Essay on library in kannada
Answers
ಗ್ರಂಥಾಲಯಗಳು ಜ್ಞಾನದಾನದ ಕೇಂದ್ರಗಳು. ಓದಲು ಆಕರ ಗ್ರಂಥಗಳಾಗಿ ಬಳಸಲು ಇಲ್ಲದೇ ಪುಸ್ತಕಗಳನ್ನು ಎರವಲು ರೂಪದಲ್ಲಿ ಪಡೆದು ಓದಲು ಬೇಕಾದ ಪುಸ್ತಕಗಳನ್ನು ಹೊಂದಿರುವ ಸ್ಥಳವೇ ಗ್ರಂಥಾಲಯ. ಆದರೆ ಹಿಂದೆ ಕಾಣುತ್ತಿದ್ದ ಸ್ವರೂಪವೇ ಬೇರೆ. ಆ ನಂತರ ಬಂದ ಮಧ್ಯಯುಗದಲ್ಲಿ ಮಠಗಳಲ್ಲಿ ಗ್ರಂಥಾಲಯಗಳು ಕಾಣಿಸಿಕೊಂಡವು. ಗ್ರಂಥಾಲಯದಲ್ಲಿ ಅನೇಕ ಭಾಷೆಯ ಪುಸ್ತಕಗಳು ಹಾಗೂ ಅದರ ವಿಷಯಗಳು ಸಿಗುತ್ತವೆ. ಈ ಗ್ರಂಥಾಲಯಗಳನ್ನು ನಗರದಲ್ಲಿ ಶಾಲಾ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.
· ಕೆಲವು ಮಕ್ಕಳಿಗೆ ಪುಸ್ತಕಗಳನ್ನು ಕೊಂಡು ಕೊಳ್ಳಲು ಹಣವಿರುವುದಿಲ್ಲ. ಆಗ ಅವರು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ತೆಗೆದುಕೊಂಡು ಓದಬಹುದು. ನಮಗೆ ಬೇಕಾದ ವಿಷಯಗಳನ್ನು ಗ್ರಂಥಗಳಿಂದ ಅರಿತುಕೊಳ್ಳಬಹುದು. ಹೀಗೆ ಗ್ರಂಥಾಲಯವು ಜ್ಞಾನಾಭಿವೃದ್ಧಿಯ ಮಹತ್ವದ ಪಾತ್ರವನ್ನು ವಹಿಸುತ್ತದೆ.
· ಸಂಶೋಧಕರಿಗೂ, ಲೇಖಕರಿಗೂ, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಗ್ರಂಥಾಲಯಗಳಿಲ್ಲದೇ ನಡೆಯುವಂತಿಲ್ಲ.
· ನಮ್ಮ ಸರಕಾರದವರು ಜನರ ಜ್ಞಾನದ ಮಟ್ಟವನ್ನು ಹೆಚ್ಚಿಸುವುದಕ್ಕಾಗಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಿರುವರು.
ಪ್ರತಿಯೊಂದು ಶಾಲೆಗೆ ಹಾಗೂ ಕಾಲೇಜುಗಳಿಗೆ ಗ್ರಂಥಾಲಯದ ಅವಶ್ಯಕತೆ ಇರುವುದು.ನಾವು ಎಷ್ಟೇ ಶ್ರೀಮಂತರಾಗಿದ್ದರೂ ನಮಗೆ ಬೇಕಾಗುವ ಎಲ್ಲ ಗ್ರಂಥಗಳನ್ನು ಕೊಂಡುಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಪುಸ್ತಕದ ಪ್ರೇಮಿಗಳು ಗ್ರಂಥಾಲಯಗಳನ್ನು ಅವಲಂಬಿಸಬೇಕಾಗುವುದು. ನಮಗೆ ಬೇಕಾದ ಗ್ರಂಥಗಳು ಗ್ರಂಥಾಲಯಗಳಲ್ಲಿ ದೊರೆಯುವುವು. ಒಂದು ವಿಷಯದ ಬಗ್ಗೆ ಅನೇಕ ಗ್ರಂಥಗಳನ್ನು ನೋಡಬೇಕಾದರೆ ನಾವು ಗ್ರಂಥಾಲಯಗಳಿಗೆ ಶರಣು ಹೋಗಬೇಕು
· ಗ್ರಂಥಾಲಯವೆಂದರೆ ಅಲ್ಲಿ ಎಲ್ಲ ಭಾಷೆಯ ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳೂ ಇರಬೇಕು. ಜಗತ್ತಿನಲ್ಲಿ ಇಂಗ್ಲೀಷ್ ಭಾಷೆಯು ಸಮೃದ್ಧ ಭಾಷೆಯಾಗಿದೆ. ಯಾವ ವಿಷಯವನ್ನು ತಿಳಿದುಕೊಳ್ಳಬೇಕಾದರೂ ನಮಗೆ ಗ್ರಂಥಗಳು ಇಂಗ್ಲೀಷ್ ಭಾಷೆಯಲ್ಲಿ ದೊರೆಯುವುವು.
· ಸಂಸ್ಕೃತ ಕನ್ನಡ ಭಾಷೆಯಲ್ಲಿಯ ಎಲ್ಲ ಗ್ರಂಥಗಳಿಗೂ ಇಲ್ಲಿ ಸ್ಥಾನ ದೊರೆಯಬೇಕು. ಯಾವುದೇ ವಿಷಯದಲ್ಲಿಯ ಗ್ರಂಥವು ಬೇಗನೆ ನಮಗೆ ದೊರೆಯುವಂತೆ ವ್ಯವಸ್ಥೆ ಇರಬೇಕು.
· ಎಷ್ಟೋ ಶಾಲೆಗಳಲ್ಲಿ ಗ್ರಂಥಗಳಿರುತ್ತವೆ. ಆದರೆ ಅವುಗಳನ್ನು ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆ ಇರುವುದಿಲ್ಲ. ಹೀಗಾದರೆ ವಿದ್ಯಾರ್ಥಿಗಳಲ್ಲಿ ವಾಚನಾಭಿರುಚಿಯು ಬೆಳೆಯ ಲಾರದು. ವಾಚನಾಭಿರುಚಿ ಇಲ್ಲದಿದ್ದರೆ ಅವರ ಜ್ಞಾನವು ಬೆಳೆಯಲಾರದು.
· ಭಂಡಾರಿಗನು ಯಾವ ಪುಸ್ತಕಗಳು ಎಲ್ಲಿರುವುವು ಎಂಬುದನ್ನು ಅರಿತಿರಬೇಕು. ಕಾಲೇಜಿನವರು ಗ್ರಂಥಾಲಯಕ್ಕೆ ಮಹತ್ವವನ್ನು ಕೊಡುತ್ತಿರುವರು.
· ವಿಶ್ವವಿದ್ಯಾನಿಲಯಗಳಲ್ಲಿಯಂತೂ ವಿದ್ಯಾರ್ಥಿಗಳು ತಮ್ಮ ಬಹಳ ವೇಳೆಯನ್ನೆಲ್ಲ ಗ್ರಂಥಾಲಯಗಳಲ್ಲಿಯೇ ಕಳೆಯುವರು.
· ಗ್ರಂಥಾಲಯಗಳೆಂದರೆ ಸರಸ್ವತಿಯ ಮಂದಿರ ಗಳಿದ್ದಂತೆ. ನಮಗೆ ಬೇಕಾದ ಜ್ಞಾನವನ್ನು ಕೊಡಲು ಗ್ರಂಥಗಳು ಸಿದ್ಧವಾಗಿರುವುವು. ನಮಗೆ ಜ್ಞಾನವನ್ನು ಪಡೆಯಬೇಕೆಂಬ ಮನಸ್ಸು ಮಾತ್ರ ಬೇಕು.
· ಮುದ್ರಾಣಾಲಯಗಳ ಶೋಧವಾದಾಗಿನಿಂದ ಜ್ಞಾನ ಪ್ರಸಾರವು ಭರದಿಂದ ಹಬ್ಬುತ್ತಿರುವುದು. ಈ ಕೆಲಸವನ್ನು ಗ್ರಂಥಗಳು ಮಾಡುತ್ತಿರುವುವು.
ಗ್ರಾಮಗಳಲ್ಲಿ ಗ್ರಂಥಾಲಯಗಳ ಕೊರತೆ:-
· ಪ್ರತಿಯೊಂದು ಪಟ್ಟಣಗಳಲ್ಲಿಯೂ ವಾಚನಾಲಯಗಳು ಸ್ಥಾಪಿಸಲ್ಪಟ್ಟಿರುವವು. ಹಳ್ಳಿಗಳಲ್ಲಿ ಮಾತ್ರ ಇನ್ನೂ ಗ್ರಂಥಾಲಯಗಳ ಕೊರತೆ ಇರುವುದು.
·ಜನರಲ್ಲಿ ಜ್ಞಾನವನ್ನು ಪ್ರಸಾರ ಮಾಡುವುದರಲ್ಲಿ ಇವು ಮಹತ್ವದ ಕೆಲಸವನ್ನು ಮಾಡುವವು.
· ಗ್ರಾಮಪಂಚಾಯತಿಗಳು ತಮ್ಮ ಊರಲ್ಲಿ ಗ್ರಂಥಾಲಯಾಗಳನ್ನು ಸ್ಥಾಪಿಸಬೇಕು.
· ಸಂಚಾರಿ ವಾಚನಾಲಯವೆಂದರೆ ಪ್ರತಿಯೊಂದು ಹಳ್ಳಿಯಲ್ಲಿಯೂ ವಾಚನಾಲಯವನ್ನು ಸ್ಥಾಪಿಸಿ ವರ್ಷಕ್ಕೊಮ್ಮೆ ಅಲ್ಲಿಯ ಪುಸ್ತಕಗಳನ್ನು ಬೇರೆ ಹಳ್ಳಿಗೆ ಕಳಿಸಿ ಅಲ್ಲಿಯ ಪುಸ್ತಕಗಳನ್ನು ತರುವುದು. ಈ ರೀತಿ ಅದಲು ಬದಲು ಮಾಡುವುದರಿಂದ ವಾಚನಾಲಯದಲ್ಲಿ ಹೊಸ ಪುಸ್ತಕಗಳು ಬರಲು ಅವಕಾಶವಾಗುವುದು.
· ಮನುಷ್ಯನಿಗೆ ಕೇವಲ ಆಹಾರ ದೊರೆತರೆ ಮುಗಿಯಲಿಲ್ಲ. ಮನುಷ್ಯನು ಬುದ್ಧಿಜೀವಿ. ಒಂದು ವೇಳೆ ಅವನು ತನ್ನ ಜ್ಞಾನವನ್ನು ಬೆಳೆಸಿಕೊಳ್ಳದಿದ್ದರೆ ಅವನಿಗೂ ಪಶುಗಳಿಗೂ ಭೇಧವೇನು ? ಈ ಬುದ್ಧಿಯ ಬಲದಿಂದಲೇ ಮಾನವನು ಪಶು-ಪಕ್ಷಿಗಳನ್ನೂ ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿರುವನು. ಬುದ್ಧಿಯನ್ನು ಬೆಳೆಸಲು ಗ್ರಂಥಾಲಯಗಳು ಮಾನವ ನಿಗೆ ಸಹಾಯ ಮಾಡುವುವು.
· ಆನಂದವನ್ನು ಪಡೆಯುವುದಕ್ಕಾಗಿಯೂ, ಜ್ಞಾನಾಭಿವೃದ್ಧಿಗೂ ಗ್ರಂಥಾಲಯಗಳು ಮನುಷ್ಯನಿಗೆ ಉಪಯುಕ್ತವಾಗಿರುವವು. ಆದ್ದರಿಂದ ನಾವು ನಮಗೆ ದೊರೆತ ವೇಳೆಯನ್ನು ವ್ಯರ್ಥ್ಯವಾಗಿ ಹಾಳು ಮಾಡದೆ ಸ್ವಲ್ಪ ವೇಳೆಯನ್ನು ಗ್ರಂಥಾಲಯದಲ್ಲಿ ಕಳೆದದ್ದಾದರೆ ಅವನ ಜೀವನವು ಸಾರ್ಥಕವಾಗುವುದು.
· ಮುಂದುವರಿದ ರಾಷ್ಟ್ರಗಳಲ್ಲಿ ಸುಸಜ್ಜಿತವಾದ ಗ್ರಂಥಾಲಯಗಳಿರುವುವು. ಅದೇ ಮಾದರಿಯಲ್ಲಿ ಗ್ರಂಥಾಲಯಗಳನ್ನು ಪ್ರಾರಂಭಿಸುವುದು ಅತ್ಯವಶ್ಯಕವಾಗಿದೆ.
Library is a storehouse of books. It also provides various other sources of information for reading in its premises as well as borrowing for home. The collection of library can include books, manuscripts, magazines, periodicals, videos, audios, DVDs and various other formats. Wide range of books are stored in a library and well organized in book shelves.
It is not possible for an individual to have such a wide collection of books at home. One can get access to diverse genres of books and other resources in library. It shuns the need to buy expensive books and resources. If there were no libraries many students who love to read would have been deprived of reading mostly due to financial difficulties.
Library is an important part of every educational institute such as schools, colleges and universities. Such a library is open for students of the particular institute it forms a part of. It contains a wide range of resources vital for the students.
Libraries attract people to read and develop habit of reading and learning. It increases their thirst for reading and expands knowledge. Library is also essential for any kind of research on different subjects.
Thus, libraries are important for research, information, knowledge and pleasure of reading. Libraries provide perfect environment to enjoy read peacefully.