India Languages, asked by Riyana8442, 1 year ago

importance of kannada in kannada

Answers

Answered by yashubr12
13

Answer:

Explanation:

ಸಂಸ್ಕೃತ ಮತ್ತು ಗ್ರೀಕ್ ಭಾಷೆಯ ನಂತರ ವಿಶ್ವದಲ್ಲಿ ನಮ್ಮ ಕನ್ನಡ ಮೂರನೆಯ ಪುರಾತನ ಭಾಷೆ, ೩೦೦೦ಕ್ಕೂ ವರ್ಷಕ್ಕೂ ಹಳೆಯದಾದದ್ದು.

ವೈಜ್ಙಾನಿಕವಾಗಿ, ಲಾಜಿಕಲ್ ಅಗಿ ಕನ್ನಡವು 99.99 ಉತ್ಕೃಷ್ಟ. ಭಾಷೆ.

ಕನ್ನಡಕ್ಕೆ 8 . ಹಿಂದಿ — 6, ತೆಲುಗು – 2, ಮಲಯಾಳಂ – 3, ತಮಿಳು – 2. ಜ್ನಾನಪೀಠ ಪ್ರಶಸ್ತಿಗಳು

ಅಂದು ಆಚಾರ್ಯ.ವಿನೋಭಬಾವೆ ಹೇಳಿದ ಮಾತೆಂದರೆ ವಿಶ್ವಲಿಪಿಗಳ. ರಾಣಿ ” ಕನ್ನಡ ಭಾಷೆ ”

ಅಂತರಾಷ್ಟ್ತೀಯ ಇಂಗ್ಲಿಷ್ ಭಾಷೆಗೆ ಸ್ವಂತ ಲಿಪಿಯಿಲ್ಲ. ಅದು ರೋಮನ್ ಭಾಷೆಯಿಂದ ಎರವಲು ಪಡೆದಿರುವುದು.

ಅಮೋಫ ವರ್ಷ ನೃಪತುಂಗ ಬರೆದ ಕಾವೇರಿಯಿಂದ ಗೋದಾವರಿವರೆಗೂ

ವಿದೇಶೀಯ ಕಿಟಲ್ ಎಂಬ ಸಾಹಿತಿ ಭಾರತೀಯ ಭಾಷೆಗಳ ಪೈಕಿ ಶಬ್ಧಕೋಶ ಬರೆದಿರುವುದು ಕನ್ನಡದಲ್ಲಿ ಮಾತ್ರ.

ರಗಳೆ ಸಾಹಿತ್ಯವನ್ನು ಕನ್ನ.ಡದಲ್ಲಿ ಬಿಟ್ಟು ಬೇರೆ ಭಾಷೆಯಲ್ಲಿ ಕಾಣುವುದಿಲ್ಲ ಇದು ಸಹ ಅಪರೂಪ

ಕುವೆಂಪು ಪಡೆದಷ್ಟು ಸಾಹಿತ್ಯ ರತ್ನ ಪ್ರಶಸ್ತಿ ದೇಶದ ಯಾವುದೇ ಭಾಷೀಕರು ಪಡೆದಿಲ್ಲಾ

ಕನ್ನಡದ ಛಂಧಸ್ಸಿಗೆ (ಷಟ್ಪದಿ) ಸರಿ ಸಮಾನ ಯಾವ ಭಾಷೆಯಲ್ಲೂ ಇಲ್ಲ. ಹೆಮ್ಮೆಯಿಂದ ಕನ್ನಡ ಬಳಸೋಣ

ಕನ್ನಡ ಭಾಷೆಗೆ ತನ್ನದೇ ಆದ ಪ್ರಾಮುಖ್ಯತೆ, ಐತಿಹಾಸಿಕ ಹಿನ್ನಲೆ ಇದೆ. ಕನ್ನಡ ಭಾಷೆ ಸರಳ, ಸಹಜ, ಇಂಪು ಸಹ. ಜಾಗತೀಕರಣದ ಪ್ರಭಾವದಿಂದ ಇಂದು ಎಷ್ಟೋ ಸಾಂಪ್ರದಾಯಿಕ ಕಲೆಗಳು, ವಸ್ತುಗಳು, ತಮ್ಮತನ್ನವನ್ನು ಕಳೆದುಕೊಳ್ಳುತ್ತಿವೆ. ಅದರಂತೆ ಜಾಗತೀಕರಣ ಹೊಡೆತ ಪ್ರಾಂತೀಯ ಭಾಷೆಗಳು ಮೇಲೂ ಆಗಿದೆ. ಇದರ ಜೊತೆಗೆ ನಮ್ಮ ದೇಶದ 7 ರಾಜ್ಯಗಳಲ್ಲಿ ಬಳಕೆಯಲ್ಲಿರುಯವ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿಸುವ ಹುನ್ನಾರ ಇರುವುದರಿಂದ ಪ್ರಾದೇಶಿಕ ಭಾಷೆಗಳ ಮೇಲೆ ವ್ಯಾವಸ್ಥಿಕವಾದ ಪ್ರಹಾರ ನಡೆಯುತ್ತಲೇ ಇದೆ.

ಇಂತಹ ವ್ಯವಸ್ಥೆಯಲ್ಲಿ ಸಿಕ್ಕಿರುವರು ನಮ್ಮ ಕನ್ನಡ ಭಾಷೆಯನ್ನು ಯಾವ ರೀತಿಯಾಗಿ ಉಳಿಸಿ ಬೆಳಸಬೇಕು ಎಂಬುದರ ಬಗ್ಗೆ ಚಿಂತಿಸುವ ಅಗತ್ಯವಿದೆ. ಪ್ರಾರಂಭದಲ್ಲಿ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕನ್ನಡದ ಕಂಪು ಕಡಿಮೆಯಾಗುತ್ತಾ ಬಂದು ಈಗ ಹಳ್ಳಿಗಳಲ್ಲಿಯೂ ಸಹಾ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಪ್ರಭಾವ ಹೆಚ್ಚಾಗಿರುವುದನ್ನು ಗಮನಿಸಬಹುದು. ನಮ್ಮ ಕನ್ನಡ ನೆಲದಲ್ಲಿಯೇ ಕನ್ನಡಕ್ಕೆ ನೆಲೆ ಇಲ್ಲದ ಉದಾಹರಣೆಗಳು ಕಂಡುಬರುತ್ತಿವೆ.

ಜಾಲತಾಣಗಳಲ್ಲಿ ಕನ್ನಡ ಅಮೆಜಾನ ಫ್ರೈಮ್ ವಿಡಿಯೋ : ಅಮೆಜಾನದ ಮುಖ್ಯ ಕಛೇರಿ ಇರುವುದು ನಮ್ಮ ರಾಜ್ಯದ ರಾಜಧಾನಿ ಯಾದ ಬೆಂಗಳೂರಿನಲ್ಲಿ ಆದರೇ ಅಮೆಜಾನ ಪ್ರೈಮ್ ವಿಡಿಯೋದಲ್ಲಿ ನಮಗೆ ಸಿಗುವುದು 5-6 ಕನ್ನಡ ಸಿನಿಮಾಗಳು ಮಾತ್ರ, ಆದರೇ ಉಳಿದ ಭಾಷೆಗಳ ಸಿನಿಮಾಗಳು ಸಾಕಷ್ಟು ಇದೆ. ಅಮೆಜಾನ ಕಿಂಡಲ್ : ಕಿಂಡಲ್ ಇ ಪುಸ್ತಕಗಳ ಸಂಗ್ರಹದಲ್ಲಿ ಕನ್ನಡ ಭಾಷೆಯ ಪುಸ್ತಕಗಳು ಸಹ ತುಂಬಾ ಕಡಿಮೆ ಇರುವುದನ್ನು ಕಾಣಬಹುದಾಗಿದೆ. ನಮ್ಮ ರಾಜ್ಯದ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಇರುವ ಸಿನಿಮಾ ಮಂದಿರಗಳಲ್ಲಿ ಮುಖ್ಯವಾಗಿ ಬೇರೆ ಭಾಷೆಯ ಸಿನಿಮಾಗಳು ಪ್ರದರ್ಶಿಸಲ್ಪಡುವುದು. ಕನ್ನಡ ಸಿನಿಮಾ ಕೇವಲ ಕಾಟಾಚಾರಕ್ಕೆ ಮಾತ್ರ ಪ್ರದರ್ಶನವಾಗುತ್ತಿರುವುದು. ಈ ರೀತಿಯಾದ ಹತ್ತಾರು ಉದಾಹರಣೆಗಳನ್ನು ನಾವು ಗುರುತಿಸಬಹುದಾಗಿದೆ.

ನಮ್ಮ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭಾಷೆಯ ಬೋಧನೆಯ ಬಗ್ಗೆ ಗಮನಿಸುವ ಅಗತ್ಯವಿದೆ. ನಮ್ಮ ಎಲ್ಲಾ ಕನ್ನಡ ಶಾಲೆಗಳಲ್ಲಿ ಜಗತ್ತಿನ ಎಲ್ಲಾ ಬಗ್ಗೆಯ ಮಾಹಿತಿಗಳು ಕನ್ನಡ ಪುಸ್ತಕದಲ್ಲಿಯೇ ಸಿಗುವಂತಹ ವ್ಯವಸ್ಥೆ ಆಗ ಬೇಕಾಗಿದೆ. ಇಂಗ್ಲೀಷ್, ಹಿಂದಿ ಇತರ ಅನೇಕ ಭಾಷೆಗಳಲ್ಲಿ ಇರುವ ವಿಜ್ಞಾನ, ಗಣಿತ, ಸಾಹಿತ್ಯ, ತಂತ್ರಜ್ಞಾನ ಹೀಗೆ ಎಲ್ಲಾ ಬಗೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಿಸುವ ಕಾರ್ಯ ಹೆಚ್ಚು ಹೆಚ್ಚು ಆಗಬೇಕಾಗಿದೆ ಅದರ ವಿತರಣೆ ಎಲ್ಲಾ ಸರ್ಕಾರಿ ಶಾಲೆಗಳಿಗೂ ಕಡ್ಡಾಯವಾಗಿ ಆಗಬೇಕಾಗಿದೆ. ನಮ್ಮ ಶಾಲೆ, ಗ್ರಂಥಾಲಯ ಕನ್ನಡ ಭಾಷೆಯಲ್ಲಿಯೇ ಜಗತ್ತಿನ ಬಗ್ಗೆ ತಿಳಿಸುವ ಮಾಹಿತಿ ಕೇಂದ್ರಗಳಾಗುವಂತೆ ಗಮನಹರಿಸಬೇಕಾಗಿದೆ. ನಮ್ಮ ಪ್ರತಿ ಬಾರಿಯ ರಾಜ್ಯೋತ್ಸವಕ್ಕೆ ಪ್ರತಿ ಶಾಲೆಗೂ ಅನೇಕ ಪುಸ್ತಕಗಳು ಸಿಗುವಂತ ವ್ಯವಸ್ಥೆ ಆಗಬೇಕಾಗಿದೆ. ಮಾದ್ಯಮಗಳು ಕೂಡ ದೇಶ ವಿದೇಶದ ಮಾಹಿತಿಯನ್ನು ಕನ್ನಡದಲ್ಲಿ ತಿಳಿಸುವಂತೆ ಮಾಡಬೇಕು. ಯಾರು ಏನೇ ಓದಲು ತಿಳಿಯಲು ಪ್ರಯತ್ನಿಸಿದರೂ ಅದೂ ಕನ್ನಡದಲ್ಲಿ ಸಿಗುವಂತೆ ಮಾಡಬೇಕಾಗಿದೆ.

ಕನ್ನಡ ತಂತ್ರಾಶದ ಬಗ್ಗೆ ವ್ಯಾಪಕ ಪ್ರಚಾರ, ವಿವಿಧ ಕನ್ನಡ ವೆಬ್‍ತಾಣಗಳ ರಚನೆ ಆಗಬೇಕಾಗಿದೆ. ಕನ್ನಡ ಭಾವುಟ ಹಾರಿಸುವುದು, ಕೂಗುವುದು, ಎಮ್ಮೆಗಳ ಮೆರವಣಿಗೆ ಮಾಡುವುದು, ಎಡಬಿಡಂಗಿ ರಾಜಕಾರಣಗಳ ಮಾತಿಗೆ ವಿರೋಧ ವ್ಯಕ್ತಪಡಿಸಿ ಹರತಾಳ, ಮೆರವಣಿಗೆ ಮಾಡುವುದು ಇವುಗಳಿಂದ ತಾತ್ಕಾಲಿಕವಾದ ಕನ್ನಡ ಟಿವಿಯಲ್ಲಿ ಸುದ್ದಿ ಬರಬಹುದೇ ವಿನಂ ಭಾಷೆಯ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ. ಒಂದು ಭಾಷೆಯ ಬೆಳವಣಿಗೆ ಆಗಬೇಕು ಎಂದರೆ ಅದು ಆ ಭಾಷೆಯನ್ನು ಹೆಚ್ಚು ಹೆಚ್ಚು ಜನರು ಬಳಸಿದರೆ ಮಾತ್ರ ಸಾಧ್ಯವಿರುವುದು. ಬದಲಾಗಿ ಇನ್ನೊಂದು ಭಾಷೆಯನ್ನು ವಿರೋಧಿಸುವುದು, ಅನ್ಯ ಭಾಷೆಯನ್ನಾಡುವ ಜನರನ್ನು ವಿರೋಧಿಸುವುದು ಇದು ನಮಗೆ ನಮ್ಮ ಭಾಷೆ ಮತ್ತು ರಾಜ್ಯದ ಬಗ್ಗೆ ಇರುವ ಭಯವನ್ನು ಸೂಚಿಸುವುದೇ ವಿನಹ ಇದರಿಂದ ಯಾವುದೇ ಬದಲಾವಣೆ ಖಂಡಿತಾ ಆಗುವುದಿಲ್ಲ. ನಾವು 'ರಾಷ್ಟ್ರಕವಿ ಕುವೆಂಪು' ಆಶಿಸಿರುವಂತೆ ವಿಶ್ವಮಾನವರಾಗಿ ಕನ್ನಡ ಉಳಿಸಿ ಬೆಳಸುವ ಕಾರ್ಯವನ್ನು ಮಾಡಬೇಕಾಗಿದೆ. ಬದಲಾಗಿ ಕುವೆಂಪು, ಬಸವಣ್ಣ, ಕನಕದಾಸ ಇಂತಹ ವ್ಯಕ್ತಿಗಳನ್ನೇ ನಮ್ಮ ಜಾತಿಯ ವ್ಯಕ್ತಿಗಳೆಂದು ಹೇಳುತ್ತಾ ಅವರನ್ನು ರಾಜ್ಯಕ್ಕೆ, ಒಂದು ಧರ್ಮಕ್ಕೆ, ಜಾತಿಗೆ, ಪಂಗಡಕ್ಕೆ ಸೀಮಿತಪಡಿಸುವುದರಲ್ಲಿ ಯಾವ ಪ್ರಯೋಜನವು ಇಲ್ಲ. ಬದಲಾಗಿ ನಾವೆಲ್ಲರೂ ಒಟ್ಟಾಗಿ ಕನ್ನಡವನ್ನು ಸಕಾರಾತ್ಮಕವಾಗಿ ಬೆಳಸುವ ದಿಶೆಯಲ್ಲಿ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ. ಭಾಷೆಯ ಗುಣಮಟ್ಟವನ್ನು ಹೆಚ್ಚಿಸಲು ಚಿಂತಿಸುವ ಅಗತ್ಯವಿದೆ.

Answered by lakshayam94
2

Answer:

here is you answere(mark me has a brainlist pls)

Explanation:

ಭಾರತದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾದ ಕನ್ನಡ ಭಾಷೆ ದ್ರಾವಿಡ ಭಾಷಾ ಕುಟುಂಬದ ಎರಡನೇ ಅತ್ಯಂತ ಹಳೆಯ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ಕಂಡುಬರುವ ಅತ್ಯಂತ ಹಳೆಯ ಶಾಸನಗಳು ಕ್ರಿ.ಶ 5 ನೇ ಶತಮಾನಕ್ಕೆ ಸೇರಿದವು. ಆದಾಗ್ಯೂ, ಕನ್ನಡ ಮಾತನಾಡುವ ಜನರು ಭಾರತದ ಇತರ ಭಾಗಗಳಲ್ಲಿ ಮತ್ತು ಯುಎಸ್ಎ, ಯುಎಇ, ಯುಕೆ, ಸಿಂಗಾಪುರ್, ಶ್ರೀಲಂಕಾ, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿಯೂ ಕಂಡುಬರುತ್ತಾರೆ. ಇದು ವಿಶ್ವದ 35 ನೇ ಹೆಚ್ಚು ಮಾತನಾಡುವ ಭಾಷೆಯಾಗಿದ್ದು, ಸುಮಾರು 35 ಮಿಲಿಯನ್ ಭಾಷಿಕರು ಮಾತನಾಡುತ್ತಾರೆ ಜಗತ್ತು.

ಇದು ಬೃಹತ್ ಸಾಂಸ್ಕೃತಿಕ ಪರಂಪರೆ ಮತ್ತು ಸಂಸ್ಕೃತಿಯ ಭಾಷೆಯಾಗಿದೆ. 5 ನೇ ಶತಮಾನದ ಹಿಂದಿನದು ಅದು ಸಾಕ್ಷಿಯಾದ ಇತಿಹಾಸದ ಅದ್ಭುತ ಘಟನೆಗಳ ಬಗ್ಗೆ ಹೇಳುತ್ತದೆ. ಇದು ಅನೇಕ ಜನರಿಗೆ ಒಂದು ಭಾಷೆಯಾಗಿತ್ತು ಮತ್ತು ಆದ್ದರಿಂದ ಐತಿಹಾಸಿಕ ಪ್ರಾಮುಖ್ಯತೆಯ ಬಹಳಷ್ಟು ಘಟನೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ನೀವು ಇತಿಹಾಸವನ್ನು ಪ್ರೀತಿಸುವವರಾಗಿದ್ದರೆ ಮತ್ತು ಹಿಂದಿನ ಕಾಲದ ಉಪಭಾಷೆಗಳನ್ನು ಓದುವುದರಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರೆ ನೀವು ಖಂಡಿತವಾಗಿಯೂ ಕನ್ನಡವನ್ನು ಕಲಿಯಬೇಕು ಏಕೆಂದರೆ ಬಹಳಷ್ಟು ಪ್ರಾದೇಶಿಕ ಮತ್ತು ಸಾಮಾಜಿಕ ಉಪಭಾಷೆಗಳನ್ನು ಕನ್ನಡದಲ್ಲಿ ಬರೆಯಲಾಗಿದೆ. ಮತ್ತು ಭಾರತದ ದಕ್ಷಿಣ ಭಾಗದಲ್ಲಿರುವ ಬಹಳಷ್ಟು ಸ್ಮಾರಕಗಳಲ್ಲಿ ಕನ್ನಡದಲ್ಲಿ ಶಾಸನಗಳಿವೆ.

ಪ್ರತಿಯೊಂದು ದೇಶವು ಸಾಂಸ್ಕೃತಿಕ ಪರಂಪರೆ ಮತ್ತು ಭಾಷೆಗೆ ಹೆಸರುವಾಸಿಯಾಗಿದೆ, ಮತ್ತು ಕನ್ನಡ ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ, ಇದು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿದೆ. ಸರಿಯಾಗಿ ಹೇಳಿದಂತೆ ಭಾಷೆಗಳು ಸಮಯದೊಂದಿಗೆ ಬದಲಾಗುತ್ತವೆ, ಇದು ತಲೆಮಾರುಗಳ ಭಾಷಣಕಾರರೊಂದಿಗೆ ವಿಕಸನಗೊಳ್ಳುತ್ತದೆ.

2021 ರಲ್ಲಿ ಇಂದಿಗೂ ಕನ್ನಡ ಭಾಷೆಯನ್ನು ಮುಖ್ಯವೆಂದು ಪರಿಗಣಿಸಬಹುದು

ಭಾರತದ ಐಟಿ ಹಬ್ ಎಂದೂ ಕರೆಯಲ್ಪಡುವ ಬ್ಯಾಂಗ್ಲೋರ್ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ಇದು ದೇಶದ ಕೆಲವು ಪ್ರಸಿದ್ಧ ಐಟಿ ಡೆವಲಪರ್‌ಗಳ ನೆಲೆಯಾಗಿದೆ ಮತ್ತು ಈ ಹೆಚ್ಚಿನ ಬೆಳವಣಿಗೆಯ ದರದೊಂದಿಗೆ ಇದು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ. ಕನ್ನಡ ಪ್ರಾಥಮಿಕ ಭಾಷೆಯಾಗಿರುವುದರಿಂದ ಈ ಪ್ರದೇಶದಲ್ಲಿ ವ್ಯಾಪಕವಾಗಿ ಮಾತನಾಡಲಾಗುತ್ತದೆ. ಆದ್ದರಿಂದ ನೀವು ಉತ್ತಮ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡಲು ಅಥವಾ ಉತ್ತಮ ವೃತ್ತಿಜೀವನದ ಅವಕಾಶವನ್ನು ಎದುರು ನೋಡುತ್ತಿದ್ದರೆ ಕನ್ನಡ ಕಲಿಯುವುದು ನಿಮಗೆ ಪ್ರಯೋಜನಕಾರಿಯಾಗಿದೆ.

ಮತ್ತೊಂದು ಪ್ರಮುಖ ಕಾರಣವೆಂದರೆ ಇತಿಹಾಸದಲ್ಲಿ ಅದರ ಪ್ರಾಮುಖ್ಯತೆಯಾಗಿರಬಹುದು ಏಕೆಂದರೆ ಹೆಚ್ಚಿನ ಸಂಖ್ಯೆಯ ಉಪಭಾಷೆಗಳು ಮತ್ತು ಶಾಸನಗಳು ಕನ್ನಡ ಭಾಷೆಯಲ್ಲಿವೆ, ಆದ್ದರಿಂದ ನೀವು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಪ್ರಯಾಣಿಸಲು ಆಸಕ್ತಿ ಹೊಂದಿದ್ದರೆ, ಕರ್ನಾಟಕವು ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿರಬೇಕು ಏಕೆಂದರೆ ಅದು ವಿವಿಧ ಉತ್ಖನನ ತಾಣಗಳಿಗೆ ನೆಲೆಯಾಗಿದೆ , ಪಾರಂಪರಿಕ ತಾಣಗಳು, ಮತ್ತು ಕನ್ನಡದಲ್ಲಿ ಮಾತನಾಡಲು ಮತ್ತು ಓದಲು ಸಾಧ್ಯವಾಗುವುದು ನಿಮ್ಮ ಪ್ರಯಾಣದ ಅನುಭವವನ್ನು ಹೆಚ್ಚಿಸುತ್ತದೆ.

ಪ್ರಪಂಚದಾದ್ಯಂತದ ಪ್ರತಿಯೊಂದು ಭಾಷೆಯು ಅದರ ರೀತಿಯಲ್ಲಿ ವಿಶಿಷ್ಟವಾಗಿದೆ ಮತ್ತು ಅಷ್ಟೇ ಮುಖ್ಯವಾಗಿದೆ. ಯಾವುದೇ ಭಾಷೆಯ ಪ್ರಾಮುಖ್ಯತೆಯು ಮುಂದಿನ ದಿನಗಳಲ್ಲಿ ಅದರ ಕ್ರಿಯಾತ್ಮಕತೆ ಮತ್ತು ಉಪಯುಕ್ತತೆಯನ್ನು ಅವಲಂಬಿಸಿ ಕಾಲಕಾಲಕ್ಕೆ ಬದಲಾಗುತ್ತದೆ.

Similar questions