Kannada essay hostel life
Answers
ಯುಪಿಎಸ್‌ಸಿ
Careerindia
ಕನ್ನಡ
ಕೆರಿಯರ್ ಇಂಡಿಯಾ » ಕನ್ನಡ » ಸಲಹೆಗಳು » ಹಾಸ್ಟೆಲ್ ಜೀವನದಿಂದ ಸೃಷ್ಟಿಯಾಗುವ ಸಮಸ್ಯೆಗಳು!
ಹಾಸ್ಟೆಲ್ ಜೀವನದಿಂದ ಸೃಷ್ಟಿಯಾಗುವ ಸಮಸ್ಯೆಗಳು!
By Nishmitha
Published: Monday, June 4, 2018, 15:38 [IST]
ಹಾಸ್ಟೆಲ್ ಜೀವನ ಕಾಲೇಜು ಲೈಫ್ ತರಹ ಕೊನೆಯವರೆಗೂ ನೆನಪಿನಲ್ಲಿ ಉಳಿಯುವಂತಹ ಕ್ಷಣ. ಹಾಸ್ಟೆಲ್ ಎಂದ ಕ್ಷಣ ನೆನಪಿಗೆ ಬರುವುದು ಹೊಸ ಜಗತ್ತು, ಹೊಸ ಜನರು, ಪ್ರತಿಯೊಂದು ಕೂಡಾ ಹೊಸತು.
ಹಾಸ್ಟೆಲ್ ಜೀವನದಿಂದ ಸೃಷ್ಟಿಯಾಗುವ ಸಮಸ್ಯೆಗಳು!
ಯಾರೆಲ್ಲಾ ಹಾಸ್ಟೆಲ್ ಲೈಫ್ ಜರ್ನಿ ಮಾಡಿದ್ದೀರೋ ಅವರೆಲ್ಲರಿಗೂ ಹಾಸ್ಟೆಲ್ ಲೈಫ್ ಬಗ್ಗೆ ಕಂಪ್ಲೀಟ್ ಆಗಿ ತಿಳಿದಿರುತ್ತದೆ. ಹಾಸ್ಟೆಲ್ ನಿಂದ ಎಷ್ಟೆಲ್ಲಾ ಮಜಾ ಮಾಡಿರುತ್ತಿರೋ ಅಷ್ಟೇ ತೊಂದರೆ ಕೂಡಾ ಅನುಭವಿಸಿರುತ್ತೀರಿ. ಬನ್ನಿ ಹಾಸ್ಟೆಲ್ ಲೈಫ್ ನ ಸಮಸ್ಯೆಗಳು ಯಾವುವು ಎಂದು ಕೆರಿಯರ್ ಇಂಡಿಯಾ ನಿಮಗೆ ತಿಳಿಸುತ್ತದೆ.
ಮೆಸ್ ಫುಡ್:
ಹೌದು ಹಾಸ್ಟೆಲ್ ನಲ್ಲಿ ಮೆಸ್ ಫುಡ್ ಸೇವಿಸದೇ ಬೇರೆ ಆಯ್ಕೆ ಇರುವುದಿಲ್ಲ. ಸಿಂಪಲ್ ಹಾಗೂ ಸಿಮಿಲರ್ ಆಗಿರೋ ಅಡುಗೆಯನ್ನೇ ಹಾಸ್ಟೆಲ್ ನಲ್ಲಿ ತಿನ್ನಲು ನೀಡುತ್ತಾರೆ. ಈ ಫುಡ್ ನಿಮಗೆ ಒಂದೇ ತಿಂಗಳಿನಲ್ಲಿ ಬೋರ್ ಎನಿಸುತ್ತದೆ.
ಕಡಿಮೆ ಸೌಲಭ್ಯ:
ಹಾಸ್ಟೆಲ್ ನಲ್ಲಿ ತುಂಬಾ ಸೌಲಭ್ಯ ನೀಡುವುದು ವಿರಳ. ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ ರೆಸ್ಟ ರೂಂ ಸಂಖ್ಯೆ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಕ್ಯೂ ನಿಲ್ಲ ಬೇಕಾಗುತ್ತದೆ. ಇನ್ನೂ ರೂಂ ತುಂಬಾ ಗದ್ದಲವಿರುತ್ತದೆ. ಸ್ವಚ್ಚತೆ ಅಷ್ಟಕಷ್ಟೆ ಇದ್ದು, ಅಲ್ಲಿ ಜೀವಿಸುವುದು ಕೆಲವೊಮ್ಮೆ ತುಂಬಾ ಕಷ್ಟ ಎಂದೆನಿಸುತ್ತದೆ.
ಮನೆ ನೆನಪು:
ಮನೆಯಿಂದ ದೂರವಿದ್ದು ಹಾಸ್ಟೆಲ್ ನಲ್ಲಿ ಇರುವುದೆಂದ್ರೆ ಯಾಕೋ ತುಂಬಾ ಫೀಲ್ ಆಗುವ ಸಂಗತಿ. ಮನೆಯವರ ಜತೆ ಬಿಂದಾಸ್ ಆಗಿದ್ದು, ಸಡನ್ ಆಗಿ ಹಾಸ್ಟೆಲ್ ಸೇರಿಸಿದ್ರೆ ಮನೆಯ ನೆನಪು ಆಗಾಗ ಕಾಡುತ್ತದೆ. ಅಷ್ಟೇ ಅಲ್ಲ ಮನೆಯವರನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಾರೆ ವಿದ್ಯಾರ್ಥಿಗಳು. ಇದರಿಂದಾಗಿ ಇಡೀ ದಿನ ಮಂಕಾಗಿ ಕುಳಿತುಕೊಳ್ಳುತ್ತಾರೆ.
ಕೆಟ್ಟ ಗುಣಗಳು ನಿಮ್ಮನ್ನ ಆಕರ್ಷಿಸುತ್ತದೆ:
ಹಾಸ್ಟೆಲ್ ಲೈಫ್ ವಿದ್ಯಾರ್ಥಿಗಳು ಒಳ್ಳೆಯ ಗುಣಗಳ ಜತೆ ಕೆಟ್ಟ ಗುಣಗಳನ್ನ ಕೂಡಾ ಪರಿಚಯಿಸುತ್ತದೆ. ಹಾಸ್ಟೆಲ್ ನ ಇತರ ವಿದ್ಯಾರ್ಥಿಗಳ ಜತೆಗೂಡಿ ಕುಡಿಯುವುದು, ಸಿಗರೇಟ್ ಸೇದುವುದು ಮುಂತಾದೆಲ್ಲಾ ಕೆಟ್ಟ ಗುಣಗಳನ್ನ ಮೈಗೂಡಿಸಿಕೊಳ್ಳುತ್ತಾರೆ ವಿದ್ಯಾರ್ಥಿಗಳು.
ಪ್ರೈವಸಿ ಎಂಬುವುದು ಇರುವುದಿಲ್ಲ:
ಮನೆಯಲ್ಲಿ ಪ್ರೈವೆಸಿ ಇರುತ್ತದೆ ಆದ್ರೆ ಹಾಸ್ಟೆಲ್ ನಲ್ಲಿ ಪ್ರೈವಸಿ ಬೇಕು ಅಂದ್ರೆ ಸಿಗಲ್ಲ. ಕಡಿಮೆ ಅಂದ್ರೂ ಒಂದು ರೂಂ ನಲ್ಲಿ ಮೂವರು ವಿದ್ಯಾರ್ಥಿಗಳು ಇರುತ್ತಾರೆ. ಹಾಗಾಗಿ ನಿಮಗೆ ಯಾವುದೇ ಕಾರಣಕ್ಕೂ ಪ್ರೈವಸಿ ಎಂಬುವುದು ಇರುವುದಿಲ್ಲ.