Essay on historical places in karnataka in kannada language
Answers
Answered by
25
Answer:
Explanation:
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ದಿನಾಂಕ ಸೆ. 27 ರಿಂದ ಸೆ. 30, 2012ರ ತನಕ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಇಲಾಖೆ ವತಿಯಿಂದ ಕರಕುಶಲ ಮೇಳ ಆಯೋಜಿಸಿದೆ.
ಭಾರತದಲ್ಲಿ ಕರ್ನಾಟಕ ನಾಲ್ಕನೆಯ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿದೆ. ಭಾರತದಲ್ಲಿರುವ ರಕ್ಷಿತ ಸ್ಮಾರಕಗಳ ಪೈಕಿ, 507 ಸ್ಮಾರಕಗಳನ್ನು ಹೊಂದಿದ ಕರ್ನಾಟಕವು ಎರಡನೆಯ ಸ್ಥಾನದಲ್ಲಿದೆ. ವಿಶ್ವ ಪರಂಪರೆಯ ತಾಣಗಳ ಪಟ್ಟಿ ಕರ್ನಾಟಕದ ಪ್ರಾಕೃತಿಕ, ಸಾಂಸ್ಕೃತಿಕ ತಾಣಗಳು ಇದೆ.
ಕರ್ನಾಟಕದಲ್ಲಿ ನೈಸರ್ಗಿಕ ಸೌಂದರ್ಯದ ಪ್ರದೇಶಗಳು, ಹಾಗು ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮವನ್ನು ಒದಗಿಸುತ್ತವೆ. ಕರ್ನಾಟಕದ ಪ್ರವಾಸಿ ತಾಣಗಳು ಒಂದು ಸುತ್ತಿನ ಕಣ್ಣೋಟ ಇಲ್ಲಿದೆ....
ಬಿಜಾಪುರದ ಗೋಲ ಗುಮ್ಮಟ, ಶಿವಮೊಗ್ಗ ಗೇರುಸೊಪ್ಪ(ಜೋಗ), ಪಟ್ಟದಕಲ್ಲು ದೇಗುಲಗಳು, ಹಾಸನದ ಬೇಲೂರು ಹಳೆಬೀಡು, ಬಳ್ಳಾರಿ ಜಿಲ್ಲೆಯ ಹಂಪೆ, ಮೈಸೂರು ಅರಮನೆ, ಚಿತ್ರದುರ್ಗದ ಕೋಟೆ, ಚಿಕ್ಕಮಗಳೂರಿನ ಶೃಂಗೇರಿ ಮುಂತಾದ ಸ್ಥಳಗಳ ಚಿತ್ರಣವಿದೆಗೋಲ ಗುಮ್ಮಟ
ಗೋಲ ಗುಮ್ಮಟ ಬಿಜಾಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (1627-1657) ಅವರ ಸಮಾಧಿ. ಬಿಜಾಪುರವಲ್ಲದೆ ಬಿದರ್, ಗೊಲ್ಕೊಂಡ, ಗುಲ್ಬರ್ಗಗಳನ್ನೊಳಗೊಳ್ಳುವ ‘ಬಹುಮನೀ' ದಾಯಾದಿಗಳಿಗೆ ಆವಾಜ಼ಿನ ಬಗ್ಗೆ ಒಂದು ಕಿವಿಯಷ್ಟು ಹೆಚ್ಚೇ ಮರ್ಜಿಯಿದ್ದಿರಬೇಕು.
ಹೈದರಾಬಾದಿನ ಗೋಲ್ಕೊಂಡ ಕೋಟೆಯ ದ್ವಾರದಲ್ಲಿ ಚಪ್ಪಾಳೆಯಿಟ್ಟರೆ ಸಪ್ಪಳ ಮತ್ತೆ ಮತ್ತೆ ಆಚೀಚಿನ ಗೋಡೆಗಳನ್ನು ತಟ್ಟಿಕೊಂಡು ಗುಡ್ಡದ ಮೇಲಿನವರೆಗೆ ಸಾಗುವುದು ಕೇಳಿಸುತ್ತದೆ, ನೋಡಿ!ಐಹೊಳೆ ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ 483 ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ. ಐಹೊಳೆಯು ಬಾದಾಮಿ ಚಾಲುಕ್ಯರ ಮೊದಲ ರಾಜಧಾನಿಯಾಗಿದ್ದಿತು. ಈ ಸ್ಥಳದ ದೇವಾಲಯಗಳು ಹಾಗೂ ದೇವಾಲಯದ ಶಿಲ್ಪಗಳು ಅತಿ ಹೆಚ್ಚು ಪ್ರಾಚೀನವಾದವುಗಳಾಗಿವೆ.ಇದು ಚಾಲುಕ್ಯರ ಕಾಲದಲ್ಲಿ ವಿದ್ಯಾಕೇಂದ್ರವಾಗಿತ್ತು
ಮಧುಕೇಶ್ವರ ದೇವಾಲಯ, ಬನವಾಸಿ ಬನವಾಸಿ ಪಟ್ಟಣ ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಶಿರಸಿ ತಾಲೂಕಿನಲ್ಲಿದೆ. ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು 30 ಕಿ.ಮಿ.ಅಂತರದಲ್ಲಿದೆ. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ "ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ" ಎಂದು ಹೇಳಿದ್ದಾನೆ.
Answered by
0
Explanation:
ಸಹಚರರೆಲ್ಲ ಒಗ್ಗಟ್ಟಾಗಿ ಊಟಮಾಡುವುದು
Similar questions