Explanation of kannada gadhe desha suttu kosha odu
Answers
Answered by
30
I think it will help you.........
Attachments:
Answered by
1
ಎಲ್ಲಾ ಸ್ಥಳಗಳಲ್ಲಿ ಓಡಾಡಿದರೆ ಅಲ್ಲಿನ ರೀತಿ ನೀತಿ,ಒಳ್ಳೆಯದು, ಕೆಟ್ಟದ್ದು, ಯಾವ ರೀತಿಯ ಜನಗಳಿರುತ್ತಾರೆ ಎಂಬುದು ಅನುಭವವಾಗುತ್ತದೆ. ಈ ರೀತಿಯ ಅನುಭವ ನಮ್ಮ ಸುಖ ಜೀವನಕ್ಕೆ ನಾಂದಿಯಾಗುತ್ತದೆ.
- ಅದೇ ರೀತಿ ಎಲ್ಲಾ ರೀತಿಯ ಗ್ರಂಥಗಳನ್ನು ಓದಿ ಅರ್ಥ ಮಾಡಿಕೊಳ್ಳುವುದರಿಂದ ಜ್ಞಾನ ಪ್ರಾಪ್ತಿಯಾಗುತ್ತದೆ ಎಂಬುದು ಈ ಗಾದೆಯ ಅರ್ಥ.
- ಮನುಷ್ಯನು ಜ್ಞಾನವನ್ನು ಪಡೆಯಲು ಕೆಲವನ್ನು ಬಲ್ಲವರಿಂದ ಕಲಿಯಬೇಕು. ಕೆಲವನ್ನು ಶಾಸ್ತ್ರಗಳನ್ನು ಕೇಳಿ ತಿಳಿಯಬೇಕು. ಕೆಲವನ್ನು ಮಾಡುವವರನ್ನು ನೋಡಿ ಕಲಿಯಬೇಕು.
- ಹಾಗೆಯೇ ದೇಶವನ್ನು ಸುತ್ತಿ ಅನುಭವವನ್ನು ಪಡೆಯಬೇಕು.
- ಅಂದರೆ ಒಂದು ಕೋಶವನ್ನು ಓದಿ ಪಡೆಯುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ನೋಡಿದಾಗ ಜ್ಞಾನ ಇನ್ನೂ ವೃದ್ಧಿಯಾಗುತ್ತದೆ.
- ಮನುಷ್ಯನ ಬುದ್ಧಿಶಕ್ತಿಯ ಬೆಳವಣಿಗೆಗೆ ಪುಸ್ತಕಗಳಲ್ಲಿರುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ಅನುಭವ ಪಡೆಯುವುದು ಒಳ್ಳೆಯದು.
- ಶಾಸ್ತ್ರ ಜ್ಞಾನಕ್ಕಿಂತ ಲೋಕಜ್ಞಾನ ಮುಖ್ಯ ಎಂದು ಬಲ್ಲವರು ಹೇಳುತ್ತಾರೆ. 'ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂಬಂತೆ ಪುಸ್ತಕಗಳನ್ನು ಓದುವ ಜ್ಞಾನದ ಜೊತೆಗೆ ದೇಶವನ್ನು ಸುತ್ತಿ ಜ್ಞಾನವನ್ನು ವೃದ್ಧಿಗೊಳಿಸಬೇಕು.
- ಪುಸ್ತಕದಲ್ಲಿ ನಾವು ಒಂದು ವಿಷಯದ ಬಗ್ಗೆ ಓದುತ್ತೇವೆ. ನಾವು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ.
- ಆದರೆ ಪವಾಸ ಕೈಗೊಂಡಾಗ ನಾವು ಓದಿದ್ದಕ್ಕಿಂತ ಹೆಚ್ಚಿನ ಜ್ಞಾನ ಲಭಿಸುತ್ತದೆ.
- ಅಲ್ಲಿನ ಸ್ಥಳ, ಪರಿಸರ, ಅಲ್ಲಿನ ಜನರ ಆಚಾರ-ವಿಚಾರ, ವೇಷ-ಭೂಷಣಗಳು, ಭಾಷೆ, ಅವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳ ಬಗ್ಗೆ ನಮಗೆ ಅರಿವುಂಟಾಗುತ್ತದೆ.
- ಹಾಗೆಯೇ ಇತಿಹಾಸದಲ್ಲಿ 'ಹೊಯ್ಸಳರು' ಪಾಠವನ್ನು ಕೇಳಿದಾಗ ಪಡೆದ ಜ್ಞಾನಕ್ಕಿಂತಲೂ ಹೆಚ್ಚಿನ ಜ್ಞಾನವನ್ನು ಬೇಲೂರು, ಹಳೇಬೀಡು ಸ್ಥಳಗಳನ್ನು ನೋಡಿ ಪಡೆಯುತ್ತೇವೆ.
- ಆಗ ಬಾವಿಕಪ್ಪೆಗಳಂತಿರದೆ ನಾವು ವಿಶಾಲವಾಗಿ ಚಿಂತಿಸುತ್ತೇವೆ. ಇದರಿಂದ ಹೆಚ್ಚಿನ ಅರಿವು ಉಂಟಾಗುತ್ತದೆ. ಇದೇ ದೇಶ ಸುತ್ತು ಕೋಶ ಓದು ಎಂಬುದರ ಅರ್ಥವಾಗಿದೆ.
#SPJ3
Similar questions