Essay on elections good for democracy in Kannada language
Answers
Answer:
ನವದೆಹಲಿ, ಜನವರಿ 25: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಷ್ಟ್ರೀಯ ಮತದಾರರ ದಿನದಂದು ಜನತೆಗೆ ಶುಭ ಕೋರಿದ್ದಾರೆ. ಚುನಾವಣೆಗಳು ಪ್ರಜಾಪ್ರಭುತ್ವದ ಸಂಭ್ರಮಾಚರಣೆ ಎಂದು ಬಣ್ಣಿಸಿ ಟ್ವೀಟ್ ಮಾಡಿದ್ದಾರೆ.
PM wishes citizens on National Voters’ Day
'ಪ್ರತಿಯೊಬ್ಬ ಅರ್ಹ ಮತದಾರರೂ ತಮ್ಮ ಹಕ್ಕು ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ ಮತ್ತು 18 ವರ್ಷ ತುಂಬಿದ ಯುವಕರು ತಮ್ಮನ್ನು ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕು' ಎಂದು ಕರೆ ನೀಡಿದ್ದಾರೆ.
"ರಾಷ್ಟ್ರೀಯ ಮತದಾರರ ದಿನದಂದು ನಿಮ್ಮೆಲ್ಲರಿಗೂ ಶುಭ ಕೋರುತ್ತೇನೆ. ನಾವು ಚುನಾವಣಾ ಆಯೋಗಕ್ಕೆ ಶುಭಕೋರೋಣ ಮತ್ತು ನಮ್ಮ ಪ್ರಜಾಪ್ರಭುತ್ವದಲ್ಲಿ ಅವರ ಮಹತ್ವದ ಪಾತ್ರಕ್ಕೆ ವಂದಿಸೋಣ.
ಚುನಾವಣೆಗಳು ಪ್ರಜಾಪ್ರಭುತ್ವದ ಸಂಭ್ರಮಾಚರಣೆ. ಅವು ಜನತೆಯ ಇಚ್ಛೆಯನ್ನು ಸಂವಹನ ಮಾಡುತ್ತವೆ, ಇದು ಪ್ರಜಾಪ್ರಭುತ್ವದಲ್ಲಿ ಸರ್ವೋನ್ನತವಾಗಿದೆ.
ನಾನು ಪ್ರತಿಯೊಬ್ಬ ಅರ್ಹ ಮತದಾರರಿಗೂ ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡುತ್ತೇನೆ ಮತ್ತು 18 ವರ್ಷ ತುಂಬಿದ ತರುವಾಯ ತಮ್ಮನ್ನು ಮತದಾರರಾಗಿ ನೋಂದಣಿ ಮಾಡಿಕೊಳ್ಳುವಂತೆ ನನ್ನ ಯುವ ಸ್ನೇಹಿತರಿಗೆ ಕರೆ ನೀಡುತ್ತೇನೆ" ಎಂದು ಪ್ರಧಾನಿ ತಿಳಿಸಿದ್ದಾರೆ.(ಒನ್ಇಂಡಿಯಾ ಸುದ್ದಿ)