India Languages, asked by pplay2486, 3 months ago

essay writing topic Air in kannada

Answers

Answered by Anonymous
9

ಹಿಂದೂ ಪುರಾಣದಲ್ಲಿ ಗಾಳಿಯು ಅಂಜನಾದೇವಿಯ ಪತಿ. ಗಾಳಿಗೆ ವಾಯು, ಎಲರು, ಹವಾ, ಉಸಿರು, ಜೀವಧಾತು, ಸಮೀರ, ದೆವ್ವ, ಸುಳಿವು, ಮಾರುತ ಮೊದಲಾದ ಹೆಸರು ಗಳಿವೆ. ಹನುಮಂತ ಮತ್ತು ಭೀಮರನ್ನು ವಾಯುಪುತ್ರರೆಂದು ಕರೆಯಲಾಗಿದೆ. ಗಾಳಿಯಲ್ಲಿ ಹಲವಾರು ವಿಧಗಳಿವೆ. ಮಂದಮಾರುತ, ಕುಳಿರ್ಗಾಳಿ, ಬಿರುಗಾಳಿ, ಚಂಡ ಮಾರುತ, ಸುಂಟರಗಾಳಿ, ಮಲಯ ಮಾರುತ, ರಾಶಿಗಾಳಿ, ಕೋಳೂರಗಾಳಿ, ಇತ್ಯಾದಿ. ಇದಲ್ಲದೆ ಈಶಾನ್ಯ ದಿಕ್ಕಿನಿಂದ ಬೀಸುವ ಗಾಳಿಯನ್ನು 'ಸ್ಮಶಾನ ಗಾಳಿ' (ಸುಡುಗಾಡುಗಾಳಿ) ಎಂದೂ, ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಗೆ 'ಕುಂಬಾರ ಗಾಳಿ' ಎಂದೂ, ವಾಯುವ್ಯ ದಿಕ್ಕಿನಿಂದ ಬೀಸುವ ಗಾಳಿಗೆ 'ಗಂಗೆಗಾಳಿ' ಎಂದೂ ಕರೆಯುತ್ತಾರೆ. ಪಂಚಭೂತಗಳಲ್ಲಿ ಗಾಳಿಗೆ ವಿಶಿಷ್ಟ ಸ್ಥಾನವಿದೆ.ಗಾಳಿಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು, ಗಾಳಿಯ ಹರಿವಿನಿಂದ ಟರ್ಬೈನ್ಗಳನ್ನು ತಿರುಗಿಸುವುದರ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ.ಇದು ನವೀಕರಿಸಬೇಕಾದ ಶಕ್ತಿಯ ಸಂಪನ್ಮೂಲವಾಗಿದೆ ಮತ್ತು ಇತರ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲ್ ಗಳಿಗಿಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ.ಹಿಂದಿನ ಕಾಲದಲ್ಲಿ ಗಾಳಿಶಕ್ತಿಯನ್ನು ಧಾನ್ಯಗಳನ್ನು ಹಿಟ್ಟುಮಾಡುವ ಗಿರಿಣಿಗಳಿಗೆ ಮತ್ತು ನೀರನ್ನು ಪಂಪಮಾಡುಲು ಮತ್ತು ಹಡುಗುಗಳನ್ನು ಮುಂದೂಡಲು ಬಳಸುತ್ತಿದ್ದರು.ಆಧುನಿಕ ಗಾಳಿಯಂತ್ರಗಳು ಬಹುತೇಕ ಒಳಚರಂಡಿ,ಭೂಮಿಯಂದ ಅಂತರ್ಜಲ ತೆಗೆಯಲು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ.

Similar questions