Essay on our health in our hand
in kannada language
Answers
Answer:
ಬೆಂಗಳೂರು, ಸೆ. 8 : ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಾರು ಎಷ್ಟೇ ಸಂಪತ್ತುಳ್ಳುವರಾಗಿರಲಿ, ಅವರ ಆರೋಗ್ಯವೇ ಕೈಕೊಟ್ಟರೆ ಆ ಸಂಪತ್ತೆಲ್ಲ ಯಾವ ಮೂಲೆಗೆ? ಆರೋಗ್ಯ ಸದೃಢವಾಗಿದ್ದರೆ ತಾನೆ ಆ ಸಂಪತ್ತನೆಲ್ಲ ಗಳಿಸಲು ಸಾಧ್ಯ. ಇಷ್ಟೆಲ್ಲ ಗೊತ್ತಿದ್ದರೂ ನಾವು ನಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಲೇ ಇರುತ್ತೇವೆ, ಅಸಂಬದ್ಧ ಜೀವನಶೈಲಿಯನ್ನು ನಡೆಸುತ್ತಿರುತ್ತೇವೆ.
ಆರೋಗ್ಯವನ್ನು ದಿವಿನಾಗಿಟ್ಟುಕೊಂಡವರಿಗೆ ಮತ್ತು ಬೇಕಾಬಿಟ್ಟಿ ಜೀವನಶೈಲಿ ರೂಢಿಸಿಕೊಂಡವರಿಗೆ ತಿಳಿದಿರಲಿ ಇಂದು ಅಂದರೆ ಸೆಪ್ಟೆಂಬರ್ 8ರ ದಿನವನ್ನು ವಿಶ್ವ ಫಿಸಿಯೋಧೆರಪಿ (ಭೌತಚಿಕಿತ್ಸಾ) ದಿನಾಚರಣೆ ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಆರೋಗ್ಯದ ಬಗ್ಗೆ ಅರಿವು ಸಾರಲೆಂದೇ ಮೂರುವರೆ ಲಕ್ಷಕ್ಕೂ ಅಧಿಕವಿರುವ ಫಿಸಿಯೋಥೆರಪಿಸ್ಟ್‌ಗಳ ಸಂಘ ವರ್ಲ್ದ್ ಕಾನ್ಫೆಡರೇಶನ್ ಫಾರ್ ಫಿಸಿಕಲ್ ಥೇರಪಿಸ್ಟ್ (ಡಬ್ಲ್ಯು.ಸಿ.ಪಿ.ಟಿ) 1996ರಲ್ಲಿ ಸ್ಥಾಪಿಸಲಾಯಿತು.
ನೀವು ಆರೋಗ್ಯಕರವಾಗಿ ಇರಬೇಕೆಂದರೆ, ಯಾವಾಗಲೂ ಚಲನವಲನದಿಂದ ಇರಬೇಕು, ನಿಮ್ಮ ಜೀವನದ ಕೊನೆಯವರೆಗೆ ಎಂಬುದು ಈ ಸಂಸ್ಥೆ ನೀಡಿರುವ ಕಿವಿಮಾತು. ಆರೋಗ್ಯದಿಂದಿರಲಿ, ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಹೊಟ್ಟೆನೋವು, ತಲೆನೋವು, ಕೀಲುನೋವು ಮತ್ತಾವುದೇ ರೋಗದಿಂದ ಬಳಲುತ್ತಿರಲಿ ಅವರು ಯಾವಾಗಲೂ ಚಲನಶೀಲರಾಗಿರಬೇಕು, ಚಟುವಟಿಕೆಯಿಂದಿರಬೇಕು ಮತ್ತು ನಿಯಮಿತವಾಗಿ ಮತ್ತು ನಿರಂತರವಾಗಿ ವ್ಯಾಯಾಮ ಮಾಡುತ್ತಿರಬೇಕು ಎಂಬ ಸಂದೇಶವನ್ನು ಇಂದಿನ ದಿನದಂದು ಫಿಸಿಯೋಥೆರಪಿಸ್ಟ್‌ಗಳು ಜಗತ್ತಿಗೆ ಸಾರಿದ್ದಾರೆ. ಇದನ್ನು ಕಿವಿಗೆ ಹಾಕಿಕೊಳ್ಳುವುದು ಅಥವಾ ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಡುವುದು ಓದುಗರಿಗೆ ಬಿಟ್ಟಿದ್ದು. ಎಷ್ಟಿದ್ದರೂ ನಿಮ್ಮ ಆರೋಗ್ಯ ನಿಮ್ಮ ಸ್ವತ್ತೇ ಹೊರತು ಬೇರೆಯವರ ಸ್ವತ್ತಲ್ಲವಲ್ಲ?
ಫಿಸಿಯೋಥೆರಪಿಸ್ಟ್‌ಗಳ ಉಪದೇಶಾಮೃತ...
* ಯಾವ ಜನರು ಕ್ರಿಯಾತ್ಮಕರಾಗಿರುತಾರೋ ಅಂತಹವರು ಹೆಚ್ಚಾಗಿ ಸಂಭಾವ್ಯ ಕಾರ್ಯಪ್ರವೃತ್ತರಾಗಿ, ಕ್ರಿಯಾಸಕ್ತರಾಗಿ, ಮತ್ತು ಆನಂದದಿಂದ ಯಾರ ನೆರವಿಲ್ಲದೆ ಬದುಕುವರು. ಅವರ ಜೀವನವು ಸಮರ್ಥ ಜೀವನ.
* ಆಲಸ್ಯತನ ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಪ್ರತಿ ವರ್ಷ ಪ್ರಪಂಚದಲ್ಲಿ ದಶ ಕೋಟಿಯ ಮರಣಗಳಿಗೆ ನಿದರ್ಶನವಾಗುತ್ತಿದೆ. ಅದು ಹೃದಯ ಕಾಯಿಲೆ, ಲಕ್ವಾ, ಮಧುಮೇಹ ಮತ್ತು ಅರ್ಬುದ (ಕ್ಯಾನ್ಸರ್) ರೋಗಗಳಿಗೆ ಕಾರಣವಾಗುತ್ತಿದೆ.
* ನೀವು ಕ್ರಿಯಾತ್ಮಕರಾಗಿ ಇರಲು ಎಂದೂ ತುಂಬಾ ಕಿರಿಯ ಅಥವಾ ಹಿರಿಯರಲ್ಲ - ಕೇವಲ ಅರ್ಧ ಗಂಟೆ ಮಿತವಾದ ವ್ಯಾಯಾಮ (ಅಂದರೆ: ವೇಗವಾದ ನಡೆ) ದಿನನಿತ್ಯ ಮಾಡಿದಲ್ಲಿ ನಿಜವಾದ ಬದಲಾವಾಣೆ ಕಾಣಬಹುದು.