Kannada essay in yuddhada parinamagalu
Answers
Answer:
ಇಪ್ಪತನೆಯ ಶತಮಾನದ ಮೊದಲ ಭಾಗದಲ್ಲಿ ಅಂದರೆ 1914 ರಿಂದ 1918 ರವರೆಗೆ ಸಂಭವಿಸಿದ ಮೊದಲನೇ ವಿಶ್ವಯುದ್ದ ಮಾನವನ ಇತಿಹಾಸದಲ್ಲೇ ಒಂದು ಪ್ರಮುಖ ಘಟನೆಯಾಗಿದೆ. ಇದು ಮೂಲತಃ ಯುರೋಪಿನಲ್ಲೆ ಸಂಭವಿಸಿದರೂ ಕೂಡ ಕ್ರಮೇಣ ಇಡೀ ವಿಶ್ವವ್ಯಾಪಿಯಾಗಿ ಆಸ್ಫೋಟಿಸಿತು. ಇದು ಜರ್ಮನಿ ಮುಖಂಡತ್ವದ ಶತ್ರು ಪಕ್ಷ ಮತ್ತು ಇಂಗ್ಲಂಡ್ ನೇತೃತ್ವದ ಮಿತ್ರ ಪಕ್ಷಗಳ ನಡುವೆ ಸುಮಾರು 4 ವರ್ಷಗಳು ಸಂಭವಿಸಿ ಜರ್ಮನಿಯ ಸೋಲಿನೊಂದಿಗೆ 1918ರಲ್ಲಿ ಯುದ್ದ ಮುಕ್ತಯಗೊಂಡಿತು.ಈ ಯುದ್ಧದಲ್ಲಿ ಹಿಂದೆಂದೂ ಕಂಡರಿಯದ ಹೊಸ ಶಸ್ತ್ರಾಸ್ತ್ರಗಳು, ಯುದ್ಧ ವಿಮಾನಗಳು, ನವೀನ ಯುದ್ಧ ನೌಕೆಗಳು, ಟ್ಯಾಂಕರ್ಗಳು, ಜಲಾಂತರ್ಗಾಮಿಗಳು, ಸ್ಪೋಟಕಗಳು, ವಿಷನಿಲಗಳು ಇತ್ಯಾದಿ ಬಳಕೆಯದವು. ಅದರಿಂದುಂಟಾದ ಸಾವು, ನೋವು, ನಷ್ಟ ಅಪಾರ.
ಮೊದಲನೇ ಮಹಾಯುದ್ದ ಅಥವಾ ವಿಶ್ವ ಸಮರಕ್ಕೆ ಹಲವು ಅಂಶಗಳು ಕಾರಣವಾಗಿವೆ. ಈ ಯುದ್ಧ 1914 ಜೂನ್ 28ರಂದು ಸರಾಜಿವೂ ಎಂಬಲ್ಲಿ ಆಸ್ಟ್ರಿಯಾದ ಯುವರಾಜ ಆರ್ಚ್ಡ್ಯೂಕ್ ಫರ್ಡಿನಾಂಡ್ ನ ಕೊಲೆಯ ಘಟನೆಯಿಂದಾಗಿ ಆರಂಭಗಿಂಡಿತು. ಕೊಲೆ ಮಾಡಿದವನು ಸರ್ಬಿಯಾ ಜನಾಂಗದ ವಿದ್ಯಾರ್ಥಿ. ಅವನು ತನ್ನ ದೇಶದ ಸ್ವಾತಂತ್ರ್ಯ ಅಪಹರಣ ಮಾಡಿದ ಅಸ್ಟ್ರಿಯಾದ ವಿರೋಧಿ.ಇದೊಂದು ಸ್ಥಳೀಯ ಘಟನೆಯಾಗಾಗಬೇಕಿದ್ದ ಘಟನೆ ವಿಶ್ವವ್ಯಾಪಿಯಾಗಿ ಪರಿಣಮಿಸಿತು. ದಿನಕಳೆದಂತೆ ಹಲವು ಆಸಕ್ತಿಯುಳ್ಳ ರಾಜಕೀಯ ಶಕ್ತಿಗಳು, ಪರಸ್ಪರ ವ್ಯಷಮ್ಯ, ಅಸೂಯೆ, ಹಳೆಯ ಮತ್ಸರ, ಪ್ರತಿಷ್ಠೆ ಅತಿಯಾದ ರಾಷ್ಟ್ರೀಯತೆಯ ದುರಭಿಮಾನ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಎರಡು ಪ್ರತಿಸ್ಪರ್ದಿ ಬಣಗಳಾಗಿ ಮರ್ಪಟ್ಟವು.(ಮೊದಲನೆಯ ಮಹಾಯುದ್ಧದಿಂದ ಸೇರಿಸಿದ ಭಾಗ)[೨]
ನಾಗರಿಕ ಪ್ರಪಂಚದ ಬಹುಭಾಗವನ್ನೊಳಗೊಂಡ ಪ್ರಪ್ರಥಮ ಮಹಾಸಂಗ್ರಾಮ, 1914 ಜುಲೈ 28-1918 ನವೆಂಬರ್ 11ರವರೆಗೆ ನಡೆದ ಈ ಯುದ್ಧದಲ್ಲಿ ಜರ್ಮನಿ ಮತ್ತು ಆಸ್ಟ್ರಿಯ-ಹಂಗರಿಗಳು ಒಂದು ಕಡೆಯೂ ಫ್ರಾನ್ಸ್ ಮತ್ತು ಗ್ರೇಟ್ ಬ್ರಿಟನ್ಗಳೂ(ಮಿತ್ರ ಪಕ್ಷ) ಇನ್ನೊಂದು ಕಡೆಯೂ ಪ್ರಧಾನವಾಗಿ ಕಾದಿದುವು. 1917-18ರಲ್ಲಿ ಮಿತ್ರಪಕ್ಷದೊಂದಿಗೆ ಅಮೆರಿಕ ಸಂಯುಕ್ತಸಂಸ್ಥಾನವೂ ಸೇರಿಕೊಂಡಿತು. 19ನೆಯ ಶತಮಾನದ ದೃಷ್ಟಿ ಪ್ರವೃತ್ತಿಗಳಿಗೆ ಭರತವಾಕ್ಯ ಹಾಡಿ ಹೊಸದೊಂದು ವಿಶ್ವದ ನಿರ್ಮಾಣಕ್ಕೆ ಕಾರಣವಾಗಿ ಪರಿಣಮಿಸಿ ಇದು ವಿಶ್ವೇತಿಹಾಸದ ಒಂದು ಮಹಾಫಟ್ಟವೆನಿಸಿದೆ.
ಈ ಲೇಖನವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಲಾಗಿದೆ; 1. ಕಾರಣಗಳು, 2. ಭೂಯುದ್ಧ, 3. ಜಲವಾಯು ಯುದ್ಧಗಳು, 4. ಅಮೆರಿಕದ ಪ್ರವೇಶ, 5. ಏಷ್ಯದಲ್ಲಿ ಜಪಾನ್ ನಡೆಸಿದ ಯುದ್ಧ, 6. ಚೀನ-ಭಾರತ, 7. ಜರ್ಮನಿಯ ವಸಾಹತುಗಳಲ್ಲಿ ಯುದ್ಧ, 8. ಯುದ್ಧದ ಅಂತಿಮ ಘಟ್ಟ, 9. ಪರಿಣಾಮಗಳು, 10. ಶಾಂತಿ ಕೌಲುಗಳು. ಲೇಖನದ ಕೊನೆಯಲ್ಲಿ ಮಹಾಯುದ್ಧದ ಮುಖ್ಯ ಘಟನೆಗಳ ಪಟ್ಟಿಯೊಂದನ್ನು ಕೊಡಲಾಗಿದೆ.
Explanation: