India Languages, asked by ria02, 1 year ago

essay on jeevana maulyagalu in kannada

Answers

Answered by goal
24

ಇಲ್ಲಿ ಜೀವನ ಎಂದಾಗ ಮಾನವ ಜೀವನ ಮತ್ತು ವೌಲ್ಯಗಳು ಅಂದಾಗ ಶಾಶ್ವತವಾಗಿ ಉಳಿಯುವ ಮತ್ತು ಸಕಲ ಸೃಷ್ಟಿಯ ಒಳಿತಿಗಾಗಿ ಮಾನವ ರೂಢಿಸಿಕೊಳ್ಳಬೇಕಾಗಿರುವ ಕೆಲವೊಂದು ನಂಬಿಕೆಗಳು ಮತ್ತು ಆಚರಣೆಗಳು ಎಂದು ತಿಳಿಯಬೇಕಾಗುತ್ತದೆ. ಜೀವನ ಶಾಶ್ವತವಲ್ಲ. ಅದು ಬರೀ ನಶ್ವರ ಎಂಬುದು ಎಲ್ಲರಿಗೂ ತಿಳಿದಿದೆ. ಜೀವ ಜಗತ್ತಿನಲ್ಲಿ ಎಲ್ಲವೂ, ಎಲ್ಲರೂ ಹುಟ್ಟಿಬಂದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕಾಗುತ್ತದೆ. ‘ಜಾತಸ್ಯ ಮರಣಂ ಧ್ರುವಂ’. ಕೆಲವೇ ನಿಮಿಷಗಳ ಕಾಲ ಮಾತ್ರ ಬದುಕಿರುವ ಸೂಕ್ಷ್ಮಾತಿ ಸೂಕ್ಷ್ಮ ಏಕಕೋಶ ಜೀವಿಗಳು ಬ್ಯಾಕ್ಟೀರಿಯಾಗಳಿಂದ ತೊಡಗಿ ನೂರ್ಕಾಲ ಬಾಳುವ ಮಾನವನೂ ಸೇರಿದಂತೆ ಇತರೇ ಕೆಲವು ಪ್ರಾಣಿಗಳು ಈ ಪಟ್ಟಿಯಲ್ಲಿ ಬರುತ್ತವೆ. ಎರಡು-ಮೂರು ಸಾವಿರ ವರ್ಷಕಾಲ ಬಾಳಿದ, ಈಗಲೂ ಕಂಡುಬರುವ ಅನೇಕ ವೃಕ್ಷಗಳು ಭಾರತವೂ ಸೇರಿದಂತೆ ವಿಶ್ವಾದ್ಯಂತ ಕಾಣಸಿಗುತ್ತವೆ. ಆದರೆ ಒಂದಲ್ಲ ಒಂದು ದಿನ ಅವಕ್ಕೂ ಕೊನೆ ಇದ್ದೇ ಇದೆ. ಹೀಗಿರುತ್ತ ಶಾಶ್ವತವಾದುದು ಯಾವುದು ಎಂಬ ಪ್ರಶ್ನೆ ಬರುತ್ತದೆ. ಈ ಸೃಷ್ಟಿಯೂ ಶಾಶ್ವತವಲ್ಲ. ನಿರ್ಜೀವ ವಸ್ತುಗಳಾದ ಸಾಗರ, ಪರ್ವತ, ಬೆಟ್ಟಗಳು, ಶಿಲೆಗಳು- ಇವುಗಳಿಗೂ ಶಾಶ್ವತತೆ, ನಿರಂತರತೆ ಇರುವುದಿಲ್ಲ. ಒಂದರ್ಥದಲ್ಲಿ ಅವೂ ಶಾಶ್ವತವಲ್ಲವೆನ್ನಬಹುದು.
ಆದರೆ ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ನಂಬಿಕೊಂಡು, ಪಾಲಿಸಿಕೊಂಡು ಬಂದಿರುವ ಜೀವನ ವೌಲ್ಯಗಳೇ ನಿಜವಾದ ಅರ್ಥದಲ್ಲಿ ಶಾಶ್ವತವಾದವುಗಳು. ವೌಲ್ಯಗಳಿಗೆ ಸಾವಿಲ್ಲ. ಅವುಗಳನ್ನು ಪಾಲಿಸಿದವರಿಗೆ ಕೊನೆಯಿರಬಹುದು. ಯಾರು ಈ ವೌಲ್ಯಗಳನ್ನು ಅಕ್ಷರಶಃ, ಶಬ್ದಶಃ, ಭಾವಶಃ ತಮ್ಮ ಬದುಕಿನಲ್ಲಿ ಪಾಲಿಸಿದ್ದಾರೋ ಅವರು ಶಾಶ್ವತವಾಗಿರುತ್ತಾರೆ. ಅಂದರೆ ಬದುಕಿರುತ್ತಾರೆ ಎಂದಲ್ಲ. ಆದರೆ ಸತ್ತ ಮೇಲೂ ಬದುಕಿರುತ್ತಾರೆ. ಅಂದರೆ ಅವರೂ ಶಾಶ್ವತವಾಗಿರುತ್ತಾರೆ ಎಂದರ್ಥ.
‘ಯಾರು ಇತರರಿಗಾಗಿ ಬದುಕುತ್ತಾರೋ ಅವರ ಬದುಕೇ ನಿಜವಾದ ಬದುಕು. ಇತರರು ಬದುಕಿದ್ದರೂ ಸತ್ತಂತೆ’ ಎಂದ ಸ್ವಾಮಿ ವಿವೇಕಾನಂದರೇ ಶಾಶ್ವತ. ಅವರು ಈ ದೇಶದಲ್ಲಿ ಜನಿಸಿ 150 ವರ್ಷವಾದ ಈ ಸಂದರ್ಭದಲ್ಲಿ ಅವರ ಉದಾಹರಣೆಯೇ ಶಾಶ್ವತ ಬದುಕಿಗೆ ಸೂಕ್ತ ನಿದರ್ಶನವಾಗಬಲ್ಲದು.

ಯಾವ ವೌಲ್ಯಗಳನ್ನು ಸ್ವಾಮೀಜಿ ಪ್ರತಿನಿಧಿಸಿದ್ದರೋ ಅವುಗಳನ್ನೇ ಶಾಶ್ವತ ಜೀವನ ವೌಲ್ಯಗಳೆನ್ನುವುದು. ಅವರು ಹಿಂದಿನ, ಇಂದಿನ ಮತ್ತು ಮುಂದಿನ ಪೀಳಿಗೆಗಳ ಜೀವಂತ ಕೊಂಡಿಯಾಗಿದ್ದಾರೆ. ಜೀವನ ವೌಲ್ಯಗಳ ಪಟ್ಟಿ ಮಾಡುವುದು ಈ ಲೇಖನದ ಉದ್ದೇಶವಲ್ಲ. ಅಂತಹ ಪಟ್ಟಿ ಕೆಲವೊಮ್ಮೆ ಅಪೂರ್ಣವೂ ಆಗಬಹುದು. ‘ವಸುಧೈವ ಕುಟುಂಬಕಮ್‌’ ಎಂದು ನಂಬಿರುವ ಭಾರತೀಯ ವಿಚಾರವೇ ಅತ್ಯಂತ ಪರಮೋಚ್ಚ ಜೀವನವೌಲ್ಯ. ‘ಆತ್ಮನೋಮೋಕ್ಷಾರ್ಥಂ ಜಗದ್ಧಿತಾಯ ಚ’ ತನ್ನ ಮೋಕ್ಷ ಸಾಧನೆಗಾಗಿ ಮಾತ್ರ ಈ ಜೀವನ ಇರುವುದಲ್ಲ ಬದಲಾಗಿ ಜಗದ್ಧಿತಾಯಚ ಅಂದರೆ ಇಡೀ ಜಗತ್ತಿನ ಹಿತಕ್ಕೀಸ್ಕರ ಬದುಕುವುದೇ ಸಾರ್ಥಕ ಬದುಕು ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ‘ಶ್ರದ್ಧಾವಾನ್‌ ಲಭತೇ ಜ್ಞಾನಮ್‌; ‘ಸತ್ಯಂವದ, ಧರ್ಮಂಚರ’; ‘ಸತ್ಯವೇವ ಜಯತೇ’, ‘ನಹಿಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ; ಮಾತೃವತ್‌ ಪರದಾರೇಷು, ಪರದ್ರವ್ಯೇಷು ಲೋಷ್ಟವತ್‌; ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್‌; ಧರ್ಮ, ಅರ್ಥ, ಕಾಮ, ಮೋಕ್ಷದಂತಹ ಚತುರ್ವಿಧ ಪುರುಷಾರ್ಥಗಳು – ಬಹುಜನ ಹಿತಾಯ, ಬಹುಜನ ಸುಖಾಯ’ ಇವುಗಳೇ ಮಾನವ ಜೀವನದ ಮಹೋನ್ನತ ಆದರ್ಶವಾಗುವುದು. ‘ಜ್ಞಾನಂ ವಿಜ್ಞಾನ ಸಹಿತಮ್‌; ಜ್ಞಾನ, ಭಕ್ತಿ, ವೈರಾಗ್ಯಗಳ ಸಾಧನೆ ಮೋಕ್ಷ ಪ್ರಾಪ್ತಿಯ ಸಾಧನೆ; ವಿನಯವಿಲ್ಲದ ವಿದ್ಯೆ, ಶ್ರಮವಿಲ್ಲದ ಸಂಪಾದನೆ, ವೌಲ್ಯಗಳಿಲ್ಲದ ರಾಜಕಾರಣ, ಶಕ್ತಿಯಿಲ್ಲದ ಕರುಣೆ ಸಲ್ಲದು ಎಂಬುದೇ ಪರಮ ಜೀವನವೌಲ್ಯ. ಕರ್ಮಣ್ಯೇವಾಧಿಕಾರಸ್ತೇ, ಉದ್ಯೀಗಂ ಪುರುಷ ಲಕ್ಷಣಂ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯದೇವೋ ಭವ, ಅತಿಥಿ ದೇವೋ ಭವ, ಮೂರ್ಖದೇವೋ, ದೀನ-ದರಿದ್ರ ದೇವೋಭವ ಇತ್ಯಾದಿ. ಆದಿಕಾವ್ಯವೆಂದು ಕರೆಯಲಾಗುವ ರಾಮಾಯಣ, ಪ್ರಪಂಚದ ಅತ್ಯಂತ ಬೃಹತ್ತಾದ ಗ್ರಂಥವೆಂದು ಕರೆಯಲಾಗುವ ಮಹಾಭಾರತ, ಅದಕ್ಕಿಂತ ಸಹಸ್ರಾರು ವರ್ಷ ಪೂರ್ವದಲ್ಲಿ ರಚಿತವಾದ ವೇದಗಳಿಂದ ತೊಡಗಿ, ಉಪನಿಷತ್‌ಗಳು, ಪುರಾಣಗಳು, ಸುಭಾಷಿತಗಳು, ವಚನಗಳು, ಕಬೀರ, ರಹೀಮ, ತುಲಸೀದಾಸ, ಕನಕದಾಸ, ಪುರಂದರದಾಸರ ಹಾಡುಗಳು, ನಾಣ್ಣುಡಿಗಳು, ಗಾದೆಗಳು, ಪ್ರಹೇಲಿಕೆಗಳು, ಇವೆಲ್ಲವುಗಳು ಮಾನವ ಜೀವನದ ಅನುಭವದಿಂದ ಹೊರಬಂದ ಶಾಶ್ವತ ಸತ್ಯಗಳು. ನಿತ್ಯ ಸತ್ಯಗಳೇ ನಿಜವಾದ ಶಾಶ್ವತಜೀವನ ವೌಲ್ಯಗಳು. ಚಾಣಕ್ಯನ ಅರ್ಥಶಾಸ್ತ್ರ, ರಾಜನೀತಿ ಶಾಸ್ತ್ರಗಳು ಇಂತಹ ವೌಲ್ಯಗಳಿಂದ ತುಂಬಿತುಳುಕುತ್ತಿವೆ. ಅದು ವ್ಯಕ್ತಿ ಹೇಗೆ ಬದುಕಬೇಕೆಂದು ತಿಳಿಸುತ್ತದೆ. ಶಾಶ್ವತ ಜೀವನ ವೌಲ್ಯಗಳನ್ನು ಇಂತಿಷ್ಟೇ ಎಂದು ಹೇಳಲಾಗದು. ಪ್ರತಿಯೊಬ್ಬ ಮಹಾಪುರುಷನ ಜೀವನದಿಂದಲೂ ನಮಗೆ ಇಂತಹ ವೌಲ್ಯಗಳು ಸಿಗುತ್ತವೆ. ಮತ್ತು ಇಂತಹ ವೌಲ್ಯಗಳನ್ನು ತನ್ನ ಜೀವನದಲ್ಲಿ ನೂರಕ್ಕೆ ನೂರು ಆಚರಿಸಿದವನೇ ಮಹಾಪುರುಷರ ಪಟ್ಟಿಯಲ್ಲಿ ಸೇರಿಬಿಡುತ್ತಾನೆ. ಮಾನವ ಜೀವನದ ನೂರಾರು ವೃತ್ತಿಗಳು, ಹತ್ತಾರು ವೇಷಭೂಷಣಗಳು, ಸಹಸ್ರಾರು ಭಾಷೆ, ಉಪಭಾಷೆಗಳು ವೌಲ್ಯಗಳ ಅಭಿವ್ಯಕ್ತಿಯೆಂದೇ ಪರಿಗಣಿಸಲ್ಪಡುತ್ತವೆ. ಸಾವಿರ ವೌಲ್ಯಗಳನ್ನು ಭಾಷಣದಲ್ಲಿ ಉದಾಹರಣೆ ಸಹಿತ ವಿವರಿಸಿ ಅವುಗಳಲ್ಲಿ ಕೆಲವನ್ನಾದರೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳದವನ ಮಾತುಗಳು ಕೇವಲ ಟೊಳ್ಳು-ಜಳ್ಳು ಎಂದು ಪರಿಗಣಿಸಲ್ಪಡುತ್ತವೆ.

ಸ್ವಯಂ ಅತ್ಯಂತ ಜಿಪುಣ, ವ್ಯಾಪಾರಿಯಾಗಿದ್ದ ವ್ಯಕ್ತಿ, (ಶ್ರೀನಿವಾಸ ಶೆಟ್ಟಿ) ಪುರಂದರದಾಸನಾದ ಬಗೆಯಿಂದ ನಾವು ಕಲಿಯಬೇಕಾದ ವೌಲ್ಯವಿಲ್ಲವೇ? ಅತಿಜಿಪುಣ ವ್ಯಕ್ತಿ ತನ್ನ ಜೀವನಪೂರ್ತಿ ಯಾರಿಗೂ ಚಿಕ್ಕಾಸೂ ಸಹಾಯ ಮಾಡದೆ ಕೊನೆಯಲ್ಲಿ ತನ್ನೆಲ್ಲ ಸಂಪತ್ತನ್ನೂ ಬಿಟ್ಟು ಹೋಗಿ ಅತಿದೊಡ್ಡ ದಾನಿಯೆಂದು ಕರೆಸಿಕೊಳ್ಳುವುದಲ್ಲವೇ? ಹೀಗೆ ಮಾಡದಿರುವುದೇ ಬಹುದೊಡ್ಡ ವೌಲ್ಯ. ‘ದಾನಂ ಭೋಗೋನಾಶಃ ತಿಸ್ರೀಗತಯೋ ಭವಂತಿ ವಿತ್ತಸ್ಯ, ಯೋ ನ ದದಾತಿ ನ ಭುಂಕ್ತೇ ತಸ್ಯ ತತೀಯಾ ಗತಿರ್ಭವತಿ’ ಅಂದರೆ ಹಣಕ್ಕೆ ಮೂರೇ ದಾರಿಗಳಂತೆ. ದಾನ, ಬೋಗ (ಅನುಭವಿಸುವುದು) ಮತ್ತು ನಾಶ ಇವು ಮೂರೇ ದಾರಿಗಳು. ಈ ಪೈಕಿ ಮೊದಲ ಎರಡು ದಾರಿಗಳಲ್ಲಿ ನಾವು ಕ್ರಮಿಸದಿದ್ದರೆ ಆ ಹಣಕ್ಕೆ ಮೂರನೇ ದಾರಿಯಾದ ನಾಶವೇ ಸೈ!. ಎನ್ನುವಲ್ಲಿ ಎಂತಹ ವೌಲ್ಯ ನೋಡಿ! ‘ಮಾಕುರುಧನ, ಜನ ಯೌವ್ವನ ಗರ್ವಂ’ ಎಂಬ ಶಂಕರಾಚಾರ್ಯರ ನುಡಿ ಸಾವಿರ ಸಾವಿರ ಪಾಲು ಜೀವನ ವೌಲ್ಯದ ದರ್ಶನವಾಗಿದೆ. ಕಾಲಃ ಕ್ರೀಡತಿ ಗಚ್ಛತಿ ಆಯುಃ ಎಂಬ ಉಕ್ತಿಯ ಮೂಲಕ ಜೀವನದ ಹೃಸ್ವತ್ವವನ್ನು ಅವರು ಎತ್ತಿ ಹೇಳುತ್ತಾರೆ. ಯಲ್ಲಸೇ ನಿಜ ಕರ್ಮೋಪಾತ್ತಂ, ವಿತ್ತಂತೇನ ವಿನೋದಯಚಿತ್ತಂ – ನಿನ್ನ ಸಹಜ ವೃತ್ತಿಯಿಂದ ದೊರೆತ ಹಣದಿಂದಲೇ ನಿನ್ನ ಮನಸ್ಸನ್ನು ಸಂತೋಷದಲ್ಲಿಟ್ಟುಕೋ ಎಂದು ಅವರು ಹೇಳುವಾಗ ಪರಿಶ್ರಮ, ತೃಪ್ತಿ ಮತ್ತು ಸಂತೋಷವೆಂಬ ಮೂರು ವೌಲ್ಯಗಳನ್ನು ಅವರು ಗುರುತಿಸುತ್ತಾರೆ.

Similar questions