eassay on covid 19in kannada
Answers
Answer:
ಈಗ ಮನುಷ್ಯರಲ್ಲಿ ಕಾಡುವ ಕೊರೊನಾ ವೈರಸ್ ಗೆ ಯಾವುದೇ ರೀತಿಯ ಔಷಧಿಯಿಲ್ಲ. ಆದರೆ ಇದು ಹರಡದಂತೆ ತಡೆಯುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು. ಇದಕ್ಕೆ ನೀವು ಈ ರೀತಿ ಮಾಡಿ.
*ಸೋಪ್ ಮತ್ತು ನೀರು ಹಾಕಿ 20 ಸೆಕೆಂಡು ಕಾಲ ಕೈ ತೊಳೆಯಿರಿ.
* ತೊಳೆಯದೆ ಮುಖ, ಮೂಗು ಅಥವಾ ಬಾಯಿಯನ್ನು ಮುಟ್ಟಲು ಹೋಗಬೇಡಿ.
*ಅನಾರೋಗ್ಯದಲ್ಲಿರುವ ಜನರೊಂದಿಗೆ ಹತ್ತಿರದ ಸಂಪರ್ಕವಿಟ್ಟುಕೊಳ್ಳಬೇಡಿ.
*ಪದೇ ಪದೇ ಮುಟ್ಟುತ್ತಲಿರುವ ಜಾಗವನ್ನು ಆಗಾಗ ಚೆನ್ನಾಗಿ ಸ್ವಚ್ಛಕೊರೊನಾ ವೈರಸ್ ಸೋಂಕಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಕೆಲವು ಜನರು ಅವರಾಗಿಯೇ ಚೇತರಿಸಿಕೊಳ್ಳುವರು. ಆದರೆ ಇದರ ಲಕ್ಷಣಗಳನ್ನು ಈ ರೀತಿಯಾಗಿ ಕಡಿಮೆ ಮಾಡಬಹುದು.
*ನೋವು, ಜ್ವರ ಮತ್ತು ಕೆಮ್ಮಿಗೆ ಮಾತ್ರೆ ತೆಗೆದುಕೊಳ್ಳುವುದು. ಮಕ್ಕಳಿಗೆ ಆಸ್ಪಿರಿನ್ ಕೊಡಬೇಡಿ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಔಷಧಿ ನೀಡಬೇಡಿ.
*ಕೆಮ್ಮು ಮತ್ತು ಗಂಟಲು ನೋವು ಕಡಿಮೆ ಮಾಡಲು ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದು.
*ಸಾಕಷ್ಟು ವಿಶ್ರಾಂತಿ ಪಡೆಯಿರಿ.
ನೀರಿನಾಂಶ ಹೆಚ್ಚು ಸೇವಿಸಿ.ಕೊರೊನಾ ವೈರಸ್ ಪತ್ತೆ ಮಾಡಲು ವೈದ್ಯರು
ವೈದ್ಯಕೀಯ ಇತಿಹಾಸ ತಿಳಿಯುವರು
ದೈಹಿಕ ಪರೀಕ್ಷೆ ಮಾಡುವರು
ರಕ್ತ ಪರೀಕ್ಷೆ ಮಾಡಬಹುದು.
ಕಫ, ಗಂಟಲಿನ ಸ್ವಾಬ್ ನ ಮಾದರಿ ಮತ್ತು ಇತರ ಉಸಿರಾಟದ ಪರೀಕ್ಷೆ ಮಾಡಿಸಬಹುದು.ಕೆಲವು ಕೊರೊನಾ ವೈರಸ್‌ಗಳು ತೀವ್ರ ರೀತಿಯ ಲಕ್ಷಣಗಳನ್ನು ತೋರಿಸುವುದು. ಈ ಸೋಂಕು ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾ ಆಗಿ ಪರಿವರ್ತನೆ ಆಗಬಹುದು.
ಇದರ ಪ್ರಮುಖ ಲಕ್ಷಣಗಳೆಂದರೆ*ಕಫದೊಂದಿಗೆ ಕೆಮ್ಮು*ಉಸಿರು ಕಟ್ಟುವಿಕೆ*ಎದೆ ನೋವು ಅಥವಾ ಕೆಮ್ಮು ಅಥವಾ ಉಸಿರಾಟದ ವೇಳೆ ಬಿಗಿ ಹಿಡಿತ*ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಇರುವವರಲ್ಲಿ ಈ ತೀವ್ರವಾದ ಲಕ್ಷಣಗಳು ಸಾಮಾನ್ಯ.
*ಇದರೊಂದಿಗೆ ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವಂತಹ ಶಿಶುಗಳು ಮತ್ತು ವಯಸ್ಸಾದವರಲ್ಲಿ ಇದು ಸಾಮಾನ್ಯ.ಕೊರೊನಾ ವೈರಸ್ ಯಾವ ರೀತಿಯದ್ದು ಮತ್ತು ಸೋಂಕು ಎಷ್ಟು ಗಂಭೀರವಾಗಿದೆ ಎನ್ನುವುದರ ಮೇಲೆ ಇದರ ಲಕ್ಷಣವು ಅವಲಂಬಿಸಿದೆ. ಶೀತದಂತಹ ಶ್ವಾಸಕೋಶದ ಮೇಲ್ಬಾಗದ ಸೋಂಕಿಗೆ ಒಳಗಾಗಿದ್ದರೆ ಆಗ ನಿಮ್ಮಲ್ಲಿ ಈ ರೀತಿಯ ಕೆಲವು ಲಕ್ಷಣಗಳೂ ಕಾಣಿಸಿಕೊಳ್ಳುವುದು.
*ಮೂಗು ಸೋರುವುದು
*ತಲೆನೋವು
*ಕೆಮ್ಮು
*ಗಂಟು ನೋವು
*ಜ್ವರ
*ಸಂಪೂರ್ಣವಾಗಿ ಅನಾರೋಗ್ಯಸಾಮಾನ್ಯವಾಗಿ ಕೊರೊನಾ ವೈರಸ್ ಒಬ್ಬ ಮನುಷ್ಯನಿಂದ ಮತ್ತೊಬ್ಬನಿಗೆ ಹಬ್ಬುವುದು.
*ಶೀನು ಮತ್ತು ಕೆಮ್ಮಿನ ಗಾಳಿಯಿಂದ.
*ತುಂಬಾ ಹತ್ತಿರ ದೈಹಿಕ ಸಂಪರ್ಕದಿಂದ. ಉದಾಹರಣೆಗೆ ಸ್ಪರ್ಶ ಮತ್ತು ಹಸ್ತಲಾಘವ
*ವೈರಸ್ ಇರುವ ವಸ್ತುವನ್ನು ಮುಟ್ಟುವುದು, ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದರೆ.
*ಅಪರೂಪದಲ್ಲಿ ಮಲದ ಮೂಲಕಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ.
ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುವುದು.ಇನ್ನು ಕೆಲವು ವೈರಸ್ ಗಳು ಮನುಷ್ಯರ ಮೇಲೆ ಕೂಡ ಪರಿಣಾಮ ಬೀರುವುದು.
ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು.
ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ.
ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.
ಈ ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮಾಡಿಟ್ಟುಕೊಳ್ಳಿ.
*ಕೆಮ್ಮು ಮತ್ತು ಶೀನು ಬಂದ ವೇಳೆ ಟಿಶ್ಯೂ ಅಡ್ಡ ಹಿಡಿಯಿರಿ. ಇದರ ಬಳಿಕ ಟಿಶ್ಯೂ ಬಿಸಾಕಿ, ಕೈಗಳನ್ನು ತೊಳೆಯಿರಿ.
*ಅನಾರೋಗ್ಯವಿದ್ದರೆ ಮನೆಯಲ್ಲೇ ಉಳಿಯಿರಿ.
Answer:
ಕೋವಿಡ್ -19 ಎಂದರೇನು
ಕೊರೊನಾ ವೈರಸ್‌ನ ಕುಟುಂಬಕ್ಕೆ ಸೇರಿದ ಸಾಂಕ್ರಾಮಿಕ ಸೊಂಕು ಹೊಂದಿರುವ ವೈರಸ್ ಆಗಿದ್ದು, ಇತ್ತೀಚೆಗೆ ಪತ್ತೆಯಾಗಿರುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2019 ರ ಡಿಸೆಂಬರ್ ನಲ್ಲಿ ವ್ಯುಹಾನ್‌ನಲ್ಲಿ ಸೋಂಕು ಪತ್ತೆಯಾಗಿತ್ತು.
ಕೋವಿಡ್-19 ರೋಗಲಕ್ಷಣಗಳೇನು?
ಸಾಮಾನ್ಯವಾಗಿ ಜ್ವರ, ಒಣ ಕೆಮ್ಮು, ಸುಸ್ತು ಆರಂಭಿಕ ಲಕ್ಷಣಗಳು ಎನ್ನಬಹುದು. ಕೆಲವರಿಗೆ ಮೈಕೈ ನೋವು, ಶ್ವಾಸನಾಳದಲ್ಲಿ ಕಿರಿಕಿರಿ, ಗಂಟಲು ನೋವು ಅಥವಾ ಬೇಧಿ ಕಾಣಿಸಿಕೊಳ್ಳಬಹುದು. ಈ ಎಲ್ಲ ಲಕ್ಷಣಗಳು ಆರಂಭದಲ್ಲಿ ತುಂಬಾ ನಿಧಾನಗತಿಯಲ್ಲಿರುತ್ತದೆ ಬಳಿಕ ಒಮ್ಮಿಂದೊಮ್ಮೆಲೇ ಗಂಭೀರ ಸ್ವರೂಪ ಪಡೆದುಕೊಳ್ಳಬಹುದು. ಕೆಲವರಿಗೆ ಯಾವುದೇ ವಿಧವಾದ ಸಾಮಾನ್ಯ ಲಕ್ಷಣಗಳು ಕಾಣಿಸದು. ಹೆಚ್ಚಿನ ಜನರು (80%) ತಮ್ಮ ರೋಗ ನಿರೋಧಕ ಶಕ್ತಿಯ ಮೂಲಕವೇ ಗುಣಮುಖರಾಗುತ್ತಾರೆ. ಪ್ರತಿ 6 ರಲ್ಲಿ ಒಬ್ಬರು ಮಾತ್ರವೇ ಕೋವಿಡ್ -19ನಿಂದ ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾಗಿ, ಉಸಿರಾಟದ ಸಮಸ್ಯೆಗೆ ತುತ್ತಾಗುತ್ತಾರೆ. ರಕ್ತದೊತ್ತಡ, ಹೃದ್ರೋಗ, ಮಧುಮೇಹ ಇತ್ಯಾದಿ ಈಗಾಗಲೇ ಆರೋಗ್ಯ ಸಮಸ್ಯೆ ಹೊಂದಿರುವವರು, ಹಿರಿಯರಲ್ಲಿ ಕೋವಿಡ್-19 ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ಸಮಸ್ಯೆಯ ಜತೆಗೆ ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಸೂಕ್ತ.
ಕೊರೊನಾ ಹರಡುವ ಬಗೆ ಹೇಗೆ?
ಕೋವಿಡ್-19 ವೈರಸ್ ಸಾಂಕ್ರಾಮಿಕ ರೋಗ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿ ಸೀನಿದಾಗ ಅಥವಾ ಕೆಮ್ಮಿದ ವೇಳೆ ಮತ್ತೊಬ್ಬ ವ್ಯಕ್ತಿಯ ಮೂಗಿನ ರಂಧ್ರಗಳು, ಬಾಯಿಯ ಮೂಲಕ ವೈರಾಣು ಹರಡುತ್ತದೆ. ಅಲ್ಲದೆ ಸೀನಿದಾಗ ಹೊರಬರುವ ವೈರಾಣುಗಳು ವಸ್ತು ಇತ್ಯಾದಿಗಳ ಮೇಲ್ಮೈನಲ್ಲಿ ಜಾಗಮಾಡಿಕೊಳ್ಳುತವೆ. ಆರೋಗ್ಯವಂತ ವ್ಯಕ್ತಿ ಇದೇ ಮೇಲ್ಮೈನನ್ನು ಮುಟ್ಟಿದಾಗ ಆತನ ಕೈಗಳಲ್ಲಿ ಕೋವಿಡ್-19 ವೈರಾಣು ಸೇರಿಕೊಳ್ಳುತ್ತದೆ. ಕೈಗಳಿಂದ ಮೂಗು, ಬಾಯಿ, ಕಣ್ಣುಗಳ ಮೂಲಕ ದೇಹ ಸೇರಿ, ಅನಾರೋಗ್ಯ ಉಂಟು ಮಾಡುತ್ತದೆ. ಇಷ್ಟೇ ಅಲ್ಲದೆ, ಸೋಮಕಿತ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹತ್ತಿರವಿರುವ ಆರೋಗ್ಯವಂತ ವ್ಯಕ್ತಿಯ ಉಸಿರಿನ ಮೂಲಕವೂ ವೈರಾಣು ದೇಹ ಸೇರುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕಾಗಿಗೇ ಅನಾರೋಗ್ಯ ಅಥವಾ ಕೋವಿಡ್-19 ಶಂಕಿತ ವ್ಯಕ್ತಿಗಳಿಂದ ಕನಿಷ್ಠ 1ಮೀಟರ್ ಅಂತರ ಕಾಯ್ದುಕೊಳ್ಳುವುದು ಮುಖ್ಯ ಎನ್ನಲಾ