Essay on my house in kannada
Answers
ಪುಟ್ಟದಾದರೂ ಸರಿಯೆ ಸ್ವಂತ ಮನೆಯನ್ನು ಹೊಂದಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದದ್ದೆ. ಹಿಂದಿನ ಕಾಲದಲ್ಲಿ ಮನೆ ಕಟ್ಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಜೀವಿತಾವಧಿ ದುಡಿದು ಕೊನೆಗೆ ಮನೆ ಕಟ್ಟಿಸಲು ಹೊರಡುತ್ತಿದ್ದರು. ಆದರೆ, ಇಂದು ಸಾಫ್ಟ್ವೇರ್ ಅಥವಾ ಇನ್ನಿತರ ಉದ್ಯೋಗದಲ್ಲಿರುವ ಯುವಕರು ಮೂವತ್ತು-ನಲವತ್ತು ವರ್ಷಕ್ಕೇ ದುಡಿದ ಹಣದಲ್ಲಿಯೋ ಅಥವಾ ಸಾಲ ಮಾಡಿಯೋ ಮನೆ ಹೊಂದುತ್ತಾರೆ!
ನನ್ನ ಮನೆ ಎಂಬ ಶೀರ್ಷಿಕೆಯಡಿಯಲ್ಲಿ-
ಮನೆ ಮನೆ ಮುದ್ದು ಮನೆ
ಮನೆ ಮನೆ ನನ್ನ ಮನೆ
ನನ್ನ ತಾಯಿಯೊಲಿದ ಮನೆ
ನನ್ನ ತಂದೆ ಬೆಳೆದ ಮನೆ ಎಂದು ಆರಂಭವಾಗುವ ಕುವೆಂಪುರವರ ಈ ಪದ್ಯ ನನ್ನದಲ್ಲದಿಳೆಯೊಳಿಂದು ಹೆಮ್ಮೆಯಿಂದ ನನ್ನದೆಂದು/ ಬೆಂದು ಬಳಲಿದಾಗ ಬಂದು ನೀರು ಕುಡಿವ ನನ್ನ ಮನೆ ಎಂದು ಅಂತ್ಯವಾಗುತ್ತದೆ. ಬರೀ ಮನೆಯ ಬಗ್ಗೆಯೇ ಇರುವ ಈ ಇಡೀ ಪದ್ಯ ನಮ್ಮ ಮನದಲ್ಲೊಂದು ಆಪ್ತ ಭಾವವನ್ನು ಮೂಡಿಸುತ್ತದೆ. ಆದರೆ, ಈಚೆಗೆ ಬೊಂಬಾಯಿಗೆ ಹೋದಾಗ ಮನೆಯ ಬಗ್ಗೆ ಇರುವ ನನ್ನ ಕಲ್ಪನೆಯೇ ಅಡಿಮೇಲಾಗಿತ್ತು. ಅಲ್ಲಿ ಯಾರ ಮನೆಯೂ ನೆಲದ ಮೇಲೆ ಇಲ್ಲ. ಹತ್ತು, ಹನ್ನೆರಡರಿಂದ ಮೇಲೆ ಅಂತಸ್ತು ಇರುವ ಕಟ್ಟಡದ ಕೊಠಡಿಗಳಲ್ಲಿ ಅವರ ವಾಸ. ನಮ್ಮೂರಾದ ಮಡಿಕೇರಿಯಲ್ಲಿ ಕಳೆದ ಮಳೆಗೆ ಎಷ್ಟೋ ಮನೆಗಳು ನೆಲಸಮವಾಗಲು ಕಾರಣ ಕೊಡಗಿನ ಪ್ರಕೃತಿ ಮೇಲೆ ಮಾನವ ಮಾಡಿದ ಅನಾಚಾರದಿಂದ, ಬಹುಮಹಡಿಗಳ ಕಟ್ಟಡಗಳನ್ನು ಕಟ್ಟಿದ್ದರಿಂದ ಎಂದು ಹೇಳುವವರು ಇದ್ದಾರೆ. ಪ್ರಕೃತಿಯನ್ನು ಇನ್ನಿಲ್ಲದಂತೆ ಹಾಳುಗೆಡವಿದ ಈ ಬೊಂಬಾಯಿ ಹಲವು ಕಾಲಗಳ ಹಿಂದೆಯೇ ಭದ್ರವಾಗಿ ಗಗನಚುಂಬಿ ಮನೆಗಳನ್ನು ಹೊತ್ತು ನಿಂತಿದೆಯಲ್ಲ ಅದರ ಧಾರಣಾ ಶಕ್ತಿಗೆ ಏನನ್ನೋಣ?