Conclusion of swachh Bharat Abhiyan in Kannada language
Answers
ನವದೆಹಲಿ, ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಚಾಲನೆ ದೊರೆತ ಬೆನ್ನಲ್ಲೇ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಸ್ವಚ್ಛ ಭಾರತ ಅಭಿಯಾನ ಆರಂಭಿಸಿದೆ. ಮಹಾತ್ಮ ಗಾಂಧೀಜಿ ಅವರ ಅವರ ಹುಟ್ಟುಹಬ್ಬದ ದಿನದಂದು ಈ ಮಹತ್ವದ ಅಭಿಯಾನ ಜಾರಿಗೆ ತಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ತಾತಾ ಹೇಳಿಕೊಟ್ಟ ಸ್ವಚ್ಛತಾ ಮಂತ್ರವನ್ನು ಎಲ್ಲರಿಗೂ ಬೋಧಿಸಿದ್ದಾರೆ. ಗುರುವಾರ ಬೆಳಗ್ಗೆ ನವದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಸ್ವಚ್ಛತಾ ಅಭಿಯಾನ ಅಥವಾ ಕ್ಲೀನ್ ಇಂಡಿಯಾ ಯೋಜನೆಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ನೆರೆದಿದ್ದ ಸಮೂಹಕ್ಕೆ ಸ್ವಚ್ಛ ಭಾರತ ನಿರ್ಮಾಣದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಗಾಂಧೀಜಿ ಸ್ವಚ್ಛ ಭಾರತ ಕನಸು ನನಸಾಗಿಸೋಣ: ಮೋದಿ ಐದು ದಿನಗಳ ಅಮೆರಿಕ ಪ್ರವಾಸದಿಂದ ಹಿಂತಿರುಗಿರುವ ಮೋದಿ ಅವರು ಜೆಟ್ ಲಾಗ್(ಏನು ಹಾಗೆಂದರೆ?) ಕೂಡಾ ಲೆಕ್ಕಿಸದೆ ಉತ್ಸಾಹದಿಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಮೋದಿ ಅವರ ಜೊತೆ ಸಮಾರಂಭದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ನಟ ಅಮೀರ್ ಖಾನ್ ಅವರು ವೇದಿಕೆಯಲ್ಲಿದ್ದರು. [ಸ್ವಚ್ಛ ಭಾರತ ಕನಸು ನನಸಾಗಿಸೋಣ] ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮೋದಿ ಅವರು ಮಾಡಿದ ಭಾಷಣದ ಮುಖ್ಯಾಂಶಗಳು: * ಈ ದಿನ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಿ ಅವರ ಜನ್ಮ ದಿನ ವಾರ್ಷಿಕೋತ್ಸವ ಈ ಶುಭ ದಿನದಂದು ಇಂಥ ಯೋಜನೆಗೆ ಚಾಲನೆ ನೀಡುತ್ತಿರುವುದು ಸಂತೋಷ ತಂದಿದೆ. * ಗಾಂಧೀಜಿ ಅವರ ನೇತೃತ್ವದಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಆದರೆ, ಅವರ ಕನಸಾದ ಸ್ವಚ್ಛ ಭಾರತ ಇನ್ನೂ ನಾವು ಪೂರ್ಣಗೊಳಿಸಿಲ್ಲ. * ಸ್ವಚ್ಛ ಭಾರತ ಅಭಿಯಾನದ ಚಿನ್ಹೆ ಬರೀ ಚಿನ್ಹೆಯಲ್ಲ ಅದರ ಮೂಲಕ ಗಾಂಧೀಜಿ ನಮ್ಮನ್ನು ನೋಡುತ್ತಿದ್ದಾರೆ. ಯಾವಾಗ ಭಾರತ ಸ್ವಚ್ಛಗೊಳಿಸುತ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ. * ಮಂದಿರವಿರಲಿ, ಮಸೀದಿ ಇರಲಿ, ಗುರುದ್ವಾರ ಅಥವಾ ಯಾವುದೇ ಧಾರ್ಮಿಕ ಸ್ಥಳವಿರಲಿ ನಾವು ಸ್ವಯಂಪ್ರೇರಿತರಾಗಿ ಪರಿಸರವನ್ನು ಸ್ವಚ್ಛಗೊಳಿಸೋಣ. ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳೋಣ. ಭಾಷಣದ ಇನ್ನಷ್ಟು ಮುಖ್ಯಾಂಶಗಳು ಹಾಗೂ ವಿಡಿಯೋ ಮುಂದೆ ನೋಡಿ
Hope it helps!