information about parrot in kannada
Answers
Answer:
ಗಿಳಿ ( ಸಿಟ್ಟಸಿಫೋರ್ಮ್ಸ್ ) ವರ್ಗಕ್ಕೆ ಸೇರಿದ ಒಂದು ಪಕ್ಷಿ. ಗಿಳಿಗಳಲ್ಲಿ ಸುಮಾರು ೩೫೦ ತಳಿಗಳಿವೆ. ಗಿಳಿಗಳು ಸಾಮಾನ್ಯವಾಗಿ ಉಷ್ಣವಲಯದ ಎಲ್ಲಾ ಪ್ರದೇಶಗಳಲ್ಲೂ ಕಾಣಬರುತ್ತವೆ. ಗಿಳಿಗಳನ್ನು ಮುಖ್ಯವಾಗಿ ಎರಡು ಕುಟುಂಬಗಳನ್ನಾಗಿ ವಿಭಾಗಿಸಲಾಗಿದೆ. ಸಿಟ್ಟಿಸೀಡೇ ಅಥವಾ ನೈಜ ಗಿಳಿ ಮತ್ತು ಕಕಾಟುಯ್‌ಡೇ ಇವೇ ಆ ಎರಡು ಕುಟುಂಬಗಳು. ಸಂಪೂರ್ಣ ಉಷ್ಣವಲಯದ ಹೊರತಾಗಿ ದಕ್ಷಿಣ ಸಮಶೀತೋಷ್ಣವಲಯದಲ್ಲಿ ಸಹ ಗಿಳಿಗಳು ಕಂಡುಬರುತ್ತವೆ. ಅತ್ಯಂತ ಹೆಚ್ಚಿನ ಪ್ರಭೇದಗಳು ದಕ್ಷಿಣ ಅಮೆರಿಕ ಮತ್ತು [[ಆಸ್ಟ್ರೇಲಿಯಾ ]]ಗಳಲ್ಲಿ ಜೀವಿಸಿವೆ.ಗಿಳಿಗಳ ಲಕ್ಷಣಗಳೆಂದರೆ - ಶಕ್ತಿಯುತ ಬಾಗಿದ ಕೊಕ್ಕು, ನೇರ ನಿಲುವು, ಬಲಶಾಲಿ ಕಾಲುಗಳು. ಹೆಚ್ಚಿನ ಗಿಳಿಗಳು ಹಸಿರು ಬಣ್ಣದ್ದಾಗಿರುತ್ತವೆ. ಕೆಲವು ತಳಿಗಳು ಬೇರೆ ಹೊಳೆಯುವ ಬಣ್ಣವುಳ್ಳವಾಗಿದ್ದರೆ ಇನ್ನು ಕೆಲವು ಮಿಶ್ರವರ್ಣದವು. ಕೊಕ್ಯಾಟೂ ತಳಿಗಳು ಪೂರ್ಣ ಬಿಳಿಯಿಂದ ಪೂರ್ಣ ಕಪ್ಪು ಬಣ್ಣದವರೆಗೆ ವಿಭಿನ್ನ ಛಾಯೆಯವಾಗಿದ್ದು ತಲೆಯ ಮೇಲೆ ಪುಕ್ಕಗಳ ಕಿರೀಟವನ್ನು ಸಹ ಹೊಂದಿರುತ್ತವೆ. ಹೆಚ್ಚಿನ ಗಿಳಿಗಳು ಜೀವನಪರ್ಯಂತ ಒಂದೇ ಸಂಗಾತಿಯನ್ನು ಹೊಂದಿರುತ್ತವೆ. ಅತಿ ಸಣ್ಣ ಗಿಳಿಯು ೩.೨ ಅಂಗುಲ ಉದ್ದ ಮತ್ತು ೧೦ ಗ್ರಾಂ ತೂಕವುಳ್ಳದ್ದಾಗಿದ್ದರೆ ಅತಿ ದೊಡ್ಡ ಗಿಳಿಯು ೩.೩ ಅಡಿ ಉದ್ದ ಮತ್ತು ೪ ಕಿಲೋಗ್ರಾಂ ತೂಕ ಹೊಂದಿರುತ್ತದೆ. ಹೀಗೆ ಪಕ್ಷಿಸಂಕುಲದಲ್ಲಿಯೇ ಅತಿ ಹೆಚ್ಚಿನ ದೇಹಪ್ರಮಾಣದ ವೈವಿಧ್ಯ ಗಿಳಿಗಳಲ್ಲಿ ಕಂಡುಬರುವುದು. ಗಿಳಿಗಳ ಆಹಾರವಸ್ತುಗಳು ಮುಖ್ಯವಾಗಿ ಬೀಜಗಳು, ಕಾಳು, ಹಣ್ಣು, ಮೊಗ್ಗು ಮತ್ತಿತರ ಸಸ್ಯಜನ್ಯವಸ್ತುಗಳು. ಕೆಲ ತಳಿಯ ಗಿಳಿಗಳು ಕೀಟ ಮತ್ತು ಸಣ್ಣ ಪ್ರಾಣಿಗಳನ್ನು ಸಹ
Answer