India Languages, asked by snehasidharth957, 1 year ago

Conclusion about kuvempu in kannada

Answers

Answered by kartik85
18































 

ಮುಖಪುಟ /ಸಾಧಕರು  

ಕನ್ನಡ ಡಿಂಡಿಮ ಮೊಳಗಿಸಿದ ರಸಋಷಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕನ್ನಡಕ್ಕೆ ಮೊದಲ ಜ್ಞಾನಪೀಠದ ಗರಿ ತೊಡಿಸಿದ ಕುವೆಂಪು ಎಂಬ ಕನ್ನಡದ ಮಹಾನ್ ಚೇತನ

* ಟಿ.ಎಂ.ಸತೀಶ್

ಕನ್ನಡ ಎನೆ ಕುಣಿದಾಡುವುದೆನ್ನೆದೆ
ಕನ್ನಡ ಎನೆ ಕಿವಿ ನಿಮಿರುವುದು....

ಎಲ್ಲಾದರು ಇರು ಎಂತಾದರೂ ಇರು
ಎಂದೆಂದಿಗೂ ನೀ, ಕನ್ನಡವಾಗಿರು...

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ ಬಾರಿಸು ಕನ್ನಡ ಡಿಂಡಿಮವ...

ಜಯ ಭಾರತ ಜನನಿಯ ತನುಜಾತೇ..
ಜಯಹೇ ಕರ್ನಾಟಕ ಮಾತೆ...

ಕುವೆಂಪು ಎಂಬ ಮೂರಕ್ಷರದಿಂದಲೇ ಕನ್ನಡಿಗರ ಮನೆ ಮಾತಾದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಕನ್ನಡದ ಮಹಾನ್ ಚೇತನ. ಕನ್ನಡ- ಕರ್ನಾಟಕದ ಬಗ್ಗೆ ಅವರು ಬರೆದಿರುವ ಭಾವಗೀತೆಗಳು ನಿತ್ಯ ನೂತನ. ಮನುಜ ಮತ ವಿಶ್ವಪಥವನ್ನು ಸಾರಿದ ಈ ಸಾಹಿತ್ಯ ಶ್ರೇಷ್ಠ ವಿಶ್ವಮಾನವರೆನಿಸಿದವರು. 

ಕುವೆಂಪು ಹೊಸಗನ್ನಡ ಸಾಹಿತ್ಯದ ಹಿರಿಯ ಕವಿ. ಕನ್ನಡ ಸಾಹಿತ್ಯವನ್ನು ವಿಶ್ವ ಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ. ಮಹಾಕಾವ್ಯ, ನಾಟಕ, ಖಂಡಕಾವ್ಯ, ಕಥನಕಾವ್ಯ, ಭಾವಗೀತೆಯೇ ಮೊದಲಾದ ಹಲವು ಪ್ರಕಾರಗಳಲ್ಲಿ ಅತ್ಯುತ್ತಮ ಕೃತಿಗಳನ್ನು ನೀಡಿದ ಅದ್ವರ್ಯು. ಕುವೆಂಪು ಅವರಂತೆ ಸರ್ವ ಪ್ರಕಾರಗಳಲ್ಲೂ ಏಕ ಪ್ರಕಾರವಾದ ಸಿದ್ಧಿ ಪಡೆದ ಕವಿಗಳು ಅತಿ ವಿರಳ.

 ಓ ನನ್ನ ಚೇತನ
ಆಗು ನೀ ಅನಿಕೇತನ!
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯ ಬಿರಿಯೆ ಭಾವದೀಟಿ.... 

‘ಅನಿಕೇತನದ’ ವಿಶ್ವ ಮಾನವ ಗೀತೆ. ಇದು ಮಾನವನ ಬದುಕಿನ ಅರ್ಥ-ವ್ಯಾಪ್ತಿಯನ್ನು ಕೆಲವೇ ಪದಗಳಲ್ಲಿ ಅರ್ಥಗರ್ಭಿತವಾಗಿ ತೆರೆದಿಡುತ್ತದೆ. ಅರ್ಥೈಸಿಕೊಳ್ಳಲು ಪ್ರಕೃತಿ - ಸೃಷ್ಟಿಯ ಪರಿಕಲ್ಪನೆಗಳನ್ನು - ರಹಸ್ಯಗಳನ್ನು ಕುವೆಂಪು ತಮ್ಮ ಕೃತಿಗಳಲ್ಲಿ ಶ್ರೀಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ತೆರೆದಿಟ್ಟಿದ್ದಾರೆ.

 ‘ಕಾನೂರು ಹೆಗ್ಗಡಿತಿ’ ‘ಮಲೆಗಳಲ್ಲಿ ಮದುಮಗಳು’ (ಬೃಹತ್ ಕಾದಂಬರಿಗಳು), ‘ಶ್ರೀರಾಮಕೃಷ್ಣ ಪರಮಹಂಸ’ ‘ಸ್ವಾಮಿ ವಿವೇಕಾನಂದ’ (ಜೀವನ ಚರಿತ್ರೆ), ‘ರಕ್ತಾಕ್ಷಿ’, ‘ಬೆರಳ್ಗೆ ಕೊರಳ್’ ‘ಜಲಗಾರ’ ‘ಯಮನ ಸೋಲು’ ಕೃತಿಗಳಲ್ಲಿ ಬದುಕಿನ ಬವಣೆ, ಬದುಕಿನ ಸತ್ಯ - ರಹಸ್ಯಗಳ ವರ್ಣನೆ ಹಾಸುಹೊಕ್ಕಾಗಿವೆ. 

ಕುವೆಂಪು ಅವರು ಹುಟ್ಟಿದ್ದು ೨೯ ಡಿಸೆಂಬರ್ ೧೯೦೪. ಅವರೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ. ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ಆದರೆ, ಕುವೆಂಪು ಅವರು ಹುಟ್ಟಿದ್ದು ತಾಯಿಯ ತವರಾದ ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ. ಮಲೆನಾಡಿನ ಮಡಿಲಲ್ಲಿ ಹುಟ್ಟಿ ಬೆಳೆದ ಕುವೆಂಪು ಅವರು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತದ್ದಕ್ಕಿಂತ ಹೆಚ್ಚಿನ ವಿಷಯವನ್ನು ಕಲಿಸಿದ್ದು ಮಲೆನಾಡಿನ ಪ್ರಕೃತಿ. ಹೀಗಾಗೇ ಅವರ ಎಲ್ಲ ಕೃತಿಗಳಲ್ಲಿ ಮಲೆನಾಡಿನ ಸೊಬಗು ಕಂಗೊಳಿಸುತ್ತದೆ. ಇದಕ್ಕೆ ಕಾನೂರು ಹೆಗ್ಗಡಿತಿ ಹಾಗೂ ಮಲೆಗಳಲ್ಲಿ ಮದುಮಗಳು ಸಾಕ್ಷಿ.

 ಕುವೆಂಪು ಅವರು ಮೊದಲು ಬರೆದದ್ದು (ಬಿಗಿವರ್ಸ್ ಮ್ಯೂಸ್) ಇಂಗ್ಲಿಷ್‌ನಲ್ಲಿ. ಆದರೆ, ಅವರ ಕಣ್ಣು ತೆರೆಸಿ ಮಾತೃಭಾಷೆಯಲ್ಲಿ ಬರೆಯುವಂತೆ ಪ್ರೇರೇಪಿಸಿದವರು ಐರಿಷ್ ಕವಿ ಜೇಮ್ಸ್ ಕಸಿನ್ಸ್. ಅಂದಿನಿಂದ ಕುವೆಂಪು ಅವರು ೭೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಈ ಪೈಕಿ ಶ್ರೀರಾಮಾಯಣ ದರ್ಶನಂ - ಮಹಾಕಾವ್ಯ (ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ), ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ (ಕಾದಂಬರಿ),ಸನ್ಯಾಸಿ ಮತ್ತು ಇತರ ಕತೆಗಳು (ಕಥಾ ಸಂಕಲನ), ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ (ಜೀವನ ಚರಿತ್ರೆ), ಶೂದ್ರ ತಪಸ್ವಿ, ರಕ್ತರಾತ್ರಿ, ರಕ್ತಾಕ್ಷಿ, ಯಮನ ಸೋಲು, ಬೆರಳ್ಗೆ ಕೊರಳ್ (ನಾಟಕಗಳು),ಪಕ್ಷಿಕಾಶಿ, ಪಾಂಚಜನ್ಯ, ಅನಿಕೇತನ, ಚಂದ್ರಮಂಚಕೆ ಬಾ ಚಕೋರಿ, ಕೊಳಲು (ಕವನಸಂಕಲನಗಳು) ಪ್ರಮುಖವಾದವು. 

ಇಂತಹ ಅತ್ಯಮೂಲ್ಯ ಕೃತಿಗಳನ್ನು ನೀಡಿದ ಕವಿಗೆ ಪದ್ಮವಿಭೂಷಣ (೧೯೫೮), ರಾಜ್ಯ-ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಷ್ಟ್ರಕವಿ ಬಿರುದು (೧೯೬೪), ಪಂಪಪ್ರಶಸ್ತಿ, ಕರ್ನಾಟಕ ರತ್ನ ಪುರಸ್ಕಾರಗಳನ್ನು ನೀಡಿ ಸರಕಾರ ಗೌರವಿಸಿದರೆ, ಕನ್ನಡ ಸಾಹಿತ್ಯ ಪರಿಷತ್ತು ಕುವೆಂಪು ಅವರಿಗೆ ೩೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನವನ್ನು ನೀಡಿ ತನ್ನ ಘನತೆಯನ್ನೇ ಹೆಚ್ಚಿಸಿಕೊಂಡಿತು. ಕುವೆಂಪು ಅವರಂಥ ಕವಿಶ್ರೇಷ್ಠರನ್ನು ಪಡೆದ ನಮ್ಮೀ ನಾಡೇ ಧನ್ಯ.

ಮುಖಪುಟ /ಸಾಧಕರು  

Answered by sona651
3

Explanation:

please give answer in English

Similar questions