ಆನ್ಲೈನ್ ಶಿಕ್ಷಣೆ ಅನುಕೂಲ ಮತ್ತು ಅನಾನುಕೂಲ essay
Answers
Answered by
42
ಆನ್‍ಲೈನ್ ಶಿಕ್ಷಣದ ಅನುಕೂಲಗಳು
- ಆನ್‍ಲೈನ್ ಶಿಕ್ಷಣದ ಮೂಲಕ, ಎಲ್ಲಿಂದಲಾದರೂ , ಯಾವಾಗ ಬೇಕಾದರೂ ಶಿಕ್ಷಣವನ್ನು ಪಡೆಯಬಹುದು
- ಲ್ಯಾಪ್‍ಟಾಪ್ ಅಥವಾ ಸ್ಮಾರ್ಟ್ ಪೋನ್ ಜೊತೆಗೆ ಅಂತರ್ಜಾಲದ ವ್ಯವಸ್ಥೆಯಿದ್ದರೆ ಸಾಕು
- ತರಗತಿಗಳಲ್ಲಿನ ಹಾಜರಾತಿ ತಲೆನೋವು ಇರುವುದಿಲ್ಲ.
- ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ವೇಳಾಪಟ್ಟಿಯನ್ನು ಅನುಸರಿಸಬಹುದು.
- ವಿಶೇಷವಾಗಿ ಉದ್ಯೋಗಿಗಳಿಗೆ, ಕೆಲಸವನ್ನು ಬಿಟ್ಟು ಕೊಡದೆ, ಉನ್ನತ ಶಿಕ್ಷಣವನ್ನು ಪಡೆಯಲು ಸಹಾಯವಾಗುತ್ತದೆ.
- ವಾರಾಂತ್ಯಗಳಲ್ಲಿ ಅಥವಾ ಬಿಡುವಿನ ವೇಳೆಯಲ್ಲಿ ಕಲಿಯುವ ಅವಕಾಶ ದೊರೆಯುತ್ತದೆ.
- ಸಮಯ ನಿರ್ವಹಣೆ ಹಾಗೂ ಉದ್ಯೋಗ – ಶಿಕ್ಷಣ ಇವುಗಳ ಸಮತೋಲನವನ್ನು ಕಾಪಾಡುವ ಕೌಶಲ್ಯವನ್ನು ಕಲಿಸುತ್ತದೆ.
- ಕಲಿಯುವ ವೇಗ ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ವ್ಯತ್ಯಾಸವಾಗುತ್ತದೆ.
- ಪ್ರತಿಯೊಬ್ಬರೂ ಒಂದೇ ವೇಗದಲ್ಲಿ ಕಲಿಯಲು ಸಾಧ್ಯವಿಲ್ಲ.
- ತರಗತಿಯ ಕೊಠಡಿಯಲ್ಲಿ ಎಲ್ಲರಿಗೂ ಒಟ್ಟಿಗೆ ಪಾಠಮಾಡುವಾಗ, ಅನೇಕ ವಿದ್ಯಾರ್ಥಿಗಳಿಗೆ ಪಾಠಗಳನ್ನು ಅನುಸರಿಸಲು ಸಾಧ್ಯವಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಶೇಷ ತರಗತಿಗಳನ್ನು ನಡೆಸ ಬೇಕಾಗುತ್ತದೆ. ಹಲವು ಭಾರಿ ಇದು ಸಹ ಸಾಧ್ಯವಾಗದ ಪರಿಸ್ಥಿತಿಯಿರುತ್ತದೆ. ಇಂತಹ ಸಂದರ್ಭಗಳಲ್ಲಿ ಆನ್‍ಲೈನ್ ಶಿಕ್ಷಣ ಪರಿಹಾರ ನೀಡುತ್ತದೆ.
- ಈ ಪದ್ದತಿಯಲ್ಲಿ ಅಧ್ಯಯನಕ್ಕೆ ಸಂಬಂಧಪಟ್ಟ ಲೇಖನಗಳನ್ನು, ಪಠ್ಯಗಳನ್ನು ಮೊದಲೇ ಒದಗಿಸಲಾಗುತ್ತದೆ.
- ವಿದ್ಯಾರ್ಥಿಗಳು ತಮ್ಮ ಸ್ವಂತ ಸಮಯದಲ್ಲಿ ಮತ್ತು ವೇಗದಲ್ಲಿ ಕಲಿಯಬಹುದು.
- ಆನ್‍ಲೈನ್ ಚಾಟ್ ಮೂಲಕ ತಮ್ಮ ಸಂದೇಹಗಳಿಗೆ ಸ್ಪಷ್ಟೀಕರಣಗಳನ್ನು ಪಡೆಯಬಹುದು.
- ಆನ್‍ಲೈನ್ ಶಿಕ್ಷಣದ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಕೋರ್ಸ್‍ಗಳ ವ್ಯಾಪಕ ಆಯ್ಕೆ ಸಾಧ್ಯವಾಗುತ್ತದೆ.
- ಜೊತೆಗೆ ಮನೆಯಲ್ಲಿ ಕುಳಿತು, ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿಗಳನ್ನು ನಾವು ಗಳಿಸಬಹುದು.
- ಉದಾಹರಣೆಗೆ ಹೇಳುವುದಾದರೆ, ಸಂಗೀತ, ಕಲೆಯಿಂದ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಕಯಂತ್ರಶಾಸ್ತ್ರದ ವಿಷಯಗಳವರೆವಿಗೂ ಪದವಿಗಳನ್ನು ಪಡೆಯಬಹುದು.
- ಕೌಶಲ್ಯಾಧಾರಿತ ಶಿಕ್ಷಣವನ್ನು ಪಡೆಯಲು ಬಹಳ ಅನುಕೂಲವಾಗಿದೆ.
ಅನಾನುಕೂಲಗಳು
- ಆನ್‍ಲೈನ್ ಶಿಕ್ಷಣದಲ್ಲಿ ಕೆಲವು ಅನಾನುಕೂಲಗಳಿವೆ. ಉದಾಹರಣೆಗೆ ಆನ್‍ಲೈನ್ ಶಿಕ್ಷಣದಲ್ಲಿ ನವನೀಯತೆಯಿರುವುದರಿಂದ, ಪದವಿಯನ್ನು ಗಳಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಅವಕಾಶಗಳಿವೆ.
- ಪ್ರಾಧ್ಯಾಪಕರ ಮತ್ತು ಸಮಾನ ಮನಸ್ಕರ ನಡುವೆ ಮುಖಾಮುಖಿ ಸಂವಹನ ನಡೆಸುವ ಅವಕಾಶವಿರುವುದಿಲ್ಲ.
- ಇದರಿಂದ ಪೂರ್ಣ ಮಟ್ಟದ ಕಲಿಕೆ ಕುಂಠಿತವಾಗಬಹುದು.
- ಸಾಂಪ್ರದಾಯಿಕ ಆನ್ ಕ್ಯಾಂಪಸ್ ಶಿಕ್ಷಣದ ಜೀವನ ಶೈಲಿ, ಶಿಕ್ಷಣದ ಸಂಸ್ಥೆಗಳ ಕಲಿಕಾ ವಾತಾವರಣ, ಸಹ ಪಾಠಿಗಳ ಜೊತೆಯಲ್ಲಿ ಕಳೆಯಬಹುದಾದ ಆನಂದದ ಕ್ಷಣಗಳು ಆನ್‍ಲೈನ್ ಶಿಕ್ಷಣದಲ್ಲಿ ಲಭ್ಯವಿರುವುದಿಲ್ಲ.
- ಆನ್‍ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಸಮಯ ಮೀಸಲಿಡಬೇಕಾಗಿರುತ್ತದೆ. ಏಕೆಂದರೆ, ವಿದ್ಯಾರ್ಥಿಗಳು, ಪದವಿಯಲ್ಲಿ ಕಲಿಯುವ ವಿಷಯಗಳ ಬಗ್ಗೆ ಪ್ರಭುತ್ವವನ್ನು ಹೊಂದಿದ್ದಾರೆ ಎಂಬುವುದನ್ನು ದೂರದಿಂದಲೇ ಸಾಬೀತು ಪಡಿಸಬೇಕು..
- ಪುಟ್ಟ ಮಕ್ಕಳ ಮನೋ ವಿಕಾಸಕ್ಕೆ ಈ ವ್ಯವಸ್ಥೆ ಅಷ್ಟೊಂದು ಅನುಕೂಲಕರವಲ್ಲ..
hope it helps
Similar questions