India Languages, asked by rameshn3109, 7 months ago

ಪ್ರಬಂಧ ಬರೆಯ.
ಗ್ರಂಥಾಲಯ essay 3pages

Answers

Answered by bhuvaneshwariks81
1

Answer:

ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.

ವಿಶ್ವದ ಗ್ರಂಥಾಲಯಗಳನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೇಂದರೆ-

ರಾಷ್ಟ್ರೀಯ ಗ್ರಂಥಾಲಯಗಳು[೩]: ವಿಶ್ವ ಮಟ್ಟದ ಲೇಖಕರ ಗ್ರಂಥಗಳನ್ನು, ಬರಹಗಳನ್ನು ಓದುವ ಅವಕಾಶವನ್ನು ಓದುಗರಿಗೆ ಕಲ್ಪಿಸುತ್ತವೆ.

ಸಾರ್ವಜನಿಕ ಗ್ರಂಥಾಲಯಗಳು[೪][೫]: ಓದುವ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ನೆರವನ್ನು ನೀಡುತ್ತವೆ.

ಸಂಚಾರಿ ಗ್ರಂಥಾಲಯಗಳು : ಸಾರ್ವಜನಿಕ ಗ್ರಂಥಾಲಯಗಳು ತಮ್ಮ ಸೇವಾ ಕ್ಷೇತ್ರವನ್ನು ದೂರ ಪ್ರದೇಶಗಳಿಗೆ ವಿಸ್ತರಿಸಿದಾಗ ಸಂಚಾರಿ ಗ್ರಂಥಾಲಯಗಳು ೧೯೩೧ರಲ್ಲಿ ಅಸ್ತಿತ್ವಕ್ಕೆ ಬಂದುವು. ಇದರ ಜನಕ ಮದ್ರಾಸ್ ಪ್ರಾಂತ್ಯದ, ತಂಜಾವೂರು ಜಿಲ್ಲೆಯ ಮನ್ನಾಗುಡಿಯ ಎನ್,ವಿ.ಕನಗಸಭೈಪಿಳ್ಳೆ.

ಮಕ್ಕಳ ಗ್ರಂಥಾಲಯಗಳು : ಮಕ್ಕಳಲ್ಲಿ ಓದುವ ಜ್ಞಾನವನ್ನು ಬೆಳೆಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಗೊಂಡುವು.

ಖಾಸಗಿ ಗ್ರಂಥಾಲಯಗಳು : ಸಮಾಜದ ಋಣವನ್ನು ತೀರಿಸುವ ಸಲುವಾಗಿ ಸಹೃದಯ ಓದುಗರು ತೆರೆದವುಗಳಾಗಿವೆ.

ಆಧುನಿಕ ಗ್ರಂಥಾಲಯಗಳು[೬] : ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಅಂತರ್ಜಾಲದಿಂದ ಎಲೆಕ್ಟಾನಿಕ್ ಸಂಪನ್ಮೂಲಗಳನ್ನು ಗ್ರಂಥಾಲಯ ಸೇವೆಗಳಲ್ಲಿ ಬಳಸಗುತ್ತಿದೆ. ಅವುಗಳಲ್ಲಿ ಪ್ರಮುಖವಾದುವುಗಳೆಂದರೆ-

mopac- ಇದು ಅಂತರ್ಜಾಲದ ಮೂಲಕ ಓದುಗನಿಗೆ ಬೇಕಾದ ಗ್ರಂಥವನ್ನು ಕ್ಷಣ ಮಾತ್ರದಲ್ಲಿ ಹುಡುಕಿ ಕೊಡುತ್ತದೆ.

kiosk- ಇದು ಬಳಕೆದಾರರ ಅಂತರ್ ಸಂಪರ್ಕಕ್ಕೆ ಕಾರಣವಾಗುತ್ತದೆ.

opac- ಇದು ರಾಷ್ಟ್ರೀಯ ಗ್ರಂಥಗಳನ್ನು ಹುಡುಕಿಕೊಡುತ್ತದೆ.

etdp- ಇದರಲ್ಲಿ ಯಾವುದೇ ವಿಶ್ವವಿದ್ಯಾನಿಲಯದ ೨೧೮೫ ಮಹಾಪ್ರಬಂಧಗಳನ್ನು ಅಪ್ಲೊಡ್ ಮಾಡಬಹುದು.

ir- ಸಾಂಸ್ಥಿಕ ಭಂಡಾರವನ್ನು ಮುಕ್ತ ಸಂಪನ್ಮಾಲ ತಂತ್ರಾಂಶವನ್ನು ಬಳಸಿ ನಿರ್ಮಿಸಲಾಗಿದೆ. ಈ ಭಂಡಾರದಲ್ಲಿ ಒಟ್ಟು ೧,೧೦,೧೦೦ರಷ್ಟು ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳ ಬರಹಗಳನ್ನು ಕ್ರೋಢಿಕರಿಸಿ ಇಡಬಹುದು.

ಆಧುನಿಕ ಗ್ರಂಥಾಲಯಗಳ ದುರಂತವೆಂದರೆ ಕೃತಿಗಳೇ ಓದುಗರಿಂದ ಶೋಷಣೆಗೆ ಒಳಗಾಗುವುದು. ಇದನ್ನು ಮೂರು ಹಂತಗಳಲ್ಲಿ ಪತ್ತೆ ಹಚ್ಚಬಹುದು.

ಗ್ರಂಥಗಳ ಸ್ಥಾನ ಪಲ್ಲಟ-ಸ್ವಾರ್ಥ ಮನೋಭಾವದ ಓದುಗರು ಗ್ರಂಥಗಳನ್ನು ಮುಚ್ಚುಮರೆಯಿಂದ ಕಾದಿರಿಸಿಕೊಳ್ಳುವ ತಂತ್ರ.

ಗ್ರಂಥಗಳ ಒಳಭಾಗಗಳ ಕಳವು- ಓದುಗರ ಕೆಟ್ಟ ಹವ್ಯಾಸಗಳಲ್ಲಿ ಇದು ಪ್ರಮುಖವಾದುದು. ಎಷ್ಟೋ ಕೃತಿಗಳಲ್ಲಿ ಒಳಗಿನ ಹಾಳೆಗಳೇ ಇರುವುದಿಲ್ಲ.

ಪಡೆದ ಗ್ರಂಥಗಳನ್ನು ಹಿಂತಿರುಗಿಸದೇ ಇರುವುದು-ತಾವು ಓದಲು ತೆಗೆದುಕೊಂಡು ಹೋದ ಗ್ರಂಥಗಳನ್ನು ಸರಿಯಾದ ಸಮಯಕ್ಕೆ ಹಿಂದಿರುಗಿಸದೆ ಇರುವುದು.ಅವು ಒಂದೊಂದೇ ಪ್ರತಿಗಳಿದ್ದರೆ ಇನ್ನೂ ಕಷ್ಟ.

ಏನಿದು ಕೃತಿಚೌರ್ಯ? ಸಂಪಾದಿಸಿ

ಸಂಶೋಧನಾ ಸಂದರ್ಭದಲ್ಲಿ ನಿಯೋಜಿತ ಪ್ರಬಂಧಗಳು, ಲಘು ಪ್ರಬಂಧಗಳು ಹಾಗೂ ಮಹಾಪ್ರಬಂಧಗಳನ್ನು ಬೆರೆಯುವ ಸಮಯದಲ್ಲಿ, ಬೇರೊಬ್ಬರ ಬರಹಗಳನ್ನು ಯಥಾವತ್ತಾಗಿ ನಕಲು ಮಾಡಿ ತಮ್ಮ ಹೆಸರನ್ನು ಹಾಕಿಕೊಂಡು ತಮ್ಮದೇ ಎಂಬಂತೆ ಬಿಂಬಿಸುವುದು. ಕೃತಿಚೌರ್ಯ ಅಥವಾ ನಕಲು ಒಂದು ಶಿಕ್ಷಾರ್ಹ ಅಪರಾಧ. ಇದನ್ನು ಸಂಶೋಧನಾ ದುರ್ನಡತೆ ಎಂಬುದಾಗಿ ಪರಿಗಣಿಸಲಾಗಿದೆ. ಇಂತಹ ದುರ್ನಡತೆಯಿಂದ ಸಂಶೋಧಕರು, ಸಂಶೋಧನಾ ಸಂಸ್ಥೆಗಳು ಭಾರಿ ಬೆಲೆ ತೆರಬೇಕಾಗುತ್ತದೆ. * ಇಂತಹ ಕೃತಿಚೌರ್ಯದಿಂದ ಸಂಶೋಧನಾ ಗುಣಮಟ್ಟ ಕುಂಠಿತವಾಗುತ್ತದೆ. ಇದರಿಂದ ಧನಸಹಾಯ ಮಾಡಿದ ಸಂಸ್ಥೆಗಳಿಗೆ ಕೆಟ್ಟ ಹೆಸರು ಪ್ರಾಪ್ತವಾಗುತ್ತದೆ. ೧೯೯೩ರಲ್ಲಿ ಅಮೆರಿಕಾದ ಹಾವರ್ಡ್ ವಿಶ್ವವಿದ್ಯಾನಿಲಯದಲ್ಲಿ ಮೊಟ್ಟ ಮೊದಲ ಬಾರಿಗೆ ಈ ತಂತ್ರಾಂಶವನ್ನು ಬಳಸಲಾಯಿತು. ಕೃತಿಚೌರ್ಯ ಪತ್ತೆ ಹಚ್ಚುವ ತಂತ್ರಾಂಶಕ್ಕೆ ಯಾವುದೇ ಸಂಶೋಧನಾ ಬರಹಗಳನ್ನು ಒಳಪಡಿಸಿದಾಗ ಆ ಬರಹವು word, Html, Pdf, Xml, Corel Word Perfect, Rich text format, Abode postscript, plain text-tax ಮೊದಲಾದ ಫೈಲುಗಳನ್ನು ಪರಿಶೀಲನೆಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.

ಆದರೆ ಈ ತಂತ್ರಾಂಶವು ಗ್ರಾಫ್ಗಳು, ಚಿತ್ರಗಳು, ಫೋಟೋಗಳನ್ನು, ವಾಟರ್‍ಮಾರ್ಕ್‍ಗಳು, ಲೈಟ್‍ಕಲರಿಂಗ್‍ಗಳನ್ನು ಪರಿಶೀಲಿಸುವುದಿಲ್ಲ. ಈ ತಂತ್ರಾಂಶವು ಅಧಿಕ ಸಂಖ್ಯೆಯ ದತ್ತಾಂಶಮೂಲಗಳನ್ನು, ಗಣಕಜಾಲಗಳನ್ನು ಪರಿಶೀಲಿಸಿ ಸಂಶೋಧನಾ ಸಾಹಿತ್ಯದಲ್ಲಿ ಆಗಿರುವ ನಕಲಿ ಪ್ರಾಣವನ್ನು ಪತ್ತೇ ಹಚ್ಚುತ್ತದೆ. ಸಂಶೋಧನಾ ಪ್ರಬಂಧಗಳಲ್ಲಿ ನಕಲಿನ ಪ್ರಮಾಣ ಹೆಚ್ಚಾಗಿದ್ದರೆ ಅಂತಹ ಪ್ರಬಂಧಗಳು ತಿರಸ್ಕೃತವಾಗುತ್ತವೆ.

Similar questions