ ಹಿಡಿಯಲಾರದು.

please mark me as brainliest

 

Similar questions