English, asked by devadigajagadeeshsh3, 7 months ago

essay of junk food in Kan nada​

Answers

Answered by Anonymous
1

Answer:

ನಿಯಮಿತವಾಗಿ ಜಂಕ್ ಆಹಾರವನ್ನು ಸೇವಿಸುವುದರಿಂದ ಟೈಪ್ 2 ಡಯಾಬಿಟಿಸ್ ಸೇರಿದಂತೆ ಹಲವಾರು ದೀರ್ಘಕಾಲಿಕ ರೋಗಗಳು ಒಕ್ಕರಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಂಶೋಧನೆ ತೋರಿಸಿದೆ. ಈ ರೀತಿಯ ಆಹಾರವು ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ. ಹೆಚ್ಚಿನ ಜಂಕ್ ಆಹಾರಗಳು ಕಾರ್ಬೊಹೈಡ್ರೇಟ್‌ಗಳಿಂದ ತುಂಬಿರುತ್ತವೆ ಮತ್ತು ಇದರಲ್ಲಿ ಫೈಬರ್ ಅಂಶ ಕಡಿಮೆ ಇರುತ್ತದೆ. ಇದು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಲು ಕಾರಣವಾಗಬಹುದು. ಟೈಪ್ 2 ಡಯಾಬಿಟೀಸ್ ಸಾಧ್ಯತೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ಹೃದ್ರೋಗ: ಜಂಕ್ ಆಹಾರ ಪದಾರ್ಥಗಳು ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳಿಂದ ತುಂಬಿರುತ್ತವೆ. ಇದು ನಿಮ್ಮ HDL (ಇತ್ತಮ ಕೊಲೆಸ್ಟ್ರಾಲ್) ತಗ್ಗಿಸಿ LDL (ಕೆಟ್ಟ ಕೊಲೆಸ್ಟರಾಲ್) ಅನ್ನು ಹೆಚ್ಚಿಸಬಹುದು. ಪರಿಣಾಮ ಟೈಪ್ 2 ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚುತ್ತದೆ.

Similar questions