India Languages, asked by himanshub8644, 11 months ago

Essay on religious festivals in Kannada

Answers

Answered by badhebhavana
5

Answer:

ಹಬ್ಬಗಳು ನಮ್ಮ ಪೂರ್ವಿಕರ ಸುಂದರ ಕಲ್ಪನೆಗಳು. ನೀರಸ ಬದುಕನ್ನು ಸುಂದರಗೊಳಿಸುವ ಪ್ರಯತ್ನಗಳು ಈ ಹಬ್ಬಗಳು. ಒಮ್ಮೊಮ್ಮೆ ಹಬ್ಬಗಳು ನಮ್ಮ ಹಿರಿಯರ ಆವಿಷ್ಕಾರಗಳು ಎಂದೆನಿಸಿದ್ದಿದೆ. ಈ ಆವಿಷ್ಕಾರದ ಹಿಂದೆ ಪುರಾಣ, ಇತಿಹಾಸ, ಸುಂದರ ಕಲ್ಪನೆಗಳು, ಉದಾತ್ತ ಆಶಯಗಳು ಬೆರೆತಿವೆ.

ನಮ್ಮ ಹಿರಿಯರು ಕೆಲವು ಹಬ್ಬಗಳನ್ನು ಋತುಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆ. ಉದಾಹರಣೆಗೆ, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವ ದಿನವನ್ನು ಸಂಕ್ರಾಂತಿಯಾಗಿ, ಸೂರ್ಯ ತನ್ನ ಪಥ ಬದಲಿಸುವ ದಿನವನ್ನು ರಥಸಪ್ತಮಿಯಾಗಿ, ಪ್ರಕೃತಿಯ ಉಲ್ಲಾಸಮಯ ದಿನಗಳ ಆರಂಭವನ್ನು ವಸಂತ ಋತುವಿನ ಆಗಮನವನ್ನು ಯುಗಾದಿಯಾಗಿ, ವಸಂತ ಪಂಚಮಿಯಾಗಿ... ಹೀಗೆ ನಮ್ಮ ಬದುಕನ್ನು ಆಸಕ್ತಿಕರವಾಗಿಸಲು ಹತ್ತು ಹಲವು ಹಬ್ಬಗಳನ್ನು ರೂಪಿಸಿದ್ದಾರೆ.

ಇಷ್ಟೊಂದು ಒಳ್ಳೆಯ ಆಶಯ, ಸಂಭ್ರಮ ತುಂಬಿಕೊಂಡ ಹಬ್ಬಗಳು ಇತ್ತೀಚಿಗೆ ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತಿರುವುದು ನಿಜವಾಗಲು ವಿಷಾದಕರ. ಈ ಜಾಗತೀಕರಣಗೊಂಡ ದುಡ್ಡಿನ ಜಗತ್ತಿನಲ್ಲಿ ಹಬ್ಬಗಳೆಂದರೆ ಡಿಸ್ಕೌಂಟ್ ಸೇಲ್, ಶಾಪಿಂಗ್ ಸಮಯ, ಟಿವಿಯಲ್ಲಿ ವಿಶೇಷ ಕಾರ್ಯಕ್ರಮ, ಪ್ರವಾಸಕ್ಕೆ ಸಮಯ, ಕೇವಲ ರಜೆ ಎಂದಾಗಿ ಹೋಗಿದೆ. ಇದು ನಿಜವಾಗಲು ದುಃಖದ ವಿಷಯ. ನಮ್ಮ ಸುಂದರ ಸಂಸ್ಕೃತಿ ಯ ಆಶಯಗಳು ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆಯಾ? ಎಂದು ಆಲೋಚಿಸಬೇಕಾಗಿದೆ. [ದೀಪಾವಳಿಗೆ ಅತ್ತೆ ಚೊಂಬು ಕೊಟ್ಟ ಕಥೆ]

Happy, prosperous and rejoicing Deepavali, the festival of lights

ನಾವು ಹಬ್ಬಗಳನ್ನು ಏಕೆ ಆಚರಿಸಬೇಕು?

ಮೊನ್ನೆ ಪ್ರಗತಿಪರ ಸ್ನೇಹಿತರ ಮನೆಗೆ ಹೋಗಿದ್ದೆ, ಅವರೆಂದರು "ನಾವು ದೇವರನ್ನು ನಂಬುವುದಿಲ್ಲ ಹಾಗಾಗಿ ನಾವು ಯಾವುದೇ ಹಬ್ಬಗಳನ್ನ ಆಚರಿಸುವುದಿಲ್ಲ...". ಅಯ್ಯೋ ಎಷ್ಟೊಂದು ಒಳ್ಳೆಯ ಆಶಯಗಳನ್ನು ಧ್ಯಾನಿಸುವ ಅವಕಾಶವನ್ನು, ಬದುಕಿನ ಸಂಭ್ರಮವನ್ನು ಕಳೆದುಕೊಳ್ಳುತ್ತಿದ್ದಾರಲ್ಲ ಎಂದು ವ್ಯಥೆಯಾಯಿತು. ಹಬ್ಬಗಳು ಬರಿ ಸಿಹಿ ಊಟ ಮಾಡುವ, ಹೊಸ ಬಟ್ಟೆ ತೊಡುವ ಸಂಭ್ರಮಕ್ಕೆ ಮಾತ್ರ ಸೀಮಿತವಲ್ಲ. ಅದನ್ನೂ ಮೀರಿದ ಉದಾತ್ತ ಉದ್ದೇಶ ಹಬ್ಬಗಳಿಗಿದೆ. ಇದನ್ನೆಲ್ಲಾ ಯೋಚಿಸುತ್ತಾ ಪ್ರಗತಿಪರ ಸ್ನೇಹಿತರಿಗೆ ಹೇಳಿದೆ "ನೀವು ಢಂಬಾಚಾರ, ಆಡಂಬರವನ್ನು ನಿರಾಕರಿಸಿ... ಆದರೆ ಹಬ್ಬದ ಆಚರಣೆಯನ್ನು ನಿಲ್ಲಿಸಬೇಡಿ... ಹಬ್ಬವನ್ನು ನಿರಾಕರಿಸಿದರೆ ಅದರ ಹಿಂದಿನ ಸುಂದರ ಆಶಯ, ಉದಾತ್ತ ಉದ್ದೇಶ ನಿರಾಕರಿಸಿದಂತೆ". ಬಹುಶಃ ಅವರು ಮುಂದಿನ ಹಬ್ಬದಿಂದ ನಮ್ಮ ನಿಲುವನ್ನು ಬದಲಿಸಿಕೊಳ್ಳುವರು ಎಂದು ಆಶಿಸುತ್ತೇನೆ.

ಹೊಸ ಬೆಳವಣಿಗೆ

ಇನ್ನೊಂದು ಸಂತೋಷದ ವಿಷಯವೆಂದರೆ, ಜಾತಿ, ಧರ್ಮಗಳ ಕಟ್ಟಳೆ ಮೀರಿ ಜನರು ಹಬ್ಬಗಳನ್ನು ಆಚರಿಸುತ್ತಿರುವುದು. ಜಾಗತೀಕರಣ ಜಗತ್ತಿನ ಒಂದು ಒಳ್ಳೆ ಕಾಣಿಕೆ ಇದು. ಉತ್ತಮ ಬೆಳವಣಿಗೆ. ಬೆಂಗಳೂರಿನ ಅನೇಕ ಅಪಾರ್ಟಮೆಂಟುಗಳಲ್ಲಿ ಎಲ್ಲಾ ಕುಟುಂಬಗಳು ಒಟ್ಟಾಗಿ, ಯಾವುದೆ ಭೇದವಿಲ್ಲದೆ ಹಬ್ಬಗಳ ಆಚರಣೆ ಮಾಡುತ್ತಿದ್ದಾರೆ. ಒಂದು ಸಮುದಾಯ ಅರಿತು ಬೆರೆತು ಹಬ್ಬಗಳ ಆಚರಣೆ ಮಾಡಿದರೆ ಅದರ ಸೊಗಸೇ ಬೇರೆ.

Happy, prosperous and rejoicing Deepavali, the festival of lights

ಬೆಳದಿಂಗಳು ಚೆಲ್ಲುವ ಕೌಮುದಿ ಉತ್ಸವವಿದು

ಅಸತೋಮ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ,

ಮೃತ್ಯೋರ್ಮಾ ಅಮೃತಂಗಮಯ... ಓಂ ಶಾಂತಿ, ಶಾಂತಿ ಶಾಂತಿಃ

ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ದೀಪಾವಳಿ ಎಂದರೆ ಬೆಳಕಿನ ಹಬ್ಬ. ನಿಮಗೆ ಗೊತ್ತಿರಲಿ, ಸರಿಯಾಗಿ ಆಚರಿಸಿದರೆ ದೀಪಾವಳಿ ಆರು ದಿನದ ಹಬ್ಬ! ಅನೇಕ ಪುರಾಣ, ನಂಬಿಕೆ, ಸುಂದರ ಆಶಯ ಬೆರೆತಿರುವ ಹಬ್ಬಗಳ ಸರಪಳಿ, ಹಬ್ಬಾವಳಿ! ಅಮಾವಾಸ್ಯೆ ಕತ್ತಲಿದ್ದರು ದೀಪಗಳು ಚೆಲ್ಲುವ ಬೆಳಕಿಗೋ, ಪಟಾಕಿಗಳಿಂದ ಹೊಮ್ಮುವ ಬೆಳಕಿಗೋ ಏನೋ, ದೀಪಾವಳಿಗೆ ಕೌಮುದಿ ಉತ್ಸವ ಎಂದೂ ಕರೆಯುವುದುಂಟು. ಕೌಮುದಿ ಎಂದರೆ ಬೆಳದಿಂಗಳು ಎಂದರ್ಥ.

ಉತ್ತರ ಭಾರತದಲ್ಲಿ ಗೋವತ್ಸ ದ್ವಾದಶಿಯಿಂದಲೇ ಹಬ್ಬದ ಸಡಗರ ಆರಂಭ. ಬರಗಾಲ ಕಳೆದು ಇಳೆಗೆ ಸಮೃದ್ಧಿ ಮರಳಿದ ದಿನವಾಗಿ ಹಬ್ಬವನ್ನಾಚರಿಸುತ್ತಾರೆ. ಗೋವಿನ ರೂಪದ ಭೂದೇವಿಯನ್ನು ಓಡಿಸಿಕೊಂಡು ಹೋಗಿ, ಪೂಜಿಸಿ, ಹಾಲು ಕರೆದು ಬರಗಾಲ ನೀಗಿಸಿದ ದೊರೆ ಪೃಥುವಿನ ಕತೆಯ ಹಿನ್ನಲೆಯಿದೆ. ಅವನಿಂದಲೇ ಭೂಮಿಗೆ ಪೃಥ್ವಿ ಎಂಬ ಹೆಸರು ಬಂದಿದ್ದು.

ಧನ್ ತೇರಾಸ್ (ಕೃಷ್ಣಪಕ್ಷದ ತ್ರಯೋದಶಿ) ಈ ದಿನ ಬಂಗಾರ ಮತ್ತು ಮನೆಗೆ ಬೇಕಾಗುವ ಪಾತ್ರೆಗಳ ಖರೀದಿಗೆ ಶುಭದಿನ ಎಂದು ಭಾವಿಸಲಾಗಿದೆ. ಇದೇ ದಿನ ವೈದ್ಯ ಧನ್ವಂತ್ರಿ ಸಮುದ್ರ ಮಥನದಲ್ಲಿ ಜನಿಸಿದ್ದು ಎಂದು ಪುರಾಣಗಳು ಹೇಳುತ್ತವೆ. ನರಕ ಚತುರ್ದಶಿಯ ಬೆಳಗಿನ ಜಾವದ ಅಭ್ಯಂಜನ ಸ್ನಾನಕ್ಕೆ ಹಿಂದಿನ ದಿನವೆ ನೀರು ಕಾಯಿಸುವ ಹಂಡೆ, ಪಾತ್ರೆಗಳಿಗೆ ಪೂಜಿಸಿ, ಅಲಂಕರಿಸಿ ನೀರನ್ನು ತುಂಬಿಸಿದುವುದರಿಂದ ಈ ದಿನಕ್ಕೆ ನೀರು ತುಂಬಿಸುವ ಹಬ್ಬ ಎಂದು ಕೂಡ ಕರೆಯುತ್ತಾರೆ.

Similar questions